ರಾಮಮಂದಿರದ ಬಾಲರಾಮನ ಪೂರ್ಣ ಚಿತ್ರ ಅನಾವರಣ: ಪ್ರತಿಷ್ಠಾಪನೆಗೂ ಮುನ್ನ ವಿಗ್ರಹದ ಮುಖ ತೋರಿಸಬಹುದೇ?
- ವಿಗ್ರಹದ ಪ್ರಭಾವಳಿಯಲ್ಲಿ ಓಂ, ಸೂರ್ಯ, ಶಂಖ, ಚಕ್ರ, ವಿಷ್ಣುವಿನ ದಶಾವತಾರ ಚಿತ್ರಣ
- ಮೈಸೂರು, ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡ ಸುಂದರ ವಿಗ್ರಹ,
- ಮಂದಿರಕ್ಕೆ ತರುವ ಮಂಚಿನ ಹಾಗೂ ಗರ್ಭಗುಡಿಯಲ್ಲಿ ಕೂರಿಸಿದ 2 ಚಿತ್ರ ಬಿಡುಗಡೆ
ಅಯೋಧ್ಯೆ: ಇಲ್ಲಿ ನೂತನವಾಗಿ ನಿರ್ಮಿಸಲಾದ ಭವ್ಯ ರಾಮಮಂದಿರಕ್ಕೆಂದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ 5 ವರ್ಷದ ಬಾಲರಾಮನ ವಿಗ್ರಹದ ಸಂಪೂರ್ಣ ನೋಟ ಶುಕ್ರವಾರ ಅನಾವರಣಗೊಂಡಿದೆ. ವಿಗ್ರಹವು ಕೈಯಲ್ಲಿ ಬಿಲ್ಲುಬಾಣ ಹಿಡಿದು ನಿಂತಿರುವ ಭಂಗಿಯಲ್ಲಿದೆ. ಇದು ಮಂದಿರಕ್ಕೆ ತರುವ ಮುನ್ನ ಮೂರ್ತಿ ಕೆತ್ತುವ ಸ್ಥಳದಲ್ಲಿ ತೆಗೆದ ಫೋಟೋ ಆಗಿದ್ದು, ಇದರಲ್ಲಿ ರಾಮ ವಿಗ್ರಹದ ಸಂಪೂರ್ಣ ದರ್ಶನವಾಗಿದೆ. ಇನ್ನು ಗರ್ಭಗುಡಿಗೆ ತಂದು ಕೂರಿಸಿದ ಬಳಿಕ ತೆಗೆದಿರುವ ಮತ್ತೊಂದು ಚಿತ್ರದಲ್ಲಿ ರಾಮನ ಮುಖಕ್ಕೆ ಬಟ್ಟೆ ಕಟ್ಟಿ ಪೂಜಿಸಲಾಗಿರುವ ನೋಟವಿದೆ.
ಭವ್ಯ ಮಂದಿರಕ್ಕೆ ಸರಿಸಾಟಿಯಾಗುವಂತೆ ಕೆತ್ತಲಲ್ಪಟ್ಟಿರುವ 4.5 ಅಡಿ ಎತ್ತರದ ವಿಗ್ರಹವು ಬಾಲ ರಾಮನ ಮಂದಸ್ಮಿತ ಮುಖವನ್ನು ಹೊಂದಿದೆ ಹಾಗೂ ಸುಂದರವಾದ ಪ್ರಭಾವಳಿಯನ್ನು ಹೊಂದಿದೆ. ಪ್ರಭಾವಳಿ ಮೇಲ್ಭಾಗದಲ್ಲಿ ರಾಮ ಸೂರ್ಯವಂಶಕ್ಕೆ ಸೇರಿದ್ದನ್ನು ಸೂಚಿಸುವ ಸೂರ್ಯನ ವಿಗ್ರಹವಿದೆ. ಉಳಿದಂತೆ ಪ್ರಭಾವಳಿಯ
ಅಭೇದ್ಯ ಕೋಟೆಯಾದ ಅಯೋಧ್ಯೆ, ಭಕ್ತರು ಬಂದ್ರೆ ಸ್ವಾಗತ, ಭಯೋತ್ಪಾದಕ ಬಂದ್ರೆ ಹತ!
ಎರಡು ಚಿತ್ರ ಬಿಡುಗಡೆ
ಗುರುವಾರ ತಡರಾತ್ರಿ ಬಿಡುಗಡೆ ಮಾಡಲಾದ ಫೋಟೋದಲ್ಲಿ ಗರ್ಭಗುಡಿಯಲ್ಲಿ ಕೂರಿಸಲಾದ ರಾಮನ ಚಿತ್ರವನ್ನು ತೋರಿಸಲಾಗಿತ್ತು. ಇದರಲ್ಲಿ ರಾಮನ ಮುಖಕ್ಕೆ ಬಟ್ಟೆಯನ್ನು ಕಟ್ಟಲಾಗಿತ್ತು. ಇನ್ನು ಶುಕ್ರವಾರ ಬೆಳಗ್ಗೆ ಇನ್ನೊಂದು ಚಿತ್ರವನ್ನು ವಿಎಚ್‌ಪಿ ಬಿಡುಗಡೆ ಮಾಡಿತ್ತು. ಅದರಲ್ಲಿ ರಾಮನ ಕಣ್ಣಿಗೆ ಮಾತ್ರ ಹಳದಿ ಬಟ್ಟೆ ಕಟ್ಟಲಾಗಿತ್ತು ಹಾಗೂ ವಿಗ್ರಹಕ್ಕೆ ಗುಲಾಬಿ ಬಣ್ಣದ ಮಾಲೆ ಹಾಕಿ ಪೂಜೆ ಮಾಡಲಾಗಿತ್ತು.
ಇನ್ನು ಶುಕ್ರವಾರ ಸಂಜೆ ಇನ್ನೊಂದು ಚಿತ್ರ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಆಗಿ ವೈರಲ್ ಆಗಿದೆ. ಈ ಚಿತ್ರವು ವಿಗ್ರಹದ ಸಂಪೂರ್ಣ ದರ್ಶನ ಮಾಡಿಸಿದೆ. ವಿಗ್ರಹ ಕೆತ್ತುವ ಸಮಯದಲ್ಲಿ ತೆಗೆದಿದ್ದು ಎನ್ನಲಾದ ಈ ಫೋಟೋದಲ್ಲಿ ರಾಮನ ಮಂದಸ್ಮಿತ ಮುಖ, ಇಡೀ ವಿಗ್ರಹ ಮತ್ತು ಸಂಪೂರ್ಣ ಪ್ರಭಾವಳಿ ನೋಡಬಹುದು. ಇನ್ನು ರಾಮನ ಎರಡೂ ಕೈಯಲ್ಲಿ ಇಡಲಾಗುವ ಬಿಲ್ಲು ಮತ್ತು ಬಾಣವನ್ನು ಚಿನ್ನದಲ್ಲಿ ತಯಾರಿಸಲಾಗಿದ್ದು, ಅದನ್ನು ಪ್ರತ್ಯೇಕವಾಗಿ ವಿಗ್ರಹಕ್ಕೆ ಜೋಡಿಸಿರುವ ದೃಶ್ಯಗಳು ಕೂಡಾ ಶುಕ್ರವಾರ ಸಂಜೆಯೇ ಬಿಡುಗಡೆಯಾದ ಇನ್ನೊಂದು ಫೋಟೋದಲ್ಲಿ ಇದೆ.
ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ, ತನ್ನ ಉದ್ಯೋಗಿಗಳಿಗೆ ರಜೆ ಘೋಷಿಸಿದ ರಿಲಯನ್ಸ್!
ಪ್ರತಿಷ್ಠಾಪನೆಗೂ ಮುನ್ನ ವಿಗ್ರಹದ ಮುಖ ತೋರಿಸಬಹುದೇ?
ಸದ್ಯ ಬಿಡುಗಡೆಯಾಗಿರುವ ರಾಮನ ಮುಖ ತೋರಿಸುವ ಫೋಟೋವನ್ನು ವಿಗ್ರಹವನ್ನು ಕೆತ್ತುವ ಸಂದರ್ಭದಲ್ಲಿ ತೆಗೆದಿದ್ದು. ಈ ಸಮಯದಲ್ಲಿ ಯಾರು ಬೇಕಾದರೂ ನೋಡಬಹುದು. ಇದಕ್ಕೆ ಅಡ್ಡಿಯಲ್ಲ. ಆದರೆ ವಿಗ್ರಹವನ್ನು ತಂದು ಗರ್ಭಗುಡಿಯಲ್ಲಿ ಕೂರಿಸಿ ಅದಕ್ಕೆ ವಿವಿಧ ಪೂಜಾ ವಿಧಿವಿಧಾನಗಳನ್ನು ನಡೆಸುವ ಮುನ್ನ ಮುಖಕ್ಕೆ ಬಟ್ಟೆ ಕಟ್ಟಲಾಗುತ್ತದೆ. ಬಳಿಕ ಪ್ರಾಣ ಪ್ರತಿಷ್ಠಾಪನೆ ವೇಳೆ ಬೆಳ್ಳಿಯ ಬಟ್ಟಲಿನಲ್ಲಿ ಬೆಣ್ಣೆ ಇಟ್ಟುಕೊಂಡು, ಚಿನ್ನದ ಸೂಜಿಯಿಂದ ಬೆಣ್ಣೆ ತೆಗೆದುಕೊಂಡು ಮೂರ್ತಿಯ ಕಣ್ಣಿನ ರೇಖೆಯನ್ನು ಬಿಡಿಸುತ್ತಾರೆ. ಇದನ್ನು ಕ
ನಮ್ಮೂರಿನ ಬಡ ರೈತನ ಜಮೀನಿನ ಕಲ್ಲು ರಾಮನ ಮೂರ್ತಿಯಾಗಿದೆ: ಅರುಣ್ ಯೋಗಿರಾಜ್