ಮನೆ ಹೀಗಿದ್ರೆ ಜೇಬು ಖಾಲಿ ಆಗೋದು ಫಿಕ್ಸ್,ಇಲ್ಲಿವೆ ಕೆಲವು ಸಲಹೆ
ಮನೆಯಲ್ಲಿ ವಾಸ್ತು ಸರಿಯಿಲ್ಲದಿದ್ದರೆ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ನಿಮ್ಮ ಆರ್ಥಿಕ ಪರಿಸ್ಥಿತಿಯು ಹದಗೆಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ಪ್ರತಿಯೊಂದು ವಸ್ತುವಿನಲ್ಲಿ ಧನಾತ್ಮಕ ಅಥವಾ ನಕಾರಾತ್ಮಕ ಶಕ್ತಿ ಇರುತ್ತದೆ.
ಒಡೆದ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಎಂದಿಗೂ ಪೂಜಾ ಸ್ಥಳದಲ್ಲಿ ಇಡಬಾರದು. ಇದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.
ಹಳೆಯ ಹರಿದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ, ಹಳೆಯ ಬೂಟುಗಳು ಮತ್ತು ಚಪ್ಪಲಿಗಳನ್ನು ಮನೆಯಲ್ಲಿ ಇಡಬೇಡಿ ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತೆ.
ಕೆಟ್ಟ , ಹಳೆಯ ಅಥವಾ ಕೀಲಿ ಇಲ್ಲದ ಬೀಗಗಳನ್ನು ಇಟ್ಟುಕೊಳ್ಳುವುದು ವ್ಯಕ್ತಿಯ ಭವಿಷ್ಯಕ್ಕೆ ಬೀಗ ಹಾಕಿದಂತೆ . ಭವಿಷ್ಯದಲ್ಲಿ ಅಭಿವೃದ್ದಿಯಾಗುವುದಿಲ್ಲ.
ಒಡೆದ ಕನ್ನಡಿ ಮತ್ತು ಗಾಜನ್ನು ಮನೆಯಲ್ಲಿ ಇಡಬಾರದು. ಏಕೆಂದರೆ ಇದು ನಕಾರಾತ್ಮಕತೆ ಹೆಚ್ಚಿಸುತ್ತದೆ. ಬಿರುಕು ಇದ್ದರೂ , ತಕ್ಷಣ ಅದನ್ನು ಬದಲಾಯಿಸಿ.
ಮಹಾಭಾರತ ಅಥವಾ ಯುದ್ದದ ವರ್ಣಚಿತ್ರಗಳನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಅಂತಹ ಚಿತ್ರಗಳಿಂದ ಮನೆಯಲ್ಲಿ ಅಪಶ್ರುತಿಯ ವಾತಾವರಣ ಉಂಟಾಗುತ್ತದೆ.
ಒಣಗಿದ ಗಿಡಗಳನ್ನು ಮನೆಯಲ್ಲಿ ಇಡಬಾರದು. ಏಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ನಿಮಗೆ ಒಳ್ಳೆಯದು ಆಗುವುದಿಲ್ಲ.