ವೃಷಭ ರಾಶಿ ಮಾಸಿಕ ಭವಿಷ್ಯ: ಹೊಸ ಉದ್ಯೋಗ, ಭಾರಿ ಧನಲಾಭ!
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಪ್ರತಿ ತಿಂಗಳು ಬದಲಾದಂತೆ ಅದೃಷ್ಟಗಳು, ಶುಭ – ಅಶುಭ ಫಲಗಳೂ ಬದಲಾಗುತ್ತವೆ. ಈ ಜುಲೈ ತಿಂಗಳು ವೃಷಭ ರಾಶಿಯವರಿಗೆ ಭಾರಿ ಅದೃಷ್ಟವನ್ನು ತರುತ್ತಿದ್ದು, ಕೆಲವು ವಿಚಾರಗಳಲ್ಲಿ ಎಚ್ಚರವನ್ನೂ ವಹಿಸಬೇಕಿದೆ. ಈ ರಾಶಿವರು ಜುಲೈ ತಿಂಗಳ ಭವಿಷ್ಯ ಏನು ಎಂಬುದನ್ನು ತಿಳಿಯೋಣ....
ಜ್ಯೋತಿಷ್ಯ ಶಾಸ್ತ್ರದ (Astrology) ಅನುಸಾರ ವ್ಯಕ್ತಿಗಳ ಭವಿಷ್ಯವನ್ನು ತಿಳಿದುಕೊಳ್ಳಬಹುದು. ವ್ಯಕ್ತಿಯ ಜಾತಕದ (Horoscope) ಅನುಸಾರವಾಗಿ ಅವರ ಆರೋಗ್ಯ, ಯಶಸ್ಸು, ವೃತ್ತಿಜೀವನ ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ತಿಳಿದುಕೊಳ್ಳಬಹುದು. ಅದೇ ರೀತಿಯಾಗಿ ಪ್ರತಿ ತಿಂಗಳು ಬಂದಂತೆ ಕೆಲವು ರಾಶಿಯವರಿಗೆ ಭಾರಿ ಶುಭ ಫಲ ದೊರೆಯುತ್ತದೆ. ಕೆಲವರಿಗೆ ಉದ್ಯೋಗದಲ್ಲಿ ಭಾರಿ ಯಶ ಪ್ರಾಪ್ತಿಯಾಗುವುದಲ್ಲದೆ, ಧನ ಲಾಭವೂ ಆಗಲಿದೆ. ಇನ್ನು ವಿದೇಶದಲ್ಲಿ ಉದ್ಯೋಗವನ್ನು (Job) ಹುಡುಕುತ್ತಿರುವವರಿಗೆ ಇದು ಸಕಾಲವಾಗಿದೆ.
ವೃಷಭ ರಾಶಿಯ ವ್ಯಕ್ತಿಗಳಿಗೆ ಜುಲೈ ತಿಂಗಳು (July Month) ಅತ್ಯಂತ ಶುಭಕಾರಕವಾಗಿದ್ದು. ಕೆಲಸದ ಸ್ಥಳದಲ್ಲಿ ವೇತನ (Salary) ಹೆಚ್ಚಳದ ಸಿಹಿ ಸುದ್ದಿ ಲಭ್ಯವಾಗಬಹುದು. ಇನ್ನು ಉದ್ಯೋಗವಿಲ್ಲದ, ದೀರ್ಘಕಾಲದಿಂದ ಕೆಲಸವನ್ನು ಹುಡುಕುತ್ತಿರುವ ವೃಷಭ ರಾಶಿಯ ವ್ಯಕ್ತಿಗಳಿಗೆ ಈ ತಿಂಗಳು ಅವರಿಗೆ ಉತ್ತಮ ಅವಕಾಶಗಳು ತೆರೆದುಕೊಳ್ಳಲಿವೆ. ಹೀಗಾಗಿ ಈ ತಿಂಗಳು ಹೊಸ ಉದ್ಯೋಗವು ನಿಮ್ಮ ಪಾಲಾಗಲಿದೆ.
