ಎಲ್ಲ ಹೆಣ್ಣು ಮಕ್ಕಳೂ ಗಂಡು ಮಕ್ಕಳೂ ಮೆಚ್ಯೂರ್ ಆಗಲೇಬೇಕು. ಹನ್ನೆರಡು, ಹದಿಮೂರು ವಯಸ್ಸಿನ ಹೊತ್ತಿಗೆ ಹೆಣ್ಣು ಮಕ್ಕಳಲ್ಲಿ ಋತುಚಕ್ರ ಆರಂಭವಾಗುತ್ತದೆ. ಇಂಥ ಸನ್ನಿವೇಶದಲ್ಲಿ ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದೆ ಹೆಣ್ಣು ಮಕ್ಕಳಲ್ಲಿ ಆತಂಕ, ಚಿಂತೆ, ಗೊಂದಲ, ತಳಮಳಗಳು ಆರಂಭವಾಗಿರುತ್ತವೆ. ಅವರ ಸ್ವಭಾವದಲ್ಲಿ ಬದಲಾವಣೆಗಳಾಗುತ್ತಿರುತ್ತವೆ. ಈ ಸಂದರ್ಭದಲ್ಲಿ ಎಲ್ಲ ಹೆಣ್ಣುಮಕ್ಕಳನ್ನೂ ನಾಜೂಕಾಗಿಯೇ ನೋಡಿಕೊಳ್ಳಬೇಕು; ಆದರೆ ಕೆಲವರನ್ನು ಇನ್ನೂ ಜಾಗ್ರತೆಯಲ್ಲಿ ನೋಡಿಕೊಳ್ಳಬೇಕಿದೆ. ಅವರ್ಯಾರು? ತಿಳಿಯೋಣ.

ಮೇಷ ರಾಶಿ
ಇವರು ತಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ವಿರೋಧಾತ್ಮಕವಾಗಿ ಸ್ವೀಕರಿಸುತ್ತಾರೆ. ಅಂದರೆ ಇವರಿಗೆ ತಾವು ಬೇಗ ದೊಡ್ಡವರಾಗುತ್ತಿರುವುದು ಇಷ್ಟವಾಗಿರುವುದಿಲ್ಲ. ಇದರಿಂದಾಗಿ ತಾನು ಋತುಮತಿಯರಾದಾಗ ಇವರು ಹೆಚ್ಚು ಕೋಪಿಷ್ಠರಾಗಿ ಬದಲಾಗುತ್ತಾರೆ. ತಂದೆ- ತಾಯಿಗಳನ್ನು ಯಾವಾಗಲೂ ವಿರೋದಾತ್ಮಕವಾಗಿಯೇ ಎದುರಿಸುತ್ತಿರುತ್ತಾರೆ. ಇವರನ್ನು ಸಮಾಧಾನ ಮಾಡುವುದೇ ಹೆತ್ತವರಿಗೆ ದೊಡ್ಡ ಕೆಲಸವಾಗಿಬಿಡುತ್ತದೆ. ಇವರ ಜೊತೆ ತುಂಬ ಪ್ರೀತಿಯಿಂದ ನಡೆದುಕೊಳ್ಳಬೇಕು.

ಮಿಥುನ ರಾಶಿ
ಇವರು ಋತುಮತಿಯರಾದಾಗ ಮನಸ್ಸಿನಲ್ಲಿ ಉಂಟಾಗುವ ತಳಮಳಗಳಲ್ಲಿ ಸಕಾರಾತ್ಮಕವಾಗಿಯೇ ಸ್ವೀಕರಿಸುತ್ತಾರೆ. ಆದರೆ ತಮ್ಮ ತಂದೆ- ತಾಯಿ ತಮಗೂ ಹಾಗೂ ಗಂಡು ಮಕ್ಕಳಲ್ಲಿಯೂ ಭೇದ ಭಾವ ಮಾಡಿದರೆ ಇವರು ಸಹಿಸಲಾರರು. ಹಾಗೆಯೇ ದೊಡ್ಡವರು ತಮ್ಮಿಂದ ಯಾವುದೇ ವಿಚಾರವನ್ನಾದರೂ ಮುಚ್ಚಿಟ್ಟರೆ ಅದನ್ನು ಸಹಿಸಿಕೊಳ್ಳಲಾರರು. ಇವರ ಜೊತೆ ಗುಟ್ಟು ಬೇಡ. ಎಲ್ಲ ವಿಷಯಗಳನ್ನೂ ಹಂಚಿಕೊಳ್ಳಿ. ಆಗ ಸಮಾಧಾನಚಿತ್ತರಾಗಿ ಇರುತ್ತಾರೆ. ಇವರನ್ನು ವಿನಾಕಾರಣ ದೂರಬೇಡಿ.

ಅಪಾಯಕಾರಿ ವಿಷಯೋಗದ ಬಗ್ಗೆ ನಿಮಗೆಷ್ಟು ಗೊತ್ತು? ...

ಸಿಂಹ ರಾಶಿ
ಇವರು ಈ ಹಂತದಲ್ಲಿ ಸ್ವತಂತ್ರರಾಗಿ ಇರಲು ಇಷ್ಟಪಡುತ್ತಾರೆ. ಇವರು ಈ ಪ್ರಾಯದಲ್ಲಿ ಹಾಸ್ಟೆಲ್‌ಗಳಲ್ಲಿ ಇದ್ದರೆ ಪರವಾಗಿಲ್ಲ. ಮನೆಯಲ್ಲಿ ಇರುವಾಗ ಮಾತ್ರ ತಂದೆ- ತಾಯಿಗಳು ತಮಗೆ ಏನನ್ನಾದರೂ ಕೆಲಸ ಹೇಳಿದರೆ ಇಷ್ಟಪಡುವುದಿಲ್ಲ. ತಾವು ಇನ್ಯಾರಿಂದಲೋ ಆಳಿಸಿಕೊಳ್ಳುವವರು ಎಂಬ ಭಾವನೆ ತಮ್ಮಲ್ಲಿ ಉಂಟಾಗದಂತೆ ಎಚ್ಚರ ವಹಿಸುತ್ತಾರೆ. ಒಂದು ವೇಳೆ ಯಾರಾದರೂ ತಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ಭಾವನೆ ಬಂದರೆ ರೆಬೆಲ್ ಆಗುತ್ತಾರೆ. ಇವರನ್ನು ಹ್ಯಾಂಡಲ್ ಮಾಡುವುದು ಕಷ್ಟ.
 

ಮಕರ ರಾಶಿ
ಇವರು ತಮ್ಮ ದೇಹದ ಅನ್ವೇಷಣೆಯನ್ನು ಇಷ್ಟಪಡುತ್ತಾರೆ. ಈ ಸಮಯದಲ್ಲಿ ದೇಹದ ಬದಲಾವಣೆಗಳ ಬಗ್ಗೆ ಅಗತ್ಯ- ಅನಗತ್ಯ ಕುತೂಹಲಗಳು ಇವರಲ್ಲಿ ಮೂಡುತ್ತವೆ. ಹಾಗೇ ಇವರಲ್ಲಿ ಅನ್ವೇಷಣಾ ಪ್ರವೃತ್ತಿಯೂ ಇರುತ್ತದೆ. ಲೈಂಗಿಕ ವಿಷಯಗಳು ಇವರನ್ನು ಹೆಚ್ಚು ಹೆಚ್ಚಾಗಿ ಸೆಳೆಯಬಹುದು. ಇವುಗಳಿಂದ ಡೈವರ್ಟ್ ಮಾಡುವುದು, ಅಧ್ಯಯನದ ಕಡೆ ಗಮನ ತಿರುಗಿಸುವಂತೆ ಮಾಡಲು ಅನೇಕ ಕ್ರಮಗಳನ್ನು ನೀವು ತೆಗೆದುಕೊಳ್ಳಬೇಕಾದೀತು. ಎಚ್ಚರದಿಂದಲೂ ನೋಡಿಕೊಳ್ಳಬೇಕಾದೀತು.

ಶನಿವಾರ ಹುಟ್ಟಿದವರಿಗೆ ಬದುಕಿಡೀ ಕಷ್ಟ ಪಡೋದು ತಪ್ಪಿದ್ದಲ್ಲ! ...

ಕುಂಭ ರಾಶಿ
ಇವರಿಗೆ ಮನಸ್ಸು ಹರ್ಟ್ ಮಾಡುವಂಥ ಯಾವುದೇ ಮಾತುಗಳನ್ನು ಆಡಬಾರದು. ಆಡಿದರೆ ಆ ಕಲೆ ಅವರಲ್ಲಿ ಜೀವನ ಪರ್ಯಂತ ಉಳಿಯುತ್ತದೆ. ಗಂಡಸರ ಬಗ್ಗೆ ಜಿಗುಪ್ಸೆ ಮೂಡಿಸುವಂಥ ಮಾತುಗಳನ್ನು ಇವರ ಮುಂದೆ ಆಡದಿರಿ. ಇವರು ಗಂಡಸರ ಬಗ್ಗೆ ಆಸಕ್ತಿ ಕಳೆದುಕೊಳ್ಳವಂತೆ ಅಥವಾ ಲೈಂಗಿಕತೆಯ ಬಗ್ಗೆ ಜಿಗುಪ್ಸೆ ಮೂಡಿಸುವಂಥ ಮಾತು ಕೇಳಿದರೆ ಅಥವಾ ಘಟನೆಗಳನ್ನು ನೋಡಿದರೆ ಅದರಿಂದ ಜೀವನಪರ್ಯಂತ ಯಾತನೆಪಡಬಹುದು. ಜೀವನ ಸುಂದರವಾಗಿದೆ ಎಂಬ ಭಾವನೆ ಅವರಲ್ಲಿ ಮೂಡಿಸಲು ಶ್ರಮಿಸಬೇಕು.

ಮೀನ ರಾಶಿ
ಇವರು ಎಣಿಕೆಗೆ ಸಿಕ್ಕದಂತೆ ನುಣುಪಾಗಿ ಓಡಾಡಿಕೊಂಡಿರುವ, ಚುರುಕಾಗಿರುವ ಸ್ವಭಾವದವರು. ಹೀಗಾಗಿ ಇವರಲ್ಲಿ ಆಗಬಹುದಾದ ಆರೋಗ್ಯ ಸಮಸ್ಯೆಗಳು ಮೇಲ್ನೋಟಕ್ಕೆ ಗೊತ್ತೇ ಆಗುವುದಿಲ್ಲ. ಇವರಿಗೆ ಸದಾ ಪೌಷ್ಟಿಕ ಆಹಾರವನ್ನು ನೀಡುತ್ತಿರಬೇಕು, ಇಲ್ಲದಿದ್ದರೆ ಆಹಾರ ಸೇವನೆಯನ್ನೇ ಮರೆತುಬಿಡುತ್ತಾರೆ. ಹಾಗೇ ಮನಸ್ಸಿಗೆ ಆನಂದದಾಯಕವಾದ ಸಂಗೀತವನ್ನು ಕೇಳಿಸಬೇಕು. ಆಗ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳು ಉತ್ತಮವಾಗಿರುತ್ತವೆ. ಇಲ್ಲವಾದರೆ ಒಂದು ಪ್ರಾಯದ ಬಳಿಕ ಮಂಕಾಗುತ್ತಾರೆ.

ಮನೆ ಸುತ್ತಮುತ್ತ ಈ ಮರಗಳಿದ್ದರೆ ದುರದೃಷ್ಟ!