Asianet Suvarna News Asianet Suvarna News

ಹಸ್ತಾ, ಚಿತ್ತಾ, ಸ್ವಾತಿ, ವಿಶಾಖಾ ಮತ್ತು ಅನುರಾಧ ನಕ್ಷತ್ರದಲ್ಲಿ ಜನಿಸಿದವರ ಗುಣ ಹೇಗಿರುತ್ತೆ?

ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳಿಗೆ ವಿಶೇಷ ಮಹತ್ವವಿದೆ. ನಕ್ಷತ್ರದ ಆಧಾರದ ಮೇಲೆ ವ್ಯಕ್ತಿಯ ಗುಣ ಮತ್ತು ಸ್ವಭಾವಗಳ ಬಗ್ಗೆ ತಿಳಿಯಬಹುದಾಗಿದೆ. ಹಸ್ತಾ, ಚಿತ್ರಾ, ಸ್ವಾತಿ, ವಿಶಾಖಾ ಮತ್ತು ಅನುರಾಧ  ನಕ್ಷತ್ರದಲ್ಲಿ ಜನಿಸಿದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ....
 

Hasta Chitra Swati  Vishaka and Anuradha sun sign born people nature
Author
Bangalore, First Published Sep 17, 2021, 7:14 PM IST
  • Facebook
  • Twitter
  • Whatsapp

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹ, ರಾಶಿ ಮತ್ತು ನಕ್ಷತ್ರಗಳಿಗೆ ವಿಶೇಷ ಪ್ರಾಮುಖ್ಯತೆಯಿದೆ. ವ್ಯಕ್ತಿಯ ಗುಣ - ವಿಶೇಷತೆಗಳನ್ನು ಅರಿಯಲು, ಭವಿಷ್ಯದ ವಿಚಾರಗಳನ್ನು ತಿಳಿಯಲು ಜನ್ಮ ನಕ್ಷತ್ರದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಹಸ್ತಾ, ಚಿತ್ರಾ, ಸ್ವಾತಿ, ವಿಶಾಖಾ ಮತ್ತು ಅನುರಾಧ  ನಕ್ಷತ್ರದಲ್ಲಿ ಜನಿಸಿದವರ ಗುಣ ವಿಶೇಷತೆಗಳ ಬಗ್ಗೆ ತಿಳಿಯೋಣ.....

ಇದನ್ನು ಓದಿ: ಈ ನಾಲ್ಕು ರಾಶಿಯವರು ಮಿತವ್ಯಯಿಗಳು..

ಹಸ್ತಾ ನಕ್ಷತ್ರ 
ಒಟ್ಟು ನಕ್ಷತ್ರಗಳ ಪಟ್ಟಿಯಲ್ಲಿ ಹಸ್ತಾ ನಕ್ಷತ್ರವು ಹದಿಮೂರನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಚಂದ್ರ ದೇವನಾಗಿದ್ದಾನೆ. ವ್ಯವಹಾರದ ಬಗ್ಗೆ ಉತ್ತಮ ಜ್ಞಾನವನ್ನು ಇವರು ಹೊಂದಿರುತ್ತಾರೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಬೇರೆಯವರಿಂದ ಕೆಲಸ ಮಾಡಿಸಿಕೊಳ್ಳುವ ಕಲೆ ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಎಲ್ಲ ರೀತಿಯ ಸುಖ ಮತ್ತು ಐಷಾರಾಮಿ ಜೀವನ ಸಿಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಜೀವನವು ಶಾಂತಿ ಮತ್ತು ನೆಮ್ಮದಿಯಿಂದ ಸಾಗುತ್ತದೆ. 

ಚಿತ್ರಾ ನಕ್ಷತ್ರ 
ಇಪ್ಪತ್ತೇಳು ನಕ್ಷತ್ರಗಳಲ್ಲಿ ಚಿತ್ರಾ ನಕ್ಷತ್ರವು ಹದಿನಾಲ್ಕನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಮಂಗಳಗ್ರಹವಾಗಿದೆ. ಚಿತ್ರಾ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳ ಸ್ವಭಾವದಲ್ಲಿ ಮಂಗಳ ಗ್ರಹದ ಪ್ರಭಾವ ನೋಡಬಹುದಾಗಿದೆ. ಖಾಸಗಿ ವ್ಯಕ್ತಿಗಳ ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಸಮಾಜದ ಹಿತಕ್ಕಾಗಿ ಕೆಲಸ ಮಾಡುವುದು ಇವರ ಅಭಿರುಚಿಯಾಗಿರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಕಠಿಣ ಸಮಸ್ಯೆಗಳು ಎದುರಾದರೂ ಗಾಬರಿಗೊಳ್ಳದೆ ಸಮಾಧಾನದಿಂದ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಪರಿಶ್ರಮ ಮತ್ತು ಧೈರ್ಯವೇ ಇವರ ಸಾಧನವಾಗಿರುತ್ತದೆ. ಚಿತ್ರಾ ನಕ್ಷತ್ರದಲ್ಲಿ ಜನಿಸಿದವರು ಇತರರ ಸಹಾಯಕ್ಕೆ ಸದಾ ಸಿದ್ಧರಿರುತ್ತಾರೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ಬುದ್ಧಿವಂತರು ಜೊತೆಗೆ ಚತುರರು ಆಗಿರುತ್ತಾರಂತೆ...

ಸ್ವಾತಿ ನಕ್ಷತ್ರ 
ನಕ್ಷತ್ರಗಳ ಕೂಟದಲ್ಲಿ ಸ್ವಾತಿ ನಕ್ಷತ್ರ ಹದಿನೈದನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ರಾಹು ಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳ ಸ್ವಭಾವ ಮತ್ತು ಆಚರಣೆ ಅತ್ಯಂತ ಸ್ವಚ್ಛವಾಗಿರುತ್ತದೆ. ಈ ನಕ್ಷತ್ರದಲ್ಲಿ ಬಿದ್ದ ಮಳೆ ನೀರು ಮುತ್ತು ಆಗುತ್ತದೆ ಎಂಬ ನಂಬಿಕೆ ಸಹ ಇದೆ. ತುಲಾ ರಾಶಿಯ ಕಾರಣ ಸ್ವಾತಿ ನಕ್ಷತ್ರದವರು ಸಾತ್ವಿಕ ಮತ್ತು ತಾಮಸ ಎರಡೂ ಗುಣವನ್ನು ಹೊಂದಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ರಾಜಕಾರಣದಂಥ ಕ್ಷೇತ್ರಗಳಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುತ್ತಾರೆ.
Hasta Chitra Swati  Vishaka and Anuradha sun sign born people nature
ವಿಶಾಖಾ ನಕ್ಷತ್ರ 
ಒಟ್ಟು ನಕ್ಷತ್ರಗಳಲ್ಲಿ ವಿಶಾಖ ನಕ್ಷತ್ರವು ಹದಿನಾರನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಗುರು ಗ್ರಹವಾಗಿದೆ. ಪಾಠ ಪ್ರವಚನಗಳಂಥ ಉತ್ತಮ ಕಾರ್ಯಗಳಲ್ಲಿ  ವಿಶಾಖಾ ನಕ್ಷತ್ರದವರು ಹೆಸರುವಾಸಿಯಾಗುತ್ತಾರೆ. ಶರೀರಕ್ಕೆ ಹೆಚ್ಚು ಶ್ರಮ ಕೊಡದ ಈ ವ್ಯಕ್ತಿಗಳು ಬುದ್ಧಿಯ ಬಲದ ಮೇಲೆಯೇ ಎಲ್ಲರನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸಮಾಜದಲ್ಲಿ ಉತ್ತಮ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತಾರೆ. ಸಾಮಾಜಿಕ ಕಾರ್ಯಗಳಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ತಮ್ಮ ಲಕ್ಷ್ಯವನ್ನು ತಲುಪಲು ಹೆಚ್ಚಿನ ಶ್ರಮವಹಿಸುತ್ತಾರೆ.

ಇದನ್ನು ಓದಿ: ಆಶ್ಲೇಷಾ, ಮಘಾ, ಪೂರ್ವ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದವರ ಗುಣವಿದು!

ಅನುರಾಧಾ ನಕ್ಷತ್ರ 
ನಕ್ಷತ್ರಗಳ ಕೂಟದಲ್ಲಿ ಅನೂರಾಧ ನಕ್ಷತ್ರವು ಹದಿನೇಳನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಶನಿಗ್ರಹವಾಗಿದೆ. ಅನುರಾಧ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಆದರ್ಶ ಮತ್ತು ಸಿದ್ಧಾಂತಗಳ ಮೇಲೆಯೇ ಜೀವನ ನಡೆಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಿಟ್ಟಿನ ಮೇಲೆ ನಿಯಂತ್ರಣವಿರುವುದಿಲ್ಲ. ಹಾಗಾಗಿ ಅನೇಕ ಬಾರಿ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಬುದ್ಧಿಗಿಂತ ಹೆಚ್ಚು ಮನಸ್ಸಿನಿಂದ ಯೋಚಿಸುತ್ತಾರೆ. ಇವರು ತಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಅನುರಾಧ ನಕ್ಷತ್ರದವರ ಮಾತು ಒರಟಾಗಿರುತ್ತದೆ. ಹಾಗಾಗಿ ಜನರು ಇವರನ್ನು ಅಷ್ಟಾಗಿ ಇಷ್ಟಪಡುವುದಿಲ್ಲ.

Follow Us:
Download App:
  • android
  • ios