ಚಾಣಕ್ಯ ನೀತಿ: ನಾಚಿಕೆ, ಸಂಕೋಚ ಬಿಟ್ಟಾಕಿ ಈ ಕೆಲಸ ಮಾಡಿ, ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು
ಆಚಾರ್ಯ ಚಾಣಕ್ಯರ ನೀತಿಗಳು ಯಶಸ್ಸು ಮತ್ತು ಸಂತೋಷಕ್ಕೆ ಮಾರ್ಗದರ್ಶನ ನೀಡುತ್ತವೆ. ಈ ವಿಷಯಗಳಲ್ಲಿ ನಾಚಿಕೆಯನ್ನು ಬಿಟ್ಟು ಕೆಲಸ ಮಾಡಬೇಕೆಂದು ಚಾಣಕ್ಯರು ಹೇಳುತ್ತಾರೆ.
ಆಚಾರ್ಯ ಚಾಣಕ್ಯರನ್ನು ಜ್ಞಾನಿ, ವಿದ್ವಾನ ಪುರುಷ, ಅರ್ಥಶಾಸ್ತ್ರಜ್ಞ ಎಂದು ಕರೆಯಲಾಗುತ್ತದೆ. ಅರ್ಥಶಾಸ್ತ್ರ, ಜೀವನದ ಮೌಲ್ಯಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ತಮ್ಮ ನೀತಿಗಳಲ್ಲಿ ಹೇಳಿದ್ದಾರೆ.
ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಆಚಾರ್ಯ ಚಾಣಕ್ಯ ನೀತಿಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡ್ರೆ ಅವನಷ್ಟು ಯಶಸ್ವಿ ಯಾರೂ ಆಗಲ್ಲ. ಯಶಸ್ಸು, ಸಮಾಜದಲ್ಲಿ ಗೌರವ ಆತನನ್ನು ಅರಸಿಕೊಂಡು ಬರುತ್ತದೆ. ಆತನ ಪ್ರತಿಯೊಂದು ಹೆಜ್ಜೆಯಲ್ಲೂ ಸಂತೋಷವಿರುತ್ತದೆ.
ಆರ್ಥಿಕ, ರಾಜಕೀಯ, ಮಹಾ ಜ್ಞಾನಿಯಾಗಿರುವ ಚಾಣಕ್ಯ, ಜೀವನದಲ್ಲಿ ಯಶಸ್ಸು ಮತ್ತು ಸಂತೋಷ ನಿಮಗೆ ಸಿಗಬೇಕಾದ್ರೆ ಕೆಲವು ಕೆಲಸಗಳನ್ನು ನಾಚಿಕೆ, ಸಂಕೋಚವನ್ನು ಬಿಟ್ಟಾಕಿ ಮಾಡಬೇಕು ಎಂದು ಹೇಳುತ್ತಾರೆ. ಚಾಣಕ್ಯ ಹೇಳಿದ ಆ ಕೆಲಸಗಳು ಏನು ಅಂತ ನೋಡೋಣ ಬನ್ನಿ.
ಶಿಕ್ಷಣ
1.ಶಿಕ್ಷಣ ಪಡೆಯೋದರಲ್ಲಿ ಯಾವಾಗಲೂ ಹಿಂದೇಟು ಹಾಕಬಾರದು. ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರಬೇಕಾಗುತ್ತದೆ. ಭಯ ಮತ್ತು ನಾಚಿಕೆಯಿಂದ ಹಿಂದೆ ಸರಿದ್ರೆ ನೀವು ಕೊನೆ ಸ್ಥಾನದಲ್ಲಿ ಉಳಿದುಕೊಳ್ಳಬೇಕಾಗುತ್ತದೆ.
ಹಣ
2.ಸಾಲವಾಗಿ ನೀಡಿರುವ ಹಣವನ್ನು ಮರಳಿ ಕೇಳಲು ಮುಜುಗರಕ್ಕೆ ಒಳಗಾಗಬಾರದು. ಅದು ನಿಮ್ಮ ಹಣವಾಗಿದ್ದು, ಕೇಳಲು ನಿಮಗೆ ಹಕ್ಕು ಇರುತ್ತದೆ. ಯಾವುದೇ ಕಾರಣಕ್ಕೂ ಮಹಾಲಕ್ಷ್ಮಿಯನ್ನು ದೂರ ಮಾಡಿಕೊಳ್ಳಬಾರದು. ಇಲ್ಲವಾದ್ರೆ ನಿಮ್ಮ ಆರ್ಥಿಕ ಸ್ಥಿತಿ ಏರುಪೇರಾಗುತ್ತದೆ.
ಕೆಲಸ
3.ಹಣ ಸಂಪಾದಿಸುವ ಯಾವುದೇ ಕೆಲಸದ ಬಗ್ಗೆ ತಾತ್ಸಾರ ಮಾಡಬಾರದು. ಯಾವುದೇ ಕೆಲಸವೂ ಚಿಕ್ಕದು ಎಂದು ಭಾವಿಸಬಾರದು. ಅದು ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಿದ್ರೆ ಆ ಕೆಲಸವನ್ನು ಮಾಡಬೇಕು. ಇದೇ ವೇಳೆ ಕೆಟ್ಟ ಕೆಲಸದಿಂದ ಮಾಡಿದ ಸಂಪಾದನೆ ದೀರ್ಘಕಾಲ ಉಳಿಯಲ್ಲ ಎಂಬ ಎಚ್ಚರಿಕೆಯನ್ನು ಆಚಾರ್ಯ ಚಾಣಕ್ಯ ಹೇಳಿದ್ದಾರೆ.
ಆಹಾರ
4.ಊಟ ಮಾಡುವ ಸಂದರ್ಭದಲ್ಲಿ ನಿಮಗೆ ತೃಪ್ತಿಯಾಗೋವರೆಗೂ ತಿನ್ನಬೇಕು. ಸಂಕೋಚದಿಂದ ಊಟ ಮಾಡಿದ್ರೆ ಹಸಿವಿನಿಂದ ಕುಳಿತಕೊಳ್ಳಬೇಕಾಗುತ್ತದೆ. ಹಾಗೆ ತಟ್ಟೆಯಲ್ಲಿ ಆಹಾರ ಉಳಿಸಬಾರದು ಎಂಬ ಮಾತನ್ನು ಸಹ ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
Disclaimer: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.