Zodiac signs self destruction: ಇವರಲ್ಲಿರುವ ಕೆಲವು ಗುಣಗಳು ಅವರ ಪ್ರಗತಿಗೆ ಪ್ರಮುಖ ಅಡಚಣೆಯಾಗುತ್ತವೆ ಮತ್ತು ಅವರನ್ನು ವಿನಾಶದ ಹಾದಿಗೆ ತೆಗೆದುಕೊಂಡು ಹೋಗುತ್ತವೆ. ಆದ್ದರಿಂದ ಈ ಲೇಖನದಲ್ಲಿ ಯಾವ ರಾಶಿಚಕ್ರ ಚಿಹ್ನೆಗಳು ಅವರಿಗೇ ಅವರೇ ದೊಡ್ಡ ಶತ್ರುಗಳಾಗಿರುತ್ತಾರೆ ಎಂಬುದನ್ನು ನೋಡೋಣ.
ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಚಕ್ರದ ಅಡಿಯಲ್ಲಿ ಜನಿಸಿದ ಜನರು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಕೆಲವು ರಾಶಿಚಕ್ರ ಚಿಹ್ನೆಗಳು ಎಲ್ಲರಿಗೂ ಉತ್ತಮ ಸ್ನೇಹಿತರಾಗಿದ್ದರೆ, ಮತ್ತೆ ಕೆಲವು ರಾಶಿಚಕ್ರ ಚಿಹ್ನೆಗಳು ತಮಗೇ ತಾವೇ ಶತ್ರುಗಳು. ಈ ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಜನಿಸಿದ ಜನರು ಇತರರಿಗೆ ಒಳ್ಳೆಯವರು ಮತ್ತು ಸ್ನೇಹಪರರಾಗಿರಬಹುದು. ಆದರೆ ಅವರಿಗೆ ಬೇರಾರೂ ಅಲ್ಲ, ಅವರೇ ಕೆಟ್ಟ ಶತ್ರುಗಳು. ಅಂದರೆ ಇವರಲ್ಲಿರುವ ಕೆಲವು ಗುಣಗಳು ಅವರ ಪ್ರಗತಿಗೆ ಪ್ರಮುಖ ಅಡಚಣೆಯಾಗುತ್ತವೆ ಮತ್ತು ಅವರನ್ನು ವಿನಾಶದ ಹಾದಿಗೆ ತೆಗೆದುಕೊಂಡು ಹೋಗುತ್ತವೆ. ಆದ್ದರಿಂದ ಈ ಲೇಖನದಲ್ಲಿ ಯಾವ ರಾಶಿಚಕ್ರ ಚಿಹ್ನೆಗಳು ಅವರಿಗೇ ಅವರೇ ದೊಡ್ಡ ಶತ್ರುಗಳಾಗಿರುತ್ತಾರೆ ಎಂಬುದನ್ನು ನೋಡೋಣ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಹಣವೇ ಕೆಟ್ಟ ಶತ್ರುವಾಗುತ್ತದೆ. ಅಂದರೆ ಸಾಮಾನ್ಯವಾಗಿ ಅವರು ಜವಾಬ್ದಾರಿಯುತವಾಗಿದ್ದರೂ, ಐಷಾರಾಮಿಯಾಗಿರಬೇಕೆಂಬ ಭಾವವು ಮಿತಿಯಿಲ್ಲದೆ ಖರ್ಚು ಮಾಡಲು ಕಾರಣವಾಗಬಹುದು. ವೃಷಭ ರಾಶಿಯವರು ಸ್ವಾರ್ಥಿ ಪ್ರವೃತ್ತಿಯನ್ನು ಹೊಂದಿರುತ್ತಾರೆ ಮತ್ತು ಅವರು ಅತ್ಯಂತ ಐಷಾರಾಮಿ ಮತ್ತು ಬೆಲೆ ಬಾಳುವ ವಸ್ತುಗಳನ್ನು ಹೊಂದಲು ಇಷ್ಟಪಡುತ್ತಾರೆ. ಆದರೆ ಅದಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಮರೆತುಬಿಡುತ್ತಾರೆ. ಐಷಾರಾಮಿಯಾಗಿ ಇರಲು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇದು ಅಶಾಂತಿಯ ಜೀವನ ಅಥವಾ ಜೈಲು ಶಿಕ್ಷೆಗೆ ಕಾರಣವಾಗಬಹುದು.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮಗಿರುವ ಅಭದ್ರತೆಯಿಂದಾಗಿ ಅವರಷ್ಟಕ್ಕೆ ಅವರೇ ಕೆಟ್ಟ ಶತ್ರುಗಳಾಗುತ್ತಾರೆ. ಯಾವಾಗಲೂ ಯಾವುದೇ ವಿಷಯದ ಬಗ್ಗೆ ಅತಿಯಾಗಿ ಯೋಚಿಸುತ್ತಾರೆ. ಆದ್ದರಿಂದ ಸಣ್ಣ ವಿಷಯಗಳು ಸಹ ಅವರನ್ನು ಕೆಟ್ಟದಾಗಿ ಯೋಚಿಸುವಂತೆ ಮಾಡಬಹುದು. ಅವರ ಕಲ್ಪನೆಯು ಅಪಾರವಾಗಿರುತ್ತದೆ. ಇದು ನಕಾರಾತ್ಮಕ ಆಲೋಚನೆಗಳನ್ನು ಹೆಚ್ಚಿಸಬಹುದು. ಇದು ಅವರ ಸಂಬಂಧಗಳ ಮೇಲೆ, ವಿಶೇಷವಾಗಿ ಪ್ರೀತಿಯ ವಿಷಯಗಳಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಮೋಸ ಹೋದಂತೆ ಭಾವಿಸಿ ತಮ್ಮ ಸಂಗಾತಿಯ ಪ್ರತಿಯೊಂದು ಕ್ರಿಯೆಯನ್ನು ಅನುಮಾನಿಸುತ್ತಾರೆ, ಇದು ಅವರ ಸಂಬಂಧಗಳಲ್ಲಿ ವಿವಿಧ ಸಮಸ್ಯೆಗಳು ಮತ್ತು ಗೊಂದಲಗಳಿಗೆ ಕಾರಣವಾಗುತ್ತದೆ.
ಕನ್ಯಾರಾಶಿ
ಕನ್ಯಾ ರಾಶಿಯವರು ತಾವೇ ಪರ್‌ಫೆಕ್ಟ್ ಎಂಬ ಸ್ವಭಾವದಿಂದಾಗಿ ಅವರಿಗೆ ಅವರೇ ಕೆಟ್ಟ ಶತ್ರುಗಳಾಗುತ್ತಾರೆ. ಎಲ್ಲವೂ ಪರಿಪೂರ್ಣವಾಗಿ ಇರಬೇಕೆಂಬ ಈ ತೀವ್ರವಾದ ಗೀಳು ಅವರನ್ನು ಖಿನ್ನತೆಗೆ ದೂಡಬಹುದು. ತಮಗಾಗಿ ಉನ್ನತ ಮಾನದಂಡಗಳನ್ನು ಹೊಂದಿಸಿಕೊಳ್ಳುತ್ತಾರೆ. ಒಂದು ವೇಳೆ ಅವರು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ವಿಫಲವಾದಾಗ ಅದು ಖಿನ್ನತೆ ಮತ್ತು ದುಃಖಕ್ಕೆ ಕಾರಣವಾಗುತ್ತದೆ. ದುರದೃಷ್ಟಕರ ಸಂಗತಿಯೆಂದರೆ ಅವರ ಸಮಸ್ಯೆಗೆ ಯಾವುದೇ ಪರಿಹಾರವಿಲ್ಲ. ಕನ್ಯಾ ರಾಶಿಯವರು ಒಂದು ಗುರಿಯನ್ನು ಸಾಧಿಸಿದ ನಂತರ, ಅವರು ಅದರ ಬಗ್ಗೆ ಸಂತೋಷಪಡುವುದಿಲ್ಲ ಮತ್ತು ತಕ್ಷಣವೇ ಮುಂದಿನ ಗುರಿಯತ್ತ ಓಡುತ್ತಾರೆ. ಇದು ಅವರಿಗೆ ಎಂದಿಗೂ ಶಾಂತಿಯಿಂದ ವಿಶ್ರಾಂತಿ ಪಡೆಯಲು ಅವಕಾಶ ನೀಡುವುದಿಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗಿರುವ ವಿಪರೀತ ಕೋಪವೇ ಅವರಿಗೆ ಕೆಟ್ಟ ಶತ್ರು. ವೃಶ್ಚಿಕ ರಾಶಿಯವರು ಯಾರನ್ನೂ ಅಥವಾ ಯಾವುದನ್ನೂ ಸುಲಭವಾಗಿ ಕ್ಷಮಿಸಲು ಅಥವಾ ಮರೆಯಲು ಸಾಧ್ಯವಿಲ್ಲ. ಯಾರಾದರೂ ತಮ್ಮನ್ನು ಅವಮಾನಿಸಿದ್ದಾರೆಂದು ಅವರು ಭಾವಿಸಿದಾಗ ಅದು ನಿಜವಲ್ಲದಿದ್ದರೂ ಸಹ ಅಥವಾ ಬೇರೆಯವರು ತಮಗೆ ಅರ್ಹವಾದದ್ದನ್ನು ಪಡೆದಿದ್ದಾರೆಂದು ಅವರು ಭಾವಿಸಿದಾಗ ಅವರ ಮನಸ್ಸಿನಲ್ಲಿ ಒಂದೇ ಒಂದು ನಿರ್ಣಾಯಕ ಆಲೋಚನೆ ಇರುತ್ತದೆ. ಅದು ಸೇಡು. ವೃಶ್ಚಿಕ ರಾಶಿಯವರ ಈ ಸೇಡಿನ ಕೃತ್ಯಗಳು ಅವರಿಗೆ ಒಳ್ಳೆಯ ಹೆಸರನ್ನು ಗಳಿಸಿ ಕೊಡುವುದಿಲ್ಲ. ಇದು ಅವರ ಕೆಟ್ಟ ಗುಣವನ್ನು ಬಹಿರಂಗಪಡಿಸುತ್ತದೆ. ವಾಸ್ತವವಾಗಿ ಇದು ಅವರನ್ನು ತುಂಬಾ ಅಪಾಯಕಾರಿಯನ್ನಾಗಿ ಮಾಡುತ್ತದೆ ಮತ್ತು ಇತರರಿಂದ ದ್ವೇಷಿಸಲ್ಪಡುತ್ತದೆ.


