Relationship Tips: ಹೀಗಿದ್ದರೆ ಸತಿ ಪತಿ, ಸಂಬಂಧ ಅಧೋಗತಿ; ಇದು ಚಾಣಕ್ಯ ನೀತಿ
ಚಾಣಕ್ಯರ ನೀತಿ ಶಾಸ್ತ್ರದಲ್ಲಿ ಗಂಡ ಹೆಂಡತಿಯರ ನಡುವೆ ಮನಸ್ತಾಪ ತರುವ ನಾಲ್ಕು ಕಾರ್ಯಗಳ ಬಗ್ಗೆ ವಿವರಿಸಲಾಗಿದೆ. ಹಾಗಾದರೆ ಅವು ಯಾವುವು, ಅವುಗಳಿಂದ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ ಎಂಬುದನ್ನು ತಿಳಿಯೋಣ.
ಮಹಾನ್ ಅರ್ಥಶಾಸ್ತ್ರಜ್ಞ (Economist) ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ಧನ (Money), ಸಂಪತ್ತು (Wealth), ಸ್ತ್ರೀ (Women), ಉದ್ಯೋಗ (Job) ಮತ್ತು ದಾಂಪತ್ಯ ಜೀವನಕ್ಕೆ (Married life) ಸಂಬಂಧಿಸಿದ ಅನೇಕ ವಿಚಾರಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
ಚಾಣಕ್ಯರು ತಮ್ಮ ನೀತಿಶಾಸ್ತ್ರಗಳಿಂದ ಸಮಾಜಕ್ಕೆ ಉತ್ತಮ ಮಾರ್ಗದರ್ಶನ (Guidance) ನೀಡಿದ್ದಾರೆ. ಚಾಣಕ್ಯರ (Chanakya) ಮಾರ್ಗದರ್ಶನದಂತೆ ನಡೆದವರು ತಮ್ಮ ಜೀವನದಲ್ಲಿ ಸುಖ, ಸಂತೋಷ ಮತ್ತು ಯಶಸ್ಸನ್ನು (Success) ಪಡೆಯುತ್ತಾರೆ.
ಅಷ್ಟೇ ಅಲ್ಲದೆ ಚಾಣಕ್ಯ ಪತಿ - ಪತ್ನಿಯರು ಹೇಗಿರಬೇಕೆಂಬ ಬಗ್ಗೆ ಹಲವು ಟಿಪ್ಸ್ ಗಳನ್ನು ಕೊಟ್ಟಿದ್ದಾರೆ. ಗಂಡ ಹಾಗೂ ಹೆಂಡತಿ ನಡುವೆ ಯಾವೆಲ್ಲ ವಿಷಯಗಳ ಬರಬೇಕು? ಯಾವೆಲ್ಲ ಅಂಶಗಳು ಬರಬಾರದು? ಒಬ್ಬರಿಗೊಬ್ಬರು ಹೇಗೆ ಇರಬೇಕು? ಪರಸ್ಪರ ಹೇಗೆ ಅರ್ಥ ಮಾಡಿಕೊಳ್ಳಬೇಕು? ನಂಬಿಕೆಯನ್ನು ಹೇಗಿಟ್ಟುಕೊಳ್ಳಬೇಕು? ಸಂಬಂಧ ಗಟ್ಟಿಯಾಗಿರಲು ಏನು ಮಾಡಬೇಕು ಎಂಬಿತ್ಯಾದಿ ಅಂಶಗಳನ್ನು ಬಹಳ ಸರಳವಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಯಾವುದೇ ಗಂಡಹೆಂಡತಿಯರು ನಡೆದುಕೊಂಡರೂ ಅವರು ಸುಖವಾಗಿ ಬಾಳ್ವೆ ನಡೆಸಬಹುದಾಗಿದೆ. ಅದೇ ಕೆಲವು ಅಂಶಗಳು ಅವರ ಮಧ್ಯೆ ಬಂತು ಎಂದಾದರೆ ಅವರ ವೈವಾಹಿಕ ಸಂಬಂಧ ಮುರಿದು ಬೀಳುವುದು ಗ್ಯಾರಂಟಿ ಎನ್ನುವ ಮಾತನ್ನು ಸಹ ಅವರು ಹೇಳಿದ್ದಾರೆ.
ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಪತಿ (Husband) ಮತ್ತು ಪತ್ನಿಯ (Wife) ಸಂಬಂಧದಲ್ಲಿ ವೈವಾಹಿಕ ಜೀವನವನ್ನು ನಾಶಪಡಿಸುವ (Ruin) ಕೆಲವು ಅಂಶಗಳನ್ನು ತಿಳಿಸಿದ್ದಾರೆ. ಸಂಬಂಧಗಳನ್ನು ನಾಶ ಮಾಡುವ ಈ ಕೆಲವು ಅಂಶಗಳು ಸ್ಲೋ ಪಾಯಿಸನ್ ಇದ್ದ ಹಾಗೆ ಎಂದು ಹೇಳುತ್ತಾರೆ. ಮುಖ್ಯವಾದ ಅಂಶಗಳು ಯಾವುವು ಎಂಬುದನ್ನು ತಿಳಿಯೋಣ.
ಇದನ್ನು ಓದಿ: Vastu Tips: ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡುವ ವಾಸ್ತುದೋಷ!
ಅಹಂಕಾರ (Ego) : ಅಹಂಕಾರವು ಸಂಬಂಧ ಮತ್ತು ನಡುವಿನ ಬಾಂಧವ್ಯವನ್ನು ಕಡಿಮೆ ಮಾಡುತ್ತಾ ಬರುತ್ತದೆ. ಗಂಡ ಮತ್ತು ಹೆಂಡತಿಯ ನಡುವೆ ಅಹಂಕಾರ ತಲೆದೋರಿದಾಗ ನಡುವಿನ ಅಂತರ ಹೆಚ್ಚುತ್ತಾ ಹೋಗುತ್ತದೆ. ಚಾಣಕ್ಯ ನೀತಿ ಪ್ರಕಾರ ಗಂಡ ಮತ್ತು ಹೆಂಡತಿ ಇಬ್ಬರೂ ಸಮಾನರು. ಹಾಗಾಗಿ ಈ ಸಂಬಂಧದಲ್ಲಿ ಅಹಂಕಾರಕ್ಕೆ ಜಾಗವಿರಬಾರದು. ಈ ಸಂಬಂಧದ ನಡುವೆ ಒಮ್ಮೆ ಅಹಂಕಾರ ಬಂದರೆ ಅದು ಎದುರಿನವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ಇದು ಗಂಡ ಹೆಂಡತಿಯ ಸಂಬಂಧವನ್ನೇ ಹಾಳು ಮಾಡಿಬಿಡುತ್ತದೆ. ಹಾಗಾಗಿ ಪತಿ ಪತ್ನಿಯರ ಸಂಬಂಧವೇ ಮುರಿದು ಬೀಳುವ ಸಾಧ್ಯತೆ ಹೆಚ್ಚುತ್ತದೆ.
ಭ್ರಮೆ ಮತ್ತು ಅನುಮಾನಗಳಿಗೆ (Hallucination and Doubt) ಯಾವುದೇ ಔಷಧಿಯಿಲ್ಲ (Medicine) : ಚಾಣಕ್ಯ ನೀತಿ ಶಾಸ್ತ್ರದ ಪ್ರಕಾರ ಪತಿ ಪತ್ನಿಯರ ನಡುವೆ ಅನುಮಾನಕ್ಕೆ ಯಾವುದೇ ಜಾಗವಿರಬಾರದು. ಅನುಮಾನವೂ ಸಂಬಂಧವನ್ನು ಹಾಳು ಮಾಡುತ್ತದೆ. ಒಮ್ಮೆ ಸಂಬಂಧದಲ್ಲಿ ಅನುಮಾನ ಮತ್ತು ತಪ್ಪು ತಿಳಿವಳಿಕೆ ಬಂದರೆ ಅದು ಸಂಬಂಧವು ಮುಕ್ತಾಯಗೊಳ್ಳಲು ನಾಂದಿಯಾಗುತ್ತದೆ. ಇದು ವಿಚ್ಛೇದನದಲ್ಲಿ (Divorce) ಕೊನೆಗೊಳ್ಳುತ್ತದೆ. ಹಾಗಾಗಿ ಪತಿ ಪತ್ನಿಯರ ನಡುವೆ ಯಾವುದೇ ಅನುಮಾನಗಳು ಇರಬಾರದು.
ಇದನ್ನು ಓದಿ: Astro Planet: ಸಾಲ, ಉದ್ಯೋಗ ಹಿನ್ನಡೆ, ಚರ್ಮರೋಗಕ್ಕೆ ಕಾರಣ ಈ ಗ್ರಹ!
ಸುಳ್ಳಿನ ಮೇಲೆ ಸಂಬಂಧ ನಿಲ್ಲುವುದಿಲ್ಲ (Lie) : ಚಾಣಕ್ಯನ ನೀತಿ ಶಾಸ್ತ್ರದ ಪ್ರಕಾರ ಯಾವುದೇ ಸಂಬಂಧವೂ ಸುಳ್ಳಿನ ಮೇಲೆ ಹೆಚ್ಚು ದಿನ ನಡೆಯುವುದಿಲ್ಲ. ಹಾಗೆ ಸುಳ್ಳಿನಲಿ ಆರಂಭವಾದ ಸಂಬಂಧದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಬರುತ್ತವೆ. ಹಾಗಾಗಿ ಪತಿ ಪತ್ನಿಯರ ನಡುವೆ ಸುಳ್ಳಿಗೆ ಅವಕಾಶ ಕೊಡಬಾರದು.
ಗೌರವ ಮತ್ತು ಆತಿಥ್ಯದ ಕೊರತೆ (Respect) : ಪತಿ ಪತ್ನಿಯರು ಪರಸ್ಪರ ಗೌರವ ಆದರಗಳಿಂದ ಬದುಕಬೇಕು. ಪತ್ನಿಯಾದವಳು ಪತಿಯನ್ನು ಗೌರವಿಸಬೇಕು ಆಧರಿಸಬೇಕು. ಪತಿಯ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹಾಗೆಯೇ ಪತಿಯಾದವನು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಭಾವನೆಗಳಿಗೆ (Feelings) ಬೆಲೆ ನೀಡಬೇಕು. ಹಾಗಾಗಿ ಗಂಡ ಹೆಂಡತಿ ಪರಸ್ಪರ ಗೌರವಯುತವಾಗಿ ನಡೆಸಿಕೊಳ್ಳಬೇಕು.