Asianet Suvarna News Asianet Suvarna News

ಕಲಿಯುಗದಲ್ಲಿ ಗಣೇಶ ಹೊಸ ಅವತಾರ ಎತ್ತುತ್ತಾನಂತೆ! ಹೆಸರೇನಿರುತ್ತೆ ಗೊತ್ತಾ?

ಗಣೇಶ ಪುರಾಣದಲ್ಲಿ ತಿಳಿಸಿರುವಂತೆ, ಕಲಿಯುಗದಲ್ಲಿ ಜನ ಅಧರ್ಮದ ಮಾರ್ಗ ತುಳಿದಾಗ ಗಣೇಶ ಹೊಸ ಅವತಾರದಲ್ಲಿ ಪ್ರಕಟವಾಗುತ್ತಾನೆ. ಕಲಿಯುಗದ ಜನರನ್ನು ಧರ್ಮ ಮಾರ್ಗದಲ್ಲಿ ಸಾಗುವಂತೆ ಮಾಡಲು, ಅವರಲ್ಲಿ ಉತ್ತಮ ವಿಚಾರಗಳನ್ನು ಮೂಡಿಸಲು ಗಣೇಶ ಪ್ರಕಟವಾಗುತ್ತಾನೆ ಎನ್ನಲಾಗಿದೆ. 

According to Ganesha Purana Ganesha will take rebirth in Kaliyug sum
Author
First Published Sep 15, 2023, 5:19 PM IST

“ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇʼ ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿರುವ ಮಾತನ್ನು ಕೇಳಿದ್ದೇವೆ. ವಿಷ್ಣು ಪುರಾಣದಲ್ಲಿ ಭಗವಾನ್‌ ವಿಷ್ಣುವಿನ ಕಲ್ಕಿ ಅವತಾರದ ಬಗ್ಗೆ ಸವಿಸ್ತಾರವಾಗಿ ಭವಿಷ್ಯವಾಣಿ ನುಡಿಯಲಾಗಿದೆ. ಅದೇ ಪ್ರಕಾರ, ಗಣೇಶ ಪುರಾಣದಲ್ಲಿಯೂ ಸಹ ಗಣೇಶನ ಅವತಾರದ ಬಗ್ಗೆ ಉಲ್ಲೇಖಿಸಲಾಗಿದೆ. ಗಣೇಶ ಪುರಾಣದಲ್ಲಿ ಕಲಿಯುಗದ ಬಗ್ಗೆ ಕೆಲವು ಮುಖ್ಯ ಸಂಗತಿಗಳನ್ನು ಭವಿಷ್ಯವಾಣಿಯ ರೂಪದಲ್ಲಿ ತಿಳಿಸಲಾಗಿದೆ. ಕಲಿಯುಗದ ಸಮಯದಲ್ಲಿ ಭೂಮಿಯಲ್ಲಿ ಪಾಪಕರ್ಮಗಳು ಹೆಚ್ಚಾದಾಗ, ಜನರ ನಡುವೆ ಪ್ರೀತಿ-ಪ್ರೇಮಗಳು ನಶಿಸಿ ದ್ವೇಷ ಉಂಟಾದ ಸಮಯದಲ್ಲಿ ಮಾನವ ಕಲ್ಯಾಣಕ್ಕಾಗಿ, ಧರ್ಮದ ಮಾರ್ಗವನ್ನು ತೋರಿಸಲು ಗಣೇಶ ಭೂಮಿಯಲ್ಲಿ ಉದಯಿಸುತ್ತಾನೆ, ಅವತಾರ ಎತ್ತುತ್ತಾನೆ ಎಂದು ಉಲ್ಲೇಖಿಸಲಾಗಿದೆ. ಇದೊಂದು ಕೌತುಕದ ಸಂಗತಿಯೇ ಸರಿ. ಯಾವ ರೀತಿಯಲ್ಲಿ, ಯಾವ ಸಮಯದಲ್ಲಿ, ಯಾವ ಹೆಸರಿನಲ್ಲಿ ಗಣೇಶ ಅವತಾರವಾಗುತ್ತಾನೆ ಎನ್ನುವುದನ್ನು ಗಣೇಶ ಪುರಾಣದಲ್ಲಿ ತಿಳಿಸಲಾಗಿದೆ.

•    ಬ್ರಾಹ್ಮಣರು (Brahmins) ಈ ಕಾರ್ಯ ಆರಂಭಿಸಿದಾಗ..
ಗಣೇಶ ಪುರಾಣದಲ್ಲಿ ತಿಳಿಸಿರುವ ಪ್ರಕಾರ, ಬ್ರಾಹ್ಮಣರ ಮನಸ್ಸು (Mind) ವೇದಾಧ್ಯಯನದಿಂದ (Study) ವಿಚಲಿತವಾಗಿ, ಇತರ ಕಾರ್ಯಗಳಲ್ಲಿ ನೆಟ್ಟರೆ, ಅವರು ಜಪ, ತಪ, ಯಜ್ಞಗಳಿಂದ ವಿಮುಖರಾದರೆ, ಶುಭ ಕಾರ್ಯಗಳಿಂದ ದೂರವಾದರೆ, ಕಾಲಕಾಲಕ್ಕೆ ಮಳೆಯಾಗದೆ (Rain) ಹೋದರೆ, ಜನರು ನದಿಯ ಪಕ್ಕದಲ್ಲಿ ಕೃಷಿ ಮಾಡುವ ಪರಿಸ್ಥಿತಿ ಬಂದರೆ ಗಣೇಶ (Ganesha) ಕಲಿಯುಗದಲ್ಲಿ  (Kaliyug) ಪ್ರಕಟವಾಗುತ್ತಾನೆ. 

•    ವಿದ್ವಾಂಸರು (Scholars) ಮೂರ್ಖರಾದರೆ
ಜನರು ಮದ, ಮೋಹಗಳಿಂದ ಪೀಡಿತರಾಗಿ ಒಬ್ಬರು ಮತ್ತೊಬ್ಬರಿಗೆ ಮೋಸ (Cheat) ಮಾಡಲು ಹಿಂದೇಟು ಹಾಕದ ದಿನಗಳಲ್ಲಿ, ವಿದ್ವಾಂಸರು ಮತ್ತು ಧಾರ್ಮಿಕ ಜನರು ಸಹ ಧನಾಕರ್ಷಣೆಗೆ ಒಳಗಾಗಿ ಮೂರ್ಖರಂತೆ (Fools) ವರ್ತಿಸುವ ಸಮಯದಲ್ಲಿ ಅವರ ಬಳಿ ಇರುವುದೆಲ್ಲವೂ ನಾಶವಾಗುತ್ತದೆ. ಜನರು ಬೇರೊಬ್ಬ ಮಹಿಳೆಯರ (Women) ಮೇಲೆ ಕೆಟ್ಟ ದೃಷ್ಟಿ ಬೀರುವ ದಿನಗಳಲ್ಲಿ, ಬಲಾಢ್ಯರು ದುರ್ಬಲರ ಮೇಲೆ ಸವಾರಿ ಮಾಡುವ ಸಮಯದಲ್ಲಿ ಗಣೇಶನ ಅವತಾರವಾಗುತ್ತದೆ ಎಂದು ಗಣೇಶ ಪುರಾಣದಲ್ಲಿ (Ganesha Purana) ಹೇಳಲಾಗಿದೆ. ಗಣೇಶನ ಹೊಸ ಅವತಾರದಿಂದ (Birth) ಇಂತಹ ಅನ್ಯಾಯಗಳು ಕೊನೆಯಾಗುತ್ತವೆ.   

ಆನೆ ಮುಖದ ಗಣಪನ ಜನನವೇ ಗಣೇಶ ಚತುರ್ಥಿ: ಮಹತ್ವ ತಿಳಿದು ಹಬ್ಬ ಮಾಡಿ

•    ದೇವತೆಗಳ (God) ಸ್ಥಾನದಲ್ಲಿ ರಾಕ್ಷಸರ (Devil) ಪೂಜೆ
ಗಣೇಶ ಪುರಾಣದ ಪ್ರಕಾರ, ಕಲಿಯುಗದಲ್ಲಿ ಜನರು ದೇವತೆಗಳ ಬದಲು ರಾಕ್ಷಸರ ಪೂಜೆ ಮಾಡಲು ಆರಂಭಿಸುತ್ತಾರೆ. ಧರ್ಮದ ಮಾರ್ಗ ಬಿಟ್ಟು ಅಧರ್ಮದ ಕಡೆಗೆ ಸಾಗುತ್ತಾರೆ. ತಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ದೇವತೆಗಳ ಸ್ಥಾನದಲ್ಲಿ ಅಸುರಿ ಶಕ್ತಿಗಳನ್ನು ಪೂಜಿಸುತ್ತಾರೆ. ಬ್ರಾಹ್ಮಣರು ತಮ್ಮ ಉತ್ತಮ ಕಾರ್ಯಗಳನ್ನು ಬಿಟ್ಟು ಹೊಟ್ಟೆ ತುಂಬಿಸಿಕೊಳ್ಳಲಷ್ಟೇ ಯೋಚಿಸುತ್ತಾರೆ. ಸಮಾಜದಲ್ಲಿ (Society) ನೆಲೆಯಾಗುವ ದುಷ್ಟಶಕ್ತಿಯನ್ನು ಕೊನೆಗಾಣಿಸಲು, ಕೆಟ್ಟದ್ದರ ನಾಶಕ್ಕೆ ಗಣೇಶ ಹೊಸ ಜನ್ಮ ತಾಳುತ್ತಾನೆ ಎಂದು ಹೇಳಲಾಗಿದೆ.

•    ಸ್ತ್ರೀಯರಲ್ಲಿ ಈ ಅವಗುಣಗಳು (Bad Habit) ಮೂಡಿದಾಗ
ಕಲಿಯುಗದಲ್ಲಿ ವೈಶ್ಯ ಸಮುದಾಯದ ಜನ ಶ್ರಮದಿಂದ, ಸರಿಯಾದ ಕ್ರಮದಿಂದ ಧನ ಸಂಪಾದನೆ ಮಾಡುವ ಬದಲು ಅಕ್ರಮದ ಮಾರ್ಗ ಹಿಡಿಯುತ್ತಾರೆ. ಸ್ತ್ರೀಯರು ತಮ್ಮ ಪತಿವ್ರತೆಯ ಧರ್ಮವನ್ನು ಬಿಟ್ಟು ಅಧರ್ಮದಲ್ಲಿ ಸಾಗುತ್ತಾರೆ. ಜನರು ತಮ್ಮ ತಂದೆ-ತಾಯಿ ಹಾಗೂ ಗುರುಜನರ ಅಪಮಾನ (Insult) ಮಾಡಲು ಆರಂಭಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಗಣೇಶ ಹೊಸ ಅವತಾರದೊಂದಿಗೆ ಜನ್ಮ ತಾಳಿ ಸಮಾಜದಲ್ಲಿ ನೆಲೆಯಾದ ಅಧರ್ಮವನ್ನು ಓಡಿಸುತ್ತಾನೆ ಎಂದು ಗಣೇಶ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. 

ಗಣೇಶ ಮೂರ್ತಿ ಮನೆಗೆ ತಂದು ಪೂಜಿಸ್ತೀರಾ? ಈ ವಿಷಯದ ಬಗ್ಗೆ ಗಮನವಿರಲಿ!

ಏನಿರುತ್ತೆ ಹೆಸರು?
ಅಚ್ಚರಿ ಎಂದರೆ, ಕಲಿಯುಗದಲ್ಲಿ ಗಣೇಶ ಅವತಾರ ಎತ್ತಿದಾಗ ಆತನ ಹೆಸರು (Name) ಏನಾಗಿರುತ್ತದೆ ಎನ್ನುವುದನ್ನೂ ಸಹ ತಿಳಿಸಲಾಗಿದೆ. ಗಣೇಶ ಪುರಾಣದ ಪ್ರಕಾರ, ಗಣೇಶನ ಅವತಾರದ ಹೆಸರು “ಧೂಮ್ರಕೇತುʼ ಎಂದಿರುತ್ತದೆ. ಜನರಲ್ಲಿ ಸದ್ಬುದ್ಧಿ ಮೂಡಿಸುವುದೇ ಈ ಅವತಾರದ ಉದ್ದೇಶವಾಗಿರುತ್ತದೆ. 
 

Follow Us:
Download App:
  • android
  • ios