Asianet Suvarna News Asianet Suvarna News

Chanakya Niti: ಈ ಐದು ವಿಷಯಗಳು ಭ್ರೂಣವಾಗಿದ್ದಾಗಲೇ ನಿರ್ಧರಿತವಾಗಿರುತ್ತೆ, ಅವನ್ನು ಬದಲಿಸಲು ಸಾಧ್ಯವಿಲ್ಲ!

ನಮ್ಮ ಹಣೆಬರಹದಲ್ಲಿ ಹುಟ್ಟುವ ಮೊದಲೇ 5 ವಿಷಯಗಳನ್ನು ಬರೆಯಲಾಗಿದೆ. ಯಾರೂ ಬಯಸಿದರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯ. ಆ ಐದು ವಿಷಯಗಳು ಯಾವುವು ನೋಡೋಣ. 

5 decisions of fate are decided in the womb itself says Chanakya skr
Author
Bangalore, First Published Jun 22, 2022, 3:35 PM IST

ತಮ್ಮ ಕುಟಿಲ ತಂತ್ರಗಳಿಗಾಗಿ ಕೌಟಿಲ್ಯ ಎಂದೇ ಹೆಸರಾಗಿದ್ದ ಆಚಾರ್ಯ ಚಾಣಕ್ಯ(Acharya Chanakya)ರು ಉತ್ತಮ ರಾಜತಾಂತ್ರಿಕರು. ಅವರು ಕೇವಲ ಆರ್ಥಿಕ ವಿಷಯವಲ್ಲ, ಜೀವನದ ಹಲವು ಮಜಲುಗಳ ಬಗ್ಗೆಯೂ ಬರೆದಿದ್ದಾರೆ. ಅವರ ಒಂದೊಂದು ಚಿಂತನೆ, ಮಾತುಗಳೂ ಉತ್ತಮ ತರ್ಕಗಳಾಗಿ ಗುರುತಿಸಿಕೊಂಡಿವೆ. ದೈನಂದಿನ ಜೀವನಕ್ಕೆ ಬಹಳ ಪ್ರಯೋಜನಕಾರಿ ಎನಿಸಿವೆ. 
ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಹಣೆಬರಹದೊಂದಿಗೆ ಹುಟ್ಟುತ್ತಾನೆ. ಚಾಣಕ್ಯ ಅವರ ಪ್ರಕಾರ, ಮಗು ತಾಯಿಯ ಹೊಟ್ಟೆಯಲ್ಲಿದ್ದಾಗಲೇ, ಅದರ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಇದನ್ನು ಆಚಾರ್ಯ ಚಾಣಕ್ಯರು ತಮ್ಮ ನೀತಿ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಚಾಣಕ್ಯ ಹೇಳುತ್ತಾರೆ, ನಮ್ಮ ಹಣೆಬರಹದಲ್ಲಿ ಹುಟ್ಟುವ ಮೊದಲೇ 5 ವಿಷಯಗಳನ್ನು ಬರೆಯಲಾಗಿದೆ. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಗರ್ಭದಲ್ಲಿರುವ ವ್ಯಕ್ತಿಯ ಭವಿಷ್ಯಕ್ಕೆ ಸಂಬಂಧಿಸಿದ ಆ ಐದು ವಿಷಯಗಳು ಯಾವುವು ಎಂದು ತಿಳಿಯೋಣ.

ವಯಸ್ಸು(age)
ಈ ಶ್ಲೋಕದಲ್ಲಿ, ಮಗು ಎಷ್ಟು ಬದುಕುತ್ತದೆ ಎಂಬುದನ್ನು ಚಾಣಕ್ಯ ಹೇಳುತ್ತಾನೆ. ಇದು ಅಲ್ಪಾವಧಿಯ ಅಥವಾ ದೀರ್ಘಾವಧಿಯ ಜೀವನವೇ, ಅವನು ಈ ಜಗತ್ತಿಗೆ ಬರಲು ಸಾಧ್ಯವೇ ಇಲ್ಲವೇ? ಇದು ತಾಯಿಯ ಗರ್ಭದಲ್ಲಿಯೇ ಸ್ಥಿರವಾಗಿರುತ್ತದೆ. ಹುಟ್ಟಿದವನು ಒಂದು ನಿರ್ದಿಷ್ಟ ಸಮಯದಲ್ಲಿ ಸಾಯಲೇಬೇಕು, ಸಾಯುತ್ತಾನೆ. ಮುಂಚಿತ ನಿರ್ಧಾರವಾದ ವಯಸ್ಸಿಗಿಂತ ಮುಂಚೆಯಾದರೆ ಭೂಕಂಪದ ನಡುವೆ ಸಿಕ್ಕರೂ ವ್ಯಕ್ತಿ ಬದುಕಿ ಬರುತ್ತಾನೆ. ಅದನ್ನೇ ಆಡುಭಾಷೆಯಲ್ಲಿ ಪವಾಡ ಎಂದು ಸುಮ್ಮನಾಗುತ್ತೇವೆ. 

ಪುರಿಯ ಜಗನ್ನಾಥನಿಗೆ ಅನಾರೋಗ್ಯ; ಈ ರೀತಿ ನಡೆಯುತ್ತಿದೆ ಚಿಕಿತ್ಸೆ!

ಹಣೆಬರಹ(Destiny)
ಯಾರೂ ಸಮಯಕ್ಕಿಂತ ಮುಂಚಿತವಾಗಿ ಮತ್ತು ಅದೃಷ್ಟಕ್ಕಿಂತ ಹೆಚ್ಚಿನದನ್ನು ಪಡೆಯುವುದು ಸಾಧ್ಯವೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ಮಕ್ಕೆ ಅನುಗುಣವಾಗಿ ಸುಖ-ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಈ ಕರ್ಮಗಳು ವರ್ತಮಾನದಿಂದ ಮಾತ್ರವಲ್ಲ, ಹಿಂದಿನ ಜನ್ಮದಿಂದಲೂ ನಿರ್ಧರಿಸಲ್ಪಡುತ್ತವೆ. ನೀವು ಒಂದು ಮಿಲಿಯನ್ ಪ್ರಯತ್ನಗಳನ್ನು ಮಾಡಬಹುದು, ಆದರೆ ನಿಮ್ಮ ಒಳ್ಳೆಯದು ಮತ್ತು ಕೆಟ್ಟದ್ದನ್ನು ಕರ್ಮದ ಆಧಾರದ ಮೇಲೆ ಮಾತ್ರ ನಿರ್ಧರಿಸಲಾಗುತ್ತದೆ. ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ, ಆದರೆ, ಅದು ಈಗಿನ ಪ್ರಯತ್ನ ಮಾತ್ರಕ್ಕೆ ಮೀಸಲಲ್ಲ ಎನ್ನುತ್ತಾರೆ ಚಾಣಕ್ಯ. ಇದೇ ಕಾರಣಕ್ಕೆ ಹಲವರು ಎಷ್ಟೇ ಒದ್ದಾಡಿದರೂ ಅವರು ಬಯಸಿದ ಯಶಸ್ಸು ಸಿಗುವುದಿಲ್ಲ. ಹಣೆಬರಹದಲ್ಲಿ ಬರೆದದ್ದು ಬಿಟ್ಟು ಬೇರೇನೂ ಪಡೆಯಲಾಗುವುದಿಲ್ಲ.

ಹಣ ಮತ್ತು ಜ್ಞಾನ(money and knowledge)
ಮಗುವಿನ ಹಣೆಬರಹದಲ್ಲಿ ಹಣವಿದೆಯೋ ಇಲ್ಲವೋ ಎಂಬುದು ತಾಯಿಯ ಗರ್ಭದಲ್ಲಿಯೇ ನಿರ್ಧಾರವಾಗುತ್ತದೆ. ಮತ್ತೊಂದೆಡೆ, ಜ್ಞಾನದ ಸಾಧನೆಯು ನಮ್ಮ ಮೊದಲ ಜನ್ಮದಿಂದಲೇ ನಿರ್ಧರಿಸಲ್ಪಡುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಮಗು ಎಷ್ಟು ದೂರ ಓದುತ್ತದೆ, ಅವನು ಜ್ಞಾನವನ್ನು ಗಳಿಸಿದರೆ, ಅವನು ಅದನ್ನು ಜೀವನದಲ್ಲಿ ಎಷ್ಟು ಬಳಸಿಕೊಳ್ಳಬಹುದು, ಮಗು ಹಾಕಿದ ಶ್ರಮಕ್ಕೆ ತಕ್ಕಂತೆ ಹಣ ಗಳಿಸುತ್ತಾನೆಯೇ, ಆತ ಬುದ್ಧಿವಂತನಾಗುತ್ತಾನೋ, ದಡ್ಡನೋ ಎಲ್ಲವೂ ಭ್ರೂಣಾವಸ್ಥೆಯಲ್ಲೇ ನಿರ್ಧಾರವಾಗಿರುತ್ತದೆ. ಅದನ್ನು ತಿಪ್ಪರಲಾಗ ಹಾಕಿದರೂ ಬದಲಿಸಲಾಗದು. 

ಈ ರಾಶಿಗಳಿಗೆ ಎಷ್ಟೇ ಸಂಬಳ ಬಂದರೂ ತಿಂಗಳ ಮಧ್ಯದ ಹೊತ್ತಿಗೇ ಖಾತೆ ಖಾಲಿ!

ಸಾವು(death)
ಸಾವಿನ ಮೊತ್ತವು ವ್ಯಕ್ತಿಯ ಜೀವನದಲ್ಲಿ ಸುಮಾರು 101 ಬಾರಿ ರೂಪುಗೊಳ್ಳುತ್ತದೆ ಎಂದು ಚಾಣಕ್ಯ ನಂಬಿದ್ದರು. ಇದರಲ್ಲಿ ಒಮ್ಮೆ ಸಾವು ಸಂಭವಿಸಿದರೆ ಉಳಿದದ್ದು ಅಕಾಲಿಕ ಮರಣ. ಈ ಅಕಾಲಿಕ ಮರಣಗಳನ್ನು ಕರ್ಮ ಮತ್ತು ಆನಂದದಿಂದ ಬದಲಾಯಿಸಬಹುದು. ವ್ಯಕ್ತಿಯ ಜೀವಿತಾವಧಿ ಕೂಡಾ ಹುಟ್ಟುವಾಗಲೇ ನಿರ್ಧರಿತವಾಗಿರುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios