ಬಸವ ಜಯಂತಿ 2022ಕ್ಕೆ ಆಪ್ತರಿಗೆ, ಪ್ರೀತಿ ಪಾತ್ರರಿಗೆ ಕಳುಹಿಸಲು ಸಂದೇಶಗಳು, ಶುಭಾಶಯಗಳು ಇಲ್ಲಿವೆ. 

12ನೇ ಶತಮಾನದ ಕವಿ, ತತ್ವಜ್ಞಾನಿ, ಸಮಾಜ ಸುಧಾರಕರಾದ ಬಸವಣ್ಣನವರ ಜನ್ಮಜಯಂತಿಯನ್ನು ಪ್ರತಿ ವರ್ಷ ಬಸವ ಜಯಂತಿಯಾಗಿ ಅಕ್ಷಯ ತೃತೀಯದ ದಿನ ಆಚರಿಸಲಾಗುತ್ತದೆ. ಈ ಬಾರಿ ಮೇ 3ರಂದು ಬಸವೇಶ್ವರ ಜಯಂತಿ ಬಂದಿದೆ. ಲಿಂಗಾಯತ ಮತ ಹುಟ್ಟು ಹಾಕಿದ ಬಸವಣ್ಣನವರು ಅಂದಿನ ಕಾಲದಲ್ಲಿ ಸಮಾಜದಲ್ಲಿ ತಂದ ಸುಧಾರಣೆಗಳು ಊಹೆಗೂ ನಿಲುಕದ್ದು. 

ಮೇಲು ಕೀಳು, ವರ್ಗಗಳು, ಜಾತಿವ್ಯವಸ್ಥೆ ಎಲ್ಲದರ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ತಿರುಗಿ ಬಿದ್ದ ಬಸವಣ್ಣನವರು ದಮನಿತರ ಧ್ವನಿಯಾಗಿ ನಿಂತರು. ಅವರಲ್ಲೂ ಧ್ವನಿ ಹೊರಡಿಸುವ ಶಕ್ತಿ ತುಂಬಿಸಿದರು. ದೇವರ ಬಗ್ಗೆ ವಿಶಿಷ್ಠ ಕಲ್ಪನೆ ಹುಟ್ಟು ಹಾಕಿದರು. ಎಲ್ಲರಲ್ಲೂ ದುಡಿಯುವ ಛಲ ಹುಟ್ಟು ಹಾಕಿದರು. ಅನುಭವ ಮಂಟಪ ಸ್ಥಾಪಿಸಿ, ಅದರಲ್ಲಿ ಎಲ್ಲರೂ ಕುಳಿತು ವಿಚಾರ ವಿನಿಮಯ ಮಾಡಲು ವೇದಿಕೆ ಕಲ್ಪಿಸಿದರು. ಅಕ್ಕ ಮಹಾದೇವಿ ಸೇರಿದಂತೆ ಬಹಳಷ್ಟು ಶರಣರು ಈ ಅನುಭವ ಮಂಟಪದ ಪ್ರಮುಖರು. 1105ರಲ್ಲಿ ಜನಿಸಿದ ಬಸವೇಶ್ವರರು, ಧರ್ಮ, ಸಮಾಜ, ತತ್ವಜ್ಞಾನ, ಸಾಹಿತ್ಯ, ರಾಜಕೀಯದಲ್ಲಿ ಕೈಗೊಂಡ ಎಲ್ಲ ಕಾರ್ಯಗಳೂ ಕ್ರಾಂತಿಕಾರಿಯಾಗಿವೆ. ಮಂಗಲವೇದ್ಯದಲ್ಲಿ ಲಿಂಗಾಯತ ಧರ್ಮ ಹುಟ್ಟು ಹಾಕಿದ ಬಸವೇಶ್ವರರು ಕರ್ನಾಟಕದ ಬಸವಕಲ್ಯಾಣ ಮತ್ತು ಶ್ರವಣಬೆಳಗೊಳದಲ್ಲಿ ಅದನ್ನು ಪಸರಿಸಿದರು. ಲಿಂಗಾಯತ ಸಮುದಾಯವು ಬಸವೇಶ್ವರರನ್ನು ಶಿವನ ವಾಹನ ನಂದಿಯ ಮಾನವ ಅವತಾರ ಎಂದೇ ನಂಬುತ್ತದೆ. ಈ ಮಹಾನುಭಾವರ ಜನ್ಮದಿನದಂದು ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲು ಸಂದೇಶಗಳು, ಶುಭಾಶಯಗಳು, ಸ್ಟೇಟಸ್‌ಗಳನ್ನು ಇಲ್ಲಿ ನೀಡಲಾಗಿದೆ. 

