Asianet Suvarna News Asianet Suvarna News

ಗಣೇಶ ಮೂರ್ತಿ ಮನೆಗೆ ತಂದು ಪೂಜಿಸ್ತೀರಾ? ಈ ವಿಷಯದ ಬಗ್ಗೆ ಗಮನವಿರಲಿ!

ಗೌರಿ-ಗಣೇಶ ಹಬ್ಬ ಬಂದೇ ಬಿಟ್ಟಿದೆ. ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜೆ ಮಾಡಬೇಕು ಎನ್ನುವ ಆಸಕ್ತಿಯುಳ್ಳವರು ಕೆಲವು ವಿಚಾರಗಳನ್ನು ಮನದಲ್ಲಿರಿಸಿಕೊಳ್ಳಬೇಕು. ಗಣೇಶನ ಮೂರ್ತಿ ತರುವಾಗ, ಮನೆಯಲ್ಲಿ ಇರುವಾಗ ಕೆಲವು ಪದ್ಧತಿಗಳನ್ನು ಪಾಲಿಸಬೇಕು. 
 

Follow these rules when Ganesh at your home
Author
First Published Sep 13, 2023, 4:39 PM IST

ಗೌರಿ-ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಮೂಡಿದೆ. ಮನೆಮನೆಗಳಲ್ಲಿ “ಹಬ್ಬ ಬಂತುʼ ಎನ್ನುವ ಸೊಲ್ಲೇ ಕೇಳಿಬರುತ್ತಿದೆ. ಮಹಿಳೆಯರು ಮನೆಯ ಸ್ವಚ್ಛತೆ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ. ಜತೆಗೆ, ಏನಾದರೊಂದು ಕುರುಕಲು ತಿಂಡಿಗಳಲ್ಲಿ ಮಗ್ನರಾಗಿದ್ದಾರೆ. ಪ್ರತಿ ಮನೆಗಳಲ್ಲೂ ಕರಿದ ತಿಂಡಿಗಳ ಘಮ. ಚಕ್ಕುಲಿ-ಕೋಡುಬಳೆ, ಶಂಕರಪೋಳೆ, ಸಿಹಿತಿಂಡಿಗಳು ಈಗಾಗಲೇ ಡಬ್ಬಿಗಳಲ್ಲಿ ಅಡಗಿ ಅಟ್ಟದ ಮೇಲೆ ಏರಿವೆ. ಗೌರಿ-ಗಣೇಶ ಹಬ್ಬದ ಗಮ್ಮತ್ತೇ ಬೇರೆ. ಈ ಹಬ್ಬ ತಿನಿಸುಗಳ ಸಮಯ. ದೇಶದೆಲ್ಲೆಡೆ ಹಲವು ರೀತಿಯಲ್ಲಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಕೆಲವು ಕಡೆ ಹತ್ತು ದಿನಗಳ ಕಾಲ ಹಬ್ಬವನ್ನು ಆಚರಿಸಿದರೆ, ಬಹಳಷ್ಟು ಕಡೆ ಮೂರು ದಿನಗಳ ಸಂಭ್ರಮವನ್ನು ಕಾಣಬಹುದು. ದಕ್ಷಿಣ ಭಾರತದಲ್ಲಿ ಗಣೇಶ ಹಬ್ಬದ ಸಂಭ್ರಮವನ್ನು ಹೆಚ್ಚು ಕಾಣಬಹುದು. ಅದರಲ್ಲೂ ಮಹಾರಾಷ್ಟ್ರ ಗಣೇಶ ಹಬ್ಬಕ್ಕೆ ಭಾರೀ ಫೇಮಸ್ಸು. ಎಲ್ಲ ಮನೆಗಳಲ್ಲೂ ಗಣೇಶ ಮೂರ್ತಿಯನ್ನು ಇಟ್ಟು ಪೂಜಿಸುವ ಪರಿಪಾಠ ಇಲ್ಲ. ಚಿಕ್ಕ ಮಕ್ಕಳಿರುವ ಕಡೆ ಗಣೇಶ ಮೂರ್ತಿಯನ್ನು ತರುವವರೂ ಇದ್ದಾರೆ. ಸಾಮಾನ್ಯವಾಗಿ ಗಣೇಶ ಮೂರ್ತಿಯನ್ನು ಇಲಿ ಪಂಚಮಿಯಂದು ವಿಸರ್ಜನೆ ಮಾಡಲಾಗುತ್ತದೆ. ಹಬ್ಬದ ದಿನವೇ ಗಣೇಶ ಬಪ್ಪಾನನ್ನು ಕಳುಹಿಸುವ ಪದ್ಧತಿಯೂ ಇದೆ. ನಾಲ್ಕು, ಹತ್ತು ದಿನಗಳ ಕಾಲ ಇಟ್ಟು ಪೂಜಿಸುವುದು ಸಹ ಸಾಮಾನ್ಯ. 

ಗಣೇಶ ಮೂರ್ತಿಯನ್ನು (Ganesha Idol) ಮನೆಗೆ ತರುವಾಗ, ಮನೆಯಲ್ಲಿ ಪೂಜಿಸುವಾಗ ಕೆಲವು ಪದ್ಧತಿಗಳನ್ನು ಅನುಸರಿಸಬೇಕು. ಅದರಿಂದ ಆ ಮನೆಗೆ ಶ್ರೇಯಸ್ಸಾಗುತ್ತದೆ ಎನ್ನಲಾಗುತ್ತದೆ. ಗಣೇಶ ಮೂರ್ತಿಯನ್ನು ಇಟ್ಟು ಪೂಜಿಸುವವರು (Worship) ನೀವಾಗಿದ್ದರೆ ಕೆಲವು ನಿಯಮಗಳನ್ನು (Rules) ಅನುಸರಿಸಲು ಮರೆಯಬೇಡಿ.

ಅನುಸರಿಸಬೇಕಾದ ಪದ್ಧತಿ
•    ಗಣೇಶ ಮೂರ್ತಿ ಮುಕುಟ ಅಥವಾ ಕಿರೀಟವಿಲ್ಲದೇ (Crown) ಅಪೂರ್ಣ. ಹೀಗಾಗಿ, ಕಿರೀಟವಿಲ್ಲದ ಗಣೇಶನ ಮೂರ್ತಿಯನ್ನು ಖರೀದಿಸಬೇಡಿ. ಮುಕುಟವು ಉತ್ತಮ ಅದೃಷ್ಟ (Luck) ತರುತ್ತದೆ ಎಂದು ಭಾವಿಸಲಾಗುತ್ತದೆ. 
•    ಗಣೇಶನ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ ಅಥವಾ ಮಾರುಕಟ್ಟೆಯಿಂದಾದರೂ ತನ್ನಿ, ಯಾರಿಗಾದರೂ ಆರ್ಡರ್‌ ಕೊಟ್ಟಾದರೂ ಮಾಡಿಸಿ. ಆದರೆ, ಒಂದು ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಗಣೇಶ ಮೂರ್ತಿಯೊಂದಿಗೆ ಇಲಿ (Mouse) ಹಾಗೂ ಕೆಲವು ಮೋದಕಗಳು (Modak) ಇರಬೇಕು. ಇದರಿಂದಾಗಿ ಮನೆಗೆ ಧನಾತ್ಮಕ ಶಕ್ತಿ (Positive Energy) ಲಭಿಸುತ್ತದೆ.

Ganesh Chaturthi 2023: ಚತುರ್ಥಿ ಹಬ್ಬದ ಇತಿಹಾಸ, ಮಹತ್ವ ಇಲ್ಲಿವೆ..!

•    ಮನೆಗೆ ಗಣೇಶ ಮೂರ್ತಿಯನ್ನು ತರುವಾಗ ಕೆಂಪು ಬಣ್ಣದ ಬಟ್ಟೆಯಿಂದ (Red Color Cloth) ಮುಚ್ಚಿಕೊಂಡು ತನ್ನಿ.
•    ಗಣೇಶ ಮೂರ್ತಿಯನ್ನು ಸ್ಥಾಪಿಸುವ ದಿಕ್ಕಿನ (Direction) ಬಗ್ಗೆ ಗಮನವಿರಲಿ. ಪೂರ್ವ (East), ಪಶ್ವಿಮ (West) ಅಥವಾ ಈಶಾನ್ಯ (North-East) ದಿಕ್ಕು ಇದಕ್ಕೆ ಪ್ರಶಸ್ತ. 
•    ಗಣೇಶನನ್ನು ಪೂಜಿಸುವಾಗ ಯಾವಾಗಲೂ ಗಂಟೆ (Bell), ಶಂಖ (Shankha), ಜಾಗಟೆಯ ನಾದವಿರಲಿ. ಹಬ್ಬದ ವೈಬ್ರೇಷನ್‌ (Vibration) ಇರಲೇಬೇಕು. 
•    1,2,4,5,7,10 ದಿನಗಳವರೆಗೂ ಇಟ್ಟು ಪೂಜಿಸಬಹುದು. ಪ್ರತಿದಿನವೂ ನೈವೇದ್ಯಕ್ಕೆಂದು ಏನಾದರೊಂದು ವಿಶೇಷ ತಿನಿಸನ್ನು ಮಾಡಬೇಕು. 

ಈ ಸಮಯದಲ್ಲಿ ಮಾಡಬಾರದ ಕೆಲಸಗಳು
•    ಸಾಮಾನ್ಯವಾಗಿ ಗಣೇಶ ಮೂರ್ತಿಯ ಸೊಂಡಿಲು (Trunk) ಎಡಕ್ಕೆ ಚಾಚಿಕೊಂಡಿರುವುದನ್ನು ನೋಡಿರಬಹುದು. ಮನೆಯಲ್ಲಿ ಪೂಜಿಸುವ ಗಣೇಶ ಮೂರ್ತಿ ಸಹ ಎಡಕ್ಕೇ ಸೊಂಡಿಲನ್ನು ಹೊಂದಿರಬೇಕು. ಬಲಕ್ಕೆ ಸೊಂಡಿಲು ಹೊಂದಿರುವ ಗಣೇಶ ಹಠಮಾರಿತನಕ್ಕೆ (Stubborn) ಹೆಸರು. ಅದನ್ನಿಟ್ಟು ಪೂಜಿಸಲು ತುಂಬ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎನ್ನಲಾಗುತ್ತದೆ. ಎಡಕ್ಕೆ ಚಾಚಿರುವ ಸೊಂಡಿಲು ಯಶಸ್ಸು (Success) ಮತ್ತು ಧನಾತ್ಮಕತೆಯನ್ನು ಬಿಂಬಿಸುತ್ತದೆ.

ಗಣೇಶನ ಮಹಿಮೆಗೆ ಹೆಸರಾದ ರಾಜ್ಯದ ಪ್ರಮುಖ ಗಣಪತಿ ದೇವಾಲಯಗಳು

•    ಗಣೇಶ ಮೂರ್ತಿ ಮನೆಯಲ್ಲಿರುವಾಗ ಮನೆಯನ್ನು ಖಾಲಿ (Empty) ಬಿಡಬಾರದು ಎನ್ನಲಾಗುತ್ತದೆ. ಯಾರಾದರೂ ಒಬ್ಬರಾದರೂ ಮನೆಯಲ್ಲಿರಬೇಕು. ಮೂರ್ತಿಯನ್ನು ಪೂಜಿಸದೇ ಇರಬಾರದು.
•    ಪೂಜೆ ಮಾಡದೆ, ಆರತಿ ಬೆಳಗದೆ ಗಣೇಶ ಮೂರ್ತಿಯನ್ನು ವಿಸರ್ಜಿಸಬಾರದು. ವಿಸರ್ಜನೆ ಪ್ರಕ್ರಿಯೆ ಮುಗಿಸಿದ ಬಳಿಕವೇ ನೀರಿನಲ್ಲಿ (Water) ಮುಳುಗಿಸಬೇಕು.
•    ಗಣೇಶ ಮೂರ್ತಿ ಮನೆಯಲ್ಲಿರುವ ಸಮಯದಲ್ಲಿ ಈರುಳ್ಳಿ (Onion), ಬೆಳ್ಳುಳ್ಳಿ (Garlic) ಸೇರಿದಂತೆ ಕೆಲವು ತಾಮಸ ಆಹಾರಗಳನ್ನು ಸೇವಿಸುವುದು ನಿಷಿದ್ಧ. ಸಾತ್ವಿಕ ಆಹಾರ ಸೇವನೆ ಮಾಡಬೇಕು. ದಿನವೂ ಅನ್ನ, ಸಿಹಿ ತಿನಿಸು, ಕರಿದ ತಿಂಡಿಗಳ ನೈವೇದ್ಯ ಮಾಡಬೇಕು.


 

Follow Us:
Download App:
  • android
  • ios