Asianet Suvarna News Asianet Suvarna News

ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ, ತನ್ನ ಉದ್ಯೋಗಿಗಳಿಗೆ ರಜೆ ಘೋಷಿಸಿದ ರಿಲಯನ್ಸ್‌!

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಲುವಾಗಿ ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ರಿಲಯನ್ಸ್‌ ಇಂಡಸ್ಟ್ರೀಸ್‌ ದೇಶಾದ್ಯಂತ ಇರುವ ತನ್ನೆಲ್ಲಾ ಕಚೇರಿಗಳಿಗೆ ರಜೆ ಘೋಷಣೆ ಮಾಡಿದೆ.
 

Reliance Industries has announced a holiday for all their offices across the country on 22nd January san
Author
First Published Jan 19, 2024, 9:36 PM IST

ನವದೆಹಲಿ (ಜ.19): ಅಯೋಧ್ಯೆಯಲ್ಲಿ ಶ್ರೀರಾಮ ವಾಪಾಸ್‌ ಬರುವುದನ್ನು ಇಡೀ ದೇಶವೇ ಸಂಭ್ರಮ ಪಡುತ್ತಿದೆ. ಹಲವು ರಾಜ್ಯಗಳು ಈಗಾಗಲೇ ಜನವರಿ 22 ಅನ್ನು ರಜಾ ದಿನವನ್ನಾಗಿ ಘೋಷಣೆ ಮಾಡಿದೆ. ಇದರ ನಡುವೆ ದೇಶದ ಪ್ರಮುಖ ಕಂಪನಿಯಲ್ಲಿ ಒಂದಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಜನವರಿ 22 ರಂದು ದೇಶಾದ್ಯಂತ ಇರುವ ತನ್ನ ಎಲ್ಲಾ ಕಚೇರಿಗಳಿಗೆ ರಜೆ ನೀಡಲಾಗಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರ ತನ್ನ ಎಲ್ಲಾ ಕಚೇರಿ ಜನವರಿ 22ರಂದು ಅರ್ಧ ದಿನ ಬಂದ್‌ ಆಗಿರಲಿದೆ ಎಂದು ತಿಳಿಸಿತ್ತು. ಅದರೊಂದಿಗೆ ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಛತ್ತೀಸ್‌ಗಢ, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳು ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನ ರಜೆ ಘೋಷಣೆ ಮಾಡಿದೆ.

ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ನಿಟ್ಟಿಯಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ವೈಭವದ ರಾಮಮಂದಿರಕ್ಕೆ ಹೂವಿನ ಅಲಂಕಾರಗಳು ಹಾಗೂ ದೀಪಗಳ ಅಲಂಕಾರವನ್ನು ಮಾಡಲಾಗಿದೆ. ಇದರ ಚಿತ್ರಗಳನ್ನು ದೇವಸ್ಥಾನ ಟ್ರಸ್ಟ್‌ ಬಿಡುಗಡೆ ಮಾಡಿದೆ. ರಾತ್ರಿಯ ಕತ್ತಲಲ್ಲಿ ಅಯೋಧ್ಯೆಯ ಹೊಸ ಶ್ರೀರಾಮ ಮಂದಿರ ವೈಭವವಾಗಿ ಕಂಡಿದೆ. ಇದರ ನಡುವೆ ದೇಶಾದ್ಯಂತ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಉತ್ಸಾಹ ಹೆಚ್ಚುತ್ತಿರುವುದು ಕಂಡಿದೆ.

ರಾಮ ಅಯೋಧ್ಯೆಗೆ ಬರುವ ದಿನ ರಜೆ ಘೋಷಿಸಿರುವ ರಾಜ್ಯಗಳು!

ಗುರುವಾರ ರಾಮಲಲ್ಲಾನ ವಿಗ್ರಹವನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಕರ್ನಾಟಕದ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ ಬಾಲರಾಮನ ಮೂರ್ತಿಯ ಮೊದಲ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತವಾಗಿದ್ದು, ಬಾಲರಾಮನ ಮೂರ್ತಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ವಿಗ್ರಹದ ಕಣ್ಣಿಗೆ ಬಟ್ಟೆಯನ್ನು ಕಟ್ಟಲಾಗಿದೆ.

Viral Video: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಲೇವಡಿ ಮಾಡುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ!

 

 

Follow Us:
Download App:
  • android
  • ios