Asianet Suvarna News Asianet Suvarna News

ಗಣೇಶ ಚತುರ್ಥಿ 2022: ಮೂರ್ತಿ ಪ್ರತಿಷ್ಠಾಪನೆ ಸಮಯ ಈ ತಪ್ಪು ಖಂಡಿತಾ ಮಾಡ್ಬೇಡಿ!

ಗಣೇಶ ಚತುರ್ಥಿ ಸನ್ನಿಹಿತವಾಗಿದೆ. ಈ ದಿನ ಪ್ರತಿ ಹಿಂದೂವೂ ಪ್ರಥಮ ಪೂಜಕನ ಅನುಗ್ರಹ ಪಡೆಯಲು ತನ್ನದೇ ಆದ ರೀತಿಯಲ್ಲಿ ಪೂಜೆ, ಭಕ್ತಿಯಲ್ಲಿ ತೊಡಗುತ್ತಾನೆ. ಬಹಳಷ್ಟು ಮನೆಗಳಲ್ಲಿ, ಬೀದಿಬೀದಿಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕೆಲ ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು. 

Ganesh Chaturthi 2022 things to be taken care during Ganpati Sthapana at home skr
Author
Bangalore, First Published Aug 21, 2022, 4:24 PM IST

ಗಣೇಶ ಚತುರ್ಥಿಯು ಹಿಂದೂ ಹಬ್ಬಗಳಲ್ಲೇ ಅತಿ ಪ್ರಮುಖವಾದುದಾಗಿದೆ. ಗಣೇಶ ಎಂದರೆ ಪ್ರಥಮ ಪೂಜಕ. ಯಾವುದೇ ಶುಭ ಸಂದರ್ಭವಿರಲಿ, ಗಣಪನಿಗೆ ಪೂಜೆಯಿಲ್ಲದೆ ಕಾರ್ಯಕ್ರಮ ಆರಂಭವಾಗಲಾರದು. ಆತ ಬೇಡಿದ ವರ ಕೊಡುವ ದೇವರು. ಬುದ್ಧಿವಂತಿಕೆ, ಜ್ಞಾನದಾತ. ಜೊತೆಗೆ ಬದುಕಿನ ಹಾದಿಕ ಕಷ್ಟಗಳನ್ನೆಲ್ಲ ನಿವಾರಿಸುವ ವಿಘ್ನ ನಿವಾರಕ. ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಇದೇ ತಿಥಿಯಂದು ಕೈಲಾಸ ಪರ್ವತದಿಂದ ತಾಯಿ ಪಾರ್ವತಿ ದೇವಿಯೊಂದಿಗೆ ಗಣೇಶ ಧರೆಗಿಳಿದಿದ್ದ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ.ಹಾಗಾಗಿ ಈ ದಿನವನ್ನು ಗಣೇಶ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. 

ಈ ದಿನ ಮನೆಮನೆಯಲ್ಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಆತನಿಗೆ ಪೂಜೆ ನೆರವೇರಿಸಿ, ಗಣಪನಿಗಿಷ್ಟವಾದ ಮೋದಕ, ಕಡಲೆ, ಕಬ್ಬು, ಕಡುಬು, ಪಂಚಕಜ್ಜಾಯ ಇತ್ಯಾದಿ ತಿನಿಸುಗಳನ್ನು ನೀಡಲಾಗುತ್ತದೆ. ಗರಿಕೆ ಅರ್ಪಿಸಲಾಗುತ್ತದೆ. ಸಕಲ ವಿಧಿ ವಿಧಾನಗಳಿಂದ ಗಣೇಶನನ್ನು ಪೂಜಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಗಣೇಶನ ಬಗ್ಗೆ ಸ್ಕಂದ ಪುರಾಣ, ನಾರದ ಪುರಾಣ ಮತ್ತು ಬ್ರಹ್ಮ ವೈವರ್ತ ಪುರಾಣಗಳಲ್ಲಿ ವರ್ಣಿಸಿರುವುದನ್ನು ಕಾಣಬಹುದು. 

ಗಣೇಶ ಚತುರ್ಥಿ 2022 ಯಾವಾಗ? ಶುಭ ಮುಹೂರ್ತವೇನು?

ಸಾಮಾನ್ಯವಾಗಿ ಜನರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ ದಿನವೇ ಸಂಜೆ ವಿಸರ್ಜನೆ ಮಾಡುವುದರಿಂದ ಹಿಡಿದು 10 ದಿನಗಳವರೆಗೂ ಮನೆಯಲ್ಲಿ ಇಟ್ಟುಕೊಂಡು ವಿಸರ್ಜನೆ ಮಾಡುವುದಿದೆ. ಈ ಸಂದರ್ಭದಲ್ಲಿ ಕೆಲ ತಪ್ಪುಗಳಾಗದಂತೆ ಎಚ್ಚರ ವಹಿಸುವುದು ಬಹಳ ಅಗತ್ಯವಾಗಿದೆ. ಇಲ್ಲದಿದ್ದಲ್ಲಿ, ವಿನಾಯಕನ ಮೆಚ್ಚಿಸುವ ಬದಲು ಆತನ ಅವಕೃಪೆ ಎದುರಿಸುವಂತಾದೀತು. ಅಂಥ ನಿಯಮಗಳು ಯಾವೆಲ್ಲ ನೋಡೋಣ. 

 • ಗಣೇಶ ಚತುರ್ಥಿಯಂದು ಹೊಸ ಮೂರ್ತಿಯನ್ನೇ ತಂದು ಸ್ಥಾಪಿಸಿ ಪೂಜಿಸಬೇಕು. ಹಿಂದಿನ ವರ್ಷದ ಮೂರ್ತಿಗಳನ್ನು ಗಣೇಶ ಚತುರ್ಥಿಯಂದು ಸ್ಥಾಪಿಸಿ ಪೂಜಿಸುವಂತಿಲ್ಲ.
 • ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ಮೂರ್ತಿಯು ಯಾವುದೇ ಕಾರಣಕ್ಕೂ ದಕ್ಷಿಣ(south) ದಿಕ್ಕಿನತ್ತ ಮುಖ ಮಾಡಿರಬಾರದು. ಇದರಿಂದ ಸಮಸ್ಯೆಗಳು ಉಂಟಾಗುತ್ತವೆ.
 • ಗಣಪತಿಯನ್ನು ಪೂಜಿಸುವಾಗ ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳುವುದು ಶುಭವಲ್ಲ. ಗಣೇಶನಿಗೆ ಕೆಂಪು(Red) ಮತ್ತು ಹಳದಿ(yellow) ಪ್ರಿಯವಾದ ಬಣ್ಣಗಳಾಗಿವೆ. ಹಾಗಾಗಿ ಗಣಪತಿಯನ್ನು ಪೂಜಿಸುವ ಸಂದರ್ಭದಲ್ಲಿ ಕೆಂಪು ಅಥವಾ ಹಳದಿ ಬಣ್ಣದ ವಸ್ತ್ರವನ್ನು ಹಾಕಿಕೊಳ್ಳುವುದು ಶುಭ ಎಂದು ಹೇಳಲಾಗುತ್ತದೆ.
 • ಗಣಪತಿಗೆ ತುಳಸಿ(Basil leaf)ಯನ್ನು ಅರ್ಪಿಸಬಾರದು. ಪುರಾಣಗಳ ಅನುಸಾರ ತುಳಸಿ ದೇವಿಯು ಗಣೇಶನೊಂದಿಗೆ ವಿವಾಹಕ್ಕೆ ಒಪ್ಪದ ಕಾರಣ ಗಣಪತಿಯ ಕೋಪಗೊಂಡಿರುತ್ತಾನೆ. ಹಾಗಾಗಿ ಗಣಪತಿಗೆ ತುಳಸಿಯನ್ನು ಅರ್ಪಿಸುವುದು ನಿಷಿದ್ಧವಾಗಿದೆ.
 • ಮೂರ್ತಿ ಸ್ಥಾಪನೆ ಮಾಡಿ ಪೂಜಿಸಿದ ನಂತರ ಮೂರ್ತಿಯೊಂದನ್ನೇ ಬಿಟ್ಟು ಎಲ್ಲರೂ ಹೋಗಬಾರದು. ಗಣೇಶನ ಮೂರ್ತಿಯ ಬಳಿ ಯಾರಾದರೂ ಒಬ್ಬರು ಸದಾ ಕಾಲ ಜೊತೆಯಲ್ಲಿರಬೇಕು.
 • ಗಣೇಶ ಚತುರ್ಥಿಯಂದು ಚಂದ್ರ(Moon)ನನ್ನು ನೋಡಬಾರದು ಎಂಬುದು ಶಾಸ್ತ್ರಲಿಖಿತವಾಗಿದೆ. ಚೌತಿಯಂದು ಚಂದ್ರನನ್ನು ನೋಡಿದರೆ ಅಪವಾದ ತಪ್ಪುವುದಿಲ್ಲ. 
 • ಗಣೇಶ ಚತುರ್ಥಿಯಂದು ಸಾತ್ವಿಕ ಆಹಾರವನ್ನೇ ಸೇವಿಸಬೇಕು. ಮುಖ್ಯವಾಗಿ ಗಣೇಶನನ್ನು ಪೂಜಿಸುವವರು ಮಾಂಸ, ಮದಿರೆ ಮತ್ತು ಮೀನು ಇತ್ಯಾದಿ ತಾಮಸ ಆಹಾರವನ್ನು ಸೇವಿಸಬಾರದು. ಗಣಪತಿ ವಿಸರ್ಜನೆವರೆಗೂ ಈ ವಿಷಯಗಳಲ್ಲಿ ಕಟ್ಟುನಿಟ್ಟಾಗಿರಬೇಕು. 
 • ಗಣಪತಿ ಚೌತಿಯಂದು ಶಾಂತಿಯಿಂದ ಇದ್ದು ದೇವರ ಸ್ಮರಣೆ ಮಾಡುತ್ತಿರಬೇಕು. ಕೆಟ್ಟ ಮಾತಾಡಬಾರದು. ಜಗಳ, ಕಲಹ ಮತ್ತು ವಿವಾದಗಳಲ್ಲಿ ತೊಡಗಬಾರದು. ಮತ್ತೊಬ್ಬರಿಗೆ ಕೆಡುಕು ಬಯಸಬಾರದು. ಹೀಗೆ ಮಾಡುವುದರಿಂದ ಗಣೇಶನ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. 

  ಗಣೇಶ ಚತುರ್ಥಿ ದಿನ ಇದನ್ನು ಧರಿಸಿದ್ರೆ ನಿಮ್ಮೆಲ್ಲ ಕಷ್ಟಗಳು ಕರಗುತ್ವೆ..
   
 • ಆರತಿ ಬೆಳಗಿ, ನೈವೇದ್ಯ ಅರ್ಪಿಸಿದ ನಂತರವೇ ಮೂರ್ತಿ ವಿಸರ್ಜನೆ ಮಾಡಬೇಕು.
 • ಗಣೇಶನ ಮೂರ್ತಿಯನ್ನು ಸ್ಥಾಪಿಸುವಾಗ ಮತ್ತು ವಿಸರ್ಜಿಸುವಾಗ ಶುಭ ಮುಹೂರ್ತ(Shubh Muhurt) ನೋಡಿಕೊಳ್ಳಬೇಕು.
 • ಗಣಪತಿ ವಿಗ್ರಹವನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗುವಾಗ ಮನೆಯ ಬಾಗಿಲನ್ನು ಮುಚ್ಚಬಾರದು. ಮನೆಯಲ್ಲಿ ಯಾರಾದರೂ ಒಬ್ಬರು ಇರಬೇಕು.
Follow Us:
Download App:
 • android
 • ios