Asianet Suvarna News Asianet Suvarna News

Chanakya Niti: ಸಿನಿಮಾಕ್ಕಾಗಲಿ, ಓದುವುದಕ್ಕಾಗಲಿ ಜೊತೆಗೊಬ್ಬರಿದ್ದರೆ ಚೆಂದ!

ನಾನೊಬ್ಬನೇ ಯುದ್ಧದಲ್ಲಿ ಹೋರಾಟ ನಡೆಸ್ತೇನೆಂದು ಕಣಕ್ಕಿಳಿದ್ರೆ ಸೋಲು ಸಿಗಬಹುದು. ಹಾಗೆ ಎಲ್ಲರೂ ಸೇರಿ ತಪಸ್ಸು ಮಾಡ್ತೇವೆ ಎಂದು ಹೊರಟ್ರೆ ಅಲ್ಲೂ ಸೋಲು ಕಾಣಬಹುದು. ಪ್ರತಿಯೊಂದು ಕೆಲಸಕ್ಕೂ ಅದರದೇ ಆದ ಸಂಖ್ಯೆಯಿದೆ. ಅದನ್ನು ಪಾಲನೆ ಮಾಡಿದ್ರೆ ಮಾತ್ರ ಗುರಿ ತಲುಪಲು ಸಾಧ್ಯ. 
 

According To Chanakya Niti Know Which Work Should Be Done Alone And Which Work Together
Author
Bangalore, First Published Jul 4, 2022, 3:02 PM IST | Last Updated Jul 4, 2022, 3:02 PM IST

ಜೀವನ (Life)ದಲ್ಲಿ ಯಶಸ್ಸು (Success) ಸಾಧಿಸಲು ಪ್ರತಿಯೊಬ್ಬರೂ ಸತತ ಪ್ರಯತ್ನ ಮಾಡ್ತಾರೆ. ನಿರಂತರ ಪ್ರಯತ್ನ, ಲಕ್ಷಾಂತರ ಬಾರಿ ಪ್ರಯತ್ನ ನಡೆಸಿದ್ರೂ ಅನೇಕ ಬಾರಿ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಅದಕ್ಕೆ ಅನೇಕ ಕಾರಣಗಳಿರುತ್ತವೆ. ಅದ್ರಲ್ಲಿ ಸಂಖ್ಯೆ ಕೂಡ ಒಂದು. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಮಾಡಲು ಸಾಧ್ಯವಾಗದ್ದನ್ನು ಇಬ್ಬರು ಸೇರಿ ಮಾಡ್ಬುಹುದು. ಇಬ್ಬರು ಮಾಡಲು ಸಾಧ್ಯವಾಗದ್ದನ್ನು ಗುಂಪು (Group) ಮಾಡ್ಬಹುದು. ಹಾಗಾಗಿ ನಾವು ಯಾವ ಕೆಲಸ ಮಾಡ್ತಿದ್ದೇವೆ ಎಂಬುದನ್ನು ತಿಳಿಯುವ ಜೊತೆಗೆ ಆ ಕೆಲಸ ಮಾಡಲು ಎಷ್ಟು ಜನರ ಅಗತ್ಯವಿದೆ ಎಂಬುದನ್ನು ತಿಳಿದಿರಬೇಕು. ಅನೇಕರು ಸೇರಿ ಮಾಡಬೇಕಾದ ಕೆಲಸವನ್ನು ಒಬ್ಬನೇ ಮಾಡ್ತೇನೆಂದು ಹೊರಟ್ರೆ ಯಶಸ್ಸಿನ ಬದಲು ನಿರಾಸೆ ಸಿಗುತ್ತದೆ. ಭಾರತದ ಇತಿಹಾಸದ ಪ್ರಸಿದ್ಧ ತತ್ವಜ್ಞಾನಿ ಮತ್ತು ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯ (Acharya Chanakya ) ನೀತಿಶಾಸ್ತ್ರದಲ್ಲಿ ಈ ಸಂಗತಿಯನ್ನೂ ಹೇಳಲಾಗಿದೆ. ಯಾವ ಕೆಲಸವನ್ನು ಒಂಟಿಯಾಗಿ ಮಾಡ್ಬೇಕು ಹಾಗೆ ಯಾವ ಕೆಲಸವನ್ನು ಇಬ್ಬರು ಮಾಡ್ಬೇಕು ಎಂಬುದನ್ನು ಚಾಣಕ್ಯ ತಮ್ಮ ನೀತಿಯಲ್ಲಿ ಹೇಳಿದ್ದಾರೆ. ಇಂದು ನಾವು ಚಾಣಕ್ಯ ನೀತಿಯಲ್ಲಿ ಸಂಖ್ಯೆ ಬಗ್ಗೆ ಏನಿದೆ ಎಂಬುದನ್ನು ಹೇಳ್ತೇವೆ.

ಯಾವ ಕೆಲಸಕ್ಕೆ ಬೇಕು ಎಷ್ಟು ವ್ಯಕ್ತಿಗಳು ? : 
ಶಿಕ್ಷಣ :
ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಮುಖ್ಯ. ಮಕ್ಕಳಿರಲಿ ಇಲ್ಲ ದೊಡ್ಡವರಿರಲಿ ಹೆಚ್ಚು ಅಂಕ ಪಡೆಯಬೇಕೆಂಬ ಕಾರಣಕ್ಕೆ ಅನೇಕರು ಒಬ್ಬಂಟಿಯಾಗಿ ಓದುತ್ತಾರೆ. ಇಬ್ಬರಿದ್ದರೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಆದ್ರೆ ಚಾಣಕ್ಯ ನೀತಿಯ ಪ್ರಕಾರ, ಇಬ್ಬರು ಒಟ್ಟಿಗೆ ಅಧ್ಯಯನ ಮಾಡುವುದು ಸೂಕ್ತ. ಇದರಿಂದ ಶಿಕ್ಷಣ ಪಡೆಯುವುದು ಸುಲಭವಾಗುವುದಲ್ಲದೆ, ನಿಮಗೆ ಯಾವುದೇ ವಿಷಯದಲ್ಲಿ ಗೊಂದಲವಿದ್ದರೂ ಇನ್ನೊಬ್ಬರನ್ನು ಕೇಳಿ ಇದನ್ನು ಬಗೆಹರಿಸಿಕೊಳ್ಳಬಹುದು ಎನ್ನುತ್ತಾರೆ ಚಾಣಕ್ಯ. ಶಿಕ್ಷಣದಲ್ಲಿ ಯಶಸ್ವಿಯಾಗ್ಬೇಕೆಂದ್ರೆ ಇಬ್ಬರು ಒಟ್ಟಿಗೆ ಓದುವುದನ್ನು ರೂಢಿಸಿಕೊಳ್ಳಿ.

ಉಳಿದ ಪೂಜಾ ಸಾಮಗ್ರಿಗಳನ್ನು ಎಸೆಯುವ ತಪ್ಪನ್ನು ಮಾಡಬೇಡಿ, ಹೀಗೆ ಬಳಸಿ..

ಏಕಾಂಗಿಯಾಗಿ ತಪಸ್ಸು ಮಾಡಿ : ಆಚಾರ್ಯ ಚಾಣಕ್ಯರ (Acharya Chanakya) ಪ್ರಕಾರ, ತಪಸ್ಸಿನ ನಿಜವಾದ ಫಲವು ಯಾವಾಗಲೂ ಒಂಟಿಯಾಗಿ ತಪಸ್ಸು ಮಾಡುವುದರಿಂದಲೇ ಸಿಗುತ್ತದೆ. ಚಾಣಕ್ಯನ ನೀತಿಯ ಪ್ರಕಾರ, ಅನೇಕರು ಒಟ್ಟಿಗೆ ಕುಳಿತು ತಪಸ್ಸನ್ನು ಮಾಡಬಾರದು. ಇದ್ರಿಂದ ಮನಸ್ಸು ಚಂಚಲಗೊಳ್ಳುತ್ತದೆ. ತಪಸ್ಸು ಮಾಡಲು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ತಪಸ್ಸು ಯಶಸ್ವಿಯಾಗ್ಬೇಕು ಹಾಗೆ ತಪಸ್ಸಿನ ಫಲ ನಿಮಗೆ ಸಿಗಬೇಕೆಂದ್ರೆ ನೀವು ಗುಂಪಾಗಿ ಅಲ್ಲ ಒಬ್ಬರೇ ತಪಸ್ಸು ಮಾಡ್ಬೇಕು ಎನ್ನುತ್ತಾರೆ ಚಾಣಕ್ಯ.

