Asianet Suvarna News Asianet Suvarna News

ರಾಮಲಲ್ಲಾ ಮೈಮೇಲಿದೆ ರಾಜಮನೆತನದ ಆಭರಣ! ಏನೀದರ ವಿಶೇಷ?

ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ಸಿಗ್ತಿದೆ. ಲಕ್ಷಾಂತರ ಮಂದಿ ಅಯೋಧ್ಯೆಗೆ ತೆರಳುತ್ತಿದ್ದಾರೆ. ಮಂದಿರದಲ್ಲಿ ಭಕ್ತರನ್ನು ಮಂತ್ರಮುಗ್ದಗೊಳಿಸುವ ಭಗವಂತ ರಾಮಲಾಲಾ ಮೈಮೇಲಿರುವ ವಜ್ರ ವೈಡ್ಯೂರ್ಯಗಳ ವಿವರ ಇಲ್ಲಿದೆ. 
 

Ayodhya Ram Mandir Ramlala Majestic Jewellery roo
Author
First Published Jan 24, 2024, 12:09 PM IST | Last Updated Jan 24, 2024, 12:09 PM IST

ಅಯೋಧ್ಯೆಯ ಭವ್ಯವಾದ ರಾಮ ಮಂದಿರದಲ್ಲಿ  ಪ್ರತಿಷ್ಠಾಪಿಸಲಾದ ಬಾಲ ರಾಮನ ಆಭರಣವನ್ನು ಅಧ್ಯಾತ್ಮ ರಾಮಾಯಣ, ವಾಲ್ಮೀಕಿ ರಾಮಾಯಣ, ರಾಮಚರಿತಮಾನಸ್ ಮತ್ತು ಆಳ್ವಾಂದರ್ ಸ್ತೋತ್ರದಂತಹ ಗ್ರಂಥಗಳ ಸುದೀರ್ಘ ಸಂಶೋಧನೆ ಮತ್ತು ಅಧ್ಯಯನದ ನಂತರ ಸಿದ್ಧಪಡಿಸಲಾಗಿದೆ. ಈ ಮಾಹಿತಿಯನ್ನು ದೇವಸ್ಥಾನದ ಟ್ರಸ್ಟ್ ನೀಡಿದೆ. ಅಯೋಧ್ಯೆಯ ಕವಿ ಯತೇಂದ್ರ ಮಿಶ್ರಾ ಸೂಚನೆಯ ಮೇರೆಗೆ ರಾಮಲಲ್ಲಾಗೆ ಹಾಕಿರುವ ಆಭರಣಗಳನ್ನು ಬದೌನ್‌ನ ಸರಾಫ್ ಹರ್ಷಹೈಮಲ್ ಶ್ಯಾಮಲಾಲ್ ಜ್ಯುವೆಲ್ಲರ್ಸ್‌ನ ಲಕ್ನೋ ಶಾಖೆಯಲ್ಲಿ ತಯಾರಿಸಲಾಗಿದೆ.  

ರಾಮಲಲ್ಲಾ (Ramlala) ತಲೆಗೆ ಕಿರೀಟ (Mukut), ಕಿವಿಯೋಲೆಗಳು, ಕೊರಳಲ್ಲಿ ಹಾರ, ಎದೆಯ ಮೇಲೆ ಕೌಸ್ತುಭಮಣಿ, ಹೊಕ್ಕುಳ ಮೇಲೆ ವೈಜಯಂತಿ, ಸೊಂಟದ ಸುತ್ತ ಕವಚ, ಭುಜಬಂಧ, ಬಳೆ, ಪಾದದಲ್ಲಿ ಮುದ್ರಿಕೆ, ಕೈಗಳಲ್ಲಿ ಬಿಲ್ಲು, ಕೊರಳಲ್ಲಿ ಜಪಮಾಲೆ, ತಲೆ ಮೇಲೆ ತಿಲಕ, ಪಾದದ ಕೆಳಗೆ ಕಮಲದಿಂದ ಕಂಗೊಳಿಸುತ್ತಿರುವ ಐದು ವರ್ಷದ ರಾಮಲಲ್ಲಾಗೆ ಆಟವಾಡಲು ಬೆಳ್ಳಿಯ ಆಟಿಕೆಗಳನ್ನು ಇಡಲಾಗಿದೆ. ನಾವಿಂದು ರಾಮಲಲ್ಲಾ ಧರಿಸಿರುವ ಆಭರಣಗಳು ಹಾಗೂ ಅದರ ತೂಕದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಶ್ರೀರಾಮಲಲ್ಲಾನ ವಜ್ರಖಚಿತ ಕಿರೀಟದಲ್ಲಿದೆ ಸೂರ್ಯ, ನವಿಲು, ಮೀನು, ಪಚ್ಚೆ; ತಯಾರಕರೇನಂತಾರೆ?

ರಾಮಲಲ್ಲಾನ ಕಿರೀಟ : ಉತ್ತರ ಭಾರತದ ಸಂಪ್ರದಾಯದ ಪ್ರಕಾರ, ರಾಮಲಲ್ಲಾ ಚಿನ್ನದಿಂದ ಮಾಡಿದ ಕಿರೀಟವನ್ನು ಧರಿಸಿದ್ದಾನೆ. ಕಿರೀಟದ ಮಧ್ಯದಲ್ಲಿ ಸೂರ್ಯ ಭಗವಂತ ಕುಳಿತಿದ್ದಾನೆ. ಕಿರೀಟದ ಬಲಭಾಗದಲ್ಲಿ ಮುತ್ತುಗಳ ದಾರಗಳಿವೆ. ಕಿರೀಟ ಸುಮಾರು 1,700 ಗ್ರಾಂ ತೂಗುವನ್ನು ಹೊಂದಿದೆ. ಹಿಂಭಾಗದಲ್ಲಿರುವ ಪ್ರಭಾವಲಯವನ್ನು 22 ಕ್ಯಾರೆಟ್ ಚಿನ್ನದಲ್ಲಿ ತಯಾರಿಸಲಾಗಿದೆ. ಇದು ಸುಮಾರು 500 ಗ್ರಾಂ ತೂಕವಿದೆ. ಕಿರೀಟ 75 ಕ್ಯಾರೆಟ್ ವಜ್ರಗಳು, 135 ಕ್ಯಾರೆಟ್ ಜಾಂಬಿಯನ್ ಪಚ್ಚೆಗಳು ಮತ್ತು 262 ಕ್ಯಾರೆಟ್ ಮಾಣಿಕ್ಯಗಳನ್ನು ಒಳಗೊಂಡಿದೆ.

ಸೀತಾ ಮಾತೆಯ ಈ ಗುಣಗಳೂ ಪತ್ನಿಯಲ್ಲೂ ಇರಬೇಕೆಂದು ಬಯಸ್ತಾರೆ ಪುರುಷರು

ಕಿವಿಯೋಲೆ : ರಾಮಲಲ್ಲಾ ಸುಂದರವಾದ ಕಿವಿಯೋಲೆಗಳನ್ನು ಧರಿಸಿದ್ದಾನೆ. ಅದರಲ್ಲಿ ನವಿಲಿನ ಆಕೃತಿಗಳನ್ನು ಮಾಡಲಾಗಿದೆ. ಚಿನ್ನದಿಂದ ಮಾಡಿದ ಭಗವಂತನ ಕಿವಿಯೋಲೆಗಳಲ್ಲಿ ವಜ್ರಗಳು, ಮಾಣಿಕ್ಯಗಳು ಮತ್ತು ಪಚ್ಚೆಗಳನ್ನು ಹೊದಿಸಲಾಗಿದೆ.

ತಿಲಕ : ರಾಮಲಲ್ಲಾ ತಿಲಕವನ್ನು ಹಳದಿ ಚಿನ್ನದಿಂದ ತಯಾರಿಸಲಾಗಿದೆ. ಇದು ಸುಮಾರು 16 ಗ್ರಾಂ ತೂಕವಿದೆ.  ಮಧ್ಯಭಾಗದಲ್ಲಿ 3 ಕ್ಯಾರೆಟ್ ನೈಸರ್ಗಿಕ ವಜ್ರ ಇದ್ದು, ಸುಮಾರು 10 ಕ್ಯಾರೆಟ್‌ಗಳ ಸಣ್ಣ ವಜ್ರಗಳಿಂದ ಆವೃತವಾಗಿದೆ.  

ರಾಮಲಲ್ಲಾನ ಹಾರ : ರಾಮಲಲ್ಲಾ ರತ್ನಗಳಿಂದ ಕೂಡಿದ ಅರ್ಧಚಂದ್ರಾಕಾರದ ಹಾರವನ್ನು ಧರಿಸಿದ್ದಾನೆ.  ಇದು ಸುಮಾರು  500 ಗ್ರಾಂ ತೂಕ ಹೊಂದಿದೆ. 50 ಕ್ಯಾರೆಟ್ ವಜ್ರಗಳು, 150 ಕ್ಯಾರೆಟ್ ಮಾಣಿಕ್ಯಗಳು ಮತ್ತು 380 ಕ್ಯಾರೆಟ್ ಪಚ್ಚೆಗಳನ್ನು ಇದು ಒಳಗೊಂಡಿದೆ.  ಐದು ಎಳೆಗಳು 80 ಕ್ಯಾರೆಟ್ ವಜ್ರಗಳು, 60 ಕ್ಯಾರೆಟ್ ಪೊಲ್ಕಿ ಮತ್ತು 550 ಕ್ಯಾರೆಟ್ ಪಚ್ಚೆಗಳೊಂದಿಗೆ ಸುಮಾರು 660 ಗ್ರಾಂ ತೂಗುತ್ತದೆ. 22 ಕ್ಯಾರೆಟ್ ಚಿನ್ನದಿಂದ ಮಾಡಿದ ವಿಜಯಮಾಲೆ ಸುಮಾರು 2 ಕಿಲೋ ತೂಗುತ್ತದೆ. 

ಬಳೆ (Bangles) : ವಜ್ರ ಮತ್ತು ಮುತ್ತುಗಳಂತಹ ರತ್ನಗಳಿಂದ ಕೂಡಿದ ಸುಂದರವಾದ ಕಡಗಗಳನ್ನು ರಾಮಲಲ್ಲಾ ಎರಡೂ ಕೈಗಳಲ್ಲಿ ಧರಿಸಿದ್ದಾನೆ. ಇದು ಸುಮಾರು 850 ಗ್ರಾಂ ತೂಕವಿದೆ. ಇದರಲ್ಲಿ 100 ಕ್ಯಾರೆಟ್ ವಜ್ರಗಳು ಮತ್ತು 320 ಕ್ಯಾರೆಟ್ ಮಾಣಿಕ್ಯಗಳು ಮತ್ತು ಪಚ್ಚೆಗಳು ಸೇರಿವೆ.

ಅಯೋಧ್ಯೆಗೆ ಬಂತು ಶ್ರೀರಂಗಂನ ಸೀರೆ ಅಲಿಗಢದ 50 ಕೇಜಿ ಬೀಗ, ಹೈದರಾಬಾದ್‌ನ ಪಾದುಕೆ

ಭುಜಬಂಧ : ಭಗವಾನ್ ರಾಮಲಲ್ಲಾ ತನ್ನ ಎರಡು ತೋಳುಗಳ ಮೇಲೆ ಚಿನ್ನ ಮತ್ತು ರತ್ನಗಳಿಂದ ಹೊದಿಸಿದ ಭುಜಬಂಧ ಧರಿಸಿದ್ದಾನೆ.    400 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನದಲ್ಲಿ ಇದನ್ನು ತಯಾರಿಸಲಾಗಿದೆ.  

ಸೊಂಟದ ಪಟ್ಟಿ : ರಾಮಲಲ್ಲಾ ತನ್ನ ಸೊಂಟದ ಸುತ್ತಲೂ ರತ್ನಗಳಿಂದ ಹೊದಿಸಿದ ಕವಚವನ್ನು ಧರಿಸಿದ್ದಾನೆ. ಇದು ಸುಮಾರು 750 ಗ್ರಾಂ ತೂಗುತ್ತದೆ. ಸರಿಸುಮಾರು 70-ಕ್ಯಾರೆಟ್ ವಜ್ರಗಳು ಮತ್ತು ಸುಮಾರು 850 ಕ್ಯಾರೆಟ್ ಮಾಣಿಕ್ಯಗಳು ಮತ್ತು ಪಚ್ಚೆಗಳನ್ನು ಇದರಲ್ಲಿ ಬಳಸಲಾಗಿದೆ. 
 

Latest Videos
Follow Us:
Download App:
  • android
  • ios