Asianet Suvarna News Asianet Suvarna News

ವಾರದ ಈ ದಿನ ಹೂಡಿಕೆ ಮಾಡಿದ್ರೆ ಕೈ ಸುಟ್ಟುಕೊಳ್ಳೋದು ನಿಶ್ಚಿತ!

ಸಾಲ ಕೊಟ್ಟು ಕೈಸುಟ್ಟುಕೊಂಡ್ರು ಎಂಬ ಮಾತಿದೆ. ಅನೇಕ ಬಾರಿ ಹಣ ಕೊಟ್ಟು ಮಂಗನಾಗಿರ್ತೇವೆ. ಕೊಟ್ಟ ಹಣ ವಾಪಸ್ ಪಡೆಯಲು ಸುಸ್ತಾಗಿರುತ್ತದೆ. ಅದಕ್ಕೆ ಕಾರಣ ನಾವು ಕೊಟ್ಟ ದಿನ, ವಾರವೂ ಕಾರಣ ಎನ್ನುತ್ತದೆ ಜ್ಯೋತಿಷ್ಯ.
 

Auspicious Day For Investment
Author
Bangalore, First Published May 11, 2022, 11:24 AM IST

ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ, ಪ್ರತಿ ಕೆಲಸಕ್ಕೂ ಶುಭ (Good) ಮುಹೂರ್ತ ಮತ್ತು ಶುಭ ದಿನಗಳನ್ನು ನಿಗದಿಪಡಿಸಲಾಗಿದೆ. ಸಮಯ (Time) ಮತ್ತು ದಿನ (Day)ಕ್ಕೆ ಅನುಗುಣವಾಗಿ ಕೆಲಸ ಮಾಡಿದ್ರೆ ಶುಭವಾಗುತ್ತದೆ ಎಂದು ನಂಬಲಾಗಿದೆ. ಆ ದಿನ ಮಾಡಿದ ಕೆಲಸ ಮಂಗಳಕರ ಫಲಿತಾಂಶ ಸಿಗುತ್ತದೆ ಎನ್ನಲಾಗಿದೆ. ಹಣದ ವಹಿವಾಟು ಅಥವಾ ಹಣದ ಹೂಡಿಕೆ, ಸಾಲವನ್ನು ನೀಡಲು ಅಥವಾ ಮರುಪಾವತಿಸಲು ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳಕರ ಸಮಯವನ್ನು ಸೂಚಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಸೂರ್ಯ ಸಂಕ್ರಾಂತಿಯ ಶುಭ ಸಮಯ, ನಕ್ಷತ್ರಪುಂಜ, ದಿನಾಂಕವನ್ನು ಹಣದ ವ್ಯವಹಾರಗಳಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಣದ ವಹಿವಾಟು ಮತ್ತು ಹೂಡಿಕೆಯನ್ನು ಮನಸ್ಸಿಗೆ ಬಂದ ದಿನ ಮಾಡ್ಬೇಡಿ. ನಿಮಗೆ ಅನುಕೂಲ ಎನ್ನುವ ಕಾರಣಕ್ಕೆ ದಿನ, ತಿಥಿ ನೋಡದೆ ವ್ಯವಹಾರ ನಡೆಸಬೇಡಿ. ಇದ್ರಿಂದ ಅಶುಭ ಫಲ ಪ್ರಾಪ್ತಿಯಾಗುತ್ತದೆ. ನೀಡಿದ ಸಾಲ ವಾಪಸ್ ಸಿಗುವುದಿಲ್ಲ. ಹಾಗೆ ಹೂಡಿದ ಹಣ ವಾಪಸ್ ಸಿಗುವುದಿಲ್ಲ. ಶುಭ ದಿನ ಮತ್ತು ಸಮಯದ ಬಗ್ಗೆ  ತಿಳಿದುಕೊಂಡು, ಅದರಂತೆ ವಹಿವಾಟು ನಡೆಸಿದ್ರೆ ಯಾವುದೇ ಆರ್ಥಿಕ ನಷ್ಟ ಸಂಭವಿಸುವುದಿಲ್ಲ. ಇಂದು ಯಾವ ದಿನ ಹಾಗೂ ಯಾವ ನಕ್ಷತ್ರದಲ್ಲಿ ಹಣದ ವಹಿವಾಟು ಮಾಡ್ಬೇಕು, ಯಾವ ವಾರ ಸಾಲ ನೀಡಬಾರದು ಎಂಬುದನ್ನು ನಾವಿಂದು ಹೇಳ್ತೇವೆ.

ಈ ನಕ್ಷದಲ್ಲಿ ವಹಿವಾಟು ಮಾಡಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಶ್ವಿನಿ ನಕ್ಷತ್ರ, ಮೃಗಶಿರ ನಕ್ಷತ್ರ , ಪುನರ್ವಸು ನಕ್ಷತ್ರ , ಪುಷ್ಯ ನಕ್ಷತ್ರ , ಶ್ರಾವಣ ನಕ್ಷತ್ರ , ಧನಿಷ್ಠ ನಕ್ಷತ್ರ , ಶತಭಿಷ ನಕ್ಷತ್ರ , ಸ್ವಾತಿ ನಕ್ಷತ್ರ , ಅನುರಾಧ ನಕ್ಷತ್ರ , ಚಿತ್ರ ನಕ್ಷತ್ರ , ವಿಶಾಖ ನಕ್ಷತ್ರ ಮತ್ತು ರೇವತಿ ನಕ್ಷತ್ರದ ದಿನ ಹಣದ ವ್ಯವಹಾರ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.  

ವರ್ಷದ ಮೊದಲ ಚಂದ್ರಗ್ರಹಣ; ಈ ರಾಶಿಗಳು ಪಡೆಯಲಿವೆ ಭಾರೀ ಲಾಭ!

ಈ ರಾಶಿಯಂದು ವ್ಯವಹಾರ ನಡೆಸಿ ಲಾಭ ಪಡೆಯಿರಿ : ಮೇಷ ರಾಶಿ, ಕರ್ಕ ರಾಶಿ, ತುಲಾ ರಾಶಿ ಮತ್ತು ಮಕರ ರಾಶಿಯಲ್ಲಿ ಹಣದ ವಹಿವಾಟು ಮಾಡಿದರೆ ಲಾಭ ಕಾಣಬಹುದು. ಹಣದ ವ್ಯವಹಾರಕ್ಕೆ 5, 8 ಮತ್ತು 9ನೇ ಸ್ಥಾನಗಳು ಶುಭವಾಗಿದ್ದರೆ, ಹಣಕ್ಕೆ ಸಂಬಂಧಿಸಿದ ವ್ಯವಹಾರಗಳು, ಹೂಡಿಕೆಗಳು, ಠೇವಣಿ ಇತ್ಯಾದಿಗಳನ್ನು ಮಾಡುವುದು ಶುಭ.

ವಹಿವಾಟು ಮತ್ತು ಹೂಡಿಕೆಗಳಿಗೆ ಈ ದಿನ ಮಂಗಳಕರ : ಅವಶ್ಯಕತೆಗೆ ಅನುಗುಣವಾಗಿ ಯಾರಿಂದಲಾದ್ರೂ ಹಣವನ್ನು ಸಾಲ ಪಡೆಯುತ್ತಿದ್ದರೆ, ಮಂಗಳವಾರ ಸಾಲದ ಹಣವನ್ನು ತೆಗೆದುಕೊಳ್ಳಬೇಡಿ. ಈ ದಿನದಂದು ತೆಗೆದುಕೊಂಡ ಸಾಲದ ಮೊತ್ತವನ್ನು ಶೀಘ್ರದಲ್ಲೇ ಪಾವತಿಸಲು ಸಾಧ್ಯವಾಗುವುದಿಲ್ಲ.  ಅಲ್ಲದೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 
ಬೇರೆಯವರಿಂದ ಸಾಲ ಪಡೆದಿದ್ದರೆ ಅದನ್ನು ಮಂಗಳವಾರ ಮರುಪಾವತಿ ಮಾಡಿ. ಸಾಲ  ಮರುಪಾವತಿಸಲು ಮಂಗಳವಾರ ಶುಭ ದಿನವಾಗಿದೆ. ಈ ದಿನ ಸಾಲದ ಮರುಪಾವತಿ ಅಥವಾ ಬ್ಯಾಂಕ್ ಸಾಲ ಇತ್ಯಾದಿ ನೀಡಿದ್ರೆ ಸಾಲದಿಂದ ಮುಕ್ತಿ ಬೇಗ ಸಿಗುತ್ತದೆ ಎಂದು ನಂಬಲಾಗಿದೆ.

Lunar Eclipse 2022: ಗ್ರಹಣ ಸಂದರ್ಭದಲ್ಲಿ ನೀವೇನು ಮಾಡಬೇಕು? ಏನು ಮಾಡಕೂಡದು?

ಈ ದಿನವೂ ಸಾಲ ಕೊಡಬೇಡಿ : ಬುಧವಾರ ಒಬ್ಬ ವ್ಯಕ್ತಿಗೆ ಹಣವನ್ನು ಸಾಲವಾಗಿ ನೀಡಬಾರದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ದಿನ ಹಣವನ್ನು ನೀಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಬುಧವಾರ ಕೊಟ್ಟ ಹಣ ಬೇಗ ವಾಪಸ್ ಬರುವುದಿಲ್ಲ ಎಂಬ ನಂಬಿಕೆ ಇದೆ.

ಹೂಡಿಕೆ ಮಾಡಲು ಇದು ಉತ್ತಮ ದಿನವಾಗಿದೆ : ಯಾವುದೇ ರೀತಿಯ ಹೂಡಿಕೆಗೆ ಬುಧವಾರ ಉತ್ತಮ ದಿನ ಎಂದು ಜ್ಯೋತಿಷಿಗಳು ನಂಬುತ್ತಾರೆ. ಈ ದಿನದಂದು ಹೂಡಿಕೆ ಮಾಡುವುದರಿಂದ ನಾಲ್ಕು ಪಟ್ಟು ಲಾಭ ಬರುತ್ತದೆ ಎಂದು ನಂಬಲಾಗಿದೆ.
 

Follow Us:
Download App:
  • android
  • ios