ಈ ರಾಶಿಯವರು ತಂತ್ರಜ್ಞಾನ ವ್ಯಸನಿಗಳು, ಸದಾ ಗ್ಯಾಜೆಟ್‌ಗೆ ಅಂಟಿಕೊಂಡಿರುತ್ತಾರೆ!
ಗ್ಯಾಜೆಟ್‌ಗಳಿಂದ ಹೆಚ್ಚು ಆಕರ್ಷಿತರಾಗಿರುವ ಮತ್ತು ತಂತ್ರಜ್ಞಾನಕ್ಕೆ ಅಂಟಿಕೊಂಡಿರುವ 4 ರಾಶಿಚಕ್ರದ ಚಿಹ್ನೆಗಳು ಇಲ್ಲಿವೆ.
ತಂತ್ರಜ್ಞಾನವು ಇನ್ನಿಲ್ಲದಂತೆ ನಮ್ಮನ್ನು ಆಕರ್ಷಿಸುತ್ತದೆ ಎಂಬುದು ರಹಸ್ಯವಲ್ಲ. ಅಂತ್ಯವಿಲ್ಲದ ಸ್ಕ್ರೋಲಿಂಗ್‌ನಿಂದ ಬಿಂಜ್-ವೀಕ್ಷಣೆಯವರೆಗೆ- ನಮ್ಮಲ್ಲಿ ಬಹಳಷ್ಟು ಜನರು ಗ್ಯಾಜೆಟ್‌ಗಳನ್ನು ವಿರೋಧಿಸಲು ಸಾಧ್ಯವಿಲ್ಲ ಮತ್ತು ಅದರ ನ್ಯೂನತೆಗಳನ್ನು ತಿಳಿಯದೆ ಇತ್ತೀಚಿನ ಪ್ರಗತಿಯಲ್ಲಿ ಪಾಲ್ಗೊಳ್ಳಲು ಇಷ್ಟ ಪಡುತ್ತೇವೆ. ಕೆಲವು ಜನರು ಮಿತಿ ಮೀರಿ ಹೋಗದಂತೆ ತಮ್ಮನ್ನು ತಾವು ಉಳಿಸಿಕೊಂಡರೆ, ಕೆಲವರು ಗೀಳಿಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಮತ್ತು ವ್ಯಸನದ ಹಂತವನ್ನು ತಲುಪುತ್ತಾರೆ. ಅಂತಹ ಜನರು ಅನಗತ್ಯ ಸ್ಕ್ರೋಲಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಮತ್ತು ಅವರು ಜನರೊಂದಿಗೆ ವಾಸ್ತವಿಕವಾಗಿ ಸಂಪರ್ಕಿಸುವುದಿಲ್ಲ. ಅವರಿಗೆ ನಿಜ ಜೀವನಕ್ಕಿಂತ ತಂತ್ರಜ್ಞಾನದಲ್ಲಿ ಕಳೆದು ಹೋಗುವ ಜೀವನ ಹೆಚ್ಚು ಆಕರ್ಷಕವೆನಿಸುತ್ತದೆ. ಅವರು ಗ್ಯಾಜೆಟ್‌ಗಳನ್ನು ತಮ್ಮ ಇಡೀ ಜಗತ್ತನ್ನಾಗಿ ಮಾಡುತ್ತಾರೆ ಮತ್ತು ಅಕ್ಷರಶಃ ಅವುಗಳನ್ನು ಹೇಗೆ ಸಮತೋಲನಗೊಳಿಸಬೇಕೆಂದು ತಿಳಿದಿಲ್ಲದೆ ಅದರಲ್ಲಿ ತಮ್ಮನ್ನು ತಾವೇ ಕಳೆದುಕೊಳ್ಳುತ್ತಾರೆ. ಗ್ಯಾಜೆಟ್‌ಗಳಿಂದ ಹೆಚ್ಚು ಆಕರ್ಷಿತರಾಗಿರುವ ಮತ್ತು ತಂತ್ರಜ್ಞಾನದಿಂದ ಅಂಟಿಕೊಂಡಿರುವ 4 ರಾಶಿಚಕ್ರಗಳು ಇಲ್ಲಿವೆ.
1. ಮೇಷ ರಾಶಿ (Aries)
ಮೇಷ ರಾಶಿಯ ಜನರು ತಮ್ಮ ಏಕತಾನತೆಯ ಜೀವನಶೈಲಿಯಿಂದ ಸುಲಭವಾಗಿ ಬೇಸರಗೊಳ್ಳುತ್ತಾರೆ ಮತ್ತು ಪುನರಾವರ್ತಿತ ವಾಸ್ತವದಿಂದ ತಪ್ಪಿಸಿಕೊಳ್ಳಲು ತಂತ್ರಜ್ಞಾನವನ್ನು ಅವಲಂಬಿಸುತ್ತಾರೆ. ಅವರು ತಂತ್ರಜ್ಞಾನದಿಂದ ಗಾಸಿಪ್ ಮತ್ತು ವೆಬ್ ಸೀರೀಸ್ ವೀಕ್ಷಿಸಲು ಇಷ್ಟ ಪಡುತ್ತಾರೆ ಮತ್ತು ಈ ಅತಿವಾಸ್ತವಿಕ ಆಕರ್ಷಣೆಯಲ್ಲಿ ಕಳೆದು ಹೋಗುತ್ತಾರೆ. ಕಾಲಾನಂತರದಲ್ಲಿ, ಅವರು ತಮ್ಮ ಗ್ಯಾಜೆಟ್‌ಗಳಲ್ಲಿರಲು ಏನು ಬೇಕಾದರೂ ಅಪಾಯಕ್ಕೆ ಒಳಗಾಗುವಷ್ಟು ಒಗ್ಗಿಕೊಳ್ಳುತ್ತಾರೆ. ಮೇಷ ರಾಶಿಯವರು ತಮ್ಮ ಗ್ಯಾಜೆಟ್‌ಗಳನ್ನು ದಿನನಿತ್ಯದ ಮತ್ತು ಪ್ರಾಪಂಚಿಕ ಕಾರ್ಯಗಳಿಂದ ದೂರವಿರಲು ಪರಿಪೂರ್ಣ ಮಾರ್ಗವಾಗಿ ಕಂಡುಕೊಳ್ಳುತ್ತಾರೆ.
ಈ 5 ರಾಶಿಯ ಜನರಿಗಂತೂ ಖರ್ಚಿನ ಮೇಲೆ ನಿಯಂತ್ರಣವೇ ಇಲ್ಲ, ನೀರಿನಂತೆ ಹಣ ವ್ಯಯಿಸುತ್ತಾರೆ!
2. ಮಿಥುನ ರಾಶಿ (Gemini)
ಮಿಥುನ ರಾಶಿಯವರು ಜನರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ ಮತ್ತು ಅವರ ನಯಗೊಳಿಸಿದ ಸಂವಹನ ಕೌಶಲ್ಯಗಳು ಸೋತರೆ, ಯಾರೂ ಮಾತಾಡಲು ಸಿಗದಿದ್ದರೆ ಆಗ ಅವರು ಜನರ ಹುಡುಕಾಟದಲ್ಲಿ ಸಾಮಾಜಿಕ ಮಾಧ್ಯಮದ ಕಡೆಗೆ ವಾಲುತ್ತಾರೆ. ಹೀಗಾಗಿ ಗ್ಯಾಜೆಟ್‌ಗಳು ಯಾವಾಗಲೂ ಅವರ ಆಸಕ್ತಿಯನ್ನು ಬಯಸುತ್ತವೆ. ಇಂಟರ್ನೆಟ್ ಮತ್ತು ತಂತ್ರಜ್ಞಾನದ ಸಹಾಯದಿಂದ, ಈ ಜನರು ತಮ್ಮ ಹರಟೆ ಮತ್ತು ಸಂವಹನದ ಕನಸನ್ನು ಪೂರೈಸಿಕೊಳ್ಳುತ್ತಾರೆ. ಅವರು ಗ್ಯಾಜೆಟ್‌ಗಳಲ್ಲಿ ಎಷ್ಟು ಸಮಯವನ್ನು ಕಳೆಯುತ್ತಿದ್ದಾರೆ ಎಂಬುದರ ಕುರಿತು ಅವರು ಎಂದಿಗೂ ಟ್ಯಾಬ್ ಅನ್ನು ಇಟ್ಟುಕೊಳ್ಳುವುದಿಲ್ಲ ಮತ್ತು ಅವರ ಫೋನ್ ಸ್ವಿಚ್ ಆಫ್ ಆದರೆ ಸುಲಭವಾಗಿ ಆತಂಕ ಮತ್ತು ಪ್ರಕ್ಷುಬ್ಧತೆಯನ್ನು ಅನುಭವಿಸಬಹುದು.
3. ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರು ನೈಜ-ಪ್ರಪಂಚದ ಜನರೊಂದಿಗೆ ಹೆಚ್ಚು ಸ್ನೇಹ ಹೊಂದಿಲ್ಲ. ಏಕೆಂದರೆ ಅವರು ಮೋಸ ಹೋದರೆ ಎಂದು ಹೆದರುತ್ತಾರೆ ಮತ್ತು ಆದ್ದರಿಂದ ಅವರು ತಂತ್ರಜ್ಞಾನದ ಮೂಲಕ ಜನರೊಂದಿಗೆ ಬಾಂಡ್ ಮಾಡಲು ಮತ್ತು ಚಾಟ್ ಮಾಡಲು ಇಷ್ಟಪಡುತ್ತಾರೆ. ತಮ್ಮ ಐಡೆಂಟಿಟಿ ತೋರಿಸದೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ದ್ರೋಹಕ್ಕೆ ಒಳಗಾಗುವ ಭಯವಿಲ್ಲದೆ ತಮ್ಮನ್ನು ತಾವು ವ್ಯಕ್ತಪಡಿಸುವ ಕಲ್ಪನೆಯನ್ನು ಅವರು ಹೆಚ್ಚು ಆರಾಧಿಸುತ್ತಾರೆ. ಇಂಟರ್ನೆಟ್ ಸಿಗದಿದ್ದರೆ ಅವರ ಪ್ರಪಂಚವು ಕೆಲವೇ ನಿಮಿಷಗಳಲ್ಲಿ ಸಂಕೋಲೆಗೆ ಒಳಗಾಗಬಹುದು.
Rajyog In Kundli: 617 ವರ್ಷಗಳ ಬಳಿಕ 3 ರಾಜಯೋಗಗಳ ಸಂಯೋಗ, 4 ರಾಶಿಗಳಿಗೆ ಸುಯೋಗ
4. ಧನು ರಾಶಿ (Sagittarius)
ಧನು ರಾಶಿಗಳು ಮುಕ್ತ ಶಕ್ತಿಗಳು, ಅವರು ಹೊಸ ವಿಷಯಗಳನ್ನು ಪ್ರಯತ್ನಿಸುವುದನ್ನು ಎಂದಿಗೂ ತಡೆ ಹಿಡಿಯುವುದಿಲ್ಲ, ಅದು ನಿಜ ಜೀವನವಿರಲಿ ಅಥವಾ ತಂತ್ರಜ್ಞಾನರಲಿ. ಅವರು ಹೊಸ ಗ್ಯಾಜೆಟ್‌ಗಳ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಉತ್ಸುಕರಾಗಿದ್ದಾರೆ ಮತ್ತು ಹೊಸ-ವಿಚಿತ್ರವಾದ ಆವಿಷ್ಕಾರಗಳನ್ನು ಪ್ರಯತ್ನಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅದು ಹೊಸ ಸಾಧನವಾಗಿರಲಿ ಅಥವಾ ಅಪ್ಲಿಕೇಶನ್ ಆಗಿರಲಿ, ಅದನ್ನು ಬಳಸಿ ನೋಡಲು ಅವರು ಮೊದಲಿಗರಾಗಿರುತ್ತಾರೆ.