addictions ಬಿಡೋಕ್ ಆಗ್ತಿಲ್ವಾ? ಹೀಗ್ಮಾಡಿ..

ಚಟಗಳು ಬೆನ್ನು ಬಿಡದ ಬೇತಾಳದಂತೆ ಕಾಡ್ತಿವೆಯೇ? ಇಲ್ಲಿ ಹೇಳಿದ ಮಾರ್ಗಗಳನ್ನು ನಿರಂತರ 48 ದಿನಗಳ ಕಾಲ ಅನುಸರಿಸಿ ನೋಡಿ.. ವಿಲ್ ಪವರ್ ಇದ್ದರೆ ಏನನ್ನೂ ಸಾಧಿಸಲು ಸಾಧ್ಯ ಎಂಬುದನ್ನು ಮರೆಯಬೇಡಿ. 

astrological remedies to get rid of addictions skr

ಚಟಗಳೇ(Addictions) ಹಾಗೆ, ಅವನ್ನು ಅಂಟಿಸಿಕೊಳ್ಳುವುದು ಸುಲಭ. ಆರಂಭದಲ್ಲಿ ಕುತೂಹಲಕ್ಕೋ ಮತ್ತಾವುದೋ ಕಾರಣಕ್ಕೆ ಶುರುವಾಗುವ ಚಟಗಳು ಬರಬರುತ್ತಾ ನಮ್ಮನೇ ಹಿಡಿತಕ್ಕೆ ತೆಗೆದುಕೊಳ್ಳುತ್ತವೆ. ಅವುಗಳ ಮೇಲೆ ನಮಗೆ ನಿಯಂತ್ರಣವೇ ಇಲ್ಲದಂತಾಗಿ ಹೋಗುತ್ತದೆ. ಕುಡಿತ, ಜೂಜು, ಸಿಗರೇಟ್ ಸೇವನೆ, ಗೇಮಿಂಗ್, ಡ್ರಗ್ಸ್ನಂಥ ಚಟಗಳು ಬದುಕನ್ನೇ ಬರ್ಬಾದ್ ಆಗಿಸುತ್ತವೆ. ಆರೋಗ್ಯ(health)ವನ್ನೂ ಹದಗೆಡಿಸುತ್ತವೆ. ಹೀಗೆ ಚಟಕ್ಕೆ ಅಂಟಿದ ವ್ಯಕ್ತಿ ಮನೆಯವರ ಪಾಲಿಗೆ ದೊಡ್ಡ ತಲೆನೋವಾಗಿ ಕಾಡಲಾರಂಭಿಸುತ್ತಾನೆ. ಎಷ್ಟೋ ಬಾರಿ ಇವನ್ನೆಲ್ಲ ಬಿಡಬೇಕೆಂದುಕೊಂಡರೂ ಸಾಧ್ಯವಾಗುವುದಿಲ್ಲ. 

ಇಷ್ಟಕ್ಕೂ ಚಟಗಳೇನು ಇಲ್ಲಿಗೇ ಮುಗಿಯುವುದಿಲ್ಲ. ಯಾವುದೇ ಆದರೂ ಅತಿಯಾದರೆ ಅದು ಚಟವೇ.. ಈ ಚಟವನ್ನು ಬಿಡುವ ಮೊದಲ ಹೆಜ್ಜೆ ಬಿಡಬೇಕೆಂದು ಮನಸ್ಸು ಮಾಡುವುದು. ಹೌದು, ಅಷ್ಟಾದ ಮೇಲಿನದೂ ಸುಲಭ ಮಾರ್ಗವಲ್ಲ. ಆದರೆ, ವ್ಯಕ್ತಿಗೆ ಚಟ ತೊರೆಯುವ ಮನಸ್ಸೇ ಇಲ್ಲದಿದ್ದರೆ ಬಿಡಲಾಗುವುದಿಲ್ಲ. ಬಿಡಬೇಕೆಂಬ ಛಲ, ಪ್ರೀತಿಪಾತ್ರರ ಸಂಪೂರ್ಣ ಸಹಕಾರ ಸಿಕ್ಕರೆ ಚಟ ಮುಕ್ತರಾಗಬಹುದು. ನೀವೂ ನಿಮ್ಮ ಚಟದಿಂದ ಹೊರ ಬರಲು ಬಯಸುತ್ತಿದ್ದರೆ ಜ್ಯೋತಿಷ್ಯದಲ್ಲಿ ಹೇಳಿರುವ ಈ ಮಾರ್ಗಗಳನ್ನು(Astrological ways) ಅನುಸರಿಸಿ. 

Numerology: ಈ ದಿನಾಂಕದಲ್ಲಿ ಜನಿಸಿದ ಜನರು ಖ್ಯಾತರಾಗುತ್ತಾರೆ!

  • ಪ್ರತಿ ಬೆಳಗ್ಗೆ ಬೇಗ ಎದ್ದು ಸೂರ್ಯ ದೇವರ ಮುಂದೆ ನಿಂತು ಗಾಯತ್ರಿ ಮಂತ್ರ(Gayatri Mantra) ಪಠಿಸಿ. ಸ್ನಾನ ಮಾಡಿ ದೇವರೆದುರು ಕುಳಿತು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ.
  • ಪ್ರತಿ ದಿನ ಸ್ನಾನದ ಬಳಿಕ ನಿಮ್ಮ ಹಣೆಯ ಮೇಲೆ ಶ್ರೀಗಂಧ ಅಥವಾ ಕುಂಕುಮ ತಿಲಕವನ್ನು ಹಚ್ಚಿಕೊಳ್ಳಿ.
  • ಮಂಗಳವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಹನುಮಾನ್ ದೇವಸ್ಥಾನಕ್ಕೆ ಹೋಗಿ ಕುಳಿತು ಹನುಮಾನ್ ಚಾಲೀಸಾ ಪಠಿಸಿ. ಆಂಜನೇಯನಿಗೆ ಸಿಂಧೂರ(vermilion)ವನ್ನು ಅರ್ಪಿಸಿ. 
  • ಪ್ರತಿ ಭಾನುವಾರದಂದು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.
  • ಶನಿವಾರದ ದಿನ ಬೆಳ್ಳಿಯ ಪಾತ್ರೆಯಲ್ಲಿ ಕೇಸರಿಯನ್ನು ಹೊಂದಿರುವ ನೀರನ್ನು ತುಂಬಿಸಿ. ಇದನ್ನು ಬೆಳಿಗ್ಗೆ ಬೇಗ ಸ್ನಾನ ಮಾಡಿಕೊಂಡು ಹತ್ತಿರದ ಅಶ್ವತ್ಥ ಮರದ ಬಳಿ ತೆಗೆದುಕೊಂಡು ಹೋಗಿ ಅದಕ್ಕೆ ಅರ್ಪಿಸಿ.  ಹತ್ತಿರದಲ್ಲಿ ಅಶ್ವತ್ಥ ಮರವಿಲ್ಲವೆಂದರೆ ತುಳಸಿ ಗಿಡಕ್ಕೆ ಈ ನೀರನ್ನು ಅರ್ಪಿಸಿ. 
  • ಶುಭ ಯೋಗದಲ್ಲಿ ತುಳಸಿ ಮಾಲೆ(Tulsi garland)ಯನ್ನು ಧರಿಸಿ.
  • ಯಾವಾಗಲೂ ಚಿಕ್ಕದಾದ ಬೆಳ್ಳಿಯ ತುಂಡನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಬೇಕಿದ್ದರೆ ಖಡಗವಾಗಿ ಇಲ್ಲವೇ ತಾಯತವಾಗಿ ಧರಿಸಬಹುದು. ಇದರಿಂದ ಮನಸ್ಸಿಗೆ ಚಂದ್ರನು ಬಲ ತುಂಬುತ್ತಾನೆ. 
  • ಬೆಳ್ಳಿ ಅಥವಾ ತಾಮ್ರದ(silver or copper) ಲೋಟಗಳಲ್ಲಿ ಮಾತ್ರ ನೀರು ಕುಡಿಯಿರಿ.
  • ಬುಧವಾರ ಹೆಣ್ಣು ಮಕ್ಕಳಿಗೆ ಹಸಿರು ಬಟ್ಟೆ(green clothes) ಅಥವಾ ಹಸಿರು ಬಳೆಗಳನ್ನು ದಾನ ಮಾಡಿ.

    ಈ ನಾಲ್ಕು ರಾಶಿಗಳ ಜನ ತಮ್ಮ ಆರೋಗ್ಯ ಲೆಕ್ಕಿಸದೆ ಇತರರನ್ನು ಕಾಳಜಿ ಮಾಡ್ತಾರೆ!
     
  • ಶಿಕ್ಷಕ ಅಥವಾ ಪುರೋಹಿತರಿಗೆ ಹಳದಿ ಬಟ್ಟೆ, ಧಾರ್ಮಿಕ ಪುಸ್ತಕ, ಹಳದಿ ಆಹಾರ ಪದಾರ್ಥಗಳನ್ನು ದಾನ ಮಾಡಿ.
  • ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಕರ್ಪೂರವನ್ನು ಉರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುವಾಸನೆಯ ವಾತಾವರಣವು ಸಕಾರಾತ್ಮಕತೆಯನ್ನು ತರುತ್ತದೆ ಮತ್ತು ಮನಸ್ಸಿನಲ್ಲಿ ಭ್ರಷ್ಟ ಆಲೋಚನೆಗಳು ಬರದಂತೆ ತಡೆಯುತ್ತದೆ. 
  • ಕೇವಲ ಸಾತ್ವಿಕ ಆಹಾರಗಳನ್ನು ಮಾತ್ರ ಸೇವಿಸುವುದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ. 
  • ಇವೆಲ್ಲವನ್ನೂ ಕನಿಷ್ಠ 48 ದಿನಗಳ ಕಾಲ ನಿರಂತರವಾಗಿ ಮಾಡಿ. ಬದಲಾವಣೆಯನ್ನು ಸ್ವತಃ ಗಮನಿಸಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
 

Latest Videos
Follow Us:
Download App:
  • android
  • ios