ಅಷಾಢ ಅಮಾವಾಸ್ಯೆ 2022 ಯಾವಾಗ? ಏನು ಮಾಡಿದರೆ ಪುಣ್ಯ ಫಲ?
ಹಿಂದೂ ಕ್ಯಾಲೆಂಡರ್ ಪ್ರಕಾರ, ಆಷಾಢ ಮಾಸದ ಅಮವಾಸ್ಯೆಯನ್ನು ಧಾರ್ಮಿಕ ಗ್ರಂಥಗಳಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ಪುಣ್ಯ ನದಿ, ಸರೋವರಗಳಲ್ಲಿ ಸ್ನಾನ ಮಾಡಿ ಪೂರ್ವಜರಿಗೆ ದಾನ, ನೈವೇದ್ಯ ಸಲ್ಲಿಸಬೇಕೆಂಬ ನಿಯಮವಿದೆ.
ಆಷಾಢ(Ashadha) ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ(Amavasya)ಗೆ ಎಲ್ಲ ಅಮಾವಾಸ್ಯೆಯಂತೆ ಅದರದೇ ಆದ ವಿಶೇಷತೆ, ಪ್ರಾಮುಖ್ಯತೆ ಇದೆ. ಅಮಾವಾಸ್ಯೆ ತಿಥಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ದಿನ. ಈ ದಿನ ಪಿತೃ ದೋಷವನ್ನು ತೊಡೆದುಹಾಕಲು ಕೆಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಆಷಾಢ ಅಮಾವಾಸ್ಯೆ ಅಥವಾ ಹಲಹರಿಣಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಈ ಅಮಾವಾಸ್ಯೆಯು ಜೂನ್ 28ರ ಮಂಗಳವಾರ ಬರಲಿದೆ.
ಸಮಯ(time)
ಅಮಾವಾಸ್ಯೆಯು ಜೂನ್ 28 ರಂದು ಬೆಳಿಗ್ಗೆ 05:52 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜೂನ್ 29ರ ಬೆಳಗ್ಗೆ 08:22ಕ್ಕೆ ಕೊನೆಗೊಳ್ಳುತ್ತದೆ. ಇದರ ನಂತರದ ದಿನದಿಂದಲೇ ಪ್ರತಿಪಾದ ತಿಥಿಯಂದು ಅಷಾಢ ಗುಪ್ತ್ ನವರಾತ್ರಿ ಆರಂಭವಾಗುತ್ತದೆ.
ರಾಶಿ ಆಧಾರದಲ್ಲಿ ದಾಂಪತ್ಯದಲ್ಲಿ ಕಡಿಮೆಯಿಂದ ಹೆಚ್ಚು ಮೋಸ ಮಾಡುವವರು ಇವರೇ ನೋಡಿ..
ಈ ಕೆಲಸಗಳನ್ನು ಮಾಡಿ(remedies)
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಷಾಢ ಅಮಾವಾಸ್ಯೆಯಂದು ಬೆಳಿಗ್ಗೆ ಸ್ನಾನ ಮಾಡಿದ ನಂತರ, ಸಿಹಿಗೊಳಿಸದ ಮತ್ತು ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಪೂರ್ವಜರಿಗೆ ತರ್ಪಣ ಅರ್ಪಿಸಿ. ಅಲ್ಲದೆ, ಈ ದಿನ ಬ್ರಾಹ್ಮಣರಿಗೆ ಅನ್ನದಾನ, ದಾನ ಮತ್ತು ದಕ್ಷಿಣೆಯನ್ನು ನೀಡಿ. ಇದಲ್ಲದೇ ಕಾಗೆ, ಹಸು, ನಾಯಿಗಳಿಗೆ ಸ್ವಲ್ಪ ಆಹಾರ ನೀಡಿ. ಇದರಿಂದ ಪಿತೃಗಳು ಸಂತುಷ್ಠರಾಗುತ್ತಾರೆ.
- ಈ ದಿನ ಪೂರ್ವಜರಿಗೆ ಶ್ರಾದ್ಧವೂ ಮುಖ್ಯ. ಅಮಾವಾಸ್ಯೆಯಂದು ಶ್ರಾದ್ಧ ಮಾಡುವುದರಿಂದ ಪೂರ್ವಜರಿಂದ ಉಂಟಾಗುವ ದುಃಖಗಳಿಂದ ಮುಕ್ತಿ ಸಿಗುತ್ತದೆ. ಇದಕ್ಕಾಗಿ ಪಿಂಡ ಪ್ರದಾನ ಮಾಡಬೇಕು.
- ನಂಬಿಕೆಯ ಪ್ರಕಾರ, ಆಷಾಢ ಅಮವಾಸ್ಯೆಯಂದು ಕೃಷಿ ಉಪಕರಣಗಳನ್ನು ಪೂಜಿಸಲಾಗುತ್ತದೆ. ಮಳೆಗಾಲದ ಆರಂಭವಾಗಿರುವುದರಿಂದ ಈ ರೀತಿ ಮಾಡುವುದರಿಂದ ಹಣ್ಣುಗಳು ಮತ್ತು ಧಾನ್ಯಗಳ ಉತ್ಪಾದನೆ ಉತ್ತಮವಾಗಿರುತ್ತದೆ, ಇದರಿಂದ ಮನೆಯ ಸಂಪತ್ತು(prosperity) ಹೆಚ್ಚಾಗುತ್ತದೆ.
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮಾವಾಸ್ಯೆಯಂದು ಸಂಜೆ ಮನೆಯ ಈಶಾನ್ಯ(Northeast) ಮೂಲೆಯಲ್ಲಿ ದೀಪವನ್ನು ಹಚ್ಚಿ. ಅದರಲ್ಲಿ ಹಸುವಿನ ತುಪ್ಪ, ಕುಂಕುಮ ಮತ್ತು ಕೆಂಪು ದಾರದ ದೀಪವನ್ನು ಬಳಸಿ. ಇದು ಲಕ್ಷ್ಮಿ(Lakshmi)ಯ ಆಶೀರ್ವಾದವನ್ನು ನೀಡುತ್ತದೆ ಮತ್ತು ಸಂಪತ್ತು ಮತ್ತು ಆಹಾರ ಧಾನ್ಯಗಳಲ್ಲಿ ಹೆಚ್ಚಳವಾಗುತ್ತದೆ.
ಜಾತಕದ ಮೊದಲ ಮನೆಯಲ್ಲಿದ್ದರೆ ಸೂರ್ಯ, ಸಿಗುತ್ತೆ ಐಶಾರಾಮಿ ಸೌಕರ್ಯ!
- ವಿಷ್ಣು ಸೇರಿದಂತೆ ಅನೇಕ ದೇವರುಗಳು ಅಶ್ವತ್ಥ ಮರ(Peepal tree)ದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಹೀಗಾಗಿ ಆಷಾಢ ಅಮಾವಾಸ್ಯೆಯ ದಿನ ಅಶ್ವತ್ಥ ವೃಕ್ಷವನ್ನು ಪೂಜಿಸಿ. ಪೂಜೆಯಲ್ಲಿ ಹೂವು, ಹಣ್ಣು, ಜೇನು, ಧೂಪ, ದೀಪ ಮತ್ತು ನೀರು ಇತ್ಯಾದಿಗಳನ್ನು ಅರ್ಪಿಸಿ.
- ಧಾರ್ಮಿಕ ನಂಬಿಕೆಗಳ ಪ್ರಕಾರ, ಅಮಾವಾಸ್ಯೆಯ ಸಂದರ್ಭದಲ್ಲಿ ದೀಪ ದಾನಕ್ಕೆ ವಿಶೇಷ ಮಹತ್ವವಿದೆ. ಈ ದಿನ, ಎಲೆಗಳ ಬಟ್ಟಲಿನಲ್ಲಿ ದೀಪ ಮತ್ತು ಹೂವುಗಳನ್ನು ಹಾಕಿ ನೀರಿನಲ್ಲಿ ಹರಿಯುವಂತೆ ಮಾಡಿ. ಹೀಗೆ ಮಾಡುವುದರಿಂದ ಜೀವನದ ತೊಂದರೆಗಳು ದೂರವಾಗುತ್ತವೆ ಮತ್ತು ಸಂತೋಷ ಸಮೃದ್ಧಿಯ ಹಾದಿಗಳು ತೆರೆದುಕೊಳ್ಳುತ್ತವೆ.
- ಒಂದು ಕಡೆ ವಿಷ್ಣುವನ್ನು ಪೂಜಿಸುವ ಈ ದಿನ, ಇನ್ನೊಂದು ಕಡೆ ಶಿವನ ಆರಾಧನೆ ಮಾಡಬೇಕೆಂಬ ನಿಯಮವೂ ಇದೆ. ಆದ್ದರಿಂದ ಭೋಲೆ ಶಂಕರನ ಆರಾಧನೆಯಿಂದ ಕಾಲ ಸರ್ಪ ಪರಿಹಾರಗಳೂ ಫಲಪ್ರದವಾಗುತ್ತವೆ. ಈ ದಿನ ಶಿವನಿಗೆ ರುದ್ರಾಭಿಷೇಕ ಮಾಡಿಸಿ.
- ಅಮಾವಾಸ್ಯೆಯಂದು ಮನೆಯಲ್ಲಿ ಗರುಡ ಪುರಾಣವನ್ನು ಪಠಿಸುವುದು ಒಳ್ಳೆಯದು.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.