Asianet Suvarna News Asianet Suvarna News

ಈ ವಿಷಯ ತಿಳಿಯದೆ ಪೂಜಿಸಿ, ಸಮಸ್ಯೆ ಮೈ ಮೇಲೆಳೆದುಕೊಳ್ಳಬೇಡಿ!

ಪ್ರತಿ ಹಿಂದೂವೂ ಈ 14 ನಿಯಮಗಳನ್ನು ತಿಳಿದು, ಪಾಲಿಸುತ್ತಿದ್ದರೆ, ಅವರ ಜೀವನದಲ್ಲಿ ಸಂತೋಷ, ಸಮೃದ್ಧಿ ತುಂಬಿರುತ್ತದೆ. ಮರಣ ನಂತರ ಮೋಕ್ಷವೂ ಸಿದ್ದಿಸುತ್ತದೆ. ಹಿಂದೂಗಳು ದೇವರನ್ನು ಪೂಜಿಸುವಾಗ  ತಿಳಿದಿರಬೇಕಾದ 14 ಗೋಲ್ಡನ್ ರೂಲ್ಸ್ ಇವು. 

14 Golden Rules that every Hindu should know skr
Author
Bangalore, First Published Jun 4, 2022, 6:08 PM IST

ನೀವು ದೇವರ ಪೂಜೆ ಪ್ರತಿ ದಿನ ಮಾಡುತ್ತಿರಬಹುದು. ಆದರೂ, ದೇವರು ನಿಮ್ಮ ಬಗ್ಗೆ ಕರುಣೆ ತೋರುತ್ತಿಲ್ಲ, ನಿಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದೆಲ್ಲ ನಿಮಗನಿಸಬಹುದು. ಬಹುಷಃ ನೀವು ಪೂಜಿಸುತ್ತಿರುವಾಗ ಕೆಲವು ತಪ್ಪುಗಳನ್ನು ಮಾಡುತ್ತಿರಬಹುದು. ಹೀಗಾಗಿ, ಇನ್ನು ಮುಂದೆ ಪೂಜಿಸುವ ಮುನ್ನ ಈ ವಿಷಯಗಳು ನಿಮ್ಮ ಅರಿವಿನಲ್ಲಿರಲಿ. 

  • ನಿಮ್ಮ ಆಯ್ಕೆಯ ದೇವರನ್ನು ಪ್ರತಿದಿನ ತಪ್ಪದೆ ಪೂಜಿಸಬೇಕು. ಪೂಜೆಯನ್ನು ದಿನಕ್ಕೆ ಎರಡು ಬಾರಿ ಅಂದರೆ ಬೆಳಗ್ಗೆ ಮತ್ತು ಸಂಜೆ ಮಾಡಬೇಕು. 
  • ನಿಮ್ಮ ಮನೆಯ ಪೂಜಾ ಸ್ಥಳ(Pooja Room)ವು 15 ಇಂಚುಗಳಿಗಿಂತ ದೊಡ್ಡದಾದ ಹಿಂದೂ ದೇವರ ಪ್ರತಿಮೆಯನ್ನು ಹೊಂದಿರಬೇಕು. ಇದಕ್ಕಿಂತ ದೊಡ್ಡ ಗಾತ್ರದ ವಿಗ್ರಹ ಮನೆಯಲ್ಲಿ ಇಡಬಾರದು. ಗಣೇಶ, ಸರಸ್ವತಿ ಮತ್ತು ಲಕ್ಷ್ಮಿ ದೇವತೆಗಳ ನಿಂತಿರುವ ಮೂರ್ತಿಗಳನ್ನು ಪೂಜಾಸ್ಥಳದಲ್ಲಿ ಇಡಬಾರದು.
  • ನಿಮ್ಮ ದೇವರ ಕೋಣೆಯಲ್ಲಿ ಒಂದೇ ದೇವರ ಅಥವಾ ಯಾವುದೇ ದೇವಿಯ ಮೂರು ವಿಗ್ರಹಗಳನ್ನು ಇಡಬೇಡಿ. ಹಾಗೆಯೇ, ಒಂದು ಪೂಜಾಸ್ಥಳದಲ್ಲಿ ಎರಡು ಶಿವಲಿಂಗ, ಎರಡು ಸಾಲಿಗ್ರಾಮ, ಎರಡು ಸೂರ್ಯದೇವರ ವಿಗ್ರಹ ಮತ್ತು ಎರಡು ಗೋಮತಿ ಚಕ್ರಗಳನ್ನು ಇಡುವುದನ್ನು ನಿಷೇಧಿಸಲಾಗಿದೆ.
  • ದೇವರ ಕೋಣೆಯಲ್ಲಿ ಯಾವುದೇ ಉಡುಗೊರೆ ಬಂದ, ಮರದ ಅಥವಾ ಫೈಬರ್ ವಿಗ್ರಹಗಳು ಇರಬಾರದು. ನೀವು ಪ್ರತಿನಿತ್ಯ ಪೂಜಿಸುತ್ತಿರುವ ದೇವರ ವಿಗ್ರಹವನ್ನು ಮಾತ್ರ ಇಡಬೇಕು. ಯಾವುದೇ ಒಡೆದ ವಿಗ್ರಹವನ್ನು ದೇವರ ಕೋಣೆಯಿಂದ ತಕ್ಷಣವೇ ತೆಗೆದುಹಾಕಬೇಕು ಮತ್ತು ಹರಿಯುವ ನೀರಿನಲ್ಲಿ (ನದಿ/ಕೆರೆ) ಗೌರವಯುತವಾಗಿ ಬಿಡಬೇಕು.

    Vastu Tips: ಈ ದಿಕ್ಕಲ್ಲಿ ಮಣ್ಣಿನ ಮಡಕೆ ಇಟ್ಟರೆ ಹಣದ ಸಮಸ್ಯೆ ಇರೋಲ್ಲ!
     
  • ನಿಮ್ಮ ಮಂದಿರದ ಮೇಲೆ ದೇವರ ಬಟ್ಟೆ, ಪರಿಕರಗಳು, ಪುಸ್ತಕಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಇಡುವುದು ಒಳ್ಳೆಯದಲ್ಲ. ಮನೆಯ ದೇವರ ಕೋಣೆ ಮುಂಭಾಗದಲ್ಲಿ ಪರದೆ/ಬಾಗಿಲು ಇರಬೇಕು. ಪೂಜಾ ಕೋಣೆಯಲ್ಲಿ ಪೋಷಕರ ಫೋಟೋಗಳನ್ನು ಇಡಬೇಡಿ.
  • ನೀವು ಕನಿಷ್ಠ ಐದು ಹಿಂದೂ ದೇವರಿಗೆ ನಿಮ್ಮ ದೈನಂದಿನ ಪ್ರಾರ್ಥನೆಗಳನ್ನು ಸಲ್ಲಿಸಿದಾಗ ಪೂಜೆ ಪೂರ್ಣಗೊಳ್ಳುತ್ತದೆ ಎಂದು ಹಿಂದೂ ಸಂತರು ಉಲ್ಲೇಖಿಸಿದ್ದಾರೆ, ಇದನ್ನು ಪಂಚದೇವ(Panchadeva) ಎಂದೂ ಕರೆಯುತ್ತಾರೆ, ಅದರಲ್ಲಿ ಒಬ್ಬರು ನಿಮ್ಮ ಇಷ್ಟದೇವರಾಗಿರಬೇಕು. ಪ್ರಾರ್ಥಿಸಬೇಕಾದ ಐದು ಪ್ರಮುಖ ದೇವರುಗಳೆಂದರೆ ಭಗವಾನ್ ಸೂರ್ಯ, ಗಣೇಶ, ದುರ್ಗಾ, ಶಿವ ಮತ್ತು ವಿಷ್ಣು.
  • ಪೂಜೆಯನ್ನು ಯಾವಾಗಲೂ ಪೂರ್ವ(east) ಅಥವಾ ಉತ್ತರಕ್ಕೆ ಮುಖ ಮಾಡಿ ಮಾಡಬೇಕು. ಯಾವುದೇ ಸಂದರ್ಭದಲ್ಲಿ, ಹಿಂದೂ ದೇವರ ಪೂಜೆಯನ್ನು ದಕ್ಷಿಣಕ್ಕೆ ಅಭಿಮುಖವಾಗಿ ಮಾಡಬಾರದು. ಅಲ್ಲದೆ, ಹಿಂದೂ ದೇವರುಗಳ ಮೂರ್ತಿಯ ಕಡೆಗೆ ನಿಮ್ಮ ಬೆನ್ನು ಹಾಕಿ ಕುಳಿತುಕೊಳ್ಳಬಾರದು.
  • ಬೆಳಿಗ್ಗೆ ಪೂಜೆ ಮಾಡುವಾಗ ತುಪ್ಪದ ದೀಪ(Ghee lamp) ಹಚ್ಚಬೇಕು, ಸಂಜೆ ಎಣ್ಣೆಯಿಂದ ದೀಪ ಬೆಳಗಿಸಬೇಕು. ನೀವು ಎಂದಿಗೂ ಮತ್ತೊಂದು ದೀಪದ ಸಹಾಯದಿಂದ ದೀಪ ಬೆಳಗಿಸಬಾರದು. ಇದು ಮನೆಯಲ್ಲಿ ಅನಾರೋಗ್ಯವನ್ನು ಆಕರ್ಷಿಸುತ್ತದೆ.

    ಮಲಯಾಳಂನ 51 ವರ್ಣಮಾಲೆಯಿಂದ 51 ದೇವತೆಗಳಿಗೆ ಹೆಸರಿಟ್ಟ ದೇವಾಲಯ!
     
  • ನೆಲದ ಮೇಲೆ ಕುಳಿತು ಪ್ರಾರ್ಥನೆ(prayer) ಮಾಡಬಾರದು. ಚಾಪೆ, ಇಲ್ಲವೇ ಮಣೆಯ ಮೇಲೆ ಕೂರಬೇಕು.
  • ಪೂಜೆಯಲ್ಲಿ ಬಳಸುವ ಗಂಗಾಜಲವನ್ನು ಯಾವುದೇ ಪ್ಲಾಸ್ಟಿಕ್, ಅಲ್ಯೂಮಿನಿಯಂ ಅಥವಾ ಕಬ್ಬಿಣದ ಪಾತ್ರೆಗಳಲ್ಲಿ ಇಡಬಾರದು. ಇದಕ್ಕಾಗಿ ತಾಮ್ರದ ಪಾತ್ರೆ ಒಳ್ಳೆಯದು. ಅದೇ ರೀತಿ, ತಿಲಕಕ್ಕೆ ಬಳಸುವ ಚಂದನವನ್ನು ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಬಾರದು.
  • ಯಾವುದೇ ದೇವರನ್ನು ಪೂಜಿಸುವಾಗ, ನೀವು ಯಾವಾಗಲೂ ದಕ್ಷಿಣೆ ನೀಡಬೇಕು. ನಿಮ್ಮ ಋಣಾತ್ಮಕತೆ(negativity)ಯನ್ನು ನೀವು ಎಷ್ಟು ವೇಗವಾಗಿ ತೊಡೆದುಹಾಕುತ್ತೀರೋ ಅಷ್ಟು ಬೇಗ ನಿಮ್ಮ ಆಸೆ ಪೂರೈಸುತ್ತದೆ.
  • ದೇವರಿಗೆ ಪೂಜೆ ಸಲ್ಲಿಸಿದ ನಂತರ, ಒಂದೇ ಸ್ಥಳದಲ್ಲಿ ನಿಂತು ಮೂರು ಪರಿಕ್ರಮಗಳನ್ನು ಮಾಡಬೇಕು.
  • ಆರತಿಯ ಕೊನೆಯಲ್ಲಿ, ಕೈ ಜೋಡಿಸಿ, ದೇವರು/ದೇವತೆ ತಮ್ಮ ಪ್ರಾರ್ಥನೆಯನ್ನು ಸ್ವೀಕರಿಸುವಂತೆ ವಿನಂತಿಸಬಹುದು ಮತ್ತು ಪೂಜೆಯ ಸಮಯದಲ್ಲಿ ಮಾಡಿದ ಯಾವುದೇ ತಪ್ಪುಗಳನ್ನು ಕ್ಷಮಿಸುವಂತೆ ಕೇಳಬೇಕು. ಅದನ್ನು ‘ಕ್ಷಮ ಯಾಚನ’ ಎನ್ನುತ್ತಾರೆ.
  • ದುರ್ಗಾ ದೇವಿಗೆ ದುರ್ವೆ ಹುಲ್ಲನ್ನು ಅರ್ಪಿಸುವುದಿಲ್ಲ. ಇದು ಗಣೇಶನಿಗೆ ಮಾತ್ರ. ಭಾನುವಾರದಂದು ದೂರ್ವೆಯನ್ನು ಗಣೇಶನಿಗೆ ಅರ್ಪಿಸಬಾರದು.
  • ಸೂರ್ಯ ದೇವನಿಗೆ ಅರ್ಪಿಸುವಾಗ ಶಂಖದಿಂದ ನೀರನ್ನು ಸುರಿಯಬಾರದು.
  • ಪೂಜೆಯ ಸಮಯದಲ್ಲಿ ಮಾತ್ರ ದೈವಿಕ ಶಂಖವನ್ನು ಊದಬೇಕು.
  • ಸ್ನಾನ ಮಾಡದೆ ತುಳಸಿ ಎಲೆಗಳನ್ನು ಕೀಳಬಾರದು.
  • ಕಮಲದ ಹೂವನ್ನು ಲಕ್ಷ್ಮಿ ದೇವಿಗೆ ಅರ್ಪಿಸಲಾಗುತ್ತದೆ.
  • ಅಶ್ವತ್ಥ ಮರಗಳಿಗೆ ಬುಧವಾರ ಮತ್ತು ಭಾನುವಾರ ನೀರು ಹಾಕಬಾರದು.
  • ಕೇದಿಗೆಯ ಹೂಗಳನ್ನು ಶಿವನಿಗೆ ಅರ್ಪಿಸಬಾರದು.
  • ದೇವರಿಗೆ ಅರ್ಪಿಸುವ ಹೂವುಗಳನ್ನು ಕೈಯಲ್ಲಿ ಇಟ್ಟು ನಂತರ ದೇವರಿಗೆ ಅರ್ಪಿಸುವುದಕ್ಕಿಂತ ತಾಮ್ರದ ತಗಡಿನ ಮೇಲೆ ಇಟ್ಟು ಅರ್ಪಿಸಬೇಕು.
     
Follow Us:
Download App:
  • android
  • ios