Kalaburagi: ಸೌಹಾರ್ದಯುತವಾಗಿ ಯುಗಾದಿ ಆಚರಿಸಿದ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯ
ಹಿಜಾಬ್ ವಿವಾದ, ಅಂತರ್ ಧರ್ಮಿಯರ ವ್ಯಾಪಾರಕ್ಕೆ ವಿರೋಧ, ಮತ್ತು ಹಲಾಲ್‌ನಂತಹ ವಿವಾದಗಳು ಇತ್ತಿಚಿಗೆ ತೀವ್ರಗೊಂಡಿದ್ದು, ಜನರ ಮನಸ್ಸುಗಳು ಧರ್ಮದ ಆಧಾರದ ಮೇಲೆ ಒಡೆದು ಹೋಗುತ್ತಿವೆ.
ಶರಣಯ್ಯ ಹಿರೇಮಠ ಏಷ್ಯಾನೆಟ್ ಸುವರ್ಣ ನ್ಯೂಸ್.
ಕಲಬುರಗಿ (ಏ.02): ಹಿಜಾಬ್ ವಿವಾದ (Hijab Controversy), ಅಂತರ್ ಧರ್ಮಿಯರ ವ್ಯಾಪಾರಕ್ಕೆ ವಿರೋಧ, ಮತ್ತು ಹಲಾಲ್‌ನಂತಹ ವಿವಾದಗಳು (Halal Controversy) ಇತ್ತಿಚಿಗೆ ತೀವ್ರಗೊಂಡಿದ್ದು, ಜನರ ಮನಸ್ಸುಗಳು ಧರ್ಮದ ಆಧಾರದ ಮೇಲೆ ಒಡೆದು ಹೋಗುತ್ತಿವೆ. ಆದರೆ ಇಂತಹ ಮನಸ್ಸುಗಳನ್ನು ಒಗ್ಗೂಡಿಸಿ ಸೌಹಾರ್ಧ ಭಾರತ ನಿರ್ಮಾಣದ ಕನಸ್ಸು ಹೊತ್ತ ವಿಶಿಷ್ಠ ಯುಗಾದಿ (Ugadi) ಆಚರಣೆ ಕಲಬುರಗಿಯಲ್ಲಿಂದು (Kalaburagi) ಗಮನ ಸೆಳೆಯಿತು.
ಹಿಂದೂಗಳ ಪಾಲಿನ ಹೊಸ ವರ್ಷವೇ ಯುಗಾದಿ. ಈ ಯುಗಾದಿ ಹಬ್ಬವನ್ನು ಇಂದು ದೇಶದೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಮನೆ ಮನೆಗಳಲ್ಲಿ ಬೇವು ಬೆಲ್ಲದ ಪಾನಕ ಕುಡಿದು ಯುಗಾದಿ ಆಚರಿಸೋದು ಕಾಮನ್. ಆದರೆ ಕಲಬುರಗಿಯಲ್ಲಿ ಬಹಿರಂಗವಾಗಿ ನಡೆದ ಯುಗಾದಿ ಆಚರಣೆ ತೀವ್ರ ಗಮನ ಸೆಳೆಯಿತು. ಹಿಂದೂ (Hindu) ಮುಸ್ಲಿಂ (Musilm) ಕ್ರೈಸ್ತ (Christian) ಬೌದ್ದ (Bouddi) ಎನ್ನದೇ ಎಲ್ಲೆರಿಗೂ ಬೇವು ಬೆಲ್ಲದ ಪಾನಕ ವಿತರಿಸಿ ಸಂಭ್ರಮದಿಂದ ಯುಗಾದಿ ಆಚರಿಸಲಾಯಿತು. ಸೌಹಾರ್ದ ಭಾರತಕ್ಕಾಗಿ ಸೌಹಾರ್ದ ಯುಗಾದಿ ಹೆಸರಿನಡಿ ನಡೆದ ಈ ಕಾರ್ಯಕ್ರಮದಲ್ಲಿ ಸರ್ವ ಧರ್ಮಗಳ ಮುಖಂಡರು ಪಾಲ್ಗೊಂಡು ಗಮನ ಸೆಳೆದರು.
Kalaburagi SSLC Exam ವಿದ್ಯಾರ್ಥಿಗಳಿಗೆ ಚೀಟಿ ಕೊಡಲು ಗೋಡೆ ಹತ್ತಿ ಸರ್ಕಸ್!
ಸಮುದಾಯ ಕಲಬುರಗಿ ಮತ್ತು ಸೌಹಾರ್ದ ಕರ್ನಾಟಕ ವೇದಿಕೆ ವತಿಯಿಂದ ಇಂದು ಕಲಬುರಗಿ ನಗರದ ಜಗತ್ ವೃತ್ತದಲ್ಲಿ 'ಸೌಹಾರ್ದ ಭಾರತಕ್ಕಾಗಿ ಸೌಹಾರ್ದ ಯುಗಾದಿ' ಎನ್ನುವ ಹೆಸರಿನಡಿ ಅರ್ಥಪೂರ್ಣವಾಗಿ ಯುಗಾದಿ ಆಚರಿಸಲಾಯಿತು. ಹಿಂದೂ , ಮುಸ್ಲಿಂ, ಕ್ರಿಶ್ಚಿಯನ್, ಧರ್ಮ ಗುರುಗಳಿಗೆ ಹಾಗೂ ಎಲ್ಲಾ ಜಾತಿ ಧರ್ಮಗಳ ಜನರು ಪರಸ್ಪರ ಬೇವು ಬೆಲ್ಲದ ಪಾನಕ ವಿನಿಮಯ ಮಾಡಿಕೊಂಡು ಸೌಹಾರ್ಧತೆ ಮೆರೆದರು. ಹಿಂದೂ ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಜನರ ಮಧ್ಯೆ ಯಾವುದೇ ರೀತಿಯ ಬಿರುಕು ಉಂಟಾಗಬಾರದು. ನಾವೆಲ್ಲರೂ ಒಂದೇ ನಾವೆಲ್ಲಾ ಭಾರತೀಯರು ಎಂದು ಧರ್ಮಗುರುಗಳು ಕರೆ ನೀಡಿದರು. ಅದೆನೇ ಇರಲಿ, ಧರ್ಮದ ಹೆಸರಿನಲ್ಲಿ ಆಚರಣೆಗಳ ನೆಪದಲ್ಲಿ ಜನರ ಮನಸ್ಸು ಒಡೆದಾಳುವವರ ಮಧ್ಯೆ ಸೌಹಾರ್ದತೆಯ ಯುಗಾದಿ ಮಾದರಿಯೇ ಸರಿ.
ಬದುಕಿನ ಪಾಠ ಹೇಳುವ ಬೇವು ಬೆಲ್ಲ: ಸಂಕ್ರಾಂತಿ ಎಂದರೆ ಎಳ್ಳು ಬೆಲ್ಲ (Jaggery) ಸೇವಿಸುವ ಹಾಗೆ ಯುಗಾದಿ ಎಂದರೆ ಬೇವು (Neem) ಬೆಲ್ಲ ಸೇವಿಸುವ ಆಚರಣೆ ರೂಢಿಯಲ್ಲಿದೆ. ಯುಗಾದಿ ಹಬ್ಬದಂದು ಬೇವು ಬೆಲ್ಲ ಸೇವಿಸುವ ಆಚರಣೆ ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ. ಬೇವು ಬೆಲ್ಲ ಎಂದರೆ ಸಿಹಿ ಕಹಿಗಳೆರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬುದಕ್ಕೆ ರೂಪಕ ಎಂಬ ಸಾಮಾನ್ಯ ಮಾತು ಎಲ್ಲರಿಗೂ ತಿಳಿದಿದೆ.
ಆದರೆ, ಈ ಬೇವು ಬೆಲ್ಲ ತಯಾರಿಸಲು ಆರು ಆಹಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಅವೆಲ್ಲವೂ ನಮ್ಮ ಜೀವನದ ಆರು ಭಾವನೆಗಳನ್ನು ಪ್ರತಿನಿಧಿಸುತ್ತವೆ ಎಂಬ ವಿಷಯ ನಿಮಗೆ ಗೊತ್ತೇ? ಹೌದು, ಯುಗಾದಿ ಎಂದರೆ ಹೊಸ ವರ್ಷವನ್ನು ಸ್ವಾಗತಿಸುವ ಹಬ್ಬ. ಹೊಸ ವರ್ಷವು ಸುಖ, ಸಂತೋಷ, ಸಮೃದ್ಧಿ (Prosperity)ಯನ್ನು ತರಲೆಂದು ಆಶಿಸುವ ಹಬ್ಬ. ಇಂಥ ಯುಗಾದಿಯ ದಿನ ಬೇವು ಬೆಲ್ಲ ಏಕೆ ಸೇವಿಸಬೇಕು, ಬೇವು ಬೆಲ್ಲ ತಯಾರಿಸುವ ವಿಧಾನವೇನು? ಈ ಬೇವು ಬೆಲ್ಲದ ಪ್ರಾಮುಖ್ಯತೆ ಏನು ಎಲ್ಲವನ್ನೂ ವಿವರವಾಗಿ ನೋಡೋಣ.
Kalaburagi: ಟಿಪ್ಪರ್ ಹರಿದು ಬಾಲಕ ಸಾವು: ರೊಚ್ಚಿಗೆದ್ದ ಜನರಿಂದ ಟಿಪ್ಪರ್‌ಗೆ ಬೆಂಕಿ
ಬೇವು ಬೆಲ್ಲ ತಯಾರಿ: ಬೇವು, ಬೆಲ್ಲ, ಹಸಿ ಮಾವಿನಕಾಯಿ, ಉಪ್ಪು, ಮೆಣಸಿನ ಕಾಳು ಹಾಗೂ ಹುಣಸೆ ಹುಳಿ ರಸ ಸೇರಿಸಿ ಪೇಸ್ಟ್ ತಯಾರಿಸಲಾಗುತ್ತದೆ. ಈ ಪದಾರ್ಥಗಳೇ ಏಕೆ? ಇವುಗಳ ಬಳಕೆಯ ಮಹತ್ವವೇನು? ಈ ಆರು ಪದಾರ್ಥಗಳು ಮಾನವ ಜೀವನದ ಪ್ರಮುಖ ಆರು ಭಾವನೆಗಳನ್ನು ಸೂಚಿಸುತ್ತವೆ. ಮಾನವನ ನೆಮ್ಮದಿಯ ಜೀವನಕ್ಕೆ ಬೇಕಾದ ಮಾರ್ಗದರ್ಶನ ಮಾಡುತ್ತದೆ. ನೀವೇ ಯೋಚಿಸಿ ಈ ಆರೂ ಪದಾರ್ಥಗಳೂ ಆರು ವಿವಿಧ ರುಚಿಯನ್ನು ಹೊಂದಿವೆ. ಒಂದೊಂದು ರುಚಿಯೂ ಜೀವನದ ಒಂದೊಂದು ರೀತಿಯ ಏರಿಳಿತಗಳನ್ನು ಸೂಚಿಸುತ್ತದೆ.
ಇದರಲ್ಲಿ ಯಾವೊಂದೇ ರುಚಿಯನ್ನೂ ಅತಿಯಾಗಿ ಸೇವಿಸುವುದು ಯಾರಿಂದಲೂ ಸಾಧ್ಯವಿಲ್ಲ. ಕೇವಲ ಸಿಹಿಯೊಂದನ್ನೇ ಸೇವಿಸುತ್ತೇವೆಂದರೆ ಮುಖ ಕಟ್ಟುತ್ತದೆ. ಕಹಿಯೊಂದನ್ನೇ ತಿನ್ನುವುದು ಸಾಧ್ಯವೇ ಇಲ್ಲ. ಇನ್ನು ಹುಳಿಯಾಗಲೀ, ಖಾರವಾಗಲೀ, ಒಗರು, ಉಪ್ಪು ಯಾವುದೇ ಇರಲಿ- ಒಂದನ್ನೇ ಸೇವಿಸಿದರೆ ವಾಂತಿಯಾಗುತ್ತದಷ್ಟೇ. ಆದರೆ ಈ ಎಲ್ಲ ರುಚಿಗಳೂ ಹದವಾಗಿ ಮಿಳಿತವಾದಾಗ ನಾಲಿಗೆ ಚಪ್ಪರಿಸುವಂಥ ರುಚಿ ಸಿಗುತ್ತದೆ. ಹೀಗೆ ಜೀವನದಲ್ಲಿ ಕೂಡಾ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಮಿಳಿತವಾಗಿದ್ದಾಗಷ್ಟೇ ಜೀವನ ಸೊಗಸು ಎಂಬ ಪಾಠ ಹೇಳುತ್ತವೆ.