ಪೋಷಕರು-ಮಕ್ಕಳು ಹಾವು ಮುಂಗುಸಿ ಥರ ಕಿತ್ತಾಡೋದಕ್ಕೆ ಜಾತಕ ಕಾರಣವಾ?

ಹೆತ್ತವರು ಹಾಗೂ ಮಕ್ಕಳ ನಡುವೆ ಮಾರಾಮಾರಿ ನಡೆಯೋದು, ಕಿತ್ತಾಟ, ವೈಷಮ್ಯ ಸೆಲೆಬ್ರಿಟಿಗಳಿಂದ ಸಾಮಾನ್ಯರವರೆಗೂ ನಡೆಯುತ್ತಿರುತ್ತೆ. ಆದರೆ ಇದಕ್ಕೆ ಕಾರಣ ಪೋಷಕರು ಹಾಗೂ ಮಕ್ಕಳ ಜಾತಕ ದೋಷ ಅಂದರೆ ನೀವು ನಂಬ್ತೀರಾ!

Zodiac signs may effect parent kid relationship

ಮಕ್ಕಳು ಹಠ ಹಿಡಿಯುತ್ತಾರೆ. ಕೇಳಿದ್ದು ಕೊಡಿಸುವವರೆಗೂ ಜೀವ ತಿನ್ನುತ್ತಾರೆ. ಸ್ವಲ್ಪ ದೊಡ್ಡವರಾದರೆ ಶಾಲೆಯಲ್ಲಿ ಓದುವುದಿಲ್ಲ ಎಂಬ ದೂರು. ಮನೆಗೆ ಬಂದರೆ ಸದಾ ಜಗಳ. ತುಸು ದೊಡ್ಡದಾಗಿ ಹದಿಹರೆಯದವರಾದರೆ ಹೇಳಿದ ಮಾತು ಮಾತಿಗೆಲ್ಲಾ ಸಿಡುಕು. ಮಾತಿಗೆ ಮಾತು ಬೆಳೆದು ಜಗಳ. ತಂದೆ ತಾಯಿ- ಮಗ ಮಗಳು ಹಾವು ಮುಂಗುಸಿಗಳ ಹಾಗೆ ಸದಾ ಕಚ್ಚಾಡುವುದು. ಇಂಥ ಮನೆಗಳನ್ನು ನೋಡಿದ್ದೀರಿ. ಯಾಕೆ ಹೀಗೆ?

ಈ ಸಮಸ್ಯೆ ಉತ್ತರ ತಂದೆ ತಾಯಿ ಹಾಗೂ ಮಕ್ಕಳ ಜಾತಕದಲ್ಲಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು ನಿಮ್ಮ ರಾಶಿಫಲದಲ್ಲಿ, ನಿಮ್ಮ ಕುಂಡಲಿಯಲ್ಲಿ ಏನೇನು ಹೇಗೆ ಬರೆದಿದೆಯೋ ಹಾಗೇ ನಮ್ಮ ಮಕ್ಕಳ ಹಣೆಬರಹ, ಅವರ ನಡತೆ, ವರ್ತನೆ, ಜಗಳಗಂಟತನ ಅಥವಾ ಸಾಧುಸ್ವಭಾವ ಇವೆಲ್ಲಾ ಇರುತ್ತವೆ. ಇದಕ್ಕೆ ಕಾರಣವಾಗುವ ಗ್ರಹಗಳ ಸ್ಥಿತಿಗತಿ ಹೇಗೆ? ತಿಳಿಯೋಣ ಬನ್ನಿ.

ಯಾವುದೇ ವ್ಯಕ್ತಿಯ ಜೀವನದಲ್ಲಿ ಜನ್ಮ ಜಾತಕ ಬಹಳ ಮುಖ್ಯ. ಜನನ ನಕ್ಷತ್ರ, ಲಗ್ನ ಹಾಗೂ ಲಗ್ನದಿಂದ ಎರಡು, ಐದು, ಏಳು ಮತ್ತು ಒಂಬತ್ತನೇ ಸ್ಥಾನಗಳು ಬಹಳ ಮುಖ್ಯವಾದದ್ದು. ಶುಕ್ರ ಗ್ರಹ ಎಲ್ಲಿ ಸ್ಥಿತವಾಗಿದೆ, ರಾಹು ಹಾಗೂ ಕೇತು ಗ್ರಹದ ಸ್ಥಿತಿ ಹೇಗಿದೆ ಎಂಬುದನ್ನು ಗಮನಿಸಬೇಕು. ಕೆಲವು ನಕ್ಷತ್ರಗಳ ಸ್ವಭಾವವೇ ಹಾಗಿರುತ್ತದೆ. ಆ ನಕ್ಷತ್ರದಲ್ಲಿ ಜನಿಸಿದವರು ಒರಟಾದ, ಮನಸಿಗೆ ನೋವಾಗುವಂಥ ಮಾತುಗಳನ್ನೇ ಹೆಚ್ಚಿಗೆ ಆಡುತ್ತಾರೆ. ಅದರಲ್ಲೂ ಕೃತ್ತಿಕಾ, ಆಶ್ಲೇಷಾ ನಕ್ಷತ್ರದ ಮಕ್ಕಳನ್ನು ಬಹಳ ಜೋಪಾನವಾಗಿ ಬೆಳೆಸಬೇಕು.

ಈ ರಾಶಿಗೆ ಸರ್ವಾರ್ಥ ಸಿದ್ಧಿ ಯೋಗ ಮತ್ತು ಶಿವಯೋಗ, ಮುಟ್ಟಿದ್ದೆಲ್ಲ ಚಿನ್ನ

ಇನ್ನು ಲಗ್ನದಿಂದ ಸ್ವಭಾವವನ್ನು ತಿಳಿಯಬಹುದು ಹಾಗೂ ಎರಡನೇ ಮನೆ ವಾಕ್ ಸ್ಥಾನ ಆಗಿರುತ್ತದೆ. ಮಾತನ್ನು- ಹಣಕಾಸಿನ ಸ್ಥಿತಿಯನ್ನು (economic condition) ಕೂಡ ಇದರಿಂದ ತಿಳಿಯಬಹುದು. ಆದರೆ ಮಾತು ಯಾವ ರೀತಿ ಆಡುತ್ತಾರೆ ಎಂಬುದನ್ನು ಎರಡನೇ ಮನೆಯಿಂದ ಹಾಗೂ ಮಾನಸಿಕ ಸ್ಥಿತಿಯನ್ನು (mental stage) ಚಂದ್ರ ಇರುವ ಸ್ಥಾನದಿಂದ ತಿಳಿಯಬಹುದು. ಐದನೇ ಮನೆ ಪೂರ್ವ ಪುಣ್ಯ ಸ್ಥಾನ ಎನ್ನಲಾಗುತ್ತದೆ. ಹಿಂದಿನ ಜನ್ಮದಲ್ಲಿ ಮಾಡಿದ ಪಾಪ- ಪುಣ್ಯದ ಫಲಾಫಲವನ್ನು ಅಳೆದು, ಕೆಲವು ಮುಖ್ಯ ವಿಚಾರ ಗೊತ್ತಾಗುತ್ತದೆ. ಏಳನೇ ಸ್ಥಾನವು ಕಳತ್ರ ಸ್ಥಾನ. ಹೆಣ್ಣಾದರೆ ಎಂಥ ಗಂಡ ಹಾಗೂ ಗಂಡಾದರೆ ಎಂಥ ಹೆಂಡತಿ ಸಿಗಬಹುದು ಎಂದು ತಿಳಿಯುವ ಸ್ಥಾನ ಇದು. ಒಂಬತ್ತನೇ ಸ್ಥಾನವು ಅದೃಷ್ಟ ಹಾಗೂ ಪಿತೃ ಸ್ಥಾನ. ಯಾವುದೇ ಜಾತಕರ ಅದೃಷ್ಟ(luck) ಕೂಡ ಇಲ್ಲಿ ಮುಖ್ಯವಾಗುತ್ತದೆ.

ಇಷ್ಟೆಲ್ಲ ಆದ ಮೇಲೆ ನವಾಂಶ ಕುಂಡಲಿಯನ್ನು ಸರಿಯಾಗಿ ಪರಿಶೀಲಿಸಬೇಕು. ಅಲ್ಲಿನ ಗ್ರಹ ಸ್ಥಿತಿಯ ಮೂಲಕ ಹಲವು ಸಂಗತಿ ಗೊತ್ತಾಗುತ್ತದೆ. ಕೀರ್ತಿ, ಹಣ (money), ಯಶಸ್ಸು, ಸುಖ ನೀಡುವ ಶುಕ್ರ ಗ್ರಹ ನಿಮ್ಮ ಜಾತಕದಲ್ಲಿ ಹೇಗಿದೆ? ಆಮೇಲೆ ತಂದೆ ತಾಯಿಯ ಜನ್ಮ ಜಾತಕದಲ್ಲಿ ಲಗ್ನದಿಂದ ಐದನೇ ಸ್ಥಾನ ಹೇಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಬೇಕು. ಏಕೆಂದರೆ, ಐದನೇ ಸ್ಥಾನ ಅಂದರೆ ಮಕ್ಕಳ ಬಗ್ಗೆ ತಿಳಿಸಿಕೊಡುವ ಸ್ಥಾನ. ಕೆಲವರಿಗೆ ಮಕ್ಕಳಿಂದ ದುಃಖ ಪಡುವ ಯೋಗ ಇರುತ್ತದೆ. ತಂದೆ- ತಾಯಿಯ ಜಾತಕದಲ್ಲಿ ದೋಷ (problem) ಇದ್ದರೂ ಅದರ ಫಲಿತವನ್ನು ಮಕ್ಕಳು ಅನುಭವಿಸುತ್ತಾರೆ. ಆದ್ದರಿಂದ ಮಕ್ಕಳು ಹಾಗೂ ತಂದೆ- ತಾಯಿ ಜಾತಕಗಳನ್ನು ಸಹ ಪರೀಕ್ಷಿಸಿ, ಆ ನಂತರ ಅಗತ್ಯ ಇದ್ದಲ್ಲಿ ಪರಿಹಾರ ಮಾಡಿಸಿಕೊಳ್ಳಬೇಕು. ಕೆಲವು ಬಾರಿ ಗೋಚಾರ ಅಥವಾ ದಶಾ- ಭುಕ್ತಿಯ ಕಾರಣಕ್ಕೆ ಸಮಸ್ಯೆ ಉದ್ಭವಿಸಿ, ಆ ನಂತರ ಅದು ನಿವಾರಣೆ ಆಗುತ್ತದೆ.

ಹಿತವಾದ ವೈಬ್ರೇಷನ್‌ ಮೂಡಿಸೋ ಜನರ ಒಡನಾಟ ಬೇಕು ಅಂತೀರಾ? ಈ ರಾಶಿಗಳ ಜನರೊಂದಿಗೆ ಇದ್ಬಿಡಿ!

Latest Videos
Follow Us:
Download App:
  • android
  • ios