Asianet Suvarna News Asianet Suvarna News

Astro tips : ಈ ನಾಲ್ಕು ರಾಶಿಯವರಿಗೆ ಅದೃಷ್ಟ ತರಲಿದೆ ಚಿನ್ನ!

ಬಂಗಾರ ಎಂದರೆ ಎಲ್ಲರಿಗೂ ಇಷ್ಟ. ಮಹಿಳೆಯರಿಗಂತೂ ಕೇಳುವುದೇ ಬೇಡ. ಆದರೆ, ಬಂಗಾರವನ್ನು ಧರಿಸುವುದು ಕೆಲ ರಾಶಿಯವರಿಗೆ ಆಗಿ ಬರುತ್ತದೆ, ಮತ್ತೆ ಕೆಲ ರಾಶಿಯವರಿಗೆ ಆಗಿಬರುವುದಿಲ್ಲ. ಹಾಗಾದರೆ ಚಿನ್ನವನ್ನು ಯಾರು ಧರಿಸಿದರೆ ಉತ್ತಮ, ಯಾರು ಧರಿಸಬಾರದು ಎಂಬುದನ್ನು ತಿಳಿಯೋಣ...
 

Aries Virgo Leo Sagittarius Zodiacs get lucky wearing gold
Author
Bangalore, First Published Feb 13, 2022, 10:06 AM IST

ಜಾತಕದಲ್ಲಿ (Horoscope) ಗ್ರಹ ದೋಷ, ಭಾಗ್ಯ ವೃದ್ಧಿ ಮತ್ತು ರೋಗಗಳಿಂದ (Disease) ಮುಕ್ತಿ ಪಡೆಯಲು ಅನೇಕ ರತ್ನಗಳ ಧಾರಣೆಯನ್ನು ಶಾಸ್ತ್ರ ಹೇಳುತ್ತದೆ. ರತ್ನಗಳನ್ನು ಧರಿಸುವುದರಿಂದ ಆಯಾ ಗ್ರಹಗಳ ಸ್ಥಿತಿಯು ಬಲಗೊಳ್ಳುವುದಲ್ಲದೆ ಜೀವನದಲ್ಲಿ ಸುಖ, ಸಂತೋಷ (Happiness) ವೃದ್ಧಿಸುತ್ತವೆ. ಈ ರತ್ನಗಳಲ್ಲಿ ಚಿನ್ನ, ಬೆಳ್ಳಿ (Gold, Silver)  ಮತ್ತು ಅನೇಕ ಇತರೆ ರತ್ನಗಳು ಇವೆ. ಆದರೆ ಯಾವುದೇ ರತ್ನವನ್ನು (Gem Stone) ಧರಿಸುವ ಮುನ್ನ ಅದರ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿರುವ ಅವರ ಬಳಿ ಸಲಹೆ ಪಡೆದು ಧರಿಸುವುದು ಉತ್ತಮ. 

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಚಿನ್ನವನ್ನು ಧರಿಸುವುದರಿಂದ ಗುರು ಗ್ರಹದ (Jupiter) ಸ್ಥಿತಿಯು ಬಲಗೊಳ್ಳುತ್ತದೆ. ಅಷ್ಟೇ ಅಲ್ಲದೆ ಚಿನ್ನವು ಸುಖ ಮತ್ತು ಸಮೃದ್ಧಿಯ (Happiness and prosperity) ಪ್ರತೀಕವಾಗಿದೆ, ಇದನ್ನು ಧರಿಸುವುದರಿಂದ ಧನ, ಧಾನ್ಯ ವೃದ್ಧಿಸುತ್ತದೆ. ಹಾಗಂತ ಚಿನ್ನವನ್ನು ಧರಿಸುವುದು ಎಲ್ಲರಿಗೂ ಶುಭವನ್ನೇ ತರುವುದಿಲ್ಲ. ಹಾಗಾದರೆ ಯಾವ ರಾಶಿವಯವರಿಗೆ ಚಿನ್ನದ ಧಾರಣೆ ಶುಭ ಫಲವನ್ನು ತರುತ್ತದೆ, ಯಾರಿಗೆ ಆಗಿಬರುವುದಿಲ್ಲ ಎಂಬುದನ್ನು ನೋಡೋಣ.

ಮೇಷ ರಾಶಿ (Aries)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರು ಚಿನ್ನವನ್ನು ಧರಿಸುವುದರಿಂದ ಶುಭ ಫಲವನ್ನು ಪಡೆಯುತ್ತಾರೆ. ಈ ರಾಶಿಯವರು ಚಿನ್ನದ ಉಂಗುರವನ್ನು (Gold Ring) ಧರಿಸಬಹುದಾಗಿದೆ. ಈ ರಾಶಿಯವರು ಚಿನ್ನದ ಉಂಗುರವನ್ನು ಧರಿಸುವುದರಿಂದ ಸಾಲಗಳಿಂದ (Loan) ಮುಕ್ತಿ (Relief) ಪಡೆಯುತ್ತಾರೆ. ಅಷ್ಟೇ ಅಲ್ಲದೆ ಮೇಷ ರಾಶಿಯವರಿಗೆ ಹಣ ಸಂಪಾದಿಸುವ ಅನೇಕ ಮಾರ್ಗಗಳು ತೆರೆದುಕೊಳ್ಳುತ್ತವೆ.

ಸಿಂಹ ರಾಶಿ (Leo)
ಸಿಂಹ ರಾಶಿಯ ವ್ಯಕ್ತಿಗಳು ಚಿನ್ನವನ್ನು ಧರಿಸುವುದರಿಂದ ಅದೃಷ್ಟವು (Luck) ಒದಗಿ ಬರಲಿದೆ. ಈ ರಾಶಿಯ ಅಧಿಪತಿ ಬುಧ ಗ್ರಹವು (Mercury) ಸೂರ್ಯ (Sun) ಗ್ರಹವಾಗಿದೆ. ಚಿನ್ನಕ್ಕೆ ಕಾರಕ ಗ್ರಹ ಗುರು (Jupiter) ಗ್ರಹವಾಗಿದೆ. ಸೂರ್ಯ ಮತ್ತು ಗುರುಗ್ರಹವು ಮಿತ್ರ ಗ್ರಹವಾದ ಕಾರಣ ಈ ರಾಶಿಯವರಿಗೆ ಚಿನ್ನದ ಧಾರಣೆಯು ಅದೃಷ್ಟವನ್ನು ತರಲಿದೆ. 

ಕನ್ಯಾ ರಾಶಿ (Virgo)
ಈ ರಾಶಿಯ ಐದನೇ ಮತ್ತು ಏಳನೇ ಮನೆಯ ಅದಿದೇವರು ಗುರುಗ್ರಹ ವಾಗಿರುವ ಕಾರಣ ಈ ರಾಶಿಯ ವ್ಯಕ್ತಿಗಳು ಚಿನ್ನವನ್ನು ಧರಿಸುವುದು ಉತ್ತಮ. ಈ ರಾಶಿಯವರು ಚಿನ್ನವನ್ನು ಧರಿಸುವುದರಿಂದ ಎಲ್ಲಾ ಕಷ್ಟಗಳು (Difficulties) ದೂರವಾಗುತ್ತವೆ.

ಇದನ್ನು ಓದಿ: Vastu Tips: ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡುವ ವಾಸ್ತುದೋಷ!

ಧನು ರಾಶಿ (Sagittarius)
ಈ ರಾಶಿಯ ಅಧಿಪತಿ ದೇವರು ಗುರು ಗ್ರಹವಾಗಿದೆ. ಚಿನ್ನದ ಕಾರಕ ಗ್ರಹವು ಗುರು ಗ್ರಹವಾಗಿದೆ. ಹಾಗಾಗಿ ಈ ರಾಶಿಯವರು ಚಿನ್ನವನ್ನು ಧರಿಸುವುದು ಅತ್ಯಂತ ಶುಭವನ್ನುಂಟು ಮಾಡುತ್ತದೆ. ಇದರಿಂದ ಈ ರಾಶಿಯವರಿಗೆ ಯಶಸ್ಸು (Success) ಸಿಗುವುದಲ್ಲದೆ ಧನ ಲಾಭ (Money Profit) ಉಂಟಾಗುತ್ತದೆ. 

ಈ ರಾಶಿಯವರಿಗೆ ಚಿನ್ನ ಧಾರಣೆ ಅಷ್ಟು ಶುಭವಲ್ಲ: 
ಜ್ಯೋತಿಷ್ಯಶಾಸ್ತ್ರದ ಅನುಸಾರ ಮಿಥುನ, ವೃಷಭ, ವೃಶ್ಚಿಕ ಮತ್ತು ಕುಂಭ ರಾಶಿಯ (Gemini, Taurus, Scorpio and Aquarius) ವ್ಯಕ್ತಿಗಳು ಚಿನ್ನ ಧರಿಸುವುದು ಶುಭವಲ್ಲ ಎಂದು ಹೇಳಲಾಗುತ್ತದೆ. ಇದರಿಂದ ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ. ತುಲಾ ಮತ್ತು ಮಕರ ರಾಶಿಯವರು (Libra and Capricorn) ಸಹ ಹಚ್ಚು ಪ್ರಮಾಣದಲ್ಲಿ ಬಂಗಾರ ಧರಿಸುವುದು ಒಳ್ಳೆಯದಲ್ಲ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಇದನ್ನು ಓದಿ: Jaya Ekadshi: ಜಯ ಏಕಾದಶಿ ವ್ರತ ಮಾಡಿ, ಇರೋ ಬರೋ ದೋಷಗಳಿಂದ ಮುಕ್ತರಾಗಿ!

ಶಾಸ್ತ್ರದ ಪ್ರಕಾರ ಲೋಹ ಮತ್ತು ಕಲ್ಲಿದ್ದಲು ವ್ಯಾಪಾರಿಗಳು ಚಿನ್ನವನ್ನು ಧರಿಸುವುದು ಉತ್ತಮವಲ್ಲ. ಈ ವ್ಯಾಪಾರಗಳು ಶನಿ ಗ್ರಹದ ಮೇಲೆ ಅವಲಂಬಿತವಾಗಿರುತ್ತವೆ. ಶನಿ ಮತ್ತು ಗುರು ಗ್ರಹದ ಸಂಬಂಧ ಅಷ್ಟಾಗಿ ಚೆನ್ನಾಗಿ ಇರುವುದಿಲ್ಲ. ಹಾಗಾಗಿ ಈ ವ್ಯಾಪಾರಿಗಳು (Businessman) ಚಿನ್ನವನ್ನು ಧರಿಸುವುದು ನಷ್ಟಕ್ಕೆ (Loss) ಕಾರಣವಾಗಬಹುದು. ಜಾತಕದಲ್ಲಿ ಗುರು ಗ್ರಹ ನೀಚ ಸ್ಥಿತಿಯಲ್ಲಿ ಇದ್ದಾಗ ಚಿನ್ನವನ್ನು ಧರಿಸುವುದರಿಂದ ಗುರು ಗ್ರಹದ ಸ್ಥಿತಿ ಬಲಗೊಳ್ಳುತ್ತದೆ.

Latest Videos
Follow Us:
Download App:
  • android
  • ios