ವಟ ಪೂರ್ಣಿಮಾ 2023: ಈ ದಿನ ವಟ ಸಾವಿತ್ರಿ ವ್ರತ ಆಚರಿಸಿ, ಪತಿಯ ಆಯಸ್ಸು ಗಟ್ಟಿಗೊಳಿಸಿ...

ಇಂದು ವಟ ಪೂರ್ಣಿಮಾ  ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಇದ್ದು, ಈ ದಿನದಂದು ಪತಿಯ ಆಯಸ್ಸು ವೃದ್ಧಿಗಾಗಿ ಮಹಿಳೆ ಯರು ವಟ ಸಾವಿತ್ರಿ ವ್ರತವನ್ನು ಆಚರಿಸುತ್ತಾರೆ.
 

vat purnima 2023 vat purnima know vrat puja significance and muhurta suh

ಇಂದು ವಟ ಪೂರ್ಣಿಮಾ( vat purnima) ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಇದ್ದು, ಈ ದಿನದಂದು ಪತಿಯ ಆಯಸ್ಸು ವೃದ್ಧಿಗಾಗಿ ಮಹಿಳೆ(woman)ಯರು ವಟ ಸಾವಿತ್ರಿ ವ್ರತವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ದಕ್ಷಿಣ ಭಾರತ ಸೇರಿದಂತೆ ಗುಜರಾತ್, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ  ಆಚರಿಸಲಾಗುತ್ತದೆ. ಮಹಿಳೆಯರು ತಮ್ಮ ಗಂಡ (husband)ನ ದೀರ್ಘಾಯುಷ್ಯಕ್ಕಾಗಿ ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಹಾಗೂ ಆಲದ ಮರ (Banyan tree)ವನ್ನು ಪೂಜಿಸುತ್ತಾರೆ. ಇದರಿಂದ ವಿವಾಹಿತ ಮಹಿಳೆಯರು ಸುಮಂಗಲಿಯಾಗಿ ಮರಣಹೊಂದುತ್ತಾರೆ ಎಂಬ ನಂಬಿಕೆ ಇದೆ. ಹಾಗೂ ಮನೆಯಲ್ಲಿ ಸಂತೋಷ, ಶಾಂತಿ ಸಿಗಲಿದೆ.

ವಟ ಪೂರ್ಣಿಮಾದ ವ್ರತ ತಿಥಿ

ಹಿಂದೂ ಕ್ಯಾಲೆಂಡರ್ ಪ್ರಕಾರ ಜೇಷ್ಠ ಮಾಸದ ಹುಣ್ಣಿಮೆಯಂದು ವಟ ಪೂರ್ಣಿಮಾ ವ್ರತ (Vrata)ವನ್ನು ಆಚರಿಸಲಾಗುತ್ತದೆ. ಈ ವರ್ಷ ಜ್ಯೇಷ್ಠ ಪೂರ್ಣಿಮಾ ತಿಥಿಯು ಜೂನ್ 3ರಂದು ಬೆಳಿಗ್ಗೆ 11:16 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜೂನ್ 4 ರ ಭಾನುವಾರ (Sunday)ದಂದು ಬೆಳಿಗ್ಗೆ 09:11ರವರೆಗೆ ಮುಂದುವರಿಯುತ್ತದೆ. ಈ ಕಾರಣದಿಂದ ಜ್ಯೇಷ್ಠ ಪೂರ್ಣಿಮಾ ವ್ರತ ಮತ್ತು ವಟ ಪೂರ್ಣಿಮಾ ವ್ರತವನ್ನು ಜೂನ್ 3 ರಂದು ಆಚರಿಸಲಾಗುತ್ತದೆ. ಆದರೆ ಪೂರ್ಣಿಮಾ ಸ್ನಾನವನ್ನು ಜೂನ್ 4 ರಂದು ಬೆಳಿಗ್ಗೆ ಮಾಡಲಾಗುತ್ತದೆ.

ವಟ ಪೂರ್ಣಿಮಾದ ಉಪವಾಸದ ಸಮಯ

ವಟ ಪೂರ್ಣಿಮೆಯ ಉಪವಾಸ (fasting) ದಿನದಂದು ಭದ್ರನ ನೆರಳು ಉಳಿಯುತ್ತದೆ. ಭದ್ರಾ ವತ್ಪೂರ್ಣಿಮಾ ಬೆಳಿಗ್ಗೆ 11.16 ರಿಂದ ರಾತ್ರಿ 10:17 ರವರೆಗೆ ಇರುತ್ತದೆ. ಈ ಭದ್ರನು ಸ್ವರ್ಗದಲ್ಲಿರುವುದರಿಂದ ಭೂಮಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಭದ್ರಾ ಮಾಸದಲ್ಲಿ ಶುಭ ಕಾರ್ಯ ನಿಷಿದ್ಧ ಎನ್ನಲಾಗುತ್ತದೆ.ಇನ್ನು  ಇಂದು (ಜೂನ್ 3 ) ವಟ ಪೂರ್ಣಿಮಾ ವ್ರತವನ್ನು ಪೂಜಿಸಲು ಬೆಳಿಗ್ಗೆ ಮತ್ತು ಮಧ್ಯಾಹ್ನ ಮಂಗಳಕರ (auspicious) ಸಮಯ. ವಟ ಪೂರ್ಣಿಮಾ ಪೂಜೆಯ ಮೊದಲ ಮಂಗಳಕರ ಸಮಯವು 07:07 AM ರಿಂದ 08:51 AM ವರೆಗೆ ಇರುತ್ತದೆ. ಇದು ವಟ ಪೂರ್ಣಿಮಾ ಪೂಜೆ (Puja)ಗೆ ಅತ್ಯಂತ ಮಂಗಳಕರ ಮತ್ತು ಉತ್ತಮ ಸಮಯವಾಗಿದೆ. ಪೂಜೆಯ ಎರಡನೇ ಶುಭ ಸಮಯ ಮಧ್ಯಾಹ್ನ 12.19 ರಿಂದ ಸಂಜೆ 05.31 ರವರೆಗೆ ಇರಲಿದೆ.

ಜೂನ್‌ನಲ್ಲಿ ಏರಿಳಿತ ಕಾಣುವ ರಾಶಿಗಳಿವು: ಈ ತಿಂಗಳಲ್ಲಿ ನಿಮ್ಮ ಭವಿಷ್ಯ ಏನು?

 

3 ಮಂಗಳಕರ ಯೋಗ ರೂಪಿಸುತ್ತಿವೆ

2023 ರಲ್ಲಿ ವಟ ಪೂರ್ಣಿಮಾ ಉಪವಾಸದ ದಿನದಂದು 3 ಮಂಗಳಕರ ಯೋಗ (Yoga)ಗಳು ರೂಪುಗೊಳ್ಳುತ್ತವೆ. ಈ ಶುಭ ಯೋಗಗಳೆಂದರೆ ಶಿವಯೋಗ, ಸಿದ್ಧ ಯೋಗ ಮತ್ತು ರವಿ ಯೋಗ. ರವಿಯೋಗವು ಮುಂಜಾನೆ(early morning) 05:23 ರಿಂದ 06:16 ರವರೆಗೆ, ಶಿವಯೋಗವು 02:48 ರಿಂದ 02:48 ರವರೆಗೆ ಮತ್ತು ಸಿದ್ಧ ಯೋಗವು ಮಧ್ಯಾಹ್ನ 02:48 ರಿಂದ ತಡರಾತ್ರಿಯವರೆಗೆ ಇರುತ್ತದೆ. ಈ ಯೋಗಗಳನ್ನು ಪೂಜೆ ಮತ್ತು ಮಂಗಳಕರ ಕೆಲಸಗಳಿಗೆ ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ನೀವು ಸಂಜೆ ನಿದ್ದೆ ಮಾಡುತ್ತೀರಾ?: ಹಾಗಾದ್ರೆ ದರಿದ್ರ ನಿಮ್ಮ ಹೆಗಲು ಏರುವುದು ಪಕ್ಕಾ..!

 

ವಟ ಪೂರ್ಣಿಮಾದ ಪೂಜಾ ವಿಧಾನ

ಈ ದಿನ ಮಹಿಳೆಯರು ಸ್ನಾನ ಮಾಡಿದ ನಂತರ ಅಲಂಕಾರಗೊಂಡು ಆಲದ ಮರ ((Banyan tree))ನ್ನು ಪೂಜಿಸಬೇಕು. ಹಾಗೂ ಪತಿಯ ಆಯಸ್ಸಿಗಾಗಿ ಪ್ರಾರ್ಥನೆ ಮಾಡಬೇಕು. ನಂತರ ಮರಕ್ಕೆ ಪ್ರದಕ್ಷಿಣೆಯನ್ನು ಹಾಕಬೇಕು. ಇನ್ನು ಆಲದ ಮರಕ್ಕೆ ಹಸಿ ಹಾಲನ್ನು ಅರ್ಪಿಸುವುದು ಶುಭ ಸಂಕೇತವಾಗಿದ್ದು, ಹಾಗೂ ಆಲದ  ಮರಕ್ಕೆ ನೀರು ಅರ್ಪಿಸುವುದರಿಂದ ಮನೆಯಲ್ಲಿ ಸಂತೋಷ ಬರುತ್ತದೆ.
 

Latest Videos
Follow Us:
Download App:
  • android
  • ios