Asianet Suvarna News Asianet Suvarna News

ಅಯೋಧ್ಯೆ ಗರ್ಭಗುಡಿ ಪೀಠದಲ್ಲಿ ಬಾಲರಾಮ: ಇಂದು ಏನೇನು ಕಾರ್ಯಕ್ರಮ?

ಭವ್ಯವಾದ ರಾಮಮಂದಿರ ಗರ್ಭಗುಡಿಯ ಪೀಠದ ಮೇಲೆ ಬಾಲರಾಮನ ನೂತನ ವಿಗ್ರಹವನ್ನು ಗುರುವಾರ ಕೂರಿಸಲಾಗಿದೆ. ಇದರೊಂದಿಗೆ ಕೋಟ್ಯಂತರ ಭಕ್ತರು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹವನ್ನು ಜ.22ರಂದು ಕಣ್ಣುಂಬಿಕೊಳ್ಳುವ ಸಮಯ ಮತ್ತಷ್ಟು ಸನ್ನಿಹಿತವಾದಂತಾಗಿದೆ.

Balarama at Ayodhya sanctum sanctorum What is the program today In Ayodhya akb
Author
First Published Jan 19, 2024, 9:50 AM IST

ಅಯೋಧ್ಯೆ: ಭವ್ಯವಾದ ರಾಮಮಂದಿರ ಗರ್ಭಗುಡಿಯ ಪೀಠದ ಮೇಲೆ ಬಾಲರಾಮನ ನೂತನ ವಿಗ್ರಹವನ್ನು ಗುರುವಾರ ಕೂರಿಸಲಾಗಿದೆ. ಇದರೊಂದಿಗೆ ಕೋಟ್ಯಂತರ ಭಕ್ತರು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹವನ್ನು ಜ.22ರಂದು ಕಣ್ಣುಂಬಿಕೊಳ್ಳುವ ಸಮಯ ಮತ್ತಷ್ಟು ಸನ್ನಿಹಿತವಾದಂತಾಗಿದೆ. ಬುಧವಾರ ರಾತ್ರಿಯೇ ವಿಗ್ರಹವನ್ನು ದೇಗುಲದ ಆವರಣಕ್ಕೆ ತಂದು ಗರ್ಭಗೃಹದೊಳಗೆ ಕೂರಿಸಲಾಗಿತ್ತು.

ಗುರುವಾರ ಹಿರಿಯ ಅರ್ಚಕರ ಸಮ್ಮುಖದಲ್ಲಿ ಜಲಧಿವಾಸ್, ಗಣೇಶ ಪೂಜೆ, ವರುಣ ಪೂಜೆ ಮೊದಲಾದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಮಧ್ಯಾಹ್ನ 12.30ರ ಬಳಿಕ ವಿಗ್ರಹವನ್ನು ಪೀಠದ ಮೇಲೆ ಕೂರಿಸಲಾಯಿತು. ಸದ್ಯ ವಿಗ್ರಹ ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಮುಂದಿನ 3 ದಿನಗಳ ಕಾಲ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಅಂತಿಮವಾಗಿ ಜ.22ರಂದು ಮಧ್ಯಾಹ್ನ 12.20 ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುವುದು ಎಂದು ಪೂಜಾವಿಧಿಗಳ ಉಸ್ತುವಾರಿ ಹೊತ್ತಿರುವ ಅರುಣ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

ಅಯೋಧ್ಯೆ ರಾಮನಿಗೆ 5 ಸಾವಿರ ವಜ್ರಖಚಿತ ನೆಕ್ಲೆಸ್ ಉಡುಗೊರೆ ಕೊಟ್ಟ ಭಕ್ತ: ಚಿನ್ನದ ಪಾದುಕೆ. 200 ಅಮೆರಿಕನ್ ವಜ್ರದ ನೆಕ್ಲೆಸ್!

ಗರ್ಭಗುಡಿಯಲ್ಲಿ ವಿಗ್ರಹ ಕೂರಿಸಿದ ಬಳಿಕ ಇಡೀ ಪ್ರದೇಶಕ್ಕೆ ಪ್ರವೇಶವನ್ನು ಆಯ್ದ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಸ್ಥಳದಲ್ಲಿ ಉತ್ತರಪ್ರದೇಶ ವಿಶೇಷ ಭದ್ರತಾ ಪಡೆಯ ಯೋಧರನ್ನು ನಿಯೋಜಿಸಲಾಗಿದೆ. ಗರ್ಭಗುಡಿಯ ಆಸುಪಾಸು ಮೊಬೈಲ್ ಬಳಕೆ ನಿಷೇಧಿಸಲಾಗಿದೆ.

ಇಂದು ಏನೇನು ಕಾರ್ಯಕ್ರಮ?:
ರಾಮಮಂದಿರದಲ್ಲಿ ಈ ದಿನದಂದು ಯಾಗದ ಅಗ್ನಿಕುಂಡವನ್ನು ಸಿದ್ದಪಡಿಸಲಾಗುತ್ತದೆ ಮತ್ತು ಅರ್ಚಕರು ವೇದ ಮಂತ್ರಗಳನ್ನು ಅನುಸರಿಸುವ  ಮೂಲಕ ಮತ್ತು ಇತರ ವಿಶೇಷ ವಿಧಾನಗಳ ಮೂಲಕ ಅಗ್ನಿಯನ್ನು ಬೆಳಗಿಸುತ್ತಾರೆ. ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನಗಳು ನಡೆಯಲಿವೆ.

ನಿಜವಾದ ರಾಮ ಭಕ್ತರು ಕಾಂಗ್ರೆಸಿಗರು, ಅವಕಾಶ ಸಿಕ್ಕಾಗ ಅಯೋಧ್ಯೆಗೆ ಹೋಗುತ್ತೇನೆ: ಮಧು ಬಂಗಾರಪ್ಪ

ಜ.22ಕ್ಕೆ ದೀಪ ಹಚ್ಚಿ, ಬಡವರಿಗೆ ಆಹಾರ ವಿತರಿಸಿ: ಮೋದಿ ಕರೆ

ನವದೆಹಲಿ: ತಮ್ಮ ಮನೆಗಳಲ್ಲಿ ದೀಪ ಹಚ್ಚಿ, ಬಡವರಿಗೆ ಸಹಾಯ ಮಾಡುವ ಮೂಲಕ ಅಯೋಧ್ಯೆ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ದೀಪಾವಳಿಯಂತೆ ಆಚರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಕರೆ ನೀಡಿದ್ದಾರೆ. 'ಪ್ರಾಣ ಪ್ರತಿಷ್ಠಾಪನೆಯನ್ನು ನಿಮ್ಮ ನಿಮ್ಮ ಮನೆಗಳಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿಯಂತೆ ಆಚರಿಸಿ. ಜೊತೆಗೆ ಸಾಧ್ಯವಾದಷ್ಟು ಬಡವರಿಗೆ ಸಹಾಯ ಮಾಡಿ. ಅಲ್ಲದೆ 22ರ ನಂತರ ತಮ್ಮ ಕ್ಷೇತ್ರದ ಜನರೊಂದಿಗೆ ರೈಲಿನಲ್ಲೇ ಅಯೋಧ್ಯೆಗೆ ಆಗಮಿಸಿ ಶ್ರೀರಾಮನ ದರ್ಶನ ಪಡೆಯಿರಿ' ಎಂದು ಸಲಹೆ ನೀಡಿದರು.

ಹುಸಿ ಜಾತ್ಯತೀತತೆಯ ಬಣ್ಣ ಬಯಲು ಮಾಡಿದ ಅಯೋಧ್ಯೆ ರಾಮಮಂದಿರ ಹೋರಾಟ: ಅಡ್ವಾಣಿ

Latest Videos
Follow Us:
Download App:
  • android
  • ios