ಪಾದಗಳನ್ನು ತೊಳೆಯುವುದು ಮುಖ್ಯ…. ಸಾಮುದ್ರಿಕ ಶಾಸ್ತ್ರ ಏನು ಹೇಳುತ್ತೆ?
ಧರ್ಮಗ್ರಂಥಗಳನ್ನು ಜೀವನದ ಕನ್ನಡಿ ಎಂದು ಪರಿಗಣಿಸಲಾಗಿದೆ. ಅವುಗಳಲ್ಲಿ ಉಲ್ಲೇಖಿಸಲಾದ ಅನೇಕ ವಿಷಯಗಳ ಬಗ್ಗೆ ನಮಗೆ ಇನ್ನೂ ತಿಳಿದಿಲ್ಲ. ಸಮುದ್ರ ಶಾಸ್ತ್ರದಲ್ಲಿ, ಜೀವನವನ್ನು ಸುಗಮವಾಗಿ ನಡೆಸಲು ಅನೇಕ ಪರಿಹಾರಗಳನ್ನು ನೀಡಲಾಗಿದೆ, ಮತ್ತು ಆ ಕ್ರಮಗಳ ಪ್ರಯೋಜನಗಳನ್ನು ಸಹ ವಿವರವಾಗಿ ದಾಖಲಿಸಲಾಗಿದೆ. ನಾವು ಸಣ್ಣ ವಿಷಯ ಎಂದು ಅಂದುಕೊಂಡಿರುವ ಕೆಲವು ವಿಷಯಗಳು ನಮ್ಮ ಜೀವನದಲ್ಲಿ ಎಷ್ಟು ಮಹತ್ವ ಬೀರುತ್ತವೆ ಅನ್ನೋದನ್ನು ಸಹ ಧರ್ಮಗ್ರಂಥಗಳು ತೋರಿಸಿವೆ. ಅವುಗಳ ಬಗ್ಗೆ ತಿಳಿಯೋಣ.
ಧರ್ಮಗ್ರಂಥಗಳಲ್ಲಿ, ವಿಧಿ ಮತ್ತು ದುರದೃಷ್ಟದ ಬಗ್ಗೆ ವಿವರವಾಗಿ ವಿವರಿಸಲಾಗಿದೆ. ಇದರೊಂದಿಗೆ, ಕೆಲವು ನಿಯಮಗಳನ್ನು ಸಹ ಉಲ್ಲೇಖಿಸಲಾಗಿದೆ, ಇದನ್ನು ಮಾಡೋದ್ರಿಂದ ವ್ಯಕ್ತಿಯು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಮತ್ತು ಅವನು ಅದೃಷ್ಟದ ಬೆಂಬಲ ಪಡೆಯುತ್ತಾನೆ ಎನ್ನಲಾಗಿದೆ.
ಸಮುದ್ರಿಕ ಶಾಸ್ತ್ರದಲ್ಲಿ, (samudrika shastra) ಜ್ಯೋತಿಷ್ಯಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ವಿವರವಾಗಿ ಹೇಳಲಾಗಿದೆ. ಈ ಅನೇಕ ರಹಸ್ಯಗಳ ಬಗ್ಗೆ ನಮಗೆ ಇನ್ನೂ ತಿಳಿದಿಲ್ಲ. ಸಮುದ್ರಿಕ ಶಾಸ್ತ್ರದಲ್ಲಿ, ವಿಧಿ ಚಿಹ್ನೆ, ಹಸ್ತ ಸಾಮುದ್ರಿಕತೆ, ಜೀವನದ ಪ್ರಮುಖ ಕಾರ್ಯಗಳನ್ನು ಹೇಗೆ ಮಾಡುವುದು, ಈ ವಿಷಯಗಳನ್ನು ಸಹ ವಿವರವಾಗಿ ವಿವರಿಸಲಾಗಿದೆ.
ಸಮುದ್ರಿಕ ಶಾಸ್ತ್ರದಲ್ಲಿ, ಪಾದಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಸಹ ತಿಳಿಸಲಾಗಿದೆ. ಅಲ್ಲದೆ, ಪಾದಗಳಿಗೆ ಏನು ಮಾಡಬಹುದು ಮತ್ತು ಏನು ಮಾಡಬಾರದು ಅನ್ನೋದನ್ನು ಸಹ ನೀಡಲಾಗಿದೆ. ಇದು ಪಾದಗಳನ್ನು ತೊಳೆಯುವ ಕ್ರಿಯೆಯನ್ನು ಹೆಚ್ಚು ವಿವರವಾಗಿ ವಿವರಿಸುತ್ತದೆ. ಏಕೆಂದರೆ ಪಾದಗಳು ನಮ್ಮ ದೇಹದ ಪ್ರಮುಖ ಭಾಗವಾಗಿದೆ ಮತ್ತು ಅವುಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಪಾದಗಳನ್ನು ಸ್ವಚ್ಛವಾಗಿಡುವುದರ (washing feet) ಮಹತ್ವವನ್ನು ವಿಜ್ಞಾನವು ವಿವರಿಸಿದರೆ, ಪಾದಗಳನ್ನು ಸ್ವಚ್ಛವಾಗಿಡುವುದರ ಪ್ರಯೋಜನಗಳನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಅವುಗಳ ಬಗ್ಗೆ ತಿಳಿಯೋಣ.
ವಿಜ್ಞಾನ ಏನು ಹೇಳುತ್ತೆ?
ಆರೋಗ್ಯದ ದೃಷ್ಟಿಯಿಂದ ಪಾದಗಳನ್ನು ತೊಳೆಯುವುದು ಆರೋಗ್ಯಕರ ಕ್ರಿಯೆಯಾಗಿದೆ. ಇದರೊಂದಿಗೆ, ಕಾಲು ತೊಳೆಯೋದ್ರಿಂದ ಜನರು ಮನೆಯೊಳಗೆ ಬರುವ ಕೀಟಾಣುಗಳನ್ನು ದೂರ ಮಾಡಬಹುದು, ಅಲ್ಲದೇ ಇದು ಗಂಭೀರ ರೋಗಗಳ ಅಪಾಯವನ್ನು ಸಹ ದೂರ ಮಾಡುತ್ತೆ. ಜೊತೆಗೆ ಪಾದಗಳನ್ನು ತೊಳೆಯುವ ಮೂಲಕ, ಪಾದಗಳ ಸ್ನಾಯುಗಳು ವಿಶ್ರಾಂತಿಯ ಭಂಗಿಗೆ ಬರುತ್ತವೆ ಮತ್ತು ವ್ಯಕ್ತಿಯು ಆಯಾಸದಿಂದ ಮುಕ್ತನಾಗುತ್ತಾನೆ (relaxed) ಎಂದು ವಿಜ್ಞಾನದಲ್ಲಿ ತಿಳಿಸಲಾಗಿದೆ.
ಈ ಪ್ರಯೋಜನಗಳನ್ನು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ
ಯೋಗಾಭ್ಯಾಸವು ಒಬ್ಬ ವ್ಯಕ್ತಿಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಆದರೆ ಯೋಗದ ಉತ್ತಮ ಫಲಿತಾಂಶಗಳನ್ನು ಪಡೆಯಲು, ಯೋಗ ಮಾಡುವ ಮೊದಲು ಪಾದಗಳನ್ನು ಸ್ವಚ್ಛವಾಗಿಡುವುದು ಮತ್ತು ಅವುಗಳನ್ನು ತೊಳೆಯುವುದು ಅಗತ್ಯವೆಂದು ಪರಿಗಣಿಸಲಾಗಿದೆ.
meditation
ದೇಹದಲ್ಲಿರುವ ಅನೇಕ ಪ್ರಮುಖ ನರಗಳು ಪಾದಗಳಿಗೆ ಸಂಪರ್ಕ ಹೊಂದಿವೆ, ಅವು ದೇಹದ ಶಕ್ತಿಯನ್ನು (body power) ನಿಯಂತ್ರಿಸುತ್ತವೆ. ಪಾದಗಳನ್ನು ತೊಳೆಯುವುದರಿಂದ ಮನಸ್ಸು ಶಾಂತವಾಗುತ್ತೆ ಮತ್ತು ಶಾಂತ ಮನಸ್ಸಿನಿಂದ ಯೋಗದ ಸರಿಯಾದ ಫಲಿತಾಂಶ ಪಡೆಯಬಹುದು. ನೀವೂ ಆರೋಗ್ಯದಿಂದ ಇರಲು ಸಾಧ್ಯವಾಗುತ್ತೆ.
ಪಾದಗಳನ್ನು ತೊಳೆಯುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುವುದಲ್ಲದೆ ಆಧ್ಯಾತ್ಮಿಕತೆಯಲ್ಲಿ ಸರಿಯಾದ ಫಲಿತಾಂಶ ಪಡೆಯಲು ಸಾಧ್ಯವಾಗುತ್ತೆ. ಪೂಜೆಗೆ ಮೊದಲು ಪಾದಗಳನ್ನು ತೊಳೆಯುವುದು ಸಕಾರಾತ್ಮಕ ಶಕ್ತಿಯನ್ನು (positive energy) ನೀಡುತ್ತದೆ ಮತ್ತು ಮನಸ್ಸನ್ನು ಶಾಂತವಾಗಿರಿಸುತ್ತದೆ. ಶಾಂತ ಮನಸ್ಸಿನಿಂದ ಮಾಡುವ ಪೂಜೆಯಿಂದ ವ್ಯಕ್ತಿಯ ಪ್ರಾರ್ಥನೆಯು ಯಶಸ್ವಿಯಾಗುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಆರೋಗ್ಯಕರ ಜೀವನಕ್ಕೆ ಉತ್ತಮ ನಿದ್ರೆ (healthy sleep) ಕೂಡ ಮುಖ್ಯ. ಆದರೆ ಇಂದಿನ ವೇಗದ ಜೀವನದಲ್ಲಿ, ಅನೇಕ ಜನರಿಗೆ ಪೂರ್ಣ ನಿದ್ರೆ ಪಡೆಯೋದೆ ಕಷ್ಟವಾಗಿದೆ. ಹೀಗಿರೋವಾಗ, ಉತ್ತಮ ಮತ್ತು ಗಾಢ ನಿದ್ರೆಯನ್ನು ಪಡೆಯಲು, ಮಲಗುವ ಮೊದಲು ಪಾದಗಳನ್ನು ಒಮ್ಮೆ ತೊಳೆಯಬೇಕು ಎಂದು ಸಮುದ್ರ ವಿಜ್ಞಾನದಲ್ಲಿ ತಿಳಿಸಲಾಗಿದೆ. ಇದನ್ನು ಮಾಡೋದ್ರಿಂದ, ಪಾದಗಳಲ್ಲಿರುವ ಜೀವಕೋಶಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ದುಃಸ್ವಪ್ನಗಳಿಗೆ ಕಾರಣವಾಗುವುದಿಲ್ಲ.