ಇಂದು ಸೂರ್ಯನು ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಒಂದು ತಿಂಗಳ ಕಾಲ ಆತ ಅಲ್ಲಿಯೇ ಇರಲಿದ್ದಾನೆ. ಇದರ ಪರಿಣಾಮ ಎಲ್ಲ ರಾಶಿಗಳ ಮೇಲಿದ್ದರೂ 5 ರಾಶಿಗಳ ಮೇಲೆ ಅಗಾಧವಾಗಿರಲಿದೆ.
ಫೆಬ್ರವರಿ 13ರ ಬೆಳಗಿನ ಜಾವ 3.28ಕ್ಕೆ ಸೂರ್ಯನು ಮಕರದಿಂದ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಮಾರ್ಚ್ 14ರ ಬೆಳಗ್ಗೆ 12.16ರವರೆಗೂ ಇಲ್ಲಿಯೇ ಇರಲಿದ್ದಾನೆ. ರಾಶಿಚಕ್ರಗಳ ರಾಜನಾದ ಸೂರ್ಯನ ಈ ಚಲನೆಯ ಪರಿಣಾಮ ಎಲ್ಲ ರಾಶಿಗಳ ಮೇಲಾಗಲಿದೆ. ಐದು ರಾಶಿಗಳ ಮೇಲೆ ಅಗಾಧವಾಗಿರಲಿದೆ. ಈ ಕುಂಭ ಸಂಕ್ರಾಂತಿಯು ನಿಮ್ಮ ರಾಶಿಯ ಮೇಲೆ ಬೀರುವ ಪರಿಣಾಮಗಳನ್ನು ನೋಡಿ.
ಮೇಷ(Aries)
ಸೂರ್ಯನು ಮೇಷದ 11ನೇ ಮನೆಯಲ್ಲಿರಲಿದ್ದಾನೆ. ಇದು ಆದಾಯ ಹಾಗೂ ಆಸೆಗಳ ಪೂರೈಕೆ(wish fulfilment)ಗೆ ಸಂಬಂಧಿಸಿದ್ದು. ಕುಂಭ ಸಂಕ್ರಾಂತಿಯ ಪರಿಣಾಮವಾಗಿ ನಿಮ್ಮ ಆದಾಯ ಹೆಚ್ಚಲಿದೆ, ಪರಿಶ್ರಮ ಫಲ ಕೊಡಲಿದೆ. ಧನಲಾಭ ತರುವಂಥ ಅನೇಕ ಅವಕಾಶಗಳು ನಿಮಗೆ ದೊರೆಯಲಿವೆ. ಬಹಳ ಕಾಲದಿಂದ ನೆರವೇರದ ಆಸೆಗಳೂ ಈಡೇರಲಿವೆ. ಇನ್ನೊಂದು ತಿಂಗಳ ಕಾಲ ಪ್ರತಿ ರಾತ್ರಿ ಮಲಗುವಾಗ 5 ಬಾದಾಮಿಗಳನ್ನು(almonds) ತಲೆಯ ಬಳಿ ಇಟ್ಟುಕೊಂಡು, ಬೆಳಗ್ಗೆ ಅದನ್ನು ದೇವಾಲಯಕ್ಕೆ ದಾನ ಮಾಡಿ. ಇದರಿಂದ ಒಳಿತಾಗುತ್ತದೆ.
ವೃಷಭ(taurus)
ಕುಂಭ ಸಂಕ್ರಾಂತಿಯಿಂದ ನಿಮ್ಮ ಉದ್ಯೋಗ, ಉದ್ಯಮ, ವ್ಯಾಪಾರಗಳಲ್ಲಿ ಬಹಳಷ್ಟು ಯಶಸ್ಸು ದೊರೆಯಲಿದೆ. ಜೊತೆಗೆ, ನಿಮ್ಮ ತಂದೆಯೂ ಯಶಸ್ಸಿನತ್ತ ಸಾಗಲಿದ್ದಾರೆ. ಏಕೆಂದರೆ, ಸೂರ್ಯನು ತಂದೆ, ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ನಿಮ್ಮ ಜಾತಕದ 10ನೇ ಮನೆಯಲ್ಲಿದ್ದಾನೆ. ಅಭಿವೃದ್ಧಿ ಹೆಚ್ಚಲು, ಇನ್ನೊಂದು ತಿಂಗಳ ಕಾಲ ಹೊರ ಹೋಗುವಾಗ ತಲೆಯನ್ನು ಕವರ್ ಮಾಡಿಕೊಳ್ಳಿ.
ಮಿಥುನ(Gemini)
ಸೂರ್ಯನ ಈ ಚಲನೆಯಿಂದ ನಿಮ್ಮ ಅದೃಷ್ಟ ಹೆಚ್ಚಲಿದೆ. ನೀವೇನೇ ಕೆಲಸ ಮಾಡಿದರೂ ಅದು ಖಂಡಿತಾ ಅದೃಷ್ಟದ ಬಲದಿಂದ ಈಡೇರಲಿದೆ. ಕೆಲಸದಲ್ಲಿ ತೃಪ್ತಿ ಇರಲಿದೆ. ಈ ಅದೃಷ್ಟವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಲು ಮನೆಯಲ್ಲಿ ಹಿತ್ತಾಳೆ(brass) ಪಾತ್ರೆಯನ್ನು ಬಳಸಿ ಹಾಗೂ ಹಿತ್ತಾಳೆಯ ಯಾವ ವಸ್ತುವನ್ನೂ ಇನ್ನೊಂದು ತಿಂಗಳು ಯಾರಿಗೂ ಕೊಡಬೇಡಿ.
ಕಟಕ(Cancer)
ನಿಮ್ಮ ರಾಶಿಯ 8ನೇ ಮನೆಗೆ ಸೂರ್ಯ ಆಗಮಿಸಿದ್ದಾನೆ. ಈ ಮನೆಯು ಆರೋಗ್ಯ(health)ಕ್ಕೆ ಸಂಬಂಧಿಸಿದೆ. ಹೀಗಾಗಿ, ಈ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಬಹುದು. ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು ಎಂದರೆ ಕಪ್ಪು ಹಸುವಿಗೆ ಹಸಿವು ನೀಗಿಸಿ ಹಾಗೂ ಸಾಧ್ಯವಾದಾಗಲೆಲ್ಲ ನಿಮ್ಮ ಹಿರಿಯ ಸಹೋದರನಿಗೆ ಸಹಾಯ ಮಾಡಿ.
ಸಿಂಹ(Leo)
ಸೂರ್ಯನ ಈ ಚಲನೆಯಿಂದ ನೀವು ಸಂಗಾತಿಯೊಂದಿಗೆ ಜಗಳ, ಮುನಿಸು, ಕೋಪ ತಾಪ ಎದುರಿಸಬೇಕಾಗಬಹುದು. ಸಂಗಾತಿ(spouse)ಯೊಂದಿಗೆ ಸಂಬಂಧ ಚೆನ್ನಾಗಿಟ್ಟುಕೊಳ್ಳಲು ಹೆಚ್ಚಿನ ಪ್ರಯತ್ನ ಹಾಕಬೇಕಾಗುತ್ತದೆ. ಈ ಸಮಸ್ಯೆಯಿಂದ ಮುಕ್ತರಾಗಲು, ನಿಮ್ಮ ಆಹಾರದಲ್ಲಿ ಸಣ್ಣ ಭಾಗವನ್ನು ಅಗತ್ಯವಿರುವವರಿಗೆ ನೀಡಿ.
Astro tips : ಈ ನಾಲ್ಕು ರಾಶಿಯವರಿಗೆ ಅದೃಷ್ಟ ತರಲಿದೆ ಚಿನ್ನ!
ಕನ್ಯಾ(Virgo)
ಸೂರ್ಯನು ಈ ರಾಶಿಯ 6ನೇ ಮನೆ ಪ್ರವೇಶಿಸಿದ್ದಾನೆ. ಇದು ಗೆಳೆಯರಿಗೆ ಸಂಬಂಧಿಸಿದ್ದು. ಹಾಗಾಗಿ, ಸೂರ್ಯನ ಈ ಚಲನೆಯಿಂದ ನಿಮ್ಮ ಗೆಳೆಯರ(friends) ಸಂಖ್ಯೆ ಹೆಚ್ಚಲಿದೆ. ನಿಮ್ಮ ಗೆಳೆಯರು ಎಲ್ಲ ಸಂದರ್ಭಗಳಲ್ಲೂ ನಿಮ್ಮ ನೆರವಿಗೆ ಸಿದ್ಧರಿರುತ್ತಾರೆ. ಇದು 1 ತಿಂಗಳು ಹೀಗೆಯೇ ಇರಲು ದೇವಸ್ಥಾನಕ್ಕೆ ರಾಗಿ(millet) ದಾನ ಮಾಡಿ.
ತುಲಾ(Libra)
ಸೂರ್ಯನ ಈ ಚಲನೆಯಿಂದ ನಿಮ್ಮ ಏಕಾಗ್ರತೆಗೆ ಭಂಗ ಬರಬಹುದು. ಓದಿನಿಂದ ಬೇರೆಲ್ಲ ಕಡೆ ಚಂಚಲಗೊಳ್ಳಬಹುದು. ಗುರುವಿನೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಿ. ಮಗುವಿನ ಜೊತೆಗೆ ಕೂಡಾ. ಚಿಕ್ಕ ಮಕ್ಕಳಿಗೆ ಉಡುಗೊರೆ ನೀಡುವುದರಿಂದ ಪರಿಸ್ಥಿತಿ ಉತ್ತಮವಾಗುವುದು.
Lord Shiva: ಶಿವನಿಗೇಕೆ ಮೂರು ಕಣ್ಣುಗಳು? ಮೂರನೇ ಕಣ್ಣೇನು ನೋಡುತ್ತದೆ?
ವೃಶ್ಚಿಕ(Scorpio)
ಸೂರ್ಯನ ಈ ನಡೆಯಿಂದ ನಿಮಗೆ ತಾಯಿಯ ಸಹಕಾರ ಚೆನ್ನಾಗಿ ಸಿಗಲಿದೆ. ಜೊತೆಗೆ, ಭೂಮಿ, ಕಟ್ಟಡ, ವಾಹನ ಭಾಗ್ಯವಿದೆ. ಈ ಭಾಗ್ಯ ಉಳಿಸಿಕೊಳ್ಳಲು ದೇವಾಲಯಕ್ಕೆ ಬೆಲ್ಲ(jaggery) ದಾನ ಮಾಡಿ.
ಧನು(Sagittarius)
ಧನು ರಾಶಿಗೆ ಸಹೋದರ, ಸಹೋದರಿಯರ ಸಂಪೂರ್ಣ ಸಹಕಾರ ತಂದು ಕೊಡಲಿದ್ದಾನೆ ಸೂರ್ಯ. ಜೊತೆಗೆ, ನೀವು ಮತ್ತೊಬ್ಬರೆದುರು ಸಂಪೂರ್ಣವಾಗಿ ಮಾತುಗಳಲ್ಲಿ ಭಾವನೆ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಪ್ರತಿದಿನ 'ಓಂ ಘ್ರಿನಿಃ ಸೂರ್ಯಾಯ ನಮಃ' ಮಂತ್ರ ಹೇಳಿಕೊಳ್ಳಿ.
ಮಕರ(Capricorn)
ಕುಂಭ ಸಂಕ್ರಾಂತಿಯಿಂದ ನೀವು ಹಣ ಗಳಿಸಲು ಹೆಚ್ಚಿನ ಪ್ರಯತ್ನ ಹಾಕಬೇಕಾಗುತ್ತದೆ. ಜೊತೆಗೆ ಹಣದ ಚಲಾವಣೆ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕಾಗುತ್ತದೆ. ದೇವಾಲಯಕ್ಕೆ ಕೊಬ್ಬರಿ ಎಣ್ಣೆ(coconut oil) ದಾನ ಮಾಡಿ.
ಕುಂಭ(Aquarius)
ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಸಂಗಾತಿಯೊಂದಿಗಿನ ಸಂಬಂಧ ಹೆಚ್ಚು ಬಲವಾಗಿರಲಿದೆ. ನಿಮ್ಮ ಮೇಲಿನ ಗೌರವ ಹೆಚ್ಚಲಿದೆ. ನಿಮ್ಮ ಮಗುವಿನ ಯಶಸ್ಸನ್ನು ಕೂಡಾ ಕಾಣಲಿದ್ದೀರಿ. ಸೂರ್ಯದೇವನಿಗೆ ಅರ್ಘ್ಯ ಬಿಡಿ.
ಮೀನ(pieces)
ಸೂರ್ಯನ ಈ ಚಲನೆಯಿಂದ ಲೈಂಗಿಕ ಸುಖ ಹೆಚ್ಚಲಿದೆ. ಜೊತೆಗೆ ಖರ್ಚುಗಳೂ ಹೆಚ್ಚಲಿವೆ. ಬೇಡದ ವಸ್ತುಗಳ ಮೇಲೆ ಹಣ ಸುರಿಯಬೇಡಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಹಾಗೂ ಮನೆಯ ಕಿಟಕಿ, ಬಾಗಿಲುಗಳನ್ನು ಬೆಳಗಿನ ಹೊತ್ತು ತೆರೆದಿಡಿ.
