ಕೆಲವೊಂದು ಕ್ಷಣಗಳು ದೇಜ ವು ವಿನಂತೆ ಭಾಸವಾಗುತ್ತವೆ. ಇದು ಹಿಂದೆಲ್ಲೋ ಆಗಿತ್ತು, ನನಗೆ ಹೀಗೆಯೇ ಅನಿಸಿತ್ತು ಎನಿಸುತ್ತದೆ. ಅಂಥವು ನಮ್ಮ ಕನಸಿನಲ್ಲೂ ಆಗಬಹುದು. ಅಂದರೆ ಕೆಲವು ಕನಸುಗಳು ನಮ್ಮ ಭವಿಷ್ಯದ ಸೂಚನೆಯಾಗಿರಬಹುದು. ವೇದವಿಜ್ಞಾನಗಳಲ್ಲಿಯೂ ಬೆಳಗಿನ ಜಾವ ಬಿದ್ದ ಕನಸು ನನಸಾಗಲಿದೆ ಎಂದು ಹೇಳಿರುವುದನ್ನು ನೀವು  ಕೇಳಿರಬಹುದು. ಪ್ರಾಚೀನ ವಿದ್ವಾಂಸರ ಪ್ರಕಾರ, ಕೆಲ ಕನಸುಗಳು ಭವಿಷ್ಯದ ಕುರಿತ ಸಿಹಿಸುದ್ದಿ ಸೂಚಿಸಿದರೆ, ಮತ್ತೆ ಕೆಲವು ಮುಂದಾಗಲಿರುವ ಅನಾಹುತಗಳನ್ನು ಸೂಚಿಸುತ್ತವೆ. ಅದರಲ್ಲೂ, ಕನಸಿನಲ್ಲಿ ಮಹಿಳೆಯರು ಬಂದರೆ ಅವರು ಏನು ಮಾಡುತ್ತಾರೆ, ಏನು ಹೇಳುತ್ತಾರೆ ಎಂಬುದು ಭವಿಷ್ಯದ ಕುರಿತ ದೊಡ್ಡ ಹಿಂಟ್ ಆಗಿರಬಲ್ಲದು. ಹಾಗಿದ್ದರೆ ಕನಸಿನಲ್ಲಿ ಬಂದ ಮಹಿಳೆ ಏನು ಮಾಡಿದಂತೆ ಕಂಡರೆ ಏನದರ ಅರ್ಥ ಎಂದು ನೋಡೋಣ. 

ಮಹಿಳೆಯರಿಗೆ ಬೀಳೋ ಸೆಕ್ಸೀ ಕನಸಿಗೆ ಇದ್ಯಾ ಅರ್ಥ?

ಆಭರಣ ಉಡುಗೊರೆ ನೀಡುವುದು

ನೀವು ನಿಮ್ಮ ಆಭರಣವನ್ನು ಯಾವುದಾದರೂ ಯುವತಿಗೆ ನೀಡುತ್ತಿರುವಂತೆ ಕನಸು ಬಿದ್ದರೆ, ಅದರರ್ಥ ನೀವು ಸಧ್ಯದಲ್ಲೇ ವಿವಾಹ ಜೀವನದಲ್ಲಿ ಗಂಭೀರ ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ ಎಂದು. 

ಅಳುತ್ತಿರುವ ವಧು

ಚೆನ್ನಾಗಿ ಸಿಂಗರಿಸಿಕೊಂಡ ಮಧುಮಗಳು ಖುಷಿಯಲ್ಲಿರುವುದು ಬಿಟ್ಟು ಅಳುತ್ತಿದ್ದಂತೆ ಕಂಡುಬಂದರೆ, ನೀವು ಸಧ್ಯದಲ್ಲೇ ನಿಮ್ಮ ಅತ್ತೆಮಾವನೊಂದಿಗೆ ಸಮಸ್ಯಾತ್ಮಕ ಸಂಬಂಧ ಎದುರಿಸಲಿದ್ದೀರಿ ಎಂದರ್ಥ. 

ಬೇರೊಬ್ಬ ಹೆಣ್ಣು ನಿಮಗೆ ಆಕರ್ಷಿತವಾಗುವುದು

ನಿಮ್ಮ ಹೆಂಡತಿ ಅಥವಾ ಪ್ರೇಮಿಯಲ್ಲದೆ ಬೇರೊಬ್ಬ ಹೆಣ್ಣು ನಿಮ್ಮತ್ತ ಆಕರ್ಷಿತಳಾಗುತ್ತಿದ್ದಂತೆ ಕನಸು ಬಿದ್ದರೆ, ಇದು ನೀವು ಇದುವರೆಗೂ ಕಷ್ಟ ಪಟ್ಟು ಸಂಪಾದಿಸಿದ ಗೌರವವನ್ನು ಸಧ್ಯದಲ್ಲೇ ಕಳೆದುಕೊಳ್ಳಲಿದ್ದೀರಿ ಎಂಬುದರ ಸೂಚನೆ. ನಿಮ್ಮ ಪಿತ್ರಾರ್ಜಿತ ಆಸ್ತಿಯ ಒಂದು ಭಾಗವನ್ನು ಕಳೆದುಕೊಳ್ಳಲಿದ್ದೀರಿ ಎಂದೂ ಇದು ಹೇಳುತ್ತಿರಬಹುದು. ಹಾಗಾಗಿ, ಕನಸಿನಲ್ಲಿಯೂ ಬೇರೊಬ್ಬ ಹೆಂಗಸು ನಿಮ್ಮತ್ತ ತಿರುಗದಂತೆ ಜಾಗೃತರಾಗಿರಬೇಕಾಯಿತು!

ಕನಸಲ್ಲಿ ಬಾಯ್‌ಫ್ರೆಂಡ್ ಜತೆ ಹಾಟ್ ರೊಮ್ಯಾನ್ಸ್ ಕನಸು: ಇದಕ್ಕೇನರ್ಥ?

ನಗ್ನ ಮಹಿಳೆ

ಕೆಲವೊಮ್ಮೆ ನಾವು ಕನಸೊಳಗೆ ಕನಸು ನೋಡುತ್ತೇವೆ. ಅಥವಾ ನಮ್ಮ ಕನಸಿನಲ್ಲಿ ನಾವೇ ಮೂರನೇ ವ್ಯಕ್ತಿಯಾಗಿ ನಿಂತಿರುತ್ತೇವೆ. ಹಾಗೊಂದು ವೇಳೆ ನಿಮ್ಮ ಕನಸಿನಲ್ಲಿ ನೀವು ನಿಂತು ನಗ್ನ ಮಹಿಳೆಯೊಬ್ಬಳನ್ನು ನೋಡುತ್ತಿರುವಂತೆ ಕಾಣಿಸಿದರೆ, ಸಧ್ಯದಲ್ಲೇ ನಿಮ್ಮ ಅದೃಷ್ಟ ದುರದೃಷ್ಟವಾಗಿ ಬದಲಾಗುವುದರ ಸೂಚನೆ ಇದು.

ನರ್ತಿಸುತ್ತಿರುವ ಯುವತಿ

ಹೆಣ್ಣೊಬ್ಬಳು ತನ್ನ ಪಾಡಿಗೆ ತಾನು ನರ್ತಿಸುತ್ತಿರುವುದು ಅಥವಾ ವೇದಿಕೆಯಲ್ಲಿ ಕಾರ್ಯಕ್ರಮ ಕೊಡುತ್ತಿರುವಂತೆ ಕನಸು ಬಿದ್ದರೆ, ನಿಮ್ಮ ಲವ್‌ಲೈಫ್ ಸಧ್ಯದಲ್ಲೇ ಬ್ರೇಕಪ್ ಎದುರಿಸಲಿದೆ ಅಥವಾ ವಿವಾಹ ಬಂಧ ವಿಚ್ಚೇದನದತ್ತ ಸಾಗಲಿದೆ ಎಂದರ್ಥ. 

ನಿದ್ರೆಯಲ್ಲಿ ಕಾಣೋ ಕನಸಿಗೂ ಬ್ರೇಕ್ ಹಾಕಲು ