Asianet Suvarna News Asianet Suvarna News

ಮಿಥುನ ರಾಶಿಯ ಜನರ ಈ ಗುಣಗಳ ಬಗ್ಗೆ ಜಾಗರೂಕರಾಗಿರಿ!

ಎಲ್ಲಾ ರಾಶಿಗಳನ್ನು ಹೊಂದಿರುವ ಜನರಲ್ಲಿಯೂ ಕೂಡ ಉತ್ತಮ ಗುಣಲಕ್ಷಣಗಳ ಜೊತೆಗೆ ಕೆಲವು ನಕಾರಾತ್ಮಕ ಗುಣಗಳೂ ಬಂದಿರುತ್ತವೆ ಅದರಲ್ಲಿ ಮಿಥುನ ರಾಶಿಯು ಕೂಡಾ ಒಂದು. ಮಿಥುನ ರಾಶಿಯ ಜನರ ವ್ಯಕ್ತಿತ್ವ ಹಾಗೂ ನಕಾರಾತ್ಮಕ ಗುಣಗಳನ್ನು ನೀವು ಅರ್ಥೈಸಿಕೊಂಡರೆ ಅವರೊಂದಿಗೆ ನೀವು ಹೇಗೆ ವರ್ತಿಸಬೇಕೆಂದು ತಿಳಿದುಕೊಳ್ಳಬಹುದು.

Be careful with these character of gemini
Author
First Published Oct 30, 2022, 11:02 AM IST

 ನೀವು ಮಿಥುನ ರಾಶಿಯವರಾಗಿದ್ದರೆ ಅಥವಾ ಮಿಥುನ ರಾಶಿಯ ಜನರ ಜೊತೆ ಸ್ನೇಹ ಅಥವಾ ಪ್ರೀತಿಯಲ್ಲಿ ಇದ್ದರೆ, ನೀವು ನಿಸ್ಸಂದೇಹವಾಗಿ ಅವರ ವ್ಯಕ್ತಿತ್ವದ ಬಗ್ಗೆ ಮತ್ತು ನಕಾರಾತ್ಮಕ ಗುಣಲಕ್ಷಣಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಷ್ಟಪಡುತ್ತೀರಿ. ಇವರ ವ್ಯಕ್ತಿತ್ವವನ್ನು ಅನೇಕ ಜನರು ಸಂತೋಷದಿಂದ ಮತ್ತು ಹರ್ಷಚಿತ್ತದಿಂದ ಗ್ರಹಿಸಿದರೂ, ಇವರಲ್ಲಿರುವ ನಕಾರಾತ್ಮಕ ಗುಣಲಕ್ಷಣಗಳು ಇತರ ಯಾವುದೇ ಚಿಹ್ನೆಗಳಂತೆ ಸಾಕಷ್ಟು ನೈಜವಾಗಿವೆ.

ಹೆಚ್ಚಿನ ಸ್ಥಾನ ಪಲ್ಲಟ:

ಮಿಥುನ ರಾಶಿಯವರು ಒಂದೇ ಸ್ಥಳದಲ್ಲಿ ನೆಲೆ ನಿಲ್ಲಲು ಕಷ್ಟಪಡುತ್ತಾರೆ. ಅವರು ಬಹಳ ಬೇಗನೆ ಜಾಗ ಬದಲಿಸಬಹುದು. ಆದರೆ, ಅವರು ಅನಿರೀಕ್ಷಿತ ಮತ್ತು ತಮ್ಮ ಮುಂದಿನ ಕ್ರಮವನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ಒಂದು ವಿಷಯದಿಂದ ಬೇಗನೆ ಗಮನ ಕಳೆದುಕೊಳ್ಳುವುದರಿಂದ ಬಹಳ ಬೇಗ ಒಂದು ವಿಷಯದ ಬಗ್ಗೆ ಬೇಸರಗೊಳ್ಳುತ್ತಾರೆ . ನಿರ್ದಿಷ್ಟವಾಗಿ, ಮಿಥುನ ರಾಶಿಯವರು ಒಬ್ಬ ವ್ಯಕ್ತಿಗೆ ಬದ್ಧರಾಗಲು ಕಷ್ಟಪಡುತ್ತಾರೆ ಮತ್ತು ಸಂಬಂಧಗಳನ್ನು ಆಗಾಗ ಬದಲಿಸುತ್ತಿರಬಹುದು.

ಅತಿಯಾದ ಆತಂಕ (Anxiety):

ಅವರು ಏಕಕಾಲದಲ್ಲಿ ಹಲವಾರು ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರಬಹುದು. ಆದಾಗ್ಯೂ, ಮಿಥುನ ರಾಶಿಯವರು ಸಾಂದರ್ಭಿಕವಾಗಿ ಅವರು ಅವಶ್ಯಕತೆಗಿಂತ ಹೆಚ್ಚಿನದನ್ನು ತೆಗೆದುಕೊಳ್ಳುತ್ತಾರೆ ಇದರಿಂದಾಗಿ ಜೀವನದ ಘಟನೆಗಳನ್ನು ತಪ್ಪಾಗಿ ನಿರ್ವಹಿಸುವ ಸಾಧ್ಯತೆ ಇರುತ್ತದೆ. ತಾವು ನಿರ್ವಹಿಸಬೇಕಾದ ಜವಾಬ್ದಾರಿಯ ಕುರಿತು ಮರೆತುಬಿಡುತ್ತಾರೆ. ಅದಕ್ಕಾಗಿಯೇ ಅವರು ಕೆಲವು ಸಂದರ್ಭಗಳಲ್ಲಿ ತಮ್ಮ ಉತ್ತಮವಾದ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಕುಟುಂಬವೇ ಶಕ್ತಿ ಎಂದು ನಂಬುವ ರಾಶಿಗಳಿವು!

ದ್ವಿಮುಖ (Two Face):

ಅವರು ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದರ ಆಧಾರದ ಮೇಲೆ, ತಮ್ಮ ಯಾವ ಮುಖದ ದರ್ಶನವನ್ನು ಆ ವ್ಯಕ್ತಿಗೆ ನೀಡುತ್ತಿದ್ದಾರೆ ಎಂಬುದು ನಿರ್ಧರಿತವಾಗುತ್ತದೆ, ಏಕೆಂದರೆ ಇವರು ಹಲವು ರೀತಿಯ ಮುಖ ಕವಚಗಳನ್ನು ಹೊಂದಿರುತ್ತಾರೆ. 

ಇತರರ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ:

ಮಿಥುನ ರಾಶಿಯವರು ಇತರರ ಗೌಪ್ಯತೆಯನ್ನು ಉಲ್ಲಂಘಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಏಕೆಂದರೆ, ಅವರು ಇತರರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸ್ವಲ್ಪ ಹೆಚ್ಚು ಕುತೂಹಲದಿಂದ ಕೂಡಿರುತ್ತಾರೆ. ಅವರು ಇತರ ಜನರ ವ್ಯವಹಾರಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುವ ಮೂಲಕ ಹೆಚ್ಚುವರಿ ಪ್ರತಿಸ್ಪರ್ಧಿಗಳನ್ನು ಮಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ.

ತೀವ್ರವಾಗಿ ಮೂಡಿ (Moodie):

ಅವರು ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುವುದರಿಂದ, ಮಿಥುನ ರಾಶಿಯವರು ಭಾವನೆಗಳನ್ನು ಬಲವಾಗಿ ಗ್ರಹಿಸುತ್ತಾರೆ. ಮತ್ತು ನಿಯಮಿತವಾಗಿ ತೀವ್ರವಾದ ಮನಸ್ಥಿತಿ ಬದಲಾವಣೆಗಳಿಗೆ ಒಳಗಾಗುತ್ತಾರೆ. ಯಾವುದೇ ಒಂದು ಘಟನೆಯಿಂದ ಬಹುಬೇಗ ಪ್ರಚೋದನೆಗೊಳ್ಳುತ್ತಾರೆ. ಇದರಿಂದಾಗಿ ಆಗಾಗ ಅವರ ಮೂಡ್ ಏರುಪೇರಾಗುವುದು ಸಹಜ.

ಇದನ್ನೂ ಓದಿ: ಪ್ರತಿ ರಾಶಿಚಕ್ರದಿಂದ ನಾವು ಕಲಿಯಬೇಕಾದ ವಿಷಯ ಏನಂದ್ರೆ..

ಅತ್ಯಂತ ವ್ಯಂಗ್ಯ (Sarcastic):

ಇವರು ಅತ್ಯಂತ ಹಾಸ್ಯ ಮನೋಭಾವನೆಯನ್ನು ಹೊಂದಿರುತ್ತಾರೆ. ಅದರಿಂದಾಗಿ ಜನರು ಕೆಲವೊಮ್ಮೆ ಮನನೊಂದಿದ್ದಾರೆ. ಯಾರಾದರೂ ಇವರ ಬಳಿ ಪ್ರಾಮಾಣಿಕವಾಗಿ ಸಲಹೆಯನ್ನು ಕೇಳಿದಾಗ ಮೊದಲಿಗೆ ಅವರನ್ನು ನೋಡಿ ಹಾಸ್ಯ ಮಾಡಿ ಆ ಬಳಿಕ ಸಲಹೆಯನ್ನು ನೀಡುತ್ತಾರೆ ಇದು ನೋಡುವವರಿಗೆ ವ್ಯಂಗ್ಯ ಅನಿಸುತ್ತದೆ.

ಹಠದ ಸ್ವಭಾವ:

ಮಿಥುನ ರಾಶಿಯವರ ಇನ್ನೊಂದು ಗುಣವೆಂದರೆ, ಇವರಿಗೆ ಹಠದ ಸ್ವಭಾವ ಹೆಚ್ಚು. ತಾವು ಏನನ್ನಾದರೂ ಬೇಕು ಎಂದು ಇಷ್ಟಪಟ್ಟರೆ ಅದು ಸಿಗುವ ತನಕ ಅವರು ಸುಮ್ಮನಿರುವುದಿಲ್ಲ. ಅದಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.

ಮಿಥುನ ರಾಶಿಯವರು ಕೆಲವು ನ್ಯೂನತೆಗಳನ್ನು ಹೊಂದಿರುವುದು ಸತ್ಯವಾದರೂ, ಅವರ ಶ್ರೇಷ್ಠ ಗುಣಗಳು ಅವರ ನ್ಯೂನತೆಗಳನ್ನು ಮೀರಿಸುತ್ತದೆ. ಆದ್ದರಿಂದ, ಒಳಿತು ಕೆಡುಕುಗಳನ್ನು ಸಮನಾಗಿ ಸ್ವೀಕರಿಸಬೇಕು. 

Follow Us:
Download App:
  • android
  • ios