ಇಂಥ ಕೆಲವು ಕೆಲಸಗಳನ್ನು ದಕ್ಷಿಣ ದಿಕ್ಕಿನಲ್ಲಿ ಮಾಡಲೇಬಾರದು, Vastu ಹೇಳುವುದೇನು?
ಈಗ ಎಲ್ಲದಕ್ಕೂ ವಾಸ್ತು ಶಾಸ್ತ್ರ ನೋಡಲಾಗುತ್ತಿದೆ. ಭೂಮಿಗೆ ಸಂಬಂಧಿಸಿದ ಪ್ರತಿಯೊಂದೂ ಕೆಲಸವನ್ನು ವಾಸ್ತುವಿನ ಪ್ರಕಾರವೇ ಮಾಡಲಾಗುತ್ತೆ. ಮನೆಯ ಒಳಾಂಗಣ ಅಲಂಕಾರಕ್ಕೆ, ಕಟ್ಟಡ ನಿರ್ಮಾಣಕ್ಕೆ ವಾಸ್ತುವನ್ನು ಬಳಸಲಾಗುತ್ತೆ. ವಾಸ್ತು ಪ್ರಕಾರ ಗೃಹೋಪಯೋಗಿ ವಸ್ತುಗಳನ್ನು ಇಟ್ಟುಕೊಳ್ಳದಿದ್ದರೆ, ಆರ್ಥಿಕ ನಷ್ಟ ಅನುಭವಿಸುತ್ತೀರಿ ಮತ್ತು ಮನೆಯಲ್ಲಿ ಸಮಸ್ಯೆ ಉಂಟಾಗುತ್ತೆ ಎಂದು ಹೇಳಲಾಗುತ್ತೆ. ಈ ಪರಿಸ್ಥಿತಿಯು ವಿಶೇಷವಾಗಿ ಮನೆಯ ದಕ್ಷಿಣ ದಿಕ್ಕಿನ ಬಗ್ಗೆ ಹೇಳಲಾಗುತ್ತೆ. ಮನೆಯ ದಕ್ಷಿಣ ದಿಕ್ಕಿನ ಬಗ್ಗೆ ವಾಸ್ತು ಶಾಸ್ತ್ರಗಳು ಏನು ಹೇಳುತ್ತವೆ ಎಂಬುದನ್ನು ನೋಡೋಣ-
ಪ್ರವೇಶದ್ವಾರವು(Main Door) ಪೂರ್ವ ಅಥವಾ ಈಶಾನ್ಯದಲ್ಲಿರಬೇಕು
ಮನೆಯ ಪ್ರವೇಶದ್ವಾರ ಯಾವಾಗಲೂ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿರಬೇಕು. ಅದನ್ನು ದಕ್ಷಿಣ ದಿಕ್ಕಿನಲ್ಲಿ ಇಡೋದು ತಪ್ಪಿಸಿ. ಆದರೆ ನೀವು ಇದನ್ನು ಹೊಂದಿದ್ದರೆ ಪ್ರವೇಶದ್ವಾರದಲ್ಲಿ ಮೂರು ವಾಸ್ತು ಪಿರಮಿಡ್ (Pyramid) ಇರಿಸಿ. ಇದರಿಂದ ಅಶುಭ ಪರಿಣಾಮ ಕಡಿಮೆ ಮಾಡುತ್ತೆ.
ಮನೆಯ ಪ್ರವೇಶದ್ವಾರವನ್ನು ತಪ್ಪು ಜಾಗದಲ್ಲಿಡೋದು ಕುಟುಂಬ ಸದಸ್ಯರ ದುರಾದೃಷ್ಟ ಮತ್ತು ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ. ಮನೆಯ ಮುಖ್ಯ ದ್ವಾರದಲ್ಲಿ ಓಂ, ತ್ರಿಶೂಲ ಮತ್ತು ಸ್ವಸ್ತಿಕ್ (Swastik) ಒಟ್ಟಿಗೆ ಇರಿಸಿ. ಈ ತ್ರಿಮೂರ್ತಿಯು ಕೆಟ್ಟ ಶಕ್ತಿಯು ಮನೆಯನ್ನು ಪ್ರವೇಶಿಸದಂತೆ ಸ್ವಲ್ಪ ಮಟ್ಟಿಗೆ ತಡೆಯುತ್ತೆ.
ಮೃತ ಪೂರ್ವಜರ ದಿಕ್ಕು
ಮನೆ ಮತ್ತು ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಆಧ್ಯಾತ್ಮಿಕ ವಾತಾವರಣವನ್ನು (Spiritual Atmosphere) ಕಾಪಾಡಿಕೊಳ್ಳಲು ಪ್ರತಿ ಮನೆಯಲ್ಲೂ ಪೂಜಾ ಮನೆಯನ್ನು ನಿರ್ಮಿಸಲಾಗುತ್ತೆ. ವಾಸ್ತು ಶಾಸ್ತ್ರಗಳು ಪೂಜಾಗೃಹವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಬಾರದು ಎಂದು ಹೇಳುತ್ತವೆ, ಏಕೆಂದರೆ ಈ ದಿಕ್ಕು ಮೃತ ಪೂರ್ವಜರ ದಿಕ್ಕು. ದೇವರ ಕೋಣೆಯು (Pooja Room) ದಕ್ಷಿಣ ದಿಕ್ಕಿನಲ್ಲಿರೋದರಿಂದ, ಆರ್ಥಿಕ ಪರಿಸ್ಥಿತಿ ಕೆಟ್ಟದಾಗುತ್ತೆ.
ಪಿತೃಗಳನ್ನು ಅವಮಾನಿಸಿದಂತೆ
ಪ್ರತಿ ಮನೆಯಲ್ಲೂ ಪೂಜಾ ಮನೆ ಇರುವಂತೆ, ಪ್ರತಿ ಮನೆಯಲ್ಲೂ ಒಂದು ಕೋಣೆ ಇರುತ್ತೆ. ಅಲ್ಲಿ ನಾವು ವಸ್ತುಗಳನ್ನು ಸಂಗ್ರಹಿಸುತ್ತೇವೆ, ಅದನ್ನು ನಾವು ಸ್ಟೋರ್ ರೂಮ್ (Store room) ಎಂದು ಕರೆಯುತ್ತೇವೆ. ಮನೆಯ ದಕ್ಷಿಣ ದಿಕ್ಕಿನಲ್ಲಿ ಎಂದಿಗೂ ಸ್ಟೋರ್ ರೂಮ್ ಇರಬಾರದು ಎಂದು ವಾಸ್ತು ಶಾಸ್ತ್ರಗಳು ಹೇಳುತ್ತವೆ.
ದಕ್ಷಿಣ ದಿಕ್ಕಿನಲ್ಲಿ ಸ್ಟೋರ್ ರೂಮ್ (Store Room) ಹೊಂದಿರುವುದು ಪೂರ್ವಜರಿಗೆ ಮಾಡಿದ ಅವಮಾನವಾಗಿದೆ, ಇದರಿಂದಾಗಿ ಮನೆಯ ವಾತಾವರಣ ಯಾವಾಗಲೂ ಉದ್ವಿಗ್ನತೆಯಿಂದ ತುಂಬಿರುತ್ತೆ. ಮನೆಯ ಪ್ರತಿಯೊಬ್ಬ ಸದಸ್ಯನು ಸಮಸ್ಯೆಗಳಿಂದ (Problems) ಸುತ್ತುವರೆದಿರುವಂತೆ ತೋರುತ್ತೆ.
ಮಲಗುವ ಕೋಣೆ (Bed room)
ಮಲಗುವ ಕೋಣೆಯು ಮನೆಯ ಅತ್ಯಂತ ಪ್ರಮುಖ ಭಾಗ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಮಲಗುವ ಕೋಣೆ (Bed Room) ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರಬೇಕು. ದಕ್ಷಿಣ ದಿಕ್ಕಿನಲ್ಲಿರುವ ಮನೆಯ ಮಲಗುವ ಕೋಣೆಯ ಕಾರಣದಿಂದಾಗಿ, ನಿದ್ರೆಯಲ್ಲಿ ಅಡಚಣೆ ಉಂಟಾಗುತ್ತೆ, ಇದರಿಂದಾಗಿ ವ್ಯಕ್ತಿಯ ನಿದ್ರೆ ಪೂರ್ಣಗೊಳ್ಳೋದಿಲ್ಲ ಮತ್ತು ವ್ಯಕ್ತಿಯು ರೋಗಗಳಿಗೆ ಬಲಿಯಾಗುತ್ತಾನೆ. ಇದಲ್ಲದೆ, ಇದು ಪಿತೃ ದೋಷಗಳಿಗೆ ಕಾರಣವಾಗಬಹುದು.
ಶೂ (Shoe Rack)
ವಾಸ್ತು ಶಾಸ್ತ್ರಗಳ ಪ್ರಕಾರ, ಶೂ ಮತ್ತು ಚಪ್ಪಲಿ ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಶೂ ಮತ್ತು ಚಪ್ಪಲಿಗಳನ್ನು ಈ ದಿಕ್ಕಿನಲ್ಲಿ ಇಡೋದು ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತೆ. ಮನೆಯ ನಾಶಕ್ಕೆ ಕಾರಣವಾಗುತ್ತೆ. ಬೂಟು ಮತ್ತು ಚಪ್ಪಲಿಗಳಿಗಾಗಿ ಯಾವಾಗಲೂ ಶೂ ಇಡಲು ಜಾಗ ತಯಾರಿಸಿ ಮತ್ತು ಅದನ್ನು ಉತ್ತರ ದಿಕ್ಕಿನಲ್ಲಿ ಇರಿಸಿ.
ಸಾಧ್ಯವಾದರೆ, ಅಡುಗೆ ಮನೆಯನ್ನು(Kitchen) ಪೂರ್ವ ದಿಕ್ಕಿನಲ್ಲಿ ಮಾಡಿ.
ಮನೆಯ ದಕ್ಷಿಣ ದಿಕ್ಕಿನಲ್ಲಿ ಅಡುಗೆ ಮನೆ ಅಥವಾ ಗ್ಯಾಸ್ ಸ್ಟೌವ್ ಅಥವಾ ಒಲೆ ಇರಬಾರದು. ಈ ದಿಕ್ಕಿನಲ್ಲಿ ಅಡುಗೆ ಮನೆಯನ್ನು ಹೊಂದಿರೋದು ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತೆ. ವಿಶೇಷವಾಗಿ ಮನೆಯ ಸದಸ್ಯರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ವಾಸ್ತು ಶಾಸ್ತ್ರಗಳು ಈ ದಿಕ್ಕಿನಲ್ಲಿ ಅಡುಗೆಮನೆಯನ್ನು ಹೊಂದಿರೋದರಿಂದ, ಜೀವನದುದ್ದಕ್ಕೂ ಸಮಸ್ಯೆ ಎದುರಿಸಬೇಕಾಗುತ್ತೆ ಎಂದು ಹೇಳುತ್ತವೆ.
ಸ್ನಾನಗೃಹ (Bathroom)
ವಾಸ್ತು ತಜ್ಞರ ಪ್ರಕಾರ, ದಕ್ಷಿಣ ದಿಕ್ಕಿನಲ್ಲಿ ಬೆಂಕಿಯ ಅಂಶವಿದೆ. ಈ ಕಾರಣದಿಂದ, ಮನೆಯ ಸ್ನಾನಗೃಹವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಬಾರದು. ಸ್ನಾನ ಗೃಹದಲ್ಲಿ ನೀರು ಹರಿಯುತ್ತೆ, ಇದು ಬೆಂಕಿಯ ಅಂಶವನ್ನು ತೆಗೆದುಹಾಕುತ್ತೆ, ಇದು ಮನೆಯ ನಾಶಕ್ಕೆ ಕಾರಣವಾಗುತ್ತೆ. ನಿಮ್ಮ ವಾಸ್ತು ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ವಾಸ್ತು ಪಿರಮಿಡ್ ಬಹಳ ಉಪಯುಕ್ತ ವಸ್ತು. ಸ್ನಾನಗೃಹ ಮನೆಯ ಆಗ್ನೇಯ ಮೂಲೆಯಲ್ಲಿದ್ದರೆ, ಅದು ಸಂಪತ್ತನ್ನು ಬರಿದಾಗಿಸುತ್ತೆ ಮತ್ತು ಜೀವನದಲ್ಲಿ ಯಶಸ್ಸು ಬರೋದನ್ನು ತಡೆಯುತ್ತೆ. ಸ್ನಾನಗೃಹದಲ್ಲಿರುವ ವಾಸ್ತು ಪಿರಮಿಡ್ ಮನೆಯ ಶಕ್ತಿಯನ್ನು ಸಮತೋಲನಗೊಳಿಸಲು ತುಂಬಾ ಸಹಾಯ ಮಾಡುತ್ತೆ.
ವಾಷಿಂಗ್ ಮಷಿನ್ (Washing machine) ಇತ್ಯಾದಿ
ಮನೆಯ ದಕ್ಷಿಣ ದಿಕ್ಕನ್ನು ಎಂದಿಗೂ ತೊಳೆಯುವ ಸ್ಥಳವನ್ನಾಗಿ ಮಾಡಬಾರದು. ವಾಷಿಂಗ್ ಮಶೀನ್ ಅಥವಾ ಯಾವುದೇ ರೀತಿಯ ಯಂತ್ರೋಪಕರಣಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಯಂತ್ರಗಳನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸೋದರಿಂದ, ಮನೆಯ ಧನಾತ್ಮಕ ಶಕ್ತಿಯು (Positive Energy) ನಾಶವಾಗುತ್ತೆ ಮತ್ತು ನಕಾರಾತ್ಮಕ ಶಕ್ತಿಯು (Negative Energy) ಪ್ರಾಬಲ್ಯ ಸಾಧಿಸಲು ಪ್ರಾರಂಭಿಸುತ್ತೆ.