ಮನರಂಜನೆ : ಸಿನಿಮಾ ಥಿಯೇಟರ್ ಗೆ ಇರಲಿ ಇಲ್ಲ ಯಾವುದೋ ಕಾರ್ಯಕ್ರಮಕ್ಕೆ ಇರಲಿ ಒಬ್ಬರೇ ಹೋದಾಗ ನಿಮಗೆ ಮನರಂಜನೆ ಸಂಪೂರ್ಣವಾಗಿ ಸಿಗುವುದಿಲ್ಲ. ಇದನ್ನೇ ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರ ಪ್ರಕಾರ, ಒಬ್ಬರೇ ಮನರಂಜನೆಯನ್ನು (Entertainment) ಆನಂದಿಸುವುದು ಕಷ್ಟದ ಕೆಲಸ. ಆದ್ದರಿಂದ ಮನರಂಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಕನಿಷ್ಠ ಮೂರು ಜನರು ಒಟ್ಟಿಗೆ ಇರಬೇಕು. ಮೂರು ಜನರ ಗುಂಪಿನಲ್ಲಿ ಕುಳಿತರೆ ನೀವು ಸಂಪೂರ್ಣ ಆನಂದವನ್ನು ಪಡೆಯಬಹುದು.

Numerology Today: ಸಂಬಂಧದಲ್ಲಿ ಹೆಚ್ಚುವ ಅಂತರ, ಈ ಸಂಖ್ಯೆಯವರು ಎಚ್ಚರ

ಬೇಸಾಯದಲ್ಲಿ (Farming) ನೆರವು: ಇನ್ನು ಬೇಸಾಯದ ವಿಷ್ಯಕ್ಕೆ ಬಂದ್ರೆ ಒಬ್ಬರಿಂದ ಎಲ್ಲ ಕೆಲಸ ಸಾಧ್ಯವಿಲ್ಲ. ಇಬ್ಬರಿಂದಲೂ ಇದು ಆಗದ ಮಾತು. ಚಾಣಕ್ಯ ನೀತಿಯ ಪ್ರಕಾರ, ಬೇಸಾಯವು ಒಬ್ಬರಿಂದ ಇಬ್ಬರಿಗೆ ಸಂಬಂಧಿಸಿದ ವಿಷಯವಲ್ಲ. ಆದರೆ ಉತ್ತಮ ಕೃಷಿಗೆ ಅನೇಕ ಜನರ ಸಹಕಾರ ಬೇಕಾಗುತ್ತದೆ. ಕನಿಷ್ಠ ಐದು ಜನ ಒಟ್ಟಿಗೆ ಸೇರಿ ಕೃಷಿ ಮಾಡಿದ್ರೆ ಹೊಲದಲ್ಲಿ ಫಲ ನೋಡ್ಬಹುದು ಎನ್ನುತ್ತಾರೆ ಆಚಾರ್ಯ ಚಾಣಕ್ಯ. 

ಯುದ್ಧ (War): ರಣಾಂಗಣದಲ್ಲಿ ಒಬ್ಬರೇ ಹೋರಾಟಕ್ಕೆ ಇಳಿದ್ರೆ ಇದು ವ್ಯರ್ಥ್ಯ ಪ್ರಯತ್ನವಾಗುತ್ತದೆ. ಯುದ್ಧವೆಂದ್ಮೇಲೆ  ಸೈನಿಕರ ಸಂಖ್ಯೆ ಹೆಚ್ಚಿರಬೇಕು. ಯುದ್ಧ ಎಲ್ಲೇ ಇರಲಿ, ಏನೇ ಇರಲಿ ಆದರೆ ಪ್ರತಿಯೊಂದು ಯುದ್ಧವನ್ನು ಗೆಲ್ಲಲು ಹೆಚ್ಚಿನ ಜನರ ಅವಶ್ಯಕತೆಯಿರುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ.
 

Latest Videos
Follow Us:
Download App:
  • android
  • ios