Asianet Suvarna News Asianet Suvarna News

ಕೋಟ್ಯಾಧಿಪತಿಯಾಗ್ಬೇಕೆಂದ್ರೆ ಹೆಚ್ಚು ಖರ್ಚು ಮಾಡ್ಬೇಕಿಲ್ಲ, ಇಷ್ಟು ಮಾಡಿ ಸಾಕು

ಕಾಸಿದ್ದವನೆ ಬಾಸು. ಹಾಗಾಗಿ ಜನರು ಹಣ ಮಾಡೋಕೆ ಒದ್ದಾಡೋದು. ಏನ್ ಮಾಡಿದ್ರೂ ಶ್ರೀಮಂತರಾಗ್ತಿಲ್ಲ ಎನ್ನುವವರು ಹೆಚ್ಚು ಖರ್ಚಿಲ್ಲದ ಹಣ ಗಳಿಸಬಹುದು. ಇದಕ್ಕೆ  ಜ್ಯೋತಿಷ್ಯದ ಟಿಪ್ಸ್ ಫಾಲೋ ಮಾಡ್ಬೇಕು.
 

Astro Tips For Money
Author
First Published Dec 15, 2022, 3:24 PM IST

ಶ್ರೀಮಂತರಾಗೋದು ಸಾಮಾನ್ಯದ ಮಾತಲ್ಲ. ಅದಕ್ಕೆ ಅದೃಷ್ಟಬೇಕು. ಲಕ್ಷ್ಮಿ ನಿಮ್ಮ ಜೊತೆಗಿರಬೇಕು. ದುಡಿದು ಹಣ ಮಾಡ್ತಿನಿ ಎನ್ನುವವನ ಜೊತೆ ತಾಯಿ ಲಕ್ಷ್ಮಿ ಬಂದಿಲ್ಲವೆಂದ್ರೆ ಆತ ಎಷ್ಟು ದುಡಿದ್ರೂ ಪ್ರಯೋಜನವಾಗೋದಿಲ್ಲ. ಅನೇಕ ಬಾರಿ ನಾವು ತಿಳಿಯದೆ ಕೆಲ ತಪ್ಪುಗಳನ್ನು ಮಾಡಿರ್ತೇವೆ. ಇದು ಲಕ್ಷ್ಮಿ ಮುನಿಸಿಗೆ ಕಾರಣವಾಗಿರುತ್ತದೆ. 

ಹಾಗೆಯೇ ಹಣ (Money) ಗಳಿಸಲು ದೊಡ್ಡ ದೊಡ್ಡ ಪ್ರಯತ್ನ ನಡೆಸ್ತಿರುತ್ತೇವೆ. ಸಣ್ಣ ವಿಷ್ಯವನ್ನು ನಿರ್ಲಕ್ಷ್ಯ ಮಾಡಿರ್ತೇವೆ. ಇದ್ರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಕೋಟ್ಯಾಧಿಪತಿ (Billionaire) ಯಾಗ್ಬೇಕು ಎಂದು ಕನಸು ಕಾಣುವವರು ಬೆವರು ಹರಿಸಿ ದುಡಿಯುವ ಜೊತೆಗೆ ಕೆಲವೊಂದು ಜ್ಯೋತಿಷ್ಯ (Astrology) ಶಾಸ್ತ್ರದ ನಿಯಮಗಳನ್ನು ನೆನಪಿಟ್ಟುಕೊಳ್ಳಬೇಕು. ನಾವಿಂದು ಬೇಗ ಹಣದ ವರ್ಷಧಾರೆ ಆಗ್ಬೇಕು ಅಂದ್ರೆ ಶಾಸ್ತ್ರದಲ್ಲಿ ಹೇಳಿದಂತೆ ಏನು ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೆವೆ. ನೀವೂ ಈ ಸಣ್ಣ ರೂಲ್ಸ್ ಫಾಲೋ ಮಾಡಿ ಬೇಗ ಖಜಾನೆ ತುಂಬಿಸಿಕೊಳ್ಳಿ.

ಸಾವಿನ ನಂತರ ಆತ್ಮ ಮರುಜನ್ಮ ಪಡೆಯೋ ರಹಸ್ಯ ಏನು?

ಆರ್ಥಿಕ (Financial) ಸುಧಾರಣೆಗೆ ಮಾಡಿ ಈ ಕೆಲಸ :

ಶ್ರೀ ಯಂತ್ರದ (Shree Yantra) ಪೂಜೆ : ಶ್ರೀ ಯಂತ್ರದ ಬಗ್ಗೆ ನೀವು ಕೇಳಿರ್ತೀರಿ. ಶ್ರೀ ಯಂತ್ರ ಲಕ್ಷ್ಮಿ ದೇವಿಗೆ ಬಹಳ ಪ್ರಿಯವಾದ ವಸ್ತು. ಪ್ರತಿ ಶುಕ್ರವಾರದಂದು ಶ್ರೀ ಯಂತ್ರವನ್ನು ಪೂಜಿಸಿದರೆ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಬೇಗ ಸುಧಾರಣೆಯನ್ನು ಕಾಣಬಹುದು.  

ಅರಿಶಿನ (Turmeric) : ಕೆಂಪು ಬಟ್ಟೆಯಲ್ಲಿ ಅರಿಶಿನದ ಉಂಡೆಯನ್ನು ಕಟ್ಟಿ ಅದನ್ನು ಕಪಾಟಿನಲ್ಲಿ ಇಡಬೇಕು. ಪ್ರತಿ ದಿನ ಅದಕ್ಕೆ ಪೂಜೆ ಮಾಡಬೇಕು. ಹೀಗೆ ಮಾಡಿದ್ರೆ ನಿಮಗೆ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.  

ಉಪ್ಪಿನಲ್ಲೂ ಇದೆ ಶಕ್ತಿ : ಜೀವನದಲ್ಲಿ ಸುಖ, ಸಂಪತ್ತು ಬೇಕು ಎನ್ನುವವರು ನೀವಾಗಿದ್ದರೆ ಒಂದು ಗಾಜಿನ ಬಾಟಲಿಗೆ ಉಪ್ಪು ಮತ್ತು ಲವಂಗವನ್ನು ಹಾಕಿ ಇಡಬೇಕು. ಇದ್ರಿಂದ ಮನೆಗೆ ಹಣ ಬರಲು ಶುರುವಾಗುತ್ತದೆ.  

ಲಕ್ಷ್ಮಿ ಪೂಜೆ ಮರೆಯಬೇಡಿ : ಪ್ರತಿ ಶುಕ್ರವಾರದಂದು ವೈಭವ ಲಕ್ಷ್ಮಿ ಉಪವಾಸ ಮಾಡುವುದ್ರಿಂದ ಅನೇಕ ಪ್ರಯೋಜನಗಳನ್ನು ನೀವು ಪಡೆಯಬಹುದು.

ಕರ್ಪೂರದಲ್ಲಿದೆ ಶ್ರೀಮಂತಿಗೆ ಗುಟ್ಟು : ಹಠಾತ್ ಹಣದ ಕೊರತೆ ಉಂಟಾದರೆ ಅಥವಾ ಹಣವು ವಿಪರೀತವಾಗಿ ಖರ್ಚಾಗುತ್ತಿದ್ದರೆ ಕಪಾಟಿನಲ್ಲಿ ಕರ್ಪೂರದ ಜೊತೆ ಗುಲಾಬಿ ಹೂವನ್ನು ಇಡಬೇಕು. ಹೀಗೆ ಮಾಡುವುದರಿಂದ ಕಪಾಟಿನಲ್ಲಿ ಎಂದೂ ಹಣ ಖರ್ಚಾಗುವುದಿಲ್ಲ.  

ಆಲಂ ಬಳಸಿ ನೋಡಿ : ಆಲಂ ಅನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಪ್ರತಿ 15 ದಿನಗಳಿಗೊಮ್ಮೆ ಆಲಂ ಅನ್ನು ಬದಲಾಯಿಸುತ್ತಿರಬೇಕು. ಹೀಗೆ ಮಾಡುವುದರಿಂದ ಪರ್ಸ್ ನಲ್ಲಿರುವ ಹಣ ಖಾಲಿಯಾಗುವುದಿಲ್ಲ. 

ಕುಬೇರನ ಆರಾಧನೆ ಮಾಡಿ : ಶ್ರೀಮಂತರಾಗಲು ಬಯಸುವವರು ಕುಬೇರ್ನ ಮಂತ್ರವನ್ನು ನಿಯಮಿತವಾಗಿ 108 ಬಾರಿ ಪಠಿಸಬೇಕು. ಇದ್ರಿಂದ ಆರ್ಥಿಕ ಸಮಸ್ಯೆ ಕಡಿಮೆಯಾಗಿ, ಸಂಪತ್ತಿನಲ್ಲಿ ಹೆಚ್ಚಳವಾಗಲು ಶುರುವಾಗುತ್ತದೆ. 

ದಾಸವಾಳದ ಹೂ ಆರ್ಥಿಕ ಮುಗ್ಗಟ್ಟಿಗೆ ಪರಿಹಾರ : ಪ್ರತಿ ಶುಕ್ರವಾರ ಲಕ್ಷ್ಮಿಗೆ ದಾಸವಾಳದ ಹೂವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಾರಂಭಿಸುತ್ತದೆ.

ಬೆಳ್ಳಿ ನಾಣ್ಯ ಬಳಸಿ ನೋಡಿ : ಹಣದ ಸಮಸ್ಯೆಯಿಂದ ಹೊರಗೆ ಬರಲು ನೀವು ಪರ್ಸ್‌ನಲ್ಲಿ ಬೆಳ್ಳಿ ನಾಣ್ಯವನ್ನು ಇಟ್ಟುಕೊಳ್ಳಬೇಕು. ಇದ್ರಿಂದ ಹಣಗಳಿಸುವ ಅವಕಾಶ ತಾನಾಗಿಯೇ ಬರುತ್ತದೆ.  

ಇಂಥ ಕೆಲವು ಕೆಲಸಗಳನ್ನು ದಕ್ಷಿಣ ದಿಕ್ಕಿನಲ್ಲಿ ಮಾಡಲೇಬಾರದು, Vastu ಹೇಳುವುದೇನು?

ಸಂಪತ್ತು ತರುತ್ತೆ ತುಳಸಿ : ಪತಿಯ ಬಡ್ತಿ ಕುಂಠಿತವಾಗಿದ್ದರೆ ಅಥವಾ ಸಂಬಳ ಕಡಿಮೆಯಾಗಿದ್ದರೆ ಗಂಡನ ಪ್ರಗತಿಗಾಗಿ ಹೆಂಡತಿಯಾದವಳು ತುಳಸಿ ಪೂಜೆ ಮಾಡಬೇಕು. ಪ್ರತಿ ದಿನ ತುಳಸಿಗೆ ನೀರು ಹಾಕಬೇಕು. ಮೂರು ಸುತ್ತು ತುಳಸಿ ಪ್ರದಕ್ಷಣೆ ಹಾಕಬೇಕು. 
 

Follow Us:
Download App:
  • android
  • ios