Vidur Niti: ಮನುಷ್ಯನನ್ನ ಸಾವಿಗೆ ಹತ್ತಿರ ತೆಗೆದುಕೊಂಡು ಹೋಗುವ 5 ನಡವಳಿಕೆ, ನಿಮ್ಮಲ್ಲಿದ್ರೆ ಇಂದೇ ಬದಲಿಸಿಕೊಳ್ಳಿ
ವಿದುರ ನೀತಿಯ ಪ್ರಕಾರ, ಕೆಲವು ನಡವಳಿಕೆಗಳು ವ್ಯಕ್ತಿಯನ್ನು ಸಾವಿಗೆ ಹತ್ತಿರ ತರುತ್ತವೆ. ತನ್ನನ್ನು ತಾನೇ ಹೊಗಳಿಕೊಳ್ಳುವುದು, ಹೆಚ್ಚು ಮಾತನಾಡುವುದು, ಅತಿಯಾದ ಕೋಪ, ಸೇವಾ ಮನೋಭಾವದ ಕೊರತೆ ಮತ್ತು ಅತಿಯಾಸೆಗಳು ಸಾವಿಗೆ ಹತ್ತಿರ ತರುವ ನಡವಳಿಕೆಗಳಾಗಿವೆ.
ನಿಮಗೆ ಮಹಾಭಾರತದ ವಿದುರ ಯಾರೆಂದು ನಿಮಗೆ ಗೊತ್ತಾ? ಧೃತರಾಷ್ಟ್ರ ಮತ್ತು ಪಾಂಡು ಅವರ ಮತ್ತೋರ್ವ ಸೋದರ. ಆದ್ರೆ ದಾಸಿಯ ಪುತ್ರನಾಗಿದ್ದರಿಂದ ಸಿಂಹಾಸನದಲ್ಲಿ ಆಸೀನರಾಗುವ ಅವಕಾಶ ಮತ್ತು ಗೌರವ ಸಿಗಲಿಲ್ಲ. ಆದರೆ ತಿಳುವಳಿಕೆ ಮತ್ತು ಬುದ್ಧಿವಂತಿಕೆಯ ವಿಷಯದಲ್ಲಿ ಅವರು ಧೃತರಾಷ್ಟ್ರ ಮತ್ತು ಪಾಂಡುವಿಗಿಂತ ಹೆಚ್ಚು ಮುಂದಿದ್ದರು. ರಾಜ್ಯವನ್ನು ಮುನ್ನಡೆಸುವ ಎಲ್ಲಾ ಸಾಮಾರ್ಥ್ಯವೂ ವಿಧುರನಲ್ಲಿತ್ತು. ಆದ್ದರಿಂದ ಹಸ್ತಿನಾಪುರದ ಪ್ರಧಾನಮಂತ್ರಿಯನ್ನಾಗಿ ವಿಧುರನನ್ನು ನೇಮಕ ಮಾಡಲಾಗಿತ್ತು. ಚಾಣಕ್ಯ ಅವರಂತೆ ವಿದುರ ನೀತಿಗಳು ಸಾಮಾಜಿಕ, ರಾಜಕೀಯ ಮತ್ತು ದೈನಂದಿನ ಜೀವನಶೈಲಿಯ ಬಗ್ಗೆ ಹೇಳುತ್ತವೆ. ಇಷ್ಟು ಮಾತ್ರವಲ್ಲ ವಿದುರರ ನೀತಿಯಲ್ಲಿ ಆಧ್ಯಾತ್ಮಿಕದ ಬಗ್ಗೆಯೂ ಉಲ್ಲೇಖಿಸಲಾಗಿದೆ.
ವಿದುರ ನೀತಿಯಲ್ಲಿ ಜೀವ ಮತ್ತು ಮೃತ್ಯುದ ಬಗ್ಗೆ ವಿವರಿಸಲಾಗಿದೆ. ಹುಟ್ಟು ಮತ್ತು ಮರಣದ ನಡುವಿನ ಜೀವನ ಹೇಗಿರಬೇಕು ಎಂಬುದರ ಬಗ್ಗೆಯೂ ವಿದುರ ನೀತಿಯಲ್ಲಿ ತಿಳಿಸಲಾಗಿದೆ. ಈ ಲೇಖನದಲ್ಲಿ ಮನುಷ್ಯನ ಸಾವಿಗೆ ಹತ್ತಿರ ತೆಗೆದುಕೊಂಡು ಹೋಗುವ ಐದು ನಡವಳಿಕೆ ಬಗ್ಗೆ ನೋಡೋಣ. ಒಂದು ವೇಳೆ ನಿಮ್ಮಲ್ಲಿ ಈ ನಡವಳಿಕೆಗಳಿದ್ರೆ ಇಂದೇ ಬದಲಿಸಿಕೊಳ್ಳೋದು ಉತ್ತಮ.
1.ತನ್ನನ್ನು ತಾನೇ ಹೊಗಳಿಕೊಳ್ಳುವುದು
ಯಾವುದೇ ವ್ಯಕ್ತಿ ತನ್ನನ್ನು ತಾನು ಎಂದಿಗೂ ಯಾರ ಮುಂದೆಯೂ ಹೊಗಳಿಕೊಳ್ಳಬಾರದು. ಪ್ರಶಂಸೆ ಅನ್ನೋದು ಬೇರೆಯವರಿಂದ ಬರಬೇಕು. ತಾನೇ ಹೊಗಳಿಕೊಂಡು ಬೇರೆಯವರನ್ನು ನಿಂದಿಸುವ ವ್ಯಕ್ತಿಯ ಸುತ್ತಲೂ ಯಾವಾಗಲೂ ಶತ್ರುಗಳಿರುತ್ತಾರೆ. ಈ ರೀತಿಯ ಮಾತಿನ ನಡವಳಿಕೆ ಸಾವನ್ನು ಸಮೀಪ ಮಾಡಿಕೊಳ್ಳುತ್ತದೆ ಎಂದು ವಿದುರ ನೀತಿಯಲ್ಲಿ ಹೇಳಲಾಗಿದೆ.
2.ಹೆಚ್ಚು ಮಾತನಾಡೋದು
ಅಗತ್ಯಕ್ಕಿಂತ ಅಥವಾ ಅನಾವಶ್ಯಕವಾಗಿ ಮಾತನಾಡುವ ಜನರು ಸಹ ಸಾವಿಗೆ ಹತ್ತಿರವಾಗುತ್ತಿರುತ್ತಾರೆ. ಹೆಚ್ಚು ಮಾತನಾಡುವ ವ್ಯಕ್ತಿ ಸಮಸ್ಯೆಗಳನ್ನು ತನ್ನ ಮೈಮೇಲೆ ಎಳೆದುಕೊಳ್ಳುತ್ತಿರುತ್ತಾನೆ. ಕೆಲವೊಮ್ಮೆ ಅನಾವಶ್ಯಕ ಮಾತುಗಳೇ ಪ್ರಾಣಕ್ಕೆ ಸಂಚಕಾರ ತರಬಹುದು.
3.ಅತಿಯಾದ ಕೋಪ
ಮನುಷ್ಯ ಸಮಾಜದಲ್ಲಿ ಜೀವಿಸುವ ಜೀವಿ. ಸಣ್ಣ ಸಣ್ಣ ವಿಷಯಗಳಿಗೂ ಕೋಪ ಮಾಡಿಕೊಳ್ಳುವುದು ಯಾವುದೇ ಮನುಷ್ಯನಿಗೆ ಒಳ್ಳೆಯದಲ್ಲ. ಅತಿಯಾದ ಕೋಪ ವ್ಯಕ್ತಿಯ ವ್ಯಕ್ತಿತ್ವವನ್ನು ನಾಶ ಮಾಡಿಸುತ್ತದೆ. ಕೋಪದಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಇದನ್ನೂ ಓದಿ: 2025ರಲ್ಲಿ ಹಣ, ಸಂಪತ್ತು ನಿಮ್ಮದಾಗಬೇಕಾ? ಬ್ರಾಹ್ಮೀ ಮುಹೂರ್ತದಲ್ಲಿ ಈ ಕೆಲಸ ಮಾಡಿ
4.ಸೇವಾ ಮನೋಭಾವನೆ ಇಲ್ಲದಿರುವುದು
ಮನುಷ್ಯನಲ್ಲಿ ಸೇವಾ ಮನೋಭಾವನೆ ಮತ್ತು ಹಂಚಿ ತಿನ್ನುವ ಗುಣ ಇರಬೇಕು. ತಮ್ಮ ಶಕ್ತಿಗನುಸಾರವಾಗಿ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕು ಎಂದು ವಿದುರ ನೀತಿಯಲ್ಲಿ ಹೇಳಲಾಗಿದೆ.
5.ಅತಿಯಾಸೆ
ಜೀವನದಲ್ಲಿ ಆಸೆ ಮತ್ತು ಕನಸುಗಳಿದ್ದಾಗ ಮಾತ್ರ ಬೆಳೆಯಲು ಸಾಧ್ಯ. ಆದ್ರೆ ಎಂದಿಗೂ ಆಸೆ ಅನ್ನೋದು ಅತಿಯಾಸೆ ಆಗಬಾರದು. ಈ ಗುಣ ಹೊಂದಿರುವ ಜನರನ್ನು ಸಮಾಜ ನಕಾರಾತ್ಮಕವಾಗಿ ನೋಡುತ್ತದೆ. ಅತಿಯಾಸೆ ಹೊಂದಿರುವ ವ್ಯಕ್ತಿಯೇ ಸಾವನ್ನು ಆಹ್ವಾನಿಸುತ್ತಾನೆ ಎಂದು ವಿದುರ ನೀತಿಯಲ್ಲಿ ಹೇಳಲಾಗಿದೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಇದನ್ನೂ ಓದಿ: ಚಾಣಕ್ಯ ನೀತಿ: ನಾಚಿಕೆ, ಸಂಕೋಚ ಬಿಟ್ಟಾಕಿ ಈ ಕೆಲಸ ಮಾಡಿ, ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು