ವೃಷಭದಿಂದ ಸಿಂಹದವರೆಗೆ: ಈ 5 ರಾಶಿಗಳಿಗೆ ಬ್ರೇಕಪ್‌ನ ಆಘಾತ ಎಲ್ಲಕ್ಕಿಂತ ಹೆಚ್ಚು!

ಸೂಕ್ಷ್ಮವಾದ ನೀರಿನ ಚಿಹ್ನೆಗಳಿಗೆ ಬ್ರೇಕಪ್‌ಗಳು ವಿಶೇಷವಾಗಿ ನೋವಿನಿಂದ ಕೂಡಿರುತ್ತವೆ ಮತ್ತು ಇವರು ಆ ನೋವಿನಿಂದ ಹೊರಬರಲು ಪಡುವ ಪಾಡು ಅಷ್ಟಿಷ್ಟಲ್ಲ. ಅತಿ ಕಷ್ಟದ ಬ್ರೇಕಪ್‌ಗಳು ಯಾವ ರಾಶಿಯವರಿಗೆ ಆಗುತ್ತದೆ ನೋಡೋಣ. 

4 Signs that are destined to have the toughest breakups skr

ಬ್ರೇಕಪ್ ಎಂಬುದು ಯಾರಿಗೆ ತಾನೇ ಸುಲಭ? ನಿಜವಾಗಿ ಪ್ರೀತಿಸಿದವರನ್ನು ಕಾರಣಾಂತರಗಳಿಂದ ಬಿಟ್ಟು ಕೊಡುವುದು, ಅವರ ಸಂಪರ್ಕ ಕಡಿತಗೊಳಿಸಿಕೊಳ್ಳುವುದು ಸುಲಭದ ಮಾತಲ್ಲ. ನಮ್ಮೆಲ್ಲ ಕಷ್ಟಸುಖಗಳನ್ನು ಹಂಚಿಕೊಂಡವರನ್ನು, ಯಾರ ಬಗ್ಗೆ ನೂರಾರು ಕನಸು ಕಟ್ಟಿರುತ್ತೇವೆಯೋ ಅವರನ್ನೇ ಅಪರಿಚಿತರಂತೆ ನೋಡುವುದು ಯಾರಿಗಾದರೂ ಕಠಿಣವೇ. ಬ್ರೇಕಪ್ ನಂತರದ ದಿನಗಳು ಬದುಕನ್ನೇ ನಿರರ್ಥಕ ಎನಿಸುವಂತೆ ಮಾಡುತ್ತವೆ. ಅಳು ತರಿಸುತ್ತವೆ. ನೋಯಿಸುತ್ತವೆ. ಬ್ರೇಕಪ್ ಎಂಬುದು ಎಲ್ಲರಿಗೂ ಕಠಿಣವೇ ಆದರೂ ಕೆಲ ರಾಶಿಗಳಿಗೆ ಅದು ಎಲ್ಲರಿಗಿಂತ ಹೆಚ್ಚು ನೋವು ತರಬಲ್ಲದು. ಬ್ರೇಕಪ್‌ನಿಂದ ಹೊರ ಬರುವುದು ಅಸಾಧ್ಯವೆಂದೇ ಅನಿಸುವಂತೆ ಮಾಡಬಹುದು. ಅವರ ದೈನಂದಿನ ಕೆಲಸಗಳಿಗೆ ತಡೆಯೊಡ್ಡಿ ಆತ್ಮಹತ್ಯೆಯಂಥ ಅತಿರೇಖದ ಯೋಚನೆಗಳನ್ನೂ ತರಬಹುದು. ಮಾಜಿ ಪ್ರೇಮಿಯ ನೆನಪು ಕುಂತರೂ ನಿಂತರೂ ಹೈರಾಣಾಗಿಸಿ, ಕೆಲಸಗಳಿಗೆ ಅಡ್ಡಿಯಾಗಬಹುದು. ಹೀಗೆ ಅತಿ ಕಠಿಣ ಬ್ರೇಕಪ್ ಎದುರಿಸುವ ರಾಶಿಗಳು ಯಾವೆಲ್ಲ ನೋಡೋಣ. 

ವೃಷಭ ರಾಶಿ(Taurus)
ವೃಷಭ ರಾಶಿಯು ಸ್ನೇಹಪರ ಆದರೆ ಹಠಮಾರಿ. ಇವರು ಒಮ್ಮೆ ಬ್ರೇಕಪ್ ಆಯ್ಕೆ ಮಾಡಿಕೊಂಡರೆ ಸಂಧಾನಕ್ಕೆ ಅವಕಾಶವಿರುವುದಿಲ್ಲ. ಇದಲ್ಲದೆ, ಅಪಹಾಸ್ಯಕ್ಕೊಳಗಾದರೆ ವೃಷಭ ರಾಶಿಗೆ ಅಧಕ್ಕಿಂತಲೂ ನರಕವಿಲ್ಲ. ಅದರಲ್ಲೂ ತಾನು ಅತಿಯಾಗಿ ಪ್ರೀತಿಸುವವರಿಂದಲೇ ನೋವಿಗೊಳಗಾಗುವುದು, ಅವಮಾನ ಎದುರಿಸುವುದು, ಇದ್ದಕ್ಕಿದ್ದಂತೆ ತಿರಸ್ಕೃತರಾಗುವುದು ಇವರನ್ನು ನರಕದ ಕೂಪಕ್ಕೆ ತಳ್ಳುತ್ತದೆ.   ವೃಷಭ ರಾಶಿಯವರಿಗೆ ನಿಷ್ಠೆಯು ಅತ್ಯಗತ್ಯವಾದ ಕಾರಣ, ಅವರ ಸಂಗಾತಿಯು ವಿಶ್ವಾಸದ್ರೋಹಿ ಎಂದು ತೋರಿದರೆ, ಅವರ ಬ್ರೇಕಪ್ ಕೋಪದಿಂದ ಪ್ರೇರೇಪಿಸಲ್ಪಡುತ್ತದೆ. ಮತ್ತು ಇದು ವರ್ಷಗಳ ಕಾಲ ತಣಿಯುವುದೇ ಇಲ್ಲ. 

Thursday Astro: ಈ ದಿನ ಈ ವಸ್ತುಗಳ ದಾನದಿಂದ ದುಪ್ಪಟ್ಟು ಸಮೃದ್ಧಿ ನಿಮ್ಮದಾಗುತ್ತೆ!

ವೃಶ್ಚಿಕ ರಾಶಿ(Scorpio)
ಅವರು ಬ್ರೇಕಪ್ ಪ್ರಾರಂಭಿಸಲಿ ಅಥವಾ ಇಲ್ಲದಿರಲಿ, ಇವರು ಯಾವಾಗಲೂ ಬ್ರೇಕಪ್‌ನಲ್ಲಿ ದ್ರೋಹವನ್ನು ಅನುಭವಿಸುತ್ತಾರೆ. ಇವರಿಗೆ ಸಂಬಂಧವು ಉತ್ತಮವಾಗಿದೆಯೇ ಎಂಬುದು ಮುಖ್ಯವಲ್ಲ, ಏಕೆಂದರೆ ವೃಶ್ಚಿಕ ರಾಶಿಯವರು ನಿಯಂತ್ರಣ ಸಮಸ್ಯೆಗಳನ್ನು ಹೊಂದಿದ್ದು ಅದು ಅವರ ವಿಫಲ ಸಂಬಂಧಗಳ ಬಗ್ಗೆ ಸಾಂದರ್ಭಿಕವಾಗಿ ಗೀಳನ್ನು ಉಂಟು ಮಾಡುತ್ತದೆ. ಇವರು ತಮ್ಮ ಭಾವನೆಗಳನ್ನು ಹೊರಗೆ ತೋರಗೊಡದಿರುವುದೂ ಕೂಡಾ ಬ್ರೇಕಪ್ ಇವರಿಗೆ ಎಲ್ಲರಿಗಿಂತ ಹೆಚ್ಚು ಕಠಿಣವಾಗಲು ಕಾರಣ. ಹೊರಗೆ ಸಾಮಾನ್ಯರಂತಿದ್ದರೂ, ಒಳಗೊಳಗೇ ಬ್ರೇಕಪ್ ನೋವು ಇವರನ್ನು ಕಿತ್ತು ತಿನ್ನುತ್ತಿರುತ್ತದೆ. 

ಧನು ರಾಶಿ(Sagittarius)
ಯಾರಾದರೂ ಧನು ರಾಶಿಯವರನ್ನು ನಿಯಂತ್ರಣದಲ್ಲಿಡಲು ಅಥವಾ ನಿರ್ಬಂಧಿಸಲು ಹೋದರೆ ಅವರು ಅಂತಿಮವಾಗಿ ದಾರಿ ತಪ್ಪಲು ಪ್ರಾರಂಭಿಸುತ್ತಾರೆ. ಧನು ರಾಶಿಯವರ ಪ್ರತ್ಯೇಕತೆಯ ನಿಯಮಗಳು ಯಾವಾಗಲೂ ಸ್ಪಷ್ಟವಾಗಿರುತ್ತವೆ. ಅವರಿಗೆ ಪ್ರೀತಿಗಿಂತ ಸ್ವಾತಂತ್ರವೇ ಹೆಚ್ಚು ಎನಿಸಿ ಬ್ರೇಕಪ್‌ ಮೊರೆ ಹೋಗುತ್ತಾರೆ. ಆದರೆ, ನಂತರದ ದಿನಗಳಲ್ಲಿ ಅವರು ಒಳಗೊಳಗೇ ಕೊರಗುತ್ತಾರೆ. ಪ್ರೀತಿ, ಸ್ವಾತಂತ್ರ್ಯ ಎರಡೂ ಸಿಗಬಾರದಿತ್ತೇಕೆ ಎಂದು ಮರುಗುತ್ತಾರೆ. ಜೀವನದಲ್ಲಿ ಬಹಳ ವರ್ಷಗಳ ಕಾಲ ಇವರಿಗೆ ಈ ನೋವು ಕಾಡುತ್ತಲೇ ಇರುತ್ತದೆ. 

ಮೇಷ ರಾಶಿ(Aries)
ಮೇಷ ರಾಶಿಯ ಜನರು ಆಕ್ರಮಣಕಾರಿ ಮತ್ತು ಸ್ಪರ್ಧಾತ್ಮಕರು. ಅವರು ಬಹು ಬೇಗ ಬ್ರೇಕಪ್ ನಿರ್ಣಯಕ್ಕೆ ಬರಬಹುದು. ಆದರೆ, ನಂತರದಲ್ಲಿ ಪಶ್ಚಾತ್ತಾಪ ಪಡುವವರಲ್ಲಿ ಕೂಡಾ ಅವರು ಮೊದಲಿಗರು. ತಕ್ಷಣ ಪ್ರತಿಕ್ರಿಯೆ ನೀಡುವ ಸ್ವಭಾವದಿಂದ ಬ್ರೇಕಪ್ ಮಾಡಿಕೊಂಡರೂ ನಂತರ ಆ ಬಗ್ಗೆ ಕೊರಗುತ್ತಲೇ ಇರುತ್ತಾರೆ. ಇವರು ಬ್ರೇಕಪ್ ಸಂದರ್ಭದಲ್ಲಿ ಪ್ರೇಮಿಗೆ ಅಪಾರ ನೋಯಿಸಿ, ಅವಮಾನಿಸುತ್ತಾರೆ. ಬಳಿಕ, ತಮ್ಮ ನಡೆಗಾಗಿ ಪಶ್ಚಾತ್ತಾಪ ಪಡುತ್ತಾರೆ. 

NARMADA PARIKRAMA: 2,600 ಕಿಲೋಮೀಟರ್‌ಗಳ ಈ ಆಧ್ಯಾತ್ಮಿಕ ಯಾತ್ರೆ ಎಂಥದು ಗೊತ್ತಾ?

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios