Asianet Suvarna News Asianet Suvarna News

ಕುಟುಂಬವೇ ಶಕ್ತಿ ಎಂದು ನಂಬುವ ರಾಶಿಗಳಿವು!

ಎಲ್ಲರೂ ಕುಟುಂಬವನ್ನು ಇಷ್ಟ ಪಡುತ್ತಾರೆ. ಅದರಲ್ಲಿಯೂ ಕೆಲವು ಜನರು ಯಾವಾಗಲೂ ಕುಟುಂಬದ ಒಗ್ಗಟ್ಟು ಮತ್ತು ವಾತ್ಸಲ್ಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಅವರು ತಮ್ಮ ಕುಟುಂಬವನ್ನು ಯಾವಾಗಲೂ ಬೆಂಬಲಿಸುತ್ತಾರೆ ಮತ್ತು ಪೋಷಿಸುತ್ತಾರೆ. ಇದಕ್ಕಾಗಿ ಅವರ ರಾಶಿ ಚಕ್ರದ ಪ್ರಭಾವ ಇರುತ್ತದೆ. ಅಂತಹ ಕೆಲವು ರಾಶಿ ಚಕ್ರಗಳ ಪಟ್ಟಿ ಇಲ್ಲಿದೆ..

These are the zodiac signs believing that family is the strength
Author
First Published Oct 26, 2022, 12:19 PM IST

ಕುಟುಂಬ ಎಂಬುದು ಪ್ರತಿಯೊಬ್ಬರಿಗೂ ಒಂದು ಭಾವನಾತ್ಮಕ ಬೆನ್ನೆಲುಬು. ನೀವೂ ಎಲ್ಲಿಯೇ ಇದ್ದರೂ ಕುಟುಂಬದವರನ್ನು ಅವರ ಪ್ರೀತಿಯನ್ನು ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ. ಅದಕ್ಕಾಗಿಯೇ ಮನೆಯಿಂದ ದೂರದಲ್ಲಿ ವಾಸಿಸುತ್ತಿರುವ ಜನರು ಹಬ್ಬ ಹರಿದಿನಗಳು ಅಥವಾ ರಜೆ ದಿನ ಬಂತೆಂದರೆ ಸಾಕು ತಮ್ಮ ಮನೆಗೆ ಮರಳಬೇಕು ಎಂದು ಕಾಯುತ್ತಿರುತ್ತಾರೆ. ಕುಟುಂಬವು ಎಲ್ಲರಿಗೂ ಒಂದು ಮಾನಸಿಕ ಸ್ಥೈರ್ಯವನ್ನು ನೀಡುತ್ತದೆ. ಬೇರೆಯವರಿಗೆ ಹೋಲಿಸಿದರೆ ಇಲ್ಲಿರುವ ಜನರು ಸ್ವಲ್ಪ ಹೆಚ್ಚೇ ಕುಟುಂಬ ಆಧಾರಿತವಾಗಿವೆ. ಇದಕ್ಕೆ ಅವರ ರಾಶಿ ಚಕ್ರದ ಗುಣಗಳು ಕಾರಣವಾಗಿರುತ್ತದೆ. ಅಂತಹ ಗುಣವುಳ್ಳ ರಾಶಿ ಚಕ್ರಗಳು ಇಲ್ಲಿವೆ ನೋಡಿ..

ಮೇಷ ರಾಶಿ (Aries)
ಮೇಷ ರಾಶಿಯ ಜನರು ಈಗಾಗಲೇ ಕುಟುಂಬದ ಮಹತ್ವವನ್ನು ತಿಳಿದಿರುತ್ತರೆ. ಅವರ ಯಶಸ್ಸಿನ (Success) ಹಿಂದಿರುವ ಮುಖ್ಯ ಕಾರಣ ಅವರ ಕುಟುಂಬ ಎಂಬುದು ಅವರ ದೃಢ ನಂಬಿಕೆ. ಮತ್ತು ಅದಕ್ಕಾಗಿಯೇ ಅವರು ತಮ್ಮ ಕುಟುಂಬಕ್ಕೆ ಸಹಾಯ ಮಾಡಲು ಅಥವಾ ಅವರೊಂದಿಗೆ ನಿಲ್ಲಬೇಕು ಎಂಬ ಸಂದರ್ಭ (Situation) ಒದಗಿ ಬಂದಾಗ ಯಾವಾಗಲೂ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಈ ವ್ಯಕ್ತಿಗಳು ತಮ್ಮ ಕುಟುಂಬದ ಮೇಲೆ ಅಪಾರವಾದ ಪ್ರೀತಿ ಮತ್ತು ಸಾಕಷ್ಟು ಕಾಳಜಿಯನ್ನು (Care) ಹೊಂದಿರುತ್ತಾರೆ. ಅವರು ತಮ್ಮ ಕುಟುಂಬಗಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತಾರೆ. ತಮ್ಮ ಕುಟುಂಬದೊಂದಿಗೆ ಇರಲು ತಮ್ಮ ಎಲ್ಲಾ ಯೋಜನೆಗಳನ್ನು ರದ್ದುಗೊಳಿಸುವ ಹಂತಕ್ಕೆ ಬೇಕಾದರೂ ಹೋಗುತ್ತಾರೆ.

ಇದನ್ನೂ ಓದಿ: Cancer zodiac ಸಂಗಾತಿ ನಿಮ್ಮ ಬಳಿಗೆ ವಾಪಸಾಗಲು ಇಲ್ಲಿವೆ ಟಿಪ್ಸ್!

ಮಕರ ರಾಶಿ (Capricorn)
ಮಕರ ರಾಶಿಯಲ್ಲಿ ಜನಿಸಿರುವ ಜನರು ಹೆಚ್ಚು ಭಾವುಕರಾಗಿರುತ್ತಾರೆ. ತಮ್ಮ ಜೀವನದ ಪ್ರತಿಯೊಂದು ವಿಷಯವನ್ನು ತಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳದೆ ಇರಲು ಇವರಿಂದ ಸಾಧ್ಯವಿಲ್ಲ. ಇವರ ಪ್ರಕಾರ ಮನೆಯ ಎಲ್ಲಾ ಸದಸ್ಯರ ನಡುವೆ ಸಂಪೂರ್ಣ ಪಾರದರ್ಶಕತೆ (Transparency) ಇರಬೇಕು. ಅದಕ್ಕಾಗಿ ಅವರು ತಮ್ಮ ಕುಟುಂಬವನ್ನು ತಮ್ಮ ಸ್ನೇಹಿತರೊಂದಿಗೆ (Friends) ತೊಡಗಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಾರೆ. ಅವರಿಗೆ ಅವರ ಕುಟುಂಬ ಹಾಗೂ ಅವರ ಆತ್ಮೀಯ ಸ್ನೇಹಿತರೆ ಪ್ರಪಂಚ ಆಗಿರುತ್ತದೆ. ಹಾಗಾಗಿ ತಮ್ಮ ಜೀವನದ ಪ್ರತಿಯೊಂದು ವಿಚಾರದಲ್ಲಿಯೂ ತಮ್ಮ ಕುಟುಂಬದವರ ಜೊತೆಗೆ ಇರಬೇಕು ಎಂಬುದು ಇವರ ಜೀವನದ ಉದ್ದೇಶ.

ವೃಷಭ ರಾಶಿ (Taurus)
ವೃಷಭ ರಾಶಿಯವರು ತಮ್ಮ ಸಂಬಂಧಗಳನ್ನು ಉಳಿಸಿಕೊಳ್ಳುವುದರಲ್ಲಿ ಮತ್ತು ತಮ್ಮವರನ್ನು ಸಂರಕ್ಷಿಸುವಲ್ಲಿ ಪ್ರಮುಖರಾಗಿರುತ್ತಾರೆ. ಅವರು ತಮ್ಮ ಜೀವನದಲ್ಲಿರುವ ಎಲ್ಲಾ ಸಂಬಂಧಗಳನ್ನು ಗೌರವಿಸುತ್ತಾರೆ. ಆದರೆ, ಅದೆಲ್ಲದಕ್ಕಿಂತ ತಮ್ಮ ಕುಟುಂಬವನ್ನು ಹೆಚ್ಚಿನ ಸ್ಥಾನದಲ್ಲಿ ಇಡುತ್ತಾರೆ. ಅವರಿಗೆ ಕುಟುಂಬವೇ ಮೊದಲ ಆಯ್ಕೆ ಅದಕ್ಕಾಗಿ ಅವರು ಯಾರನ್ನು ಬೇಕಾದರೂ ದೂರ ಮಾಡಿಕೊಳ್ಳಲು ಸಿದ್ಧರಿರುತ್ತಾರೆ ಮತ್ತು ತಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೆ ಬಾಂಧವ್ಯವನ್ನು (Bond) ಬಲಪಡಿಸಲು ತಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಇವರ ಈ ಗುಣದಿಂದಾಗಿ ಕುಟುಂಬದವರು ಇವರ ದೀರ್ಘಾವಧಿಯ ಮತ್ತು ತೀವ್ರವಾದ ಸಂಬಂಧಗಳನ್ನು ನಂಬುವಂತೆ ಮಾಡಬಹುದು.

ಇದನ್ನೂ ಓದಿ: Festive vibes: ಹಬ್ಬದ ಆಚರಣೆಯಲ್ಲಿ ಹೆಚ್ಚಿನ ಉತ್ಸಾಹ ತೋರುವ ರಾಶಿಗಳಿವು!

ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರು ಭಾವನಾತ್ಮಕ (Emotional) ಮತ್ತು ಇತರರನ್ನು ಪೋಷಿಸುವ ಗುಣವುಳ್ಳ ಜನರಾಗಿರುತ್ತಾರೆ. ತಮ್ಮ ಕುಟುಂಬದೊಂದಿಗೆ ಸದಾ ಉತ್ತಮ ಬಾಂಧವ್ಯ ಉಳಿಸಿಕೊಳ್ಳಲು ಮತ್ತು ಯಾವಾಗಲೂ ಸಂಪರ್ಕದಲ್ಲಿರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ತಮ್ಮ ಕುಟುಂಬದವರ ಹತ್ತಿರದಲ್ಲಿ ಇರಲು ಸಾಧ್ಯವಿಲ್ಲದಿದ್ದಾಗಲೂ ಸಹ, ಅವರು ನಿಯಮಿತವಾಗಿ ಕರೆಯ ಮೂಲಕ ಅವರೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ಅವರೊಂದಿಗೆ ನಿಕಟ (Close) ಸಂಬಂಧವನ್ನು ಉಳಿಸಿಕೊಳ್ಳಲು ಕುಟುಂಬದವರ ಪ್ರತಿಯೊಂದು ಸಣ್ಣ ವಿವರಗಳನ್ನು ತಿಳಿಯಲು ಬಯಸುತ್ತಾರೆ ಜೊತೆಗೆ ತಮ್ಮ ವಿಚಾರಗಳನ್ನೂ ಹಂಚಿಕೊಳ್ಳುತ್ತಾರೆ.

Follow Us:
Download App:
  • android
  • ios