ಶೀಘ್ರದಲ್ಲೇ ಅಮರನಾಥ ಯಾತ್ರೆ ಪ್ರಾರಂಭ; ಮಂಜಲ್ಲಿ ಕಾಣಿಸಿಕೊಳ್ಳೋ ಭೋಲೇನಾಥ

ಎಲ್ಲಾ ವರ್ಗಗಳ ಶಿವ ಭಕ್ತರ ಸಾಗರವನ್ನು ಕಾಣುವ ವಾರ್ಷಿಕ ಅಮರನಾಥ ಯಾತ್ರೆ 2022 ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಯಾತ್ರೆ ಹೋಗಲಿಚ್ಚಿಸುವವರು ತಿಳಿದಿರಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ. 

Amarnath Yatra 2022 start date Check out the details of the annual pilgrimage skr

ಎಲ್ಲ ವರ್ಗಗಳ ಶಿವ ಭಕ್ತರನ್ನು ಕಾಣುವ ವಾರ್ಷಿಕ ಅಮರನಾಥ ಯಾತ್ರೆ(Amarnath Yatra) 2022 ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಈ ವರ್ಷ, ಯಾತ್ರೆಯು ಜೂನ್ 30ರಂದು ಪ್ರಾರಂಭವಾಗಿ ಆಗಸ್ಟ್ 11ರಂದು ಮುಕ್ತಾಯಗೊಳ್ಳಲಿದೆ. ಈ ಯಾತ್ರೆ ಸಂಬಂಧ ಜಮ್ಮು ಮತ್ತು ಕಾಶ್ಮೀರ(Jammu Kashmir) ಸರ್ಕಾರವು ತೀರ್ಥಯಾತ್ರೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಇದರಿಂದಾಗಿ ಮಂಜಿನಿಂದ ಮುಸುಕಿರುವ ಶಿವ(Lord Shiva)ನ ಪವಿತ್ರ ದೇಗುಲಕ್ಕೆ ಭೇಟಿ ನೀಡಲು ಬಯಸುವ ಭಕ್ತರು ಅದಕ್ಕೆ ಮುಂಚಿತವಾಗಿ ಸಿದ್ಧರಾಗಬಹುದು.

ಅಮರನಾಥ ಯಾತ್ರೆ ಹೋಗ ಬಯಸುವ ಯಾತ್ರಿಕರು ತಮ್ಮ ಆಧಾರ್ ಕಾರ್ಡ್(Adhar Card) ಅನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಾಗುತ್ತದೆ, ವಿಫಲವಾದರೆ ಅವರಿಗೆ ಯಾತ್ರೆಗೆ ಹೋಗಲು ಅನುಮತಿ ಇಲ್ಲ.  ಸುರಕ್ಷತೆಯ ದೃಷ್ಟಿಯಿಂದ 14- 74 ವಯೋಮಾನದ ಯಾತ್ರಿಕರಿಗೆ ಮಾತ್ರ ಪ್ರವೇಶ. ಜೊತೆಗೆ, 6 ತಿಂಗಳು ದಾಟಿದ ಗರ್ಭಿಣಿಯರಿಗೆ ಕೂಡಾ ಪ್ರವೇಶವಿಲ್ಲ.

ಅಮರನಾಥ ಯಾತ್ರೆ
ದೇವರು ಅಮರನಾಗಿ ಮಂಜಿನ ರೂಪದಲ್ಲಿ ವಾಸಿಸುವ ಗುಹೆಯೇ ಅಮರನಾಥ ಗುಹೆ. ಇಲ್ಲಿ ಶಿವಲಿಂಗವು ಮಂಜಿನ ರೂಪದಲ್ಲಿ ವರ್ಷದ ಕೆಲ ತಿಂಗಳ ಕಾಲ ದರ್ಶನ ಕೊಡುತ್ತದೆ. ಮತ್ತೆ ಬೇಸಿಗೆಯಲ್ಲಿ ಕರಗಿದರೂ ಚಳಿಯ ಸಮಯದಲ್ಲಿ ಘನೀಭವಿಸಿ ಲಿಂಗರೂಪವನ್ನು ಕಾಣಬಹುದು. ಈ ಮಂಜಿನ ಶಿವಲಿಂಗಕ್ಕೆ 5000ಕ್ಕೂ ಹೆಚ್ಚಿನ ಇತಿಹಾಸವಿದೆ. ಪುರಾಣ(Mythology)ದಲ್ಲಿ ದೇವತೆಗಳು ಮೃತ್ಯುವಿನ ವಶದಲ್ಲಿದ್ದಾಗ ಅವರನ್ನು ಅಮರನಾಗಿಸಲು ಶಿವನು ಇಲ್ಲಿ ಈ ರೂಪ ಪಡೆದನೆಂಬ ಕತೆಯಿದೆ. ಅಲ್ಲದೆ, ಯಾವುದೇ ರೀತಿಯ ಪಾಪ ಮಾಡಿದವರು ಇಲ್ಲಿನ ಅಮರನಾಥನ ದರ್ಶನ ಮಾಡಿದರೆ ಅವರು ಪಾಪದಿಂದ ಮುಕ್ತರಾಗುವ ಬಗ್ಗೆ ಸ್ವತಃ ಶಿವನೇ ಹೇಳಿದ್ದಾನೆ. ಇದು ಹಿಮದ ಶಿವವಾದ್ದರಿಂದ ಇದಕ್ಕೆ ಬಾಬಾ ಬರ್ಫಾನಿ ಎಂಬ ಹೆಸರೂ ಇದೆ. 

Vijayapura: ನಾಲ್ವತವಾಡದಲ್ಲಿ ವರುಣ ಕೃಪೆಗಾಗಿ ಮಕ್ಕಳಿಗೆ ಮದುವೆ!

ಆಸಕ್ತಿಕರ ವಿಷಯವೆಂದರೆ, ಪಾರ್ವತಿ ದೇವಿ(Parvathi Devi) ಮತ್ತು ಗಣೇಶನ ಮಂಜುಗಡ್ಡೆಗಳ ರೂಪವನ್ನು ಸಹ ಇಲ್ಲಿ ಕಾಣಬಹುದು. ಇದಲ್ಲದೆ, ಅಮರನಾಥ ಒಂದು ಶಕ್ತಿ ಪೀಠ ಕೂಡ ಆಗಿದೆ. ಮಾತಾ ಸತಿಯ ಗಂಟಲು ಮತ್ತು ಕಾಲುಂಗುರ ಬಿದ್ದ ಸ್ಥಳ ಇದು. ಆದ್ದರಿಂದ, ದುರ್ಗಾ ದೇವಿಯ ಭಕ್ತರಿಗೆ ಈ ಸ್ಥಳ ಬಹಳ ಮಹತ್ವದ್ದಾಗಿದೆ. ಮೇಲಾಗಿ, ಶಿವನು ಪಾರ್ವತಿ ದೇವಿಗೆ ಜೀವನ ಮತ್ತು ಅಮರತ್ವದ ಮೂಲಭೂತ ಸಾರವನ್ನು ವಿವರಿಸಿದ ಸ್ಥಳ ಎಂದು ನಂಬಲಾಗಿದೆ.

ಕಠಿಣ ಯಾತ್ರೆ
ಅಮರನಾಥ ಗುಹೆಯು ಸುಮಾರು 40 ಮೀ (130 ಅಡಿ) ಎತ್ತರದಲ್ಲಿದೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 3,880 ಮೀ (ಸುಮಾರು 12,750 ಅಡಿ) ಎತ್ತರದಲ್ಲಿದೆ. ಈ ಯಾತ್ರೆಯು ಇತರ ಪವಿತ್ರ ಸ್ಥಳಗಳನ್ನು ಸಹ ಒಳಗೊಂಡಿದೆ. ಭಗವಾನ್ ಶಿವನು ತನ್ನ ನಂದಿ(Nandi)ಯನ್ನು ಇಲ್ಲಿನ ಬೈಲ್ ಗಾಂವ್ ಅಂದರೆ ಈಗ ಪಹಲ್ಗಾಮ್ ಎಂದು ಕರೆಸಿಕೊಳ್ಳವಲ್ಲಿ ಬಿಟ್ಟಿದ್ದಾನೆ ಎಂಬ ನಂಬಿಕೆ ಇದೆ. ಹತ್ತಿರದ ಚಂದನ್ವಾರಿಯಲ್ಲಿ, ಶಿವನು ತನ್ನ ಜಡೆಯಿಂದ ಅರ್ಧಚಂದ್ರಾಕಾರವನ್ನು ಬಿಡುಗಡೆ ಮಾಡಿದ ಮತ್ತು ಶೇಷ್ ನಾಗ್‌ನಲ್ಲಿ ತಮ್ಮ ಕತ್ತಿನಲ್ಲಿದ್ದ ನಾಗನನ್ನು ಬಿಟ್ಟ. ಮತ್ತು ಮಗ ಗಣೇಶನನ್ನು ಇಲ್ಲಿಯೇ ಹತ್ತಿರದಲ್ಲಿರುವ ಮಹಾಗುಣ ಪರ್ವತದಲ್ಲಿ ಸರೋವರದ ದಡದಲ್ಲಿ ಬಿಟ್ಟಿದ್ದಾನೆಂಬ ನಂಬಿಕೆ ಇದೆ. ಮತ್ತು ಪಂಚತಾರ್ಣಿಯು ಮಹಾದೇವನು ಅಗ್ನಿ, ಪೃಥ್ವಿ, ಜಲ, ಆಕಾಶ ಮತ್ತು ವಾಯು ಎಂಬ ಐದು ಅಂಶಗಳನ್ನು ಬಿಡುಗಡೆ ಮಾಡಿದ ಸ್ಥಳವಾಗಿದೆ.

ಈ ನಾಲ್ಕು ರಾಶಿಯ ಗಂಡೈಕ್ಳಿಗೆ ಹೆಣ್ಮಕ್ಳು ಬೇಗ ಆಕರ್ಷಿತರಾಗ್ತಾರೆ!

ಕಡಿದಾದ ಹಾದಿ, ವಿಪರೀತ ಮಂಜು, ಎತ್ತರ, ವಾಹನ ಸೌಲಭ್ಯವಿಲ್ಲದ ಕಾರಣದಿಂದ ಇದೊಂದು ಅತ್ಯಂತ ಕಠಿಣ ಯಾತ್ರೆಯಾಗಿದ್ದು, ಹಾಗಿದ್ದೂ ಪ್ರತಿ ವರ್ಷ 2ರಿಂದ 6 ಲಕ್ಷ ಯಾತ್ರಿಕರು ಇಲ್ಲಿ ಭೋಲೇನಾಥನ ದರ್ಶನ ಮಾಡಿ ಪುನೀತರಾಗುತ್ತಾರೆ. ಜುಲೈ ಹಾಗು ಅಗಸ್ಟ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

Latest Videos
Follow Us:
Download App:
  • android
  • ios