Asianet Suvarna News Asianet Suvarna News

good luck : ಇಷ್ಟ ಅಂತ ಯಾವ್ ಯಾವ್ದೋ ದೇವರನ್ನು ಪೂಜಿಸಿದ್ರೆ ಕಷ್ಟ ಬರಬಹುದು ಎಚ್ಚರ..!

ಹಿಂದೂಗಳು ಪ್ರತಿ ದಿನ ದೇವರ ಪೂಜೆ ಮಾಡ್ತಾರೆ, ದೇವಸ್ಥಾನಕ್ಕೆ ಹೋಗ್ತಾರೆ. ಇಷ್ಟಾದ್ರೂ ಇಷ್ಟಗಳು ಈಡೇರೋದಿಲ್ಲ. ಆ ಸಮಯದಲ್ಲಿ ಉರುಳು ಸೇವೆ ಮಾಡೋ ಬದಲು ನಿಮ್ಮ ದೇವರನ್ನು ಬದಲಿಸಿ. 
 

according to your date of birth which gods worship will bring you success in life roo
Author
First Published Aug 17, 2024, 4:52 PM IST | Last Updated Aug 17, 2024, 5:11 PM IST

ಅದೃಷ್ಟ (good luck) ಜೊತೆಗಿದ್ರೆ ಎಂಥ ಕಷ್ಟ ಬಂದ್ರೂ ಗೆದ್ದು ಬೀಗಬಹುದು. ಹಗಲು – ರಾತ್ರಿ ಕೆಲಸ ಮಾಡಿದ್ರೂ ಕೆಲವರ ಕೈಗೆ ಚಿನ್ನ ಸಿಗೋ ಬದಲು ಚೆಂಬು ಸಿಗುತ್ತೆ. ಇದಕ್ಕೆ ಕಾರಣ ನಿಮ್ಮ ದುರಾದೃಷ್ಟ (bad luck). ಲಕ್ ಚೆನ್ನಾಗಿ ಆಗ್ಬೇಕು, ಮಾಡಿದ್ದೆಲ್ಲ ಕೆಲಸ, ಮುಟ್ಟಿದ್ದೆಲ್ಲ ವಸ್ತು ಬಂಗಾರ ಆಗ್ಬೇಕು ಅಂದ್ರೆ ಇಷ್ಟ ದೇವರ (god) ನ್ನು ಪೂಜೆ ಮಾಡ್ಬೇಕು. ಜನರು ದೇವಸ್ಥಾನ (temple)ಕ್ಕೆ ಹೋಗ್ತಾರೆ, ಮನೆಯಲ್ಲೂ ದೇವರ ಪೂಜೆ ಮಾಡ್ತಾರೆ. ಇಡೀ ದಿನ ಮಂತ್ರ – ಜಪ ಮಾಡ್ತಾನೆ ಇರ್ತಾರೆ. ಆದ್ರೂ ಉದ್ಯೋಗದಲ್ಲಿ ನಷ್ಟ, ಜೀವನದಲ್ಲಿ ಕಷ್ಟ ಸಾಮಾನ್ಯ ಎನ್ನುವಂತಾಗಿರುತ್ತೆ. ನಿಮ್ಮಿಷ್ಟದ ದೇವರು ಅಂದ್ರೆ ಯಾವ್ದು ಅನ್ನೋದನ್ನು ಮೊದಲು ತಿಳಿದ್ಕೊಳ್ಬೇಕು. ಅಪ್ಪ, ಮಗ, ಮೊಮ್ಮಗ ಎಲ್ಲರೂ ಒಂದೇ ದೇವರ ಆರಾಧನೆ ಮಾಡೋ ಬದ್ಲು, ಅವರವರ ಜನ್ಮ ದಿನಾಂಕಕ್ಕೆ ತಕ್ಕಂತೆ ದೇವರ ಪೂಜೆ ಮಾಡಿ. ನಿಮ್ಮ ಜನ್ಮದಿನಾಂಕಕ್ಕೆ ತಕ್ಕಂತೆ ನೀವು ಯಾವ ದೇವರನ್ನು ಆರಾಧನೆ ಮಾಡ್ಬೇಕು ಅಂತಾ ನಾವು ಹೇಳ್ತೇವೆ.  

ಹುಟ್ಟಿದ ದಿನಾಂಕ ಮತ್ತು ಸಂಬಂಧಿತ ದೇವತೆಗಳು : 

ಹುಟ್ಟಿದ ದಿನಾಂಕ : 1, 10, 19, 28 
ದೇವರ ಪೂಜೆ : ಸೂರ್ಯದೇವ. ಒಂದು, ಹತ್ತು, ಹತ್ತೊಂಬತ್ತು ಮತ್ತು ಇಪ್ಪತ್ತೆಂಟನೇ ದಿನಾಂಕದಂದು ನೀವು ಹುಟ್ಟಿದ್ರೆ ಸೂರ್ಯ ದೇವರನ್ನು ಪೂಜೆ ಮಾಡಿ. ಇದು ನಿಮ್ಮ ಆತ್ಮವಿಶ್ವಾಸ, ಶಕ್ತಿ, ನಾಯಕತ್ವದ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಈ ದಿನಾಂಕದಲ್ಲಿ ಜನಿಸಿದವರು ಸೂರ್ಯನಿಗೆ ಅರ್ಘ್ಯ ಅರ್ಪಿಸಿ. ಹಾಗೆ ಭಾನುವಾರ ತಪ್ಪದೆ ಉಪವಾಸ ಮಾಡಿ.

ಸಂಜೆ ಈ ಕೆಲಸಗಳನ್ನು ಮಾಡಿದ್ರೆ ತೊಂದರೆ ತಪ್ಪಿದಲ್ಲ, ಅಪ್ಪಿತಪ್ಪಿಯೂ ದೈಹಿಕ ಸಂಪರ್ಕ ಮಾಡಬೇಡಿ

ಹುಟ್ಟಿದ ದಿನಾಂಕ : 2, 11, 20, 29
ಇಷ್ಟದ ದೇವರು : ಚಂದ್ರ. 2, 11, 20 ಮತ್ತು 29ರಂದು ಜನಿಸಿದ ನೀವು ಚಂದ್ರನ ಆರಾಧನೆ ಮಾಡ್ಬೇಕು. ಇದ್ರಿಂದ ಮಾನಸಿಕ ಶಾಂತಿ, ಕುಟುಂಬದಲ್ಲಿ ಸಂತೋಷ ಸಿಗುತ್ತದೆ. ಈ ದಿನಾಂಕದಂದು ಹುಟ್ಟಿದವರು ಸೋಮವಾರ ಉಪವಾಸ ಮಾಡಬೇಕು. ಚಂದ್ರನಿಗೆ ಹಾಲು ಅರ್ಪಿಸಬೇಕು.

ಹುಟ್ಟಿದ ದಿನಾಂಕ : 3, 12, 21, 30
ಆರಾಧನೆ ದೇವರು : ವಿಷ್ಣು. ಈ ದಿನಾಂಕದಂದು ಜನಿಸಿದ ಜನರು ವಿಷ್ಣುವಿನ ಆರಾಧನೆ ಮಾಡಬೇಕು. ನಿತ್ಯ ವಿಷ್ಣುವಿನ ಪೂಜೆ ಮಾಡಿದ್ರೆ ಸಂಪತ್ತು, ಸಮೃದ್ಧಿ ಮತ್ತು ಸ್ಥಿರತೆ ಲಭಿಸುತ್ತದೆ. ಗುರುವಾರ ಉಪವಾಸ ಮಾಡೋದ್ರಿಂದ ಇಷ್ಟಾರ್ಥ ಸಿದ್ಧಿಸುತ್ತದೆ.

ಹುಟ್ಟಿದ ದಿನಾಂಕ : 4, 13, 22, 31
ಪೂಜಿಸುವ ದೇವರು : ಗಣಪತಿ. ನೀವು ಈ ದಿನಾಂಕದಂದು ಜನಿಸಿದ್ದರೆ  ಗಣಪತಿಯನ್ನು ಪೂಜೆ ಮಾಡಬೇಕು. ನಿಮ್ಮೆಲ್ಲ ಅಡೆತಡೆ ಇದರಿಂದ ದೂರವಾಗುತ್ತದೆ. ನೀವು ಪ್ರತಿ ಬುಧವಾರ ಉಪವಾಸ ಮಾಡುವುದು ಹೆಚ್ಚಿನ ಫಲವನ್ನು ನೀಡುತ್ತದೆ. ಪ್ರತಿ ದಿನ ಗಣಪತಿಯನ್ನು ಪೂಜೆ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. 

ಜನ್ಮ ದಿನಾಂಕ : 5, 14, 23 
ಇಷ್ಟದ ದೇವರು : ಬುಧ ದೇವರು. ಬುದ್ಧಿವಂತಿಕೆ, ಸಂವಹನ ಕೌಶಲ್ಯ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಸಾಧಿಸಲು ಈ ದಿನಾಂಕದಂದು ಜನಿಸಿದ ಜನರು ಬುಧ ದೇವರನ್ನು ಪೂಜಿಸಬೇಕು. ಬುಧವಾರದಂದು ಹಸಿರು ಬಣ್ಣದ ಬಟ್ಟೆ ಧರಿಸಿ, ಬುಧ ದೇವರನ್ನು ಆರಾಧಿಸಬೇಕು.  

ಹುಟ್ಟಿದ ದಿನಾಂಕ : 6, 15, 24  
ಪೂಜಿಸಬೇಕಾದ ದೇವರು : ತಾಯಿ ಲಕ್ಷ್ಮಿ. ಈ ಜನ್ಮತಾರೀಕಿನಂದು ಜನಿಸಿದ ಜನರು, ಲಕ್ಷ್ಮಿಯನ್ನು ಪೂಜೆ ಮಾಡಿದ್ರೆ ಸಂಪತ್ತು, ಸಮೃದ್ಧಿ ಮತ್ತು ಸಂತೋಷ ಲಭಿಸುತ್ತದೆ. ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಯನ್ನು ಆರಾಧಿಸಬೇಕು. ಇವರು ಬಿಳಿ ಬಟ್ಟೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಹುಟ್ಟಿದ ದಿನಾಂಕ : 7, 16, 25 
ಆರಾಧಿಸುವ ದೇವರು : ಶಿವ. ಆಧ್ಯಾತ್ಮಿಕ ಪ್ರಗತಿ, ಮಾನಸಿಕ ಶಾಂತಿ ಬೇಕು ಎನ್ನುವವರು ಶಿವನ ಆರಾಧನೆ ಮಾಡಬೇಕು. ಸೋಮವಾರದಂದು ಉಪವಾಸ ಮಾಡಬೇಕು. ಅಲ್ಲದೆ ಶಿವನಿಗೆ ಜಲಾಭಿಷೇಕ ಮಾಡುವುದ್ರಿಂದ ಸಾಕಷ್ಟು ಲಾಭವಿದೆ.

ಜನ್ಮ ದಿನ : 8, 17, 26 
ದೇವರ ಆರಾಧನೆ : ಶನಿದೇವ. ಈ ದಿನದಂದು ಜನಿಸಿದ ಜನರು ಅಡ್ಡಿ ಆತಂಕವಿಲ್ಲದೆ ಜೀವನ ನಡೆಸಬೇಕು ಅಂದ್ರೆ ಶನಿಯ ಪೂಜೆ ಮಾಡಬೇಕು. ಶನಿವಾರದಂದು ಶನಿದೇವನ ಪೂಜೆ, ದಾನಧರ್ಮ ಮತ್ತು ಸಾಸಿವೆ ಎಣ್ಣೆ ದೇವರಿಗೆ ಅರ್ಪಿಸಬೇಕು. 

ಸೂರ್ಯ ಸಂಕ್ರಮಣದಿಂದ ತ್ರಿಗ್ರಾಹಿ ಯೋಗ, ಈ 5 ರಾಶಿಗೆ ಹಾನಿ ಜತೆ ಹಣ, ಆಸ್ತಿ ವಿಚಾರದಲ್ಲಿ ಎಚ್ಚರ

ಹುಟ್ಟಿದ ದಿನ : 9, 18, 27  
ದೇವರು : ಹನುಮಂತ. ಈ ತಾರೀಕಿನಂದು ನೀವು ಹುಟ್ಟಿದ್ರೆ  ಹನುಮಂತನ ಆರಾಧನೆ ನಿಮಗೆ ಸೂಕ್ತ. ಇದು ಧೈರ್ಯ, ಶಕ್ತಿಯನ್ನು ನೀಡುತ್ತದೆ. ಅಲ್ಲದೆ ಮಂಗಳವಾರ ಮತ್ತು ಶನಿವಾರದಂದು ಉಪವಾಸ ಮಾಡಬೇಕು.
 

Latest Videos
Follow Us:
Download App:
  • android
  • ios