MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಆನೆ ಮುಖದ ಗಣಪನ ಜನನವೇ ಗಣೇಶ ಚತುರ್ಥಿ: ಮಹತ್ವ ತಿಳಿದು ಹಬ್ಬ ಮಾಡಿ

ಆನೆ ಮುಖದ ಗಣಪನ ಜನನವೇ ಗಣೇಶ ಚತುರ್ಥಿ: ಮಹತ್ವ ತಿಳಿದು ಹಬ್ಬ ಮಾಡಿ

ಗಣೇಶ ಚತುರ್ಥಿಯು ಆನೆಯ ಮುಖದೊಂದಿಗೆ ಗಣೇಶನ ಜನನವನ್ನು ಸೂಚಿಸುತ್ತದೆ. ಪ್ರತಿ ವರ್ಷ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನದಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 19, 2023 ರ ಮಂಗಳವಾರ ಆಚರಿಸಲಾಗುತ್ತದೆ. 

2 Min read
Suvarna News
Published : Sep 13 2023, 05:44 PM IST
Share this Photo Gallery
  • FB
  • TW
  • Linkdin
  • Whatsapp
17

ಶಿವ ಮತ್ತು ಪಾರ್ವತಿಯ ಮಗನಾದ ಗಣೇಶ ಹಿಂದೂ ಧರ್ಮದ ಅತ್ಯಂತ ಪ್ರೀತಿಯ ದೇವತೆಗಳಲ್ಲಿ ಒಬ್ಬರು. ಏಕದಂತ, ವಿನಾಯಕ, ದುಖರ್ತಾ, ಗಣೇಶ, ಗಣಪತಿ, ಲಂಬೋದರ ಎಂದೂ ಕರೆಯಲ್ಪಡುವ ಗಣೇಶನನ್ನು ಅಡೆತಡೆಗಳನ್ನು ನಿವಾರಿಸುವ ದೇವರೆಂದು ಪರಿಗಣಿಸಲಾಗುತ್ತದೆ ಮತ್ತು ಇತರ ಎಲ್ಲಾ ದೇವತೆಗಳಿಗಿಂತ ಮೊದಲು ಗಣಪತಿಯನ್ನು (Ganapati) ಪೂಜಿಸಲಾಗುತ್ತದೆ. 
 

27

ಗಣೇಶ ಚತುರ್ಥಿಯು (Ganesha Chaturthi) ಆನೆಯ ಮುಖದೊಂದಿಗೆ ಗಣೇಶನ ಜನನವನ್ನು ಸೂಚಿಸುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನದಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 19, 2023 ರ ಮಂಗಳವಾರ ಆಚರಿಸಲಾಗುತ್ತದೆ. ಈ ಹಬ್ಬವು 10 ದಿನಗಳ ಕಾಲ ನಡೆಯುವ ಪೂಜೆಯಾಗಿದ್ದು, (ಉತ್ತರ ಭಾರತದಲ್ಲಿ) ಇದು ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ. 
 

37

ಶಿವನ ಮಗ ಗಣೇಶನನ್ನು ಸಂಪತ್ತು, ವಿಜ್ಞಾನ, ಜ್ಞಾನ (Knowledge), ಬುದ್ಧಿವಂತಿಕೆ (Intelligent) ಮತ್ತು ಸಮೃದ್ಧಿಯ ದೇವರು (God of Prosperity) ಎಂದು ಪರಿಗಣಿಸಲಾಗಿರುವುದರಿಂದ ಪ್ರತಿ ಶುಭ ಮತ್ತು ಪ್ರಮುಖ ಸಂದರ್ಭದ ಮೊದಲು ಭಗವಂತನನ್ನು ಪೂಜಿಸಲಾಗುತ್ತದೆ. ಗಣೇಶೋತ್ಸವದ ಮಹತ್ವವನ್ನು ತಿಳಿಯೋಣ. 
 

47

ಗಣೇಶ ಚತುರ್ಥಿಗೆ ಸಂಬಂಧಿಸಿದ ಕಥೆಗಳು 
ಗಣೇಶ ಚತುರ್ಥಿಯು ಗಣೇಶನ ಪುನರ್ಜನ್ಮ (rebirth of Ganesha) ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ. ಪಾರ್ವತಿ ದೇವಿಯು ತನ್ನ ದೇಹದ ಕೊಳೆಯಿಂದ ಗಣೇಶನನ್ನು ಸೃಷ್ಟಿಸಿದಳು ಎಂದು ಪೌರಾಣಿಕ ಮೂಲಗಳು ಹೇಳುತ್ತವೆ. ಶಿವನು ದೂರದಲ್ಲಿರುವಾಗ ಮತ್ತು ಪಾರ್ವತಿ ಸ್ನಾನ ಮಾಡಲು ತಯಾರಿ ನಡೆಸುತ್ತಿದ್ದಾಗ ದೇವಿಯು ಗಣೇಶನನ್ನು ಸೃಷ್ಟಿಸಿ ಅವನನ್ನು ಕಾವಲು ಕಾಯುವಂತೆ ಮಾಡಿದಳು. ಗಣೇಶನು ತನ್ನ ತಾಯಿಯ ಸೂಚನೆಗಳನ್ನು ಅನುಸರಿಸಿ ಶಿವನನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆದನು. 

57

ಗಣೇಶ ಮತ್ತು ಶಿವ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ತಿಳಿದಿರಲಿಲ್ಲ. ಗಣೇಶ ಅವನನ್ನು ತಡೆದಾಗ, ಶಿವನು ಕೋಪಗೊಂಡು ಗಣೇಶನ ತಲೆಯನ್ನು ಕತ್ತರಿಸಿದನು. ಪಾರ್ವತಿ ಕೋಪಗೊಂಡು ಇಡೀ ಜಗತ್ತನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದಳು. ಪಾರ್ವತಿಯ ರುದ್ರ ರೂಪಕ್ಕೆ ಹೆದರಿ, ಮತ್ತೆ ಮಗುವನ್ನು ಬದುಕಿಸಲು ಆನೆಯ ತಲೆಯನ್ನು ತಂದು ಗಣೇಶನಿಗೆ ಇರಿಸಿ, ಶಿವನು ಆತನಿಗೆ ಮತ್ತೆ ಜೀವ ತಂದನು. ಎಲ್ಲಾ ದೇವರುಗಳು ಗಣೇಶನನ್ನು ಆಶೀರ್ವದಿಸಿದರು. ಗಣೇಶನಿಗೆ ಮರುಜೀವ ಬಂದ ಆ ದಿನವನ್ನು ಗಣೇಶ ಚತುರ್ಥಿಯಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. 
 

67

ಗಣೇಶ ಚತುರ್ಥಿಯ ಮಹತ್ವ (Significance of Ganesh Chaturthi)
ಗಣೇಶನನ್ನು ಪೂಜಿಸುವ ಭಕ್ತರ ಬಯಕೆಗಳು ಬೇಗನೆ ಈಡೇರುತ್ತವೆ ಎಂದು ನಂಬಲಾಗಿದೆ. ಗಣೇಶನನ್ನು ಪ್ರಾರ್ಥಿಸುವ ಭಕ್ತರು ತಮ್ಮ ಪಾಪಗಳಿಂದ ಮುಕ್ತರಾಗುತ್ತಾರೆ ಮತ್ತು ಜ್ಞಾನ ಮತ್ತು ತಿಳುವಳಿಕೆಯ ಮಾರ್ಗವನ್ನು ಅನುಸರಿಸುತ್ತಾರೆ, ಇದು ಗಣೇಶ ಚತುರ್ಥಿಯನ್ನು ಆಚರಣೆಯ ಹಿಂದಿನ ಮಹತ್ವವಾಗಿದೆ.

77

ಗಣೇಶ ಹಬ್ಬವನ್ನು ರಾಜ ಶಿವಾಜಿಯ ಆಳ್ವಿಕೆಯಿಂದಲೂ ಆಚರಿಸಲಾಗುತ್ತಿದೆ. ಲೋಕಮಾನ್ಯ ತಿಲಕರು ಗಣೇಶ ಚತುರ್ಥಿಯನ್ನು ಖಾಸಗಿ ಆಚರಣೆಯಿಂದ ಬೃಹತ್ ಸಾರ್ವಜನಿಕ ಕಾರ್ಯಕ್ರಮವಾಗಿ ಪರಿವರ್ತಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಜಾತಿಯ ಜನರು ಒಗ್ಗೂಡಬಹುದು, ಪೂಜಿಸಬಹುದು ಮತ್ತು ಒಂದಾಗಬಹುದು ಎನ್ನುವ ಕಾರಣದಿಂದ ಇದನ್ನು ಸಾರ್ವಜನಿಕವಾಗಿ ಆಚರಿಸಲಾಯಿತು. ಇಂದಿಗೂ ಈ ಸಾರ್ವಜನಿಕ ಆಚರಣೆ ನಡೆಯುತ್ತಿದೆ.
 

About the Author

SN
Suvarna News
ಹಬ್ಬ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved