Asianet Suvarna News Asianet Suvarna News

ತ್ವರಿತ ವಿವಾಹ ಮಾಡಿಸುವ ಗಣಪತಿ ಹೋಮ; ಬಳಸುವ ಅಷ್ಟದ್ರವ್ಯಗಳು ಯಾವೆಲ್ಲ?

ಗಣಪತಿ ಅಷ್ಟದ್ರವ್ಯ ಹೋಮವನ್ನು ಸಾಮಾನ್ಯವಾಗಿ ಒಬ್ಬರ ಸಂಪತ್ತು, ಹಣಕಾಸು, ವ್ಯಾಪಾರ ಮತ್ತು ವೃತ್ತಿಯನ್ನು ಸುಧಾರಿಸಲು ನಡೆಸಲಾಗುತ್ತದೆ. ಈ ಹೋಮದ ಅಷ್ಟದ್ರವ್ಯಗಳು ಯಾವುವು?

Ashta Dravya in Ganapati Homam skr
Author
First Published Nov 6, 2022, 3:20 PM IST | Last Updated Nov 6, 2022, 3:20 PM IST

ವೈದಿಕ ಗ್ರಂಥಗಳು ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ಸಮೃದ್ಧವಾಗಿವೆ ಮತ್ತು ಯಶಸ್ವಿ, ಸಂತೋಷ ಮತ್ತು ಸಮೃದ್ಧ ಜೀವನವನ್ನು ಸಾಧಿಸಲು ಅನೇಕ ಪಾಕವಿಧಾನಗಳನ್ನು ಒಳಗೊಂಡಿವೆ. ಗಣಪತಿ ದೇವರಿಗೆ ಪೂಜೆ ಅಥವಾ ಹೋಮವನ್ನು ಮಾಡುವುದರಿಂದ ಜೀವನದಲ್ಲಿ ಅಪಾರ ಪ್ರಯೋಜನಗಳಿವೆ ಎಂದು ಶಾಸ್ತ್ರಗಳು ಹೇಳುತ್ತವೆ. ಗಣೇಶನ ಆಶೀರ್ವಾದವನ್ನು ಕೋರಲು ವಿವಿಧ ರೀತಿಯ ಹೋಮಗಳಿವೆ. ಇವುಗಳಲ್ಲಿ ಗಣಪತಿ ಅಷ್ಟದ್ರವ್ಯ ಹೋಮವೂ ಒಂದು. ಈ ಹೋಮವನ್ನು ಸಾಮಾನ್ಯವಾಗಿ ಒಬ್ಬರ ಸಂಪತ್ತು, ಹಣಕಾಸು, ವ್ಯಾಪಾರ ಮತ್ತು ವೃತ್ತಿಯನ್ನು ಸುಧಾರಿಸಲು ನಡೆಸಲಾಗುತ್ತದೆ. ಇದು ಮದುವೆಯಲ್ಲಿನ ವಿಳಂಬ ಸಮಸ್ಯೆಯನ್ನು ಕೂಡಾ ತೊಡೆದು ಹಾಕುತ್ತದೆ ಮತ್ತು ಸೂಕ್ತವಾದ ಜೀವನ ಸಂಗಾತಿಯನ್ನು ತ್ವರಿತವಾಗಿ ಹುಡುಕಲು ಅನುವು ಮಾಡಿಕೊಡುತ್ತದೆ.

ಗಣಪತಿ ಅಷ್ಟದ್ರವ್ಯ ಹೋಮ ಏಕೆ?
ಭಗವಾನ್ ಗಣೇಶ ಹಿಂದೂ ಧರ್ಮದ 5 ಪ್ರಾಥಮಿಕ ದೈವಗಳಲ್ಲಿ ಒಬ್ಬರು. ಉಳಿದ 4 ಬ್ರಹ್ಮ, ವಿಷ್ಣು, ಶಿವ ಮತ್ತು ದುರ್ಗಾ ದೇವಿ. ಜನರು ಈ 5 ದೇವತೆಗಳನ್ನು ಪೂಜಿಸುತ್ತಾರೆ, ಏಕೆಂದರೆ ಅವರು ತಮ್ಮ ಜೀವನದಲ್ಲಿ ತಮ್ಮ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತಾರೆ ಎಂದು ನಂಬುತ್ತಾರೆ.

ಗಣಪತಿ ಅಷ್ಟದ್ರವ್ಯ ಹೋಮದ ಪುಣ್ಯ
· ತಮ್ಮ ಜೀವನ ಮತ್ತು ವ್ಯವಹಾರದಲ್ಲಿ ಸಮೃದ್ಧಿಯನ್ನು ಸಾಧಿಸಲು ಬಯಸುವವರಿಗೆ ಗಣಪತಿ ಅಷ್ಟದ್ರವ್ಯ ಹೋಮವು ಸೂಕ್ತವಾಗಿದೆ.
· ಈ ಹೋಮವು ನಿಮ್ಮ ಅಗತ್ಯಗಳನ್ನು ನಿಖರವಾಗಿ ಪೂರೈಸುವ ಮೂಲಕ ಜೀವನದಲ್ಲಿ ಸಂಕೀರ್ಣ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
· ಇದು ಎಲ್ಲ ಅಂಶಗಳಲ್ಲಿ ಯಶಸ್ಸನ್ನು ತರುತ್ತದೆ. ಇದರಿಂದ ನೀವು ಸಂತೋಷದ ಜೀವನವನ್ನು ನಡೆಸಬಹುದು.
· ಇದು ಮದುವೆಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.

ಪ್ರತಿ ಮರವೂ ದೇವರ ವಾಸಸ್ಥಾನ, ಯಾವ ಮರದಲ್ಲಿ ಯಾವ ದೇವರಿದ್ದಾನೆ?

ಅಷ್ಟದ್ರವ್ಯಗಳು ಯಾವೆಲ್ಲ?
ಹೋಮದಲ್ಲಿ ಅಷ್ಟದ್ರವ್ಯವನ್ನು ಬಳಸುವ ಪರಿಕಲ್ಪನೆಯು ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡಿತು. ದಕ್ಷಿಣ ಭಾರತದ ಹಿಂದೂಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ.
‘ಅಷ್ಟ’ ಎಂದರೆ ‘ಎಂಟು’ ಮತ್ತು ‘ದ್ರವ್ಯ’ ಎಂದರೆ ‘ಉತ್ಪನ್ನಗಳು’. ಈ ಹೋಮಕ್ಕೆ 8 ಉತ್ಪನ್ನಗಳು ಅತ್ಯಗತ್ಯ. ಗಣಪತಿ ಹೋಮದ ಅಷ್ಟ ದ್ರವ್ಯವು ಎಳ್ಳೆಣ್ಣೆ, ಕಾಕಂಬಿ, ಕಬ್ಬು, ಜೇನುತುಪ್ಪ, ತೆಂಗಿನಕಾಯಿ, ಅವಲಕ್ಕಿ, ಬಾಳೆಹಣ್ಣು, ಅಕ್ಕಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ 8 ವಿಷಯಗಳೊಂದಿಗೆ ಗಣಪತಿ ಹೋಮವನ್ನು ಮಾಡಿದಾಗ, ಹೋಮದಿಂದ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು. ಜನರು ಈ ಹೋಮವನ್ನು ಉದ್ಯಮಗಳಲ್ಲಿ ಯಶಸ್ಸು ಮತ್ತು ಉತ್ತಮ ಫಲಿತಾಂಶಗಳಿಗಾಗಿ ಮಾಡುತ್ತಾರೆ.

ಕೆಲವೆಡೆ ಒಣಕೊಬ್ಬರಿ, ಬೆಲ್ಲ, ಅಕ್ಕಿ, ಬಾಳೆಹಣ್ಣು , ಜೇನು, ಎಳ್ಳು, ಕಬ್ಬು, ಅವಲಕ್ಕಿಯನ್ನು ಅಷ್ಟ ದ್ರವ್ಯವಾಗಿ ಅರ್ಪಿಸುತ್ತಾರೆ.

ಕೆಲವು ಸಮುದಾಯಗಳಲ್ಲಿ, ಅಷ್ಟ ದ್ರವ್ಯಗಳೆಂದರೆ ಬಾಳೆಹಣ್ಣು, ತೆಂಗಿನಕಾಯಿ, ಜೇನುತುಪ್ಪ, ಕಬ್ಬು, ತುಪ್ಪ, ಮೋದಕ, ಬೆಲ್ಲ ಮತ್ತು ಅವಲಕ್ಕಿ.

ಯಜ್ಞದಲ್ಲಿ ಅಷ್ಟದ್ರವ್ಯ
ಯಜ್ಞ ಅಥವಾ ಯಾಗದಲ್ಲಿ ಬಳಸುವ ಎಂಟು ಪ್ರಮುಖ ವಸ್ತುಗಳನ್ನು ಅಷ್ಟದ್ರವ್ಯ ಎಂದೂ ಕರೆಯುತ್ತಾರೆ. ಅವುಗಳಲ್ಲಿ ಅಶ್ವತ್ಥ ಕಾಯಿಗಳು, ಅತಿ, ಪಲಾಶ್ ಮತ್ತು ಆಲದ ಹಣ್ಣು, ವೆಂಕಡುಕು, ಎಳ್ಳು , ಪಾಯಸ ಮತ್ತು ತುಪ್ಪ ಸೇರಿವೆ.

ವಿವಿಧ ರೀತಿಯ ನಿರ್ವಾಣವನ್ನು ಪಡೆಯಲು ಭಕ್ತರು ಈ 8 ವಸ್ತುಗಳನ್ನು ಅರ್ಪಿಸುತ್ತಾರೆ.

ಚಂದ್ರಗ್ರಹಣ; ಮೇಷ, ವೃಷಭಕ್ಕೆ ತೊಡಕಿನ ಫಲ, ನಿಮ್ಮ ರಾಶಿಯ ಫಲವೇನಿದೆ?

· ಜನನ, ವೃದ್ಧಾಪ್ಯ ಮತ್ತು ಮರಣದ ಚಕ್ರವನ್ನು ಕೊನೆಗೊಳಿಸಲು ಜಲವನ್ನು ನೀಡಲಾಗುತ್ತದೆ.
· ಲೌಕಿಕ ಜೀವನದ ನೋವಿನಿಂದ ಮುಕ್ತಿ ಪಡೆಯಲು ಚಂದನ ಅರ್ಪಿಸಲಾಗಿದೆ.
· ಆಯುಷ್ಯದ ಜೀವನವನ್ನು ಪಡೆಯಲು ಅಕ್ಷತೆಯನ್ನು ನೀಡಲಾಗುತ್ತದೆ.
· ಆಸೆಗಳನ್ನು ತೊಡೆದುಹಾಕಲು ಪುಷ್ಪ ನೀಡಲಾಗುತ್ತದೆ.
· ಕಾಯಿಲೆಯಿಂದ ಮುಕ್ತಿ ಪಡೆಯಲು ನೈವೇದ್ಯವನ್ನು ನೀಡಲಾಗುತ್ತದೆ.
· ಮೋಹದ ಕತ್ತಲೆಯನ್ನು ತೆಗೆದುಹಾಕಲು ದೀಪ ನೀಡಲಾಗುತ್ತದೆ.
· 8 ಕರ್ಮಗಳನ್ನು ನಾಶ ಮಾಡಲು ಧೂಪವನ್ನು ನೀಡಲಾಗುತ್ತದೆ.
· ಮೋಕ್ಷ ಫಲವನ್ನು ಪಡೆಯಲು ಹಣ್ಣನ್ನು ನೀಡಲಾಗುತ್ತದೆ.
· ಈ 8 ವಸ್ತುಗಳ ಮಿಶ್ರಣವನ್ನು ಅರ್ಘ್ಯ ಎಂದು ಕರೆಯಲಾಗುತ್ತದೆ. ನಿರ್ವಾಣವನ್ನು ಪಡೆಯಲು ಇದನ್ನು ನೀಡಲಾಗುತ್ತದೆ.

ಹೋಮವನ್ನು ಯಾವಾಗ ಮಾಡಬೇಕು?
ಗಣೇಶನ ಜನ್ಮದಿನವನ್ನು ಆಚರಿಸುವ ಹಬ್ಬವಾದ ಗಣೇಶ ಚತುರ್ಥಿಯಂದು ಸಾಮಾನ್ಯವಾಗಿ ಭಕ್ತರು ಅಷ್ಟದ್ರವ್ಯ ಗಣಪತಿ ಹೋಮವನ್ನು ಮಾಡುತ್ತಾರೆ. ಭಕ್ತರು ದೇವರನ್ನು ಮೆಚ್ಚಿಸಲು ಮತ್ತು ಅವರ ಆಶೀರ್ವಾದವನ್ನು ಕೋರಲು ಇದನ್ನು ಮಾಡುತ್ತಾರೆ.

Latest Videos
Follow Us:
Download App:
  • android
  • ios