Asianet Suvarna News Asianet Suvarna News

Astro Money: ಚಿಕ್ಕ ವಯಸ್ಸಲ್ಲೇ ಹಣವಂತರಾಗುವ 5 ರಾಶಿಯವರು ಯಾರು?

ಕೆಲವರಿಗೆ ಹುಟ್ಟಿನಿಂದಲೇ ಅದೃಷ್ಟ ಬಂದಿರುತ್ತದೆ. ಇದು ಅವರು ಹುಟ್ಟಿದ ಘಳಿಗೆಯಿಂದ ಬಂದಿರುವುದಾಗಿರುತ್ತದೆ. ಹಾಗಾಗಿ ಇವರಿಗೆ ದೇವರ ಕೃಪೆ ಚೆನ್ನಾಗಿದ್ದು, ಮುಟ್ಟಿದ ಕೆಲಸಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದಾಗಿದೆ. ಈ ಐದು ರಾಶಿಯ ವ್ಯಕ್ತಿಗಳು ಚಿಕ್ಕಂದಿನಿಂದಲೇ ಅದೃಷ್ಟವಂತರಾಗಿದ್ದು, ಯಾರೆಂದು ನೋಡೋಣ...

Aries Cancer Taurus Zodiac signs people mint money soon in life
Author
Bangalore, First Published Feb 20, 2022, 6:47 PM IST | Last Updated Feb 20, 2022, 6:47 PM IST

ಒಬ್ಬ ವ್ಯಕ್ತಿಯ ಭವಿಷ್ಯ (Future), ಗುಣ, ಸ್ವಭಾವಗಳು (Nature) ಹೇಗೆ..? ಓದಿನಲ್ಲಿ ಹೇಗಿರುತ್ತಾರೆ..? ಉದ್ಯೋಗ (Job) ಭಾಗ್ಯ ಹೇಗಿದೆ..? ವಿವಾಹ (Marriage), ಸಂತಾನ ಯೋಗದ ಜೊತೆಗೆ ಅವರ ಅದೃಷ್ಟ (Luck) ಹೇಗಿರಲಿದೆ..? ಆರ್ಥಿಕವಾಗಿ (Economically) ಯಾವ ಏಳ್ಗೆಯನ್ನು ಸಾಧಿಸುತ್ತಾರೆ ಎಂಬ ಬಗ್ಗೆ ಮೊದಲೇ ತಿಳಿದುಕೊಳ್ಳಲು ಜ್ಯೋತಿಷ್ಯ ಶಾಸ್ತ್ರ (Astrology) ಸಹಾಯ ಮಾಡುತ್ತದೆ. ಅಂದರೆ, ವ್ಯಕ್ತಿಯ ಜಾತಕದ ಮೂಲಕ ಈ ಎಲ್ಲ ಅಂಶಗಳನ್ನು ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿ ಹುಟ್ಟಿದ ಘಳಿಗೆ (Time), ರಾಶಿ (Zodiac), ನಕ್ಷತ್ರಗಳಿಂದ (Star) ಜಾತಕವನ್ನು (Horoscope) ರಚಿಸುತ್ತಾರೆ. ಈ ಜಾತಕದ ಆಧಾರದ ಮೇಲೆ ವ್ಯಕ್ತಿಯು ಹಣವಂತನಾಗುವನೋ ಇಲ್ಲವೋ? ವೈಭವಯುತ ಜೀವನ (Luxury Life)  ನಡೆಸಬಲ್ಲರೇ ಎಂಬ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. 

ಜಾತಕದಲ್ಲಿ ಗ್ರಹಗಳ ಸ್ಥಾನ, ಸ್ಥಿತಿಯನ್ನು ತಿಳಿದುಕೊಳ್ಳುವುದರ ಜೊತೆಗೆ ರಾಶಿ ಮತ್ತು ರಾಶಿಯ ಅಧಿಪತಿ ಗ್ರಹವನ್ನು ತಿಳಿದು ಭವಿಷ್ಯದ ಲೆಕ್ಕಾಚಾರವನ್ನು ಹಾಕಲಾಗುತ್ತದೆ. ರಾಶಿಗಳಿಗೆ ಅನುಸಾರವಾಗಿ ನೋಡುವುದಾದರೆ ಕೆಲವು ರಾಶಿಯವರು ಬುದ್ಧಿವಂತರಾಗಿದ್ದರೆ (Clever), ಮತ್ತೆ ಕೆಲವರು ವಾಗ್ಮಿಗಳು, ಚತುರರು, ಮತ್ತಷ್ಟು ಮಂದಿ ಅದೃಷ್ಟವಂತರಾಗಿರುತ್ತಾರೆ. ಹೀಗೆ ಅವರವರ ಹುಟ್ಟಿದ ಸಂದರ್ಭಕ್ಕನುಸಾರವಾಗಿ ಮತ್ತೆ ಕೆಲವು ರಾಶಿಯವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ರಾಶಿಯ ಅಧಿಪತಿ ಗ್ರಹವು ಶುಭವಾಗಿದ್ದು, ಸಂಪತ್ತು ಮತ್ತು ವೈಭವಕ್ಕೆ ಕಾರಕವಾಗಿದ್ದರೆ ಆ ವ್ಯಕ್ತಿಗಳು ಭಾಗ್ಯಶಾಲಿಗಳಾಗುತ್ತಾರೆ. 

ಕೆಲವು ರಾಶಿಯವರು ಚಿಕ್ಕ ವಯಸ್ಸಿನಲ್ಲಿಯೇ ಹಣವಂತರಾಗುವ ಅದೃಷ್ಟವನ್ನು ಹೊಂದಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ್ಯಾವ ರಾಶಿಯವರು ಚಿಕ್ಕ ವಯಸ್ಸಿನಲ್ಲಿಯೇ ಹಣವಂತರಾಗುತ್ತಾರೆ ಎಂಬುದನ್ನು ನೋಡೋಣ... 

ಮೇಷ ರಾಶಿ (Aries)
ಮಂಗಳ ಗ್ರಹವು (Mars) ಮೇಷರಾಶಿಗೆ ಅಧಿಪತಿ ಗ್ರಹವಾಗಿದೆ. ಈ ರಾಶಿಯವರಿಗೆ ಧನಸಂಪತ್ತನ್ನು ಹೊಂದುವ ಛಲ ಉಳಿದವರಿಗಿಂತ ತುಸು ಹೆಚ್ಚೇ ಇದೆ. ಇವರ ಈ ಹಂಬಲಕ್ಕೆ ಅದೃಷ್ಟವೂ ಜೊತೆಯಾಗಿರಲಿದೆ. ಇವರು ಯಾವುದೇ ಕೆಲಸದಕ್ಕೆ ಕೈ ಹಾಕಿದರೂ ಯಶ ಸಾಧಿಸುತ್ತಾರೆ. ಹಣ (Money) ಸಂಪಾದಿಸುವ ಅವಕಾಶ ಯಾವಾಗಲೂ ಇವರ ಜೊತೆಗೇ ಇರುವ ಕಾರಣ ಜೀವನದಲ್ಲಿ ಸದಾ ಸುಖ ಮತ್ತು ಸಮೃದ್ಧಿಯನ್ನು (Happiness and prosperity) ಕಾಣುತ್ತಾರೆ. ಹಾಗಾಗಿ ಇವರು ನೆಮ್ಮದಿಯ ಜೀವನವನ್ನು ನಡೆಸುತ್ತಾರೆ. 

ಇದನ್ನು ಓದಿ : Relationship Tips: ಹೀಗಿದ್ದರೆ ಸತಿ ಪತಿ, ಸಂಬಂಧ ಅಧೋಗತಿ; ಇದು ಚಾಣಕ್ಯ ನೀತಿ

ವೃಷಭ ರಾಶಿ (Taurus)
ಶುಕ್ರ ಗ್ರಹವು (Planet Venus) ವೃಷಭ ರಾಶಿಗೆ ಅಧಿಪತಿ ಗ್ರಹವಾಗಿದೆ. ಹೀಗಾಗಿ ಈ ರಾಶಿಯವರು ಸುಖ, ಸಂಪತ್ತನ್ನು ಹೊಂದುವುದಲ್ಲದೆ, ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಹಾಗಾಗಿ ಈ ರಾಶಿಯವರು ಧನವಂತರೂ, ಭಾಗ್ಯಶಾಲಿಗಳೂ ಆಗಿರುತ್ತಾರೆ. ಈ ರಾಶಿಯರಿಗೆ ಅದೃಷ್ಟ ಯಾವಾಗಲೂ ಜೊತೆಗಿರುವ ಕಾರಣ ಉತ್ತಮ ಉದ್ಯೋಗ ಮತ್ತು ಗೌರವಾದರಗಳು ದೊರೆಯುತ್ತವೆ.

ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರು ತುಂಬಾ ಕಡಿಮೆ ವಯಸ್ಸಿನಲ್ಲೇ ಹಣವಂತರಾಗುತ್ತಾರೆ. ಇವರು ಬಹಳ ಪರಿಶ್ರಮಿಗಳು. ಯಾವುದೇ ಕೆಲಸವಾದರೂ (Work) ಅಚ್ಚುಕಟ್ಟಾಗಿ ನಿರ್ವಹಿಸುವುದು ಇವರ ಗುಣ. ಕೆಲಸದಲ್ಲಿ ಅಷ್ಟರಮಟ್ಟಿಗೆ ಶ್ರದ್ಧೆವಹಿಸಿ ಕೆಲಸ ಮಾಡುತ್ತಾರೆ. ಇವರಿಗೆ ಭಾಗ್ಯದ ಬಾಗಿಲು ಯಾವಾಗಲೂ ತೆರೆದಿರುತ್ತದೆ.. 

ಸಿಂಹ ರಾಶಿ (Leo)
ಸಿಂಹ ರಾಶಿಯ ಅಧಿಪತಿ ಗ್ರಹ ಸೂರ್ಯನಾಗಿದ್ದಾನೆ (Sun). ಹೀಗಾಗಿ ಸೂರ್ಯನ ಕೃಪೆ ಇವರಿಗೆ ಸದಾ ಇರುತ್ತದೆ. ಹೀಗಾಗಿ ಈ ರಾಶಿಯವರು ಅದೃಷ್ಟ ಮತ್ತು ಪರಿಶ್ರಮದಿಂದ ಉತ್ತಮ ಜೀವನವನ್ನು ಹೊಂದುತ್ತಾರೆ. ಕಿರಿಯ ವಯಸ್ಸಿನಲ್ಲೇ (Young Age) ಸಿರಿವಂತರಾಗುವ ಭಾಗ್ಯ ಈ ರಾಶಿಯವರಿಗಿದೆ. ಐಷಾರಾಮಿ ವಸ್ತುಗಳೆಂದರೆ ಇವರಿಗೆ ಬಹಳ ಇಷ್ಟ. ವೈಭವಯುತ ಜೀವನ ಇವರದ್ದಾಗಿರುತ್ತದೆ. 

ಇದನ್ನು ಓದಿ : Aries Character Traits: ಮೇಷ ರಾಶಿಯ ಹುಡುಗ ನಿಮ್ಮವನಾದರೆ ಅವನ ಕುರಿತ ಈ 9 ವಿಷಯಗಳು ತಿಳಿದಿರಲಿ..

ಧನು ರಾಶಿ (Sagittarius)
ಗುರು ಗ್ರಹವು (Jupiter) ಧನುರಾಶಿಯ ಅಧಿಪತಿ ಗ್ರಹವಾಗಿದೆ. ಹೀಗಾಗಿ ಇವರಿಗೆ ಬುದ್ಧಿವಂತಿಗೆ ಜಾಸ್ತಿ. ಧನು ರಾಶಿಯ ವ್ಯಕ್ತಿಗಳು ಭಾಗ್ಯಶಾಲಿಗಳಾಗಿದ್ದಾರೆ. ಇವರ ಪಾಲಿಗೆ ಅದೃಷ್ಟವು ಉತ್ತಮವಾಗಿದ್ದು, ಸಂಪತ್ತನ್ನು ತಂದುಕೊಡಲಿದೆ. ಐಷಾರಾಮಿ ಜೀವನ ಮತ್ತು ಧನ ಸಮೃದ್ಧಿಯನ್ನು ಪಡೆಯುವ ಯೋಗ ಇವರಿಗೆ ಪ್ರಾಪ್ತವಾಗುತ್ತದೆ. ಧನು ರಾಶಿಯವರಿಗೆ ಲಕ್ಷ್ಮೀ ಕೃಪೆ (Goddess) ಇದ್ದು, ಸುಖ ಜೀವನವನ್ನು ಪ್ರಾಪ್ತಿಯಾಗುತ್ತದೆ. 

Latest Videos
Follow Us:
Download App:
  • android
  • ios