Makar Sankranti 2023: ಈ ಬಾರಿ 14ಕ್ಕೋ 15ಕ್ಕೋ ಸಂಕ್ರಾಂತಿ ಹಬ್ಬ?

ಮುಂದಿನ ತಿಂಗಳು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುವುದು. ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ದಿನಾಂಕದ ಬಗ್ಗೆ ಗೊಂದಲ ಹುಟ್ಟುತ್ತದೆ. ಈ ಹಬ್ಬವನ್ನು ಬರಲಿರುವ ವರ್ಷ ಯಾವ ದಿನಾಂಕದಂದು ಆಚರಿಸಲಾಗುವುದು ತಿಳಿಯೋಣ.

14 or 15 January this year when will Makar Sankranti 2023 be celebrated skr

ಡಿಸೆಂಬರ್ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಅದರ ನಂತರವೇ ಹೊಸ ವರ್ಷ 2023 ಅಂದರೆ ಜನವರಿ ಪ್ರಾರಂಭವಾಗುತ್ತದೆ ಮತ್ತು ಈ ತಿಂಗಳಿನಲ್ಲಿ ಮಕರ ಸಂಕ್ರಾಂತಿ ಕೂಡ ಬರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಮಕರ ಸಂಕ್ರಾಂತಿ ಹಬ್ಬವನ್ನು ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ದಿನಾಂಕದಂದು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ಈ ದಿನ, ಗ್ರಹಗಳ ರಾಜ, ಸೂರ್ಯನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು(Capricorn zodiac) ಪ್ರವೇಶಿಸುತ್ತಾನೆ. ಅದಕ್ಕಾಗಿಯೇ ಇದನ್ನು ಮಕರ ಸಂಕ್ರಾಂತಿ(Makar Sankranti) ಎಂದು ಕರೆಯಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಲೋಹ್ರಿ, ಉತ್ತರಾಯಣ, ಖಿಚಡಿ, ತೆಹ್ರಿ, ಪೊಂಗಲ್ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಈ ದಿನ ಸ್ನಾನ, ದಾನ ಮತ್ತು ಎಳ್ಳನ್ನು ತಿನ್ನುವ ಸಂಪ್ರದಾಯವಿದೆ.

ಮಕರ ಸಂಕ್ರಾಂತಿ ದಿನಾಂಕದ ಬಗ್ಗೆ ಗೊಂದಲ
2023ರಲ್ಲಿ ಮಕರ ಸಂಕ್ರಾಂತಿಯ ದಿನಾಂಕದ ಬಗ್ಗೆ ಜನರು ಗೊಂದಲಕ್ಕೊಳಗಾಗಿದ್ದಾರೆ. ಕೆಲವು ವಿದ್ವಾಂಸರ ಪ್ರಕಾರ, ಮಕರ ಸಂಕ್ರಾಂತಿಯನ್ನು 2023ರಲ್ಲಿ ಜನವರಿ 14ರಂದು ಆಚರಿಸಲಾಗುತ್ತದೆ, ಆದರೆ ಇತರರ ಪ್ರಕಾರ, ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ನಿಖರವಾಗಿ ಯಾವ ದಿನಾಂಕದಂದು ಸಂಕ್ರಾಂತಿ ಬರುತ್ತದೆ ಎಂದು ತಿಳಿಯೋಣ. 

Wind Chime Vastu: ನಿಯಮ ತಪ್ಪಿದರೆ ಅದೃಷ್ಟದ ಬದಲು ದುರದೃಷ್ಟ ತರುವ ಗಾಳಿಗಂಟೆ

ಸಂಕ್ರಾಂತಿ ದಿನಾಂಕ ಮತ್ತು ಮಂಗಳಕರ ಸಮಯ(Date and Muhurt)
ಪಂಚಾಂಗದ ಪ್ರಕಾರ, 2023ರಲ್ಲಿ ಮಕರ ಸಂಕ್ರಾಂತಿಯ ಹಬ್ಬವನ್ನು ಈ ಬಾರಿ ಜನವರಿ 15ರಂದು ಭಾನುವಾರ ಆಚರಿಸಲಾಗುತ್ತದೆ. ಏಕೆಂದರೆ ಈ ಬಾರಿ ಜನವರಿ 14ರ ಶನಿವಾರದಂದು ರಾತ್ರಿ 08:21ಕ್ಕೆ  ಸೂರ್ಯನು ಮಕರ ರಾಶಿಗೆ ಪ್ರವೇಶಿಸಲಿದ್ದಾನೆ.
ಪುಣ್ಯ ಕಾಲ ಮುಹೂರ್ತ : 07:15:13 ರಿಂದ 12:30ರವರೆಗೆ
ಅವಧಿ: 5 ಗಂಟೆ 14 ನಿಮಿಷಗಳು
ಮಹಾಪುಣ್ಯ ಕಾಲ ಮುಹೂರ್ತ : 07:15:13 ರಿಂದ 09:15:13
ಅವಧಿ: 2 ಗಂಟೆ 0 ನಿಮಿಷಗಳು
ಸಂಕ್ರಾಂತಿ ಕ್ಷಣ: ಜನವರಿ 14 20:21:45 ಕ್ಕೆ

ಮಕರ ಸಂಕ್ರಾಂತಿಯಂದು ದಾನ
ಮಕರ ಸಂಕ್ರಾಂತಿಯನ್ನು ಸ್ನಾನ ಮತ್ತು ದಾನದ ಹಬ್ಬ ಎಂದೂ ಕರೆಯುತ್ತಾರೆ. ತೀರ್ಥಕ್ಷೇತ್ರಗಳಲ್ಲಿ ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಈ ದಿನದಂದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ, ಹಾಗೆಯೇ ಎಳ್ಳು, ಬೆಲ್ಲ, ಖಿಚಡಿ, ಹಣ್ಣುಗಳನ್ನು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ದಿನದಂದು ಮಾಡುವ ದಾನಗಳಿಂದ ಸೂರ್ಯ ದೇವರು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆಯೂ ಇದೆ. ಈ ಸಂದರ್ಭದಲ್ಲಿ ನೀಡಿದ ದೇಣಿಗೆ ನೂರರಷ್ಟು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಈ ದಿನ ಶುದ್ಧ ತುಪ್ಪ ಮತ್ತು ಕಂಬಳಿ ದಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ.

Banana plant Vastu: ಸಮೃದ್ಧಿಗಾಗಿ ಬಾಳೆ ಮರದ ಪಕ್ಕ ಈ ಸಸ್ಯ ಬೆಳೆಸಲೇಬೇಕು!

ಮಕರ ಸಂಕ್ರಾಂತಿಯಂದು ಖಿಚಡಿಯ ಧಾರ್ಮಿಕ ಮಹತ್ವ(relegious importance)
ಮಕರ ಸಂಕ್ರಾಂತಿಯ ದಿನದಂದು, ಈ ದಿನ ಸೂರ್ಯ ದೇವರು ತನ್ನ ಮಗನಾದ ಶನಿಯ ಮನೆಗೆ ಹೋಗುತ್ತಾನೆ ಎಂದು ನಂಬಲಾಗಿದೆ. ಜ್ಯೋತಿಷ್ಯದಲ್ಲಿ, ಉದ್ದಿನ ಬೇಳೆಯನ್ನು ಶನಿ ದೇವನೊಂದಿಗೆ ಸಂಯೋಜಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನದಂದು ಉದ್ದಿನ ಬೇಳೆಯನ್ನು ತಿನ್ನುವುದರಿಂದ, ಸೂರ್ಯ ದೇವರು ಮತ್ತು ಶನಿದೇವರ ಆಶೀರ್ವಾದವನ್ನು ಪಡೆಯಲಾಗುತ್ತದೆ. ಇದರೊಂದಿಗೆ ಅಕ್ಕಿಯನ್ನು ಚಂದ್ರ, ಉಪ್ಪನ್ನು ಶುಕ್ರ, ಅರಿಶಿನವನ್ನು ಗುರು, ಹಸಿರು ತರಕಾರಿಗಳನ್ನು ಬುಧ ಎಂದು ಪರಿಗಣಿಸಲಾಗುತ್ತದೆ. ಆದರೆ ಮಂಗಳವು ಶಾಖಕ್ಕೆ ಸಂಬಂಧಿಸಿದೆ. ಅದಕ್ಕಾಗಿಯೇ ಮಕರ ಸಂಕ್ರಾಂತಿಯಂದು ಖಿಚಡಿ ತಿನ್ನುವುದು ಜಾತಕದಲ್ಲಿನ ಎಲ್ಲಾ ರೀತಿಯ ಗ್ರಹಗಳ ಸ್ಥಿತಿಯನ್ನು ಸುಧಾರಿಸುತ್ತದೆ.

Latest Videos
Follow Us:
Download App:
  • android
  • ios