ನಂಬಿಕೆಯ ಹಾದಿಯಲ್ಲಿ ನಡೆವಾಗ ಎಂದಿಗ ಭರವಸೆ ಕಳೆದುಕೊಳ್ಳಬೇಡಿ. ಆದರ್ಶಯುತ ಜೀವನ ಸಾಗಿಸಿ. ಬಸವ ಜಯಂತಿಯ ಶುಭಾಶಯಗಳು. 

ಉಳ್ಳವರು ಶಿವಾಲಯವ ಕಟ್ಟಿಸುವರು, ನಾನೇನು ಮಾಡಲಿ ಬಡವನಯ್ಯಾ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ ಎಂದ ಮಹಾತ್ಮ ಬಸವಣ್ಣನವರ ಜಯಂತಿಯ ಶುಭಾಶಯಗಳು. 

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ, ಕೂಡಲ ಸಂಗಮದೇವಯ್ಯಾ.. ಸತ್ಯ ಮತ್ತು ಪ್ರಾಮಾಣಿಕತೆಯ ಜೀವನ ನಿಮ್ಮದಾಗಲಿ. ಬಸವ ಜಯಂತಿಯ ಶುಭಾಶಯಗಳು. 

ತನ್ನ ತಾನರಿದು ತಾನಾರೆಂದು ತಿಳಿದೆಡೆ ತನಗೆ ತಾನೇ ದೇವಾ ನೋಡಾ ಅಪ್ರಮಾಣ ಕೂಡಲಸಂಗಮದೇವಾ! ಸರ್ವರಿಗೂ ಬಸವೇಶ್ವರ ಜಯಂತಿಯ ಶುಭಾಶಯಗಳು. 

ಕಳಬೇಡ, ಕೊಲಬೇಡ, ಹುಸಿಯನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ- ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ.. ಮನುಕುಲದ ಮಹಾನ್ ಮಾನವತಾವಾದಿಯ ಜನ್ಮಜಯಂತಿಯ ಶುಭಾಶಯಗಳು.

ಖುಷಿಯಾಗಿರುವುದು ಈ ರಾಶಿಗಳಿಗೆ ಸುಲಭ

ಅನುಭವ ಮಂಟಪ, ವಚನಗಳ ಮೂಲಕ ಮುಕುಲಕ್ಕೆ ಮಹಾನ್ ಮಾನವತೆಯ ಪಾಠ ಮಾಡಿದ ಆದರ್ಶ ಪುರುಷ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು. ಅವರ ಸಂದೇಶಗಳು ನಮ್ಮೆಲ್ಲರ ಮನಸ್ಸನ್ನರಳಿಸಲಿ. ಬದುಕು ಹಸನಾಗಲಿ.

ಬಸವ ಜಯಂತಿಯ ಶುಭಾಶಯಗಳು. ಈ ಹಬ್ಬವು ಎಲ್ಲರ ಜೀವನದಲ್ಲಿ ನೀತಿ, ಆದರ್ಶ, ದಯೆ, ಪ್ರಾಮಾಣಿಕತೆಯನ್ನು ತರಲಿ. ಸಾತ್ವಿಕ ಜೀವನ ನಿಮ್ಮದಾಗಲಿ. 

ವಿಶ್ವಗುರು ಬಸವಣ್ಣನವರು ಜ್ಞಾನದ ದೀಪ ಹರಿಸಿದ ಮಹಾನ್ ಮಾನವತಾವಾದಿ. ಇವರ ತತ್ವ ಆದರ್ಶಗಳು ನಮ್ಮ ಬದುಕಿನ ಹಾದಿಯಾಗಲಿ. ಸರ್ವರಿಗೂ ಬಸವೇಶ್ವರ ಜಯಂತಿಯ ಶುಭಕಾಮನೆಗಳು. 

Basava Jayanti 2022 ಯಾವಾಗ? ಆಚರಣೆ ಹೇಗೆ? ಮಹತ್ವವೇನು?

ಜನರಲ್ಲಿ ಜ್ಞಾನದ ದೀವಿಗೆ ಹಚ್ಚಿದ ಮಹಾನ್ ಮಾನವತಾವಾದಿ, ಕಾಯಕವೇ ಕೈಲಾಸವೆಂದ ಯೋಗಿ ಬಸವಣ್ಣನವರ ಜಯಂತಿಯ ಶುಭಾಶಯಗಳು. 

ವಿಶ್ವದ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪದ ಕರ್ತೃ, ವಚನಗಳ ಮೂಲಕ ಜ್ಞಾನದ ದೀವಿಗೆ ಹಚ್ಚಿದ ಜಗಜ್ಯೋತಿ ಬಸವಣ್ಣನವರ ಜನ್ಮ ಜಯಂತಿ ಇಂದು. ಎಲ್ಲರಿಗೂ ಶುಭಾಶಯಗಳು.