ಕಚೇರಿಯಲ್ಲಿ (Office) ಸ್ವಲ್ಪ ಎಚ್ಚರವಿರಲಿ
ನೀವು ಕೆಲಸ ಮಾಡುವ ಕಚೇರಿಯಲ್ಲಿ ನಿಮ್ಮ ತಂಡದೊಂದಿಗೆ ಸ್ವಲ್ಪ ಎಚ್ಚರವಾಗಿಯೇ ಇರಬೇಕಾಗುತ್ತದೆ. ವಿಶೇಷವಾಗಿ ನಿಮ್ಮ ಬೆನ್ನ ಹಿಂದೆ, ಕಚೇರಿಯಲ್ಲಿ ನಡೆಯುವ ಚಟುವಟಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರಿ. ಅಸೂಯೆಪಡುವ ಜನರು ನಿಮ್ಮ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮೇಲಧಿಕಾರಿಗಳ ದೂರು ನೀಡುವ ಸಾಧ್ಯತೆಗಳು ಸಹ ಇದೆ. ಇದು ನಿಮ್ಮ ವರ್ಚಸ್ಸಿಗೆ (Charisma) ಹಾನಿ ಉಂಟು ಮಾಡಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ತುಸು ಎಚ್ಚರ ವಹಿಸುವುದು ಉತ್ತಮ.
ವ್ಯವಹಾರದಲ್ಲಿ (Business) ಆಗಲಿ ಹೊಸ ಪ್ರಯೋಗ
ನೀವು ವ್ಯವಹಾರಸ್ಥರಾಗಿದ್ದರೆ ಅದರಲ್ಲಿ ಸಕ್ರಿಯರಾಗಿರಬೇಕು. ನೀವು ಆ ವ್ಯಾಪಾರವನ್ನು ವಿಸ್ತರಿಸಲು ಹೊಸ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮಗೆ ಲಾಭ ಹೆಚ್ಚುತ್ತದೆ. ಇನ್ನು ಹೊಸ ವ್ಯವಹಾರಕ್ಕೆ ಕೈ ಹಾಕಬೇಕೆಂದು ಅಂದುಕೊಂಡಿದ್ದರೆ ಅದಕ್ಕೆ ನೀವು ಕೆಲ ಸಮಯ ಕಾಯಬೇಕು. ಆದರೆ, ಸ್ವಲ್ಪ ಜಾಗ್ರತೆ ವಹಿಸುವುದು ಮುಖ್ಯವಾಗುತ್ತದೆ. ನಿಮ್ಮ ವ್ಯವಹಾರಗಳಿಗೆ ಹಾನಿ ಮಾಡಲು ಪಿತೂರಿ ನಡೆಸುವವರು ಇರಬಹುದು. ನೀವು ಷೇರು ಮಾರುಕಟ್ಟೆಯಲ್ಲಿ (Stock market) ಹೂಡಿಕೆ ಮಾಡುತ್ತಿದ್ದರೆ ತಿಂಗಳ ಕೊನೇ ವಾರದಲ್ಲಿ ಅತ್ಯಧಿಕ ಲಾಭ ನಿಮ್ಮದಾಗಲಿದೆ.
ಮಂಗಳ ರಾಶಿ ಪರಿವರ್ತನೆ - ಈ ನಾಲ್ಕು ರಾಶಿಯವರಿಗೆ ಮಂಗಳಕರ!
ವಾಹನ ಖರೀದಿ ಸಂಭವ
ತಿಂಗಳ ಆರಂಭದಲ್ಲಿ ಒಡಹುಟ್ಟಿದವರೊಂದಿಗಿನ ಸಂಬಂಧವು ಸೌಹಾರ್ದಯುತವಾಗಿರುತ್ತದೆ. ತಿಂಗಳ ಕೊನೆಯ 15 ದಿನಗಳು ಬಹಳ ಒಳ್ಳೆಯದಾಗಿರುತ್ತದೆ. ನಿಮ್ಮ ಮನಸ್ಸು ಸಂತಸವಾಗಿರುವುದಲ್ಲದೆ, ಅಂದುಕೊಂಡ ಕೆಲಸ – ಕಾರ್ಯಗಳು ನೆರವೇರುತ್ತವೆ. ವಾಹನವನ್ನು ಬದಲಾಯಿಸಲು ಬಯಸುವವರಿಗೆ ಇದು ಸಕಾಲ. ಆದರೆ, ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಬದಲು ಹೊಸ ವಾಹನವನ್ನೇ (New Vehicle) ಖರೀದಿ ಮಾಡಬೇಕು.
ಈ ರಾಶಿಯವರು ತಮ್ಮ ತಾಯಿ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ತಾಯಿ ಬೇರೆ ಊರಿನಲ್ಲಿ ಅಥವಾ ಬೇರೆಡೆ ವಾಸ ಮಾಡುತ್ತಿದ್ದರೆ ಈ ತಿಂಗಳಲ್ಲಿ ಒಮ್ಮೆ ಭೇಟಿ ಮಾಡುವ ಅವಕಾಶವಿದೆ. ವಿವಾಹಿತರು ಬೆಡ್ ರೂಂನಲ್ಲಿ (Bed Room) ಮಾತನಾಡಬೇಕಾದರೆ ಸ್ವಲ್ಪ ಜಾಗ್ರತೆ ವಹಿಸಬೇಕಿದೆ. ಅನಾವಶ್ಯಕ ಮಾತುಗಳು ನೆಮ್ಮದಿಯನ್ನು ಹಾಳುಮಾಡಬಹುದು.
ಆರೋಗ್ಯದ (Health) ಕಾಳಜಿ ಮುಖ್ಯ
ಈ ರಾಶಿಯ ವ್ಯಕ್ತಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಲ್ಲದೆ, ಈ ರಾಶಿಯವರು ಸೌಂದರ್ಯಪ್ರಜ್ಞೆಯನ್ನು ಹೆಚ್ಚೇ ಹೊಂದಿದವರಾಗಿರುವುದರಿಂದ ಸೌಂದರ್ಯವರ್ಧಕ ವಸ್ತುಗಳನ್ನು ಹೆಚ್ಚು ಬಳಸುತ್ತಾರೆ. ಜೊತೆಗೆ ಇವರ ಆತ್ಮವಿಶ್ವಾಸವೂ ಹೆಚ್ಚಾಗುವುದಲ್ಲದೆ, ಸ್ಥಿರತೆಯ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕಿದೆ.
ಬುದ್ಧಿವಂತಿಕೆಯಿಂದಲೇ ಕೆಲಸದಲ್ಲಿ ಯಶ ಸಾಧಿಸೋ ರಾಶಿಗಳಿವು!
ಆರ್ಥಿಕ ಲಾಭ (Financial Gains)
ವೃಷಭ ರಾಶಿಯವರಿಗೆ ಈ ತಿಂಗಳು ಆರ್ಥಿಕ ಲಾಭವಾಗಲಿದೆ. ಈ ತಿಂಗಳು ನಿಮಗೆ ಹಳೆಯ ಬಾಕಿ ಹಣ ಕೈತಲುಪುವ ಸಾಧ್ಯತೆ ಬಹಳವೇ ಹೆಚ್ಚಿರುತ್ತದೆ. ಸಾಲ (Loan) ನೀಡಿದ್ದರೆ ಅಂಥವರಿಂದ ಹಣವನ್ನು ವಾಪಸ್ ಕೇಳಿ ಪಡೆದುಕೊಳ್ಳಿ. ಅಲ್ಲದೆ, ಈ ರಾಶಿಯವರು ಜುಲೈ ತಿಂಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಸಹ ಪಡೆಯುತ್ತಾರೆ.