Asianet Suvarna News Asianet Suvarna News

ಪ್ರಜ್ವಲ್ ರೇವಣ್ಣ ಬಂಧನ ಆಯ್ತು, ಮುಂದೇನು? ಸ್ಟೆಪ್‌-ಬೈ-ಸ್ಟೆಪ್‌ ಮಾಹಿತಿ ಇಲ್ಲಿದೆ!

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದ ಬಳಿಕ ಬಂಧನ ಭೀತಿಯಿಂದ ದೇಶ ತೊರೆದಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನ 35 ದಿನಗಳ ಬಳಿಕ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಮುಂದಿನ ತನಿಖೆ ಏನು? ಇಲ್ಲಿದೆ ಮಾಹಿತಿ

Hassan pendrive case MP Prajwal revanna arrested by SIT police what happens nex rav
Author
First Published May 31, 2024, 8:12 AM IST | Last Updated May 31, 2024, 8:24 AM IST

ಬೆಂಗಳೂರು (ಮೇ.31): ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದ ಬಳಿಕ ಬಂಧನ ಭೀತಿಯಿಂದ ದೇಶ ತೊರೆದಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ 35 ದಿನಗಳ ಬಳಿಕ ದೇಶಕ್ಕೆ ಮರಳಿದ್ದಾರೆ. ಶುಕ್ರವಾರ ಮುಂಜಾನೆ ಜರ್ಮನಿಯ ಮ್ಯೂನಿಚ್‌ನಿಂದ Lufthansa flight LH0764 ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ SIT ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಮುಂಜಾನೆ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದಿಳಿತಿದ್ದಂತೆ ಸಿಐಎಸ್‌ಎಫ್ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆದರು. ಬಳಿಕ ಎಸ್‌ಐಟಿ ಅಧಿಕಾರಿಗಳಿಗೆ ಪ್ರಜ್ವಲ್ ರೇವಣ್ಣರನ್ನ ಹಸ್ತಾಂತರಿಸಿದರು. ಮಾಧ್ಯಮಗಳ ಕಣ್ಣುತಪ್ಪಿಸಿ ಮಾರ್ಗಬದಲಾಯಿಸಿ ನಗರದ ಸಿಐಡಿ ಕಚೇರಿಗೆ ಕರೆತಂದಿರುವ ಅಧಿಕಾರಿಗಳು.

ಮುಂದೇನು?

ಅಂತೂ ಪ್ರಜ್ವಲ್ ರೇವಣ್ಣ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾನೆ. ಇದೀಗ ಮುಂದಿನ ತನಿಖೆ ಏನು ಎಂಬುದು ಪ್ರಶ್ನೆಯಾಗಿದೆ. ಎಸ್‌ಐಟಿ ಪೊಲೀಸರು ಏನೇನು ಮಾಹಿತಿ ಪಡೆಯಲಿದ್ದಾರೆ. ಮೊದಲನೆಯದಾಗಿ ಮದರ್ ಡಿವೈಸ್ ಎಲ್ಲಿದೆ? ಯಾರ ಬಳಿ ಇದೆ ಎಂಬ ಬಗ್ಗೆ ಮಾಹಿತಿ ಕೆದಕಲಿರುವ ಅಧಿಕಾರಿಗಳು. ಪ್ರಜ್ವಲ್ ರೇವಣ್ಣರ ಬಳಿ ಇದೆಯಾ? ಒಂದು ವೇಳೆ ವಿಡೀಯೋಗಳು ಸಿಕ್ಕಲ್ಲಿ ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಲಾಗುತ್ತೆ.  ಒಂದು ವೇಳೆ ಮದರ್ ಡಿವೈಸ್ ಸಿಗದೆ ಹೋದರೆ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣರ ವಾಯ್ಸ್ ಸ್ಯಾಂಪಲ್ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ವಿಡಿಯೋದಲ್ಲಿ ಓರ್ವ ವ್ಯಕ್ತಿ ಮಾತಾಡಿರುವ ವಾಯ್ಸ್ ಇದೆ. ವಿಡಿಯೋದಲ್ಲಿರುವ ವಾಯ್ಸ್‌ಗೂ ಪ್ರಜ್ವಲ್ ವಾಯ್ಸ್‌ಗೂ ಮ್ಯಾಚ್ ಮಾಡಿ ನೋಡಲು ತೀರ್ಮಾನಿಸಿರುವ ಎಸ್‌ಐಟಿ. ಒಂದು ವೇಳೆ ವಾಯ್ಸ್ ಮ್ಯಾಚ್ ಆದ್ರೆ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇನ್ನು ವಿಡೀಯೋದಲ್ಲಿ ವ್ಯಕ್ತಿಯ ಖಾಸಗಿ ಅಂಗ ಕಾಣಿಸಿರೋದ್ರಿಂದ ಮೆಡಿಕಲ್ ಚೆಕ್ ಅಪ್ ಸಹ ಮಾಡಬಹುದು. ಆರೋಪಿಯ ಮೆಡಿಕಲ್ ಚೆಕ್ ಅಪ್ ಮಾಡಿಸಿ ಡಾಕ್ಟರ್ ಗಳ ಬಳಿ ಸರ್ಟಿಫೈ ಮಾಡಿಸಬಹುದು. ವಿಡಿಯೋದಲ್ಲಿ ಕಾಣಿಸುತ್ತಿರುವ ರೂಮ್ ಸೀಲ್ ಮಾಡಿ ಫೋಟೋ ತೆಗೆದು FSL ಗೆ tally ಮಾಡಲು ಕಳುಹಿಸಬಹುದು. ಏಕೆಂದ್ರೆ ಫೋಟೋಗ್ರಫಿ ವಿಭಾಗದಲ್ಲಿ ಫೋಟೋಸ್ಗಳನ್ನ ಟ್ಯಾಲಿ ಮಾಡಲಾಗುತ್ತೆ. ಸಂತ್ರಸ್ತೆಯ ಹೇಳಿಕೆ, ವಾಯ್ಸ್ ಸ್ಯಾಂಪಲ್, ರೂಮ್ ಫೋಟೋಸ್ ಮ್ಯಾಚ್ ಆದ್ರೆ ಪ್ರಜ್ವಲ್ ರೇವಣ್ಣ ಗೆ ಸಂಕಷ್ಟ.

ಮಹಿಳಾ ಪೊಲೀಸರಿಂದಲೇ ಪ್ರಜ್ವಲ್‌ನ ಬಂಧಿಸಿದ್ದು ಯಾಕೆ? ಇಲ್ಲಿದೆ ಎಸ್‌ಐಟಿ ಪ್ಲಾನ್!

ಇಷ್ಟು ದಿನ ಆಗಿದ್ದು ಪ್ರಾಥಮಿಕ ತನಿಖೆ ಅಷ್ಟೇ, ಮುಂದೆ ಶುರುವಾಗುತ್ತೆ ಅಸಲಿ ತನಿಖೆ. ಹಾಗಾದ್ರೆ ಇಂದಿನ  SIT ತನಿಖಾ ಪ್ರಕ್ರಿಯೆ ಹೇಗಿರುತ್ತೆ, ಯಾವ್ಯಾವ ಆಯಾಮಗಳಲ್ಲಿ ತನಿಖೆ ನಡೆಯುತ್ತೆ ಅಂತೀರಾ? ಇಲ್ಲಿದೆ ಸ್ಟೆಪ್ ಟು ಸ್ಟೆಪ್ ಡಿಟೇಲ್ಸ್

ಮೊದಲನೇ ಹಂತ:

ಪ್ರಜ್ವಲ್ ರೇವಣ್ಣಗೆ ಮೆಡಿಕಲ್ ಟೆಸ್ಟ್ ಮಾಡಿಸಿ ಎಸ್‌ಐಟಿ ಅಧಿಕಾರಿಗಳು ಪ್ರಾಥಮಿಕ ಹಂತದ ಹೇಳಿಕೆ ಪಡೆದುಕೊಳ್ಳಲಿದ್ದಾರೆ. ಬಳಿಕ ಆರೋಪ ಹೊತ್ತಿರೋ ಪ್ರಜ್ವಲ್ ರೇವಣ್ಣರನ್ನ ಕೋರ್ಟ್ ಗೆ ಹಾಜರುಪಡಿಸಿ ವಶಕ್ಕೆ ಪಡೆಯುತ್ತಾರೆ. ಅನಂತರ ಎಸ್‌ಐಟಿಯಿಂದ ಮುಂದಿನ ವಿಚಾರಣೆ ಶುರುವಾಗಲಿದೆ. 

ಮೊದಲು ಆರೋಪಿ ಹೇಳಿಕೆ ಪಡೆದು ಬಳಿಕ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಿರುವ ಅಧಿಕಾರಿಗಳು. ವಿಚಾರಣೆ ವೇಳೆ ಪ್ರಜ್ವಲ್ ಉಲ್ಟಾ ಹೊಡೆಯೋ ಸಾಧ್ಯತೆಯೂ ಇದೆ. 'ನಾನು ಅತ್ಯಾಚಾರ ಮಾಡಿಲ್ಲ' ಅಂತಾ ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸುವ ಸಾಧ್ಯತೆಯೂ ಇದೆ.

ಎರಡನೇ ಹಂತ:

ಸಂತ್ರಸ್ಥೆಯಿಂದ ಆರೋಪಿ ಗುರುತು ಪತ್ತೆ ಪ್ರಕ್ರಿಯೆ ನಡೆಯಲಿದೆ. ಈ ಹಂತದಲ್ಲಿ ಪ್ರಜ್ವಲ್ ಮತ್ತು ಸಂತ್ರಸ್ತೆಯನ್ನ ಎದುರುಬದರು ನಿಲ್ಲಿಸಲಿರುವ ಅಧಿಕಾರಿಗಳು. ಪ್ರಜ್ವಲ್ ರೇವಣ್ಣರನ್ನ ತೋರಿಸಿ 'ಇವ್ರೇನಾ ಅಂತಾ?' ಅಂತಾ ಕೇಳಬಹುದು. ಒಂದು ವೇಳೆ ಸಂತ್ರಸ್ತರು ಪ್ರಜ್ವಲ್ ರನ್ನ ಗುರುತಿಸಿದರೆ ಸಂಕಷ್ಟ ಶುರುವಾಗಲಿದೆ.

ಮೂರನೇ ಹಂತ:

ಇಲ್ಲಿವರೆಗೆ ಸಿಕ್ಕಿರೋ ದಾಖಲೆ ಮುಂದಿಟ್ಟುಕೊಂಡು ಪ್ರಜ್ವರನ್ನ ವಿಚಾರಣೆ ನಡೆಸಲಿರುವ ಎಸ್‌ಐಟಿ ಅಧಿಕಾರಿಗಳು. ಈಗಾಗಲೇ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಸಂತ್ರಸ್ತೆಯನ್ನ ಕರೆದೊಯ್ದು ಹೊಳೆನರಸೀಪುರ ಮನೆ ಸೇರಿದಂತೆ ಹಲವಡೆ ಸಂಪೂರ್ಣ ಸ್ಥಳ ಮಹಜರು ಮಾಡಿರುವ ಅಧಿಕಾರಿಗಳು.  ಅಲ್ಲಿ ಸಿಕ್ಕಿರೋ ಒಂದಷ್ಟು ಎವಿಡೆನ್ಸ್ ಮುಂದಿಟ್ಟು ಪ್ರಶ್ನೆ ಮಾಡಬಹುದು.

ನಾಲ್ಕನೇ ಹಂತ:

ಪ್ರಜ್ವಲ್ ರೇವಣ್ಣ ಮೊಬೈಲ್ ವಶಕ್ಕೆ ಪಡೆಯಲಿರುವ ಅಧಿಕಾರಿಗಳು. ಈಗಾಗಲೇ ಪ್ರಜ್ವಲ್ ರೇವಣ್ಣರ ಮೊಬೈಲ್ನಿಂದಲೇ ವಿಡಿಯೋ ರೆಕಾರ್ಡ್ ಮಾಡಿರೋ ಮಾಹಿತಿಯಿದೆ. ಈ ಬಗ್ಗೆ ಮಾಹಿತಿ ಕೆದಕಲಿರುವ ಅಧಿಕಾರಿಗಳು. ವಿಡಿಯೋ ರೆಕಾರ್ಡ್ ಆದ ಮೊಬೈಲ್ ಎಲ್ಲಿಟ್ಟಿದ್ದಾರೆ ಎಂದು ಮಾಹಿತಿ ಪಡೆಯಲಿದ್ದಾರೆ. ಮೊಬೈಲ್ ಪ್ರೈಮ್ ಎವಿಡೆನ್ಸ್ ಆಗಿ ಪರಿಗಣನೆ ಮಾಡಲಿದ್ದಾರೆ. ಒಂದು ವೇಳೆ ಮೊಬೈಲ್ ಫಾರ್ಮೆಟ್ ಮಾಡಿದ್ರೆ ಎಫ್‌ಎಸ್‌ಎಲ್‌ಗೆ ಕಳುಹಿಸಿ ರಿಟ್ರೀವ್‌ಗೆ ಮಾಡಬಹುದು.

ಪ್ರಜ್ವಲ್ ರೇವಣ್ಣನನ್ನು ಹೆಡೆಮುರಿಕಟ್ಟಿದ ಐವರು ಮಹಿಳಾ ಪೊಲೀಸರು; ಮುಂದೈತೆ ಅಸಲಿ ತನಿಖೆ

ಐದನೇ ಹಂತ:

ಪ್ರಜ್ವಲ್ ತಾನೇನೂ ಮಾಡಿಲ್ಲ, ಇದರಲ್ಲಿ ನನ್ನ ತಪ್ಪೇನೂ ಇಲ್ಲ ಅಂತಾ ಅಫಿಡವಿಟ್  ಸಲ್ಲಿಸಿದ್ರೆ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ? ಈಗಾಗಲೇ ಹಲವು ಮಹಿಳೆಯರ ಮೇಲೆ ಅತ್ಯಾಚಾರವೆಸಗಿರುವ ಆರೋಪ ಪ್ರಜ್ವಲ್ ರೇವಣ್ಣ ಮೇಲಿದೆ. ಆದರೆ ಇದೆಲ್ಲವೂ ಷಡ್ಯಂತ್ರ ಅಂತಾ ಹೇಳಿಕೆ ನೀಡಿರೋ ಪ್ರಜ್ವಲ್ ರೇವಣ್ಣ. ಹೀಗಾಗಿ ತಾನು ಅತ್ಯಾಚಾರ ಮಾಡಿಲ್ಲ ಅಂತಾ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸುವ ಸಾಧ್ಯತೆ ಇರುವ ಹಿನ್ನೆಲೆ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆಗೆ ಮುಂದಾಗಬಹುದು.

ಪ್ರಜ್ವಲ್ ರೇವಣ್ಣಗೆ ಸಹಾಯ ಮಾಡಿದವರಿಗೂ ಶುರುವಾಗತ್ತೆ ಸಂಕಷ್ಟ!

ಪೆನ್‌ಡ್ರೈವ್ ಪ್ರಕರಣ ಬಯಲಾಗುತ್ತಿದ್ದಂತೆ ದೇಶ ತೊರೆದಿದ್ದ ಪ್ರಜ್ವಲ್ ರೇವಣ್ಣ ಒಟ್ಟು 34 ದಿನಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್. ಪ್ರಜ್ವಲ್ ಹುಡುಕಾಟಕ್ಕಾಗಿ ಎಲ್ಲಾ ಪ್ರಯತ್ನ ಮಾಡಿದ್ದ ಎಸ್ಐಟಿ ಟೀಂ. ಆದರೂ ಸಿಕ್ಕಿರಲಿಲ್ಲ. ಈ ಮಧ್ಯೆ ಜಾಗ ಕೊಟ್ಟವರು, ಹಣಕಾಸಿನ ಸಹಾಯ ಮಾಡಿದವರ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇಷ್ಟು ದಿನ ಎಲ್ಲೆಲ್ಲಿ ತಲೆಮರೆಸಿಕೊಂಡಿದ್ದ ಎಂಬ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇಡೀ ಪ್ರಜ್ವಲ್‌ನ ಟ್ರಾವೆಲ್ ಹಿಸ್ಟರಿ ಪಡೆದು ಬಳಿಕ ಯಾರಾರು ಸಹಾಯ ಮಾಡಿದ್ದಾರೆ ಅವರೆಲ್ಲರಿಗೂ ಸಂಕಷ್ಟ ಶುರುವಾಗಬಹುದು. ಒಟ್ಟಿನಲ್ಲಿ ಇಷ್ಟು ದಿನ ನಡೆದಿದ್ದು ಕೇವಲ ಪ್ರಾಥಮಿಕ ತನಿಖೆ. ಇನ್ಮುಂದೆ ನಡೆಯಲಿದೆ ಅಸಲಿ ತನಿಖೆ!

Latest Videos
Follow Us:
Download App:
  • android
  • ios