Asianet Suvarna News Asianet Suvarna News

ಮುಂಬೈನ ಅತೀ ಶ್ರೀಮಂತ ಗಣೇಶನಿಗೆ ಬಹುಕೋಟಿ ಮೊತ್ತದ ವಿಮೆ

ಮುಂಬೈನಲ್ಲಿ ಗಣೇಶನಿಗೆ ಬರೋಬರಿ 316.40 ಮೌಲ್ಯದ ವಿಮೆ ಮಾಡಿಸಲಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಗಣೇಶೋತ್ಸವವನ್ನು ಎಲ್ಲೆಡೆಗಿಂತ ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ.

316 crore insurance for Mumbai's GSB Ganesh akb
Author
Bengaluru, First Published Aug 24, 2022, 10:07 AM IST

ಈ ಬಾರಿ ಸ್ವಾತಂತ್ರ ದಿನಾಚರಣೆ ಮುಗಿಯುತ್ತಿದ್ದಂತೆ ಗಣೇಶೋತ್ಸವಕ್ಕೆ ದೇಶದೆಲ್ಲೆಡೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಗಣೇಶ ಕೂರಿಸುವ ಬಗ್ಗೆ ಹಲವು ಗಲಾಟೆಗಳ ನಡುವೆಯೂ ಅನೇಕರು ಗಣೇಶ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇತ್ತ ಮುಂಬೈನಲ್ಲಿ ಗಣೇಶನಿಗೆ ಬರೋಬರಿ 316.40 ಮೌಲ್ಯದ ವಿಮೆ ಮಾಡಿಸಲಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಗಣೇಶೋತ್ಸವವನ್ನು ಎಲ್ಲೆಡೆಗಿಂತ ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಸಿನಿಮಾ ತಾರೆಯರಿಂದ ಹಿಡಿದು ಜನ ಸಾಮಾನ್ಯರವರೆಗೆ ಗಣಪತಿ ಪೆಂಡಾಲ್‌ಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. 

ಮುಂಬೈಯ ಅತಿ ಶ್ರೀಮಂತ ಗಣಪತಿ ಮಂಡಲ ಎಂಬ ಹಿರಿಮೆ ಹೊಂದಿರುವ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸೇವಾ ಮಂಡಲದ ಗಣೇಶನಿಗೆ ಈ ವರ್ಷ ದಾಖಲೆಯ 316.40 ಕೋಟಿ ರೂಪಾಯಿಯ ವಿಮೆ ಮಾಡಿಸಲಾಗಿದೆ. ಪ್ರತಿವರ್ಷವೂ ಈ ಗಣೇಶನಿಗೆ ವಿಮೆ ಮಾಡಿಸಲಾಗುತ್ತದೆ. ಈ ಗಣೇಶನಿಗೆ ಭಾರಿ ಮೊತ್ತದ ಆಭರಣಗಳನ್ನು ತೊಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆಭರಣದ ಸುರಕ್ಷತೆ ಲೆಕ್ಕದಲ್ಲಿ ಗಣೇಶನಿಗೆ ವಿಮೆ ಮಾಡಿಸಲಾಗಿದೆ. 

ಗಣೇಶ ಚತುರ್ಥಿ 2022: ಮೂರ್ತಿ ಪ್ರತಿಷ್ಠಾಪನೆ ಸಮಯ ಈ ತಪ್ಪು ಖಂಡಿತಾ ಮಾಡ್ಬೇಡಿ!

ಜಿಎಸ್‌ಬಿ ಮಂಡಲ್‌ ಗಣೇಶನಿಗೆ ತೊಡಿಸುವ 66 ಕೆಜಿ ಚಿನ್ನದ ಆಭರಣ, 295 ಕೆಜಿ ಬೆಳ್ಳಿ ಹಾಗೂ ಇನ್ನಿತರ ಬೆಲೆಬಾಳುವ ಆಭರಣಗಳಿಗೆ ನ್ಯೂ ಇಂಡಿಯಾ ಅಶ್ಯುರೆನ್ಸ್‌ನಿಂದ 31.97 ಕೋಟಿ ರು. ಮೊತ್ತದ ರಿಸ್ಕ್‌ ಇನ್ಸುರೆನ್ಸ್‌ ಹಾಗೂ ಭದ್ರತಾ ಸಿಬ್ಬಂದಿ, ಅರ್ಚಕರು, ಅಡುಗೆ ಮಾಡುವವರು, ಸ್ವಯಂ ಸೇವಕರಿಗೂ ಒಟ್ಟಾರೆ 263 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಬೆಂಕಿ ಅಪಘಾತ, ಭೂಕಂಪ ಮೊದಲಾದ ದುರ್ಘಟನೆಗಳ ವಿರುದ್ಧವೂ 1 ಕೋಟಿ ರೂಪಾಯಿಯ ವಿಮೆ ಮಾಡಿಸಲಾಗಿದೆ. ಜೊತೆಗೆ ಸಾರ್ವಜನಿಕ ಹೊಣೆಗಾರಿಕೆ ಅಡಿಯಲ್ಲಿ ಭಕ್ತರು, ಗಣಪತಿ ಕೂರಿಸುವ ಪಂಡಾಲ್‌, ಕ್ರೀಡಾಂಗಣ ಮೊದಲಾದವುಗಳಿಗೂ 20 ಕೋಟಿ ವಿಮೆ ಮಾಡಿಸಲಾಗಿದೆ.

ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ ಈ ಬಾರಿ ವೀರ್ ಸಾವರ್ಕರ್ ಹವಾ..!

ಕೋವಿಡ್‌ನಿಂದಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಎರಡು ವರ್ಷಗಳಿಂದ ಅವಕಾಶ ಇರಲಿಲ್ಲ. ಹೀಗಾಗಿ ಎರಡು ವರ್ಷಗಳ ಬ್ರೇಕ್‌ನ ನಂತರ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲು ಗಣೇಶ ಮಹಾ ಮಂಡಳಗಳು, ಜನ ಸಾಮಾನ್ಯರು, ವಿವಿಧ ಸಂಘಟನೆಗಳು ಕಾತುರದಿಂದ ಕಾಯುತ್ತಿವೆ. ಇನ್ನು ಮುಂಬೈನ ಗಣೇಶೋತ್ಸವಕ್ಕೆ ತನ್ನದೇ ಆದ ವೈವಿಧ್ಯಮಯ ಇತಿಹಾಸವಿದೆ. ಗಣಪತಿ ಬೊಪ್ಪ ಮೊರೆಯಾ ಎಂಬ ಕೂಗು ಮುಂಬೈನ ಬೀದಿ ಬೀದಿಗಳು ಗಲ್ಲಿ ಗಲ್ಲಿಗಳಲ್ಲಿ ಯಾವುದೇ ಜಾತಿ ಮತಗಳ ಬೇಧವಿಲ್ಲದೇ ಕೇಳಿ ಬರುತ್ತದೆ. ಆಗಸ್ಟ್ 31 ರಿಂದ ಆರಂಭವಾಗುವ ಆದಿವಂದ್ಯನ ಹಬ್ಬಕ್ಕೆ ಮಹಾರಾಷ್ಟ್ರ ಸರ್ಕಾರ ಈ ಬಾರಿ ಯಾವುದೇ ಕಟ್ಟಳೆಗಳನ್ನು ಹಾಕದಿರಲು ನಿರ್ಧರಿಸಿದೆ. 
 

Follow Us:
Download App:
  • android
  • ios