ಕೆಲವರು ನಿರಂತರ ಶ್ರಮವನ್ನು ಹಾಕಿ ಕೆಲಸ ಮಾಡುತ್ತಾರೆ. ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ, ಎಷ್ಟೇ ರೀತಿಯಲ್ಲಿ ಕೆಲಸ ಮಾಡಿದರೂ ಸಹ ಯಶಸ್ಸು ಮಾತ್ರ ಅವರಿಗೆ ಮರೀಚಿಕೆಯಾಗಿಯೇ ಉಳಿದಿರುತ್ತದೆ. ಹೀಗೆ ಆಗಲು ಹಲವಾರು ಕಾರಣಗಳು ಇರುವುದು ಸುಳ್ಳಲ್ಲ. ಆದರೆ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾದರೆ ತಿಂಗಳ ಕೊನೆ ಭಾನುವಾರದಂದು ಏನು ಮಾಡಬೇಕು ಎಂಬುದರ ಬಗ್ಗೆ ನೋಡೋಣ....
ಕೆಲವರು ಏನೇ ಮಾಡಿದರೂ ಯಶಸ್ಸು (Success) ಎಂಬುದು ಅವರಿಗೆ ಕಟ್ಟಿಟ್ಟ ಬುತ್ತಿ ಎಂದು ಆಗಿರುತ್ತದೆ. ಇನ್ನು ಕೆಲವರು ಎಷ್ಟೇ ಕಷ್ಟಪಟ್ಟರೂ ಯಶಸ್ಸು ಎಂಬುದು ಹತ್ತಿರವೂ ಸುಳಿಯುತ್ತಿರುವುದಿಲ್ಲ. ಇದಕ್ಕಾಗಿ ಅವರು ಪಟ್ಟ ಅಥವಾ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದಕ್ಕೆ ಆ ವ್ಯಕ್ತಿಯ ಗ್ರಹಗತಿಗಳೇ ಕಾರಣ ಎಂದು ಹೇಳಲಾಗುತ್ತದೆ. ಇದಕ್ಕೆ ನಾನಾ ರೀತಿಯ ಪರಿಹಾರಗಳನ್ನು (Solution) ಸೂಚಿಸಲಾಗಿರುತ್ತದೆ. ಅದೇ ರೀತಿ ಇನ್ನೂ ಹಲವು ಮಾರ್ಗಗಳನ್ನು ಸಹ ಹೇಳಲಾಗಿದೆ. ಜಾತಕದಲ್ಲಿ (Horoscope) ಸೂರ್ಯ ಗ್ರಹದ ಸ್ಥಿತಿ ಬಲವಾಗಿದ್ದರೆ, ಯಶಸ್ಸನ್ನು ಪಡೆಯಲು ಸುಲಭವಾಗುತ್ತದೆ. ಇಷ್ಟೇ ಅಲ್ಲದೆ ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳಿಗೂ (Problems) ಕೂಡ ಇದರಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಹೀಗಾಗಿ ಸೂರ್ಯದೇವನ (Sun) ಕೃಪೆಯನ್ನು ನೀವು ಪಡೆದಿರಾದರೆ ಜೀವನದಲ್ಲಿ ಸುಖ - ಸಮೃದ್ಧಿ ನೆಲೆಸುತ್ತದೆ.
ಹೀಗೆ ನೀವು ಯಶಸ್ಸನ್ನು ಕಾಣಲು ತಿಂಗಳ ಕೊನೇ ಭಾನುವಾರದಂದು (Last sunday) ಸೂರ್ಯದೇವನಿಗೆ ಅರ್ಘ್ಯವನ್ನು ಕೊಡುವುದಲ್ಲದೆ, ಬೇರೆ ಇನ್ನಿತರ ಉಪಾಯಗಳನ್ನು ಮಾಡಬಹುದಾಗಿದೆ. ಏನು ಮಾಡಿದರೆ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ ಎಂಬುದನ್ನು ನೋಡೋಣ.
ಭಾನುವಾರವೂ ಸೂರ್ಯದೇವನಿಗೆ ಪ್ರಶಸ್ತವಾದ ಹಾಗೂ ಶುಭವಾದ ದಿನ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಹೇಳಲಾಗಿದೆ. ಹೀಗಾಗಿ ಈ ದಿನ ಪ್ರಾತಃಕಾಲದಲ್ಲಿ ಎದ್ದು ಸ್ನಾನ - ಕರ್ಮಗಳನ್ನು ಮುಗಿಸಿ ಸೂರ್ಯದೇವನಿಗೆ ಅರ್ಘ್ಯ ನೀಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಕೇವಲ ಭಾನುವಾರ ಒಂದೇ ಮಾಡಬೇಕೆಂದೇನೂ ಇಲ್ಲ. ಪ್ರತಿದಿನ ಅರ್ಘ್ಯ ನೀಡಿ ಸೂರ್ಯದೇವನಿಗೆ ನಮಸ್ಕರಿಸಿದರೆ, ನಿಮಗೆ ಸೂರ್ಯದೇವನ ಕೃಪಾಶೀರ್ವಾದ (Blessings) ದೊರೆಯುತ್ತದೆ. ಅಂದರೆ ಭಾನುವಾರ ಈ ಪ್ರಕ್ರಿಯೆಯನ್ನು ಮಾಡಿದರೆ ಅದಕ್ಕೆ ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ.
ಸೂರ್ಯದೇವನು ಯಶಸ್ಸು (Success), ಆರೋಗ್ಯ (Health) ಹಾಗೂ ಆತ್ಮವಿಶ್ವಾಸದ (Confidence) ಕಾರಕ ಗ್ರಹವಾಗಿದೆ. ಈಗಂತೂ ಒತ್ತಡದ ಜೀವನ (Stressed life) ಆಗಿರುವುದರಿಂದ ಪ್ರತಿದಿನ ಸೂರ್ಯದೇವನಿಗೆ ಅರ್ಘ್ಯ ನೀಡುವುದು ಬಹಳವೇ ಕಷ್ಟ ಎಂದು ಹೇಳಬಹುದು. ಅಂಥವರು ಭಾನುವಾರದ ದಿನ ಈ ಶುಭ ಕಾರ್ಯವನ್ನು ಮಾಡಿದರೆ ಸೂರ್ಯ ದೇವನ ಕೃಪೆಗೆ ಪಾತ್ರರಾಗಬಹುದು. ಹಾಗಾಗಿ ಕೊನೇ ಭಾನುವಾರದಂದು ಮಾಡಬೇಕಾದ ಇನ್ನಷ್ಟು ಕೆಲಸಗಳ ಬಗ್ಗೆ ತಿಳಿಯೋಣ...
ಇದನ್ನು ಓದಿ: ನೋಡೋದಾದ್ರೆ ಈ ವಸ್ತುಗಳನ್ನೇ ನೋಡಿ, ನಿಮಗೆ ಒಲಿಯತ್ತೆ ಅದೃಷ್ಟ..!
ಸೂರ್ಯದೇವನಿಗೆ ಅರ್ಘ್ಯ ನೀಡಿದ ನಂತರ
- ಈ ದಿನ ದೇವಸ್ಥಾನಕ್ಕೆ (Temple) ಹೋಗಿ ಪೂಜೆ ಮಾಡಬೇಕು
- ದೇವಸ್ಥಾನದಲ್ಲಿ ಹೋದ ಬಳಿಕ ಸೂರ್ಯದೇವನನ್ನು ಅಲ್ಲೇ ಆರಾಧಿಸಬೇಕು. ಜತೆಗೆ ಇತರ ದೇವಿ - ದೇವತೆಗಳ ಪೂಜೆಯನ್ನು ಮಾಡಬೇಕು.
- ಹೀಗಾಗಿ ಈ ದಿನ ದುರ್ಬಲರಿಗೆ ಬಡವರಿಗೆ ನಿರ್ಗತಿಕರಿಗೆ ದಾನ ಧರ್ಮಾದಿಗಳನ್ನು ಮಾಡಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ. ಇದು ಯಶಸ್ಸಿಗೆ ನಾಂದಿ ಹಾಡುತ್ತದೆ.
- ಅದರಲ್ಲೂ ಯಾವುದಾದರೂ ಹಣ್ಣನ್ನು (Fruit) ದಾನ (Donate) ಮಾಡಿದರೆ ಶುಭ ಫಲ ಇನ್ನಷ್ಟು ವೃದ್ಧಿಸುತ್ತದೆ.
ಲಕ್ಷ್ಮೀದೇವಿಗೂ (Goddess lakshmi) ಸಮರ್ಪಿತ
- ಭಾನುವಾರದಂದು ಸೂರ್ಯದೇವನಿಗೆ ಎಷ್ಟು ಪ್ರಾಶಸ್ತ್ಯ ದಿನವೂ ಅದೇ ರೀತಿಯಾಗಿ ಲಕ್ಷ್ಮೀದೇವಿಗೂ ಸಹ ಪ್ರಶಸ್ತವಾದ ದಿನವಾಗಿದ್ದು, ಈ ದಿನ ಲಕ್ಷ್ಮಿ ದೇವಿಯನ್ನು ಆರಾಧಿಸಿದರೆ ಸಂಪತ್ತು (Wealth) ವೃದ್ಧಿಯಾಗುತ್ತದೆ.
- ಲಕ್ಷ್ಮಿ ದೇವಿಯ ಕೃಪಾಶೀರ್ವಾದ ಪಡೆದಿರಿ ಎಂದಾದರೆ ನಿಮಗೆ ಧನ (money) ಪ್ರಾಪ್ತಿ ಯೋಗ ಸಹ ಉಂಟಾಗುತ್ತದೆ.
- ತಿಂಗಳ ಕೊನೆ ಭಾನುವಾರದಂದು ಅರಳಿಮರದ ಕೆಳಗೆ 4 ಮುಖದ ದೀಪವನ್ನು ಹಚ್ಚಿಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗಿ ಧನ ಪ್ರಾಪ್ತಿಯಾಗುತ್ತದೆ.
- ಅವತ್ತಿನ ದಿನ ಚಂದನದ ತಿಲಕವನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಶುಭ ಫಲ ದೊರೆಯುತ್ತದೆ.
3. ಮೀನಿಗೆ ಆಹಾರ (Fish food) ಹಾಕುವುದು
- ತಿಂಗಳ ಕೊನೆ ಭಾನುವಾರದಂದು ಮೀನುಗಳಿಗೆ ಆಹಾರವನ್ನು ಹಾಕಬೇಕು. ಹೀಗೆ ಮೀನುಗಳಿಗೆ ಆಹಾರವನ್ನು ನೀಡಿದರೆ ಸೂರ್ಯದೇವನು ಪ್ರಸನ್ನಗೊಳ್ಳುತ್ತಾನೆ.
- ಅಷ್ಟೇ ಅಲ್ಲದೆ ಹಿಟ್ಟಿನಿಂದ ಮಾಡಿದ ಉಂಡೆಗಳನ್ನು ಮೀನುಗಳಿಗೆ ನೀಡುವುದರಿಂದ ಪುಣ್ಯಫಲವು ಸಹ ಹೆಚ್ಚುತ್ತದೆ.
ಇದನ್ನು ಓದಿ: ಮಹಿಳೆಯ ರಹಸ್ಯ ತಿಳ್ಕೊಬೇಕಾ? ಅಂದುಕೊಂಡಷ್ಟು ಕಷ್ಟವಲ್ಲ ಬಿಡಿ!
ಈ ಪ್ರಕ್ರಿಯೆಯು ವ್ಯಾಪಾರ (Business) ವಹಿವಾಟುಗಳಲ್ಲಿ ಲಾಭವನ್ನು ತಂದುಕೊಡುತ್ತದೆ. ಜತೆಗೆ ಉದ್ಯೋಗದಲ್ಲಿ (Job) ಯಶಸ್ಸು ತಂದುಕೊಡುತ್ತದೆ. ಒಂದು ವೇಳೆ ಹಣದ ಸಮಸ್ಯೆ ಎದುರಿಸುತ್ತಿದ್ದರೆ ಪರಿಹಾರವಾಗುವುದಲ್ಲದೆ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.

