ಗುರು ಪೂರ್ಣಿಮಾ 2022ದಂದು ತ್ರಿಗ್ರಾಹಿ ಯೋಗ; ಈ ರಾಶಿಗಳ ಅದೃಷ್ಟ ಆರಂಭ..

ಗುರು ಪೂರ್ಣಿಮಾ 2022: ಗುರು ಪೂರ್ಣಿಮೆಯಂದು ಗ್ರಹಗಳ ವಿಶೇಷ ಸಂಯೋಜನೆಯಿಂದಾಗಿ ಮೂರು ರಾಶಿಚಕ್ರ ಚಿಹ್ನೆಗಳ ಭವಿಷ್ಯವು ಬದಲಾಗುತ್ತದೆ. 

A special combination of planets is being made on Guru Purnima the fate of these three zodiac signs will change skr

ಗುರು ಪೂರ್ಣಿಮೆ(Guru Purnima)ಯ ದಿನದಂದು, ಗ್ರಹಗಳ ವಿಶೇಷ ಸ್ಥಾನವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರ ಯೋಗವನ್ನು ಮಾಡುತ್ತಿದೆ. ಈ ಅವಧಿಯಲ್ಲಿ, ಈ ರಾಶಿಚಕ್ರದ ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯೊಂದಿಗೆ ಹಣವನ್ನು ಪಡೆಯಬಹುದು.

ಗುರು ಪೂರ್ಣಿಮಾ 2022 ದಿನಾಂಕ(date)
ಹಿಂದೂ ಧರ್ಮದಲ್ಲಿ, ಆಷಾಢ ಮಾಸವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ಬರುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಗುರು ಪೂರ್ಣಿಮೆಯ ದಿನದಂದು ಗುರುವನ್ನು ಪೂಜಿಸುವ ಮಹತ್ವವನ್ನು ಗ್ರಂಥಗಳಲ್ಲಿ ಹೇಳಲಾಗಿದೆ. ಮಹಾಭಾರತದ ರಚನೆಕಾರ ಮತ್ತು ವೇದಗಳ ವರ್ಗೀಕರಿಸಿದ ಖ್ಯಾತಿಯ ಮಹಾಗುರು ವೇದವ್ಯಾಸ(VedaVyas)ರ ಹುಟ್ಟಿದ ದಿನವಿಂದು. ಈ ವರ್ಷ ಜುಲೈ 13ರಂದು ಗುರು ಪೂರ್ಣಿಮೆ ಆಚರಿಸಲಾಗುತ್ತಿದೆ.

'ಗುರು ದೇವೋ ಭವ'  ಎಂದು ಗುರುವನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಸಂಸ್ಕೃತಿ ನಮ್ಮದು.  ನಾವು ಗುರುವನ್ನು ಕೇವಲ ಶಿಕ್ಷಣ ನೀಡುವವರಲ್ಲದೆ ಮೌಲ್ಯಗಳನ್ನು ಕಲಿಸುವ ಮತ್ತು ಅಗತ್ಯ ಜೀವನ ಪಾಠಗಳನ್ನು ಕಲಿಸುವ ವ್ಯಕ್ತಿ ಎಂದು ನೋಡುತ್ತೇವೆ. ಗುರುಗಳು ಕಲಿಸಿದ ಪಾಠಗಳು ಜೀವನದುದ್ದಕ್ಕೂ ನಮ್ಮನ್ನು ಕಾಯುತ್ತದೆ. ಹಾಗಾಗಿ, ಗುರು ಪೂರ್ಣಿಮೆಯ ದಿನ ಬಹಳ ಮಹತ್ವದ್ದಾಗಿದೆ.

ಇದನ್ನೂ ಓದಿ: ಗುರು ಪೂರ್ಣಿಮಾ 2022; ಹಿಂದೂ, ಜೈನ, ಬೌದ್ಧರೆಲ್ಲರಿಗೂ ಮಹತ್ವದ ದಿನ..

ಈ ವರ್ಷ ಗುರು ಪೂರ್ಣಿಮೆಯಂದು ಗ್ರಹಗಳ ವಿಶೇಷ ಸಂಯೋಗದಿಂದ ಈ ದಿನದ ಮಹತ್ವ ಹೆಚ್ಚುತ್ತಿದೆ. ಈ ಬಾರಿಯ ಗುರುಪೂರ್ಣಿಮೆಯ ದಿನದಂದು ಮೂರು ಪ್ರಮುಖ ಗ್ರಹಗಳು ಒಂದೇ ರಾಶಿಯಲ್ಲಿ ಕುಳಿತುಕೊಳ್ಳುವುದರಿಂದ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಈ ದಿನ, ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳು ಮಿಥುನ(Gemini) ರಾಶಿಯಲ್ಲಿ ಒಟ್ಟಿಗೆ ಇರುತ್ತಾರೆ. ತ್ರಿಗ್ರಾಹಿ ಯೋಗವು ಯಾವ ರಾಶಿಗೆ ಲಭಿಸುತ್ತದೋ ಅವರು ಅದೃಷ್ಟವಂತರೇ ಸರಿ. ಗ್ರಹಗಳ ಈ ಸಂಯೋಗದಿಂದ ಯಾವ ರಾಶಿಚಕ್ರ ಚಿಹ್ನೆ(Zodiac signs)ಗಳಿಗೆ ಲಾಭವಾಗುತ್ತದೆ ಎಂದು ತಿಳಿಯೋಣ. 

ಮಿಥುನ(Gemini)
ಮಿಥುನ ರಾಶಿಯ ಜನರು ಸ್ವರಾಶಿಯಲ್ಲಿ ತ್ರಿಗ್ರಾಹಿ ಯೋಗದಿಂದ ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಬಹುದು. ಈ ಸಮಯದಲ್ಲಿ, ನಿಮ್ಮ ಖರ್ಚುಗಳನ್ನು ನಿಯಂತ್ರಿಸುವಿರಿ ಮತ್ತು ಹಣವನ್ನು ಸಂಗ್ರಹಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಬಹಳ ಸಮಯದಿಂದ ಕಾಡುತ್ತಿರುವ ಕೌಟುಂಬಿಕ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ವಿವಾಹಿತರು ಸಂಗಾತಿಯಿಂದ ಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಹಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸಬಹುದು.

ಇದನ್ನೂ ಓದಿ: ಗುರು ಪೂರ್ಣಿಮಾ ಜುಲೈ 2022: ಯಾವಾಗ, ಮಹತ್ವವೇನು? ಆಚರಣೆ ಹೇಗೆ?

ತುಲಾ(Libra)
ತುಲಾ ರಾಶಿಯವರಿಗೆ ತ್ರಿಗ್ರಹ ಯೋಗದಿಂದಾಗಿ ಆರ್ಥಿಕ ಲಾಭದ ಸಾಧ್ಯತೆ ಇದೆ. ಎಲ್ಲಿಂದಲಾದರೂ ದಿಢೀರ್ ಹಣ ಬರಬಹುದು. ಇದರಲ್ಲಿ ನಿಮ್ಮ ಬಹು ಕಾಲದ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೊಸ ಉದ್ಯೋಗಾವಕಾಶಗಳು ದೊರೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯಬಹುದು. ಮಾತು ಮಾಧುರ್ಯವಿರುತ್ತದೆ. ಶುಭ ಕಾರ್ಯಗಳಿಗೆ ಸಮಯ ಅನುಕೂಲಕರವಾಗಿರುತ್ತದೆ. ಅವಿವಾಹಿತರಿಗೆ ಸಂಬಂಧಗಳು ಕೂಡಿ ಬರಬಹುದು.

ಧನು(Sagittarius)
ಧನು ರಾಶಿಯ ಜನರು ಕೆಲಸದ ಸ್ಥಳದಲ್ಲಿ ಅಭಿನಂದನೆಗಳನ್ನು ಪಡೆಯಬಹುದು. ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷ ಪಡುತ್ತಾರೆ. ಸಮಯವು ಆಸ್ತಿಯಲ್ಲಿ ಹೂಡಿಕೆ ಮಾಡಲು ಅನುಕೂಲಕರವಾಗಿರುತ್ತದೆ. ಕಟ್ಟಡ ಅಥವಾ ವಾಹನವು ಸಂತೋಷವನ್ನು ನೀಡುತ್ತದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಒಳ್ಳೆಯ ಸುದ್ದಿ ಪಡೆಯಬಹುದು. ಹಣದ ಆಗಮನಕ್ಕೆ ಹೊಸ ಮಾರ್ಗಗಳು ತೆರೆಯುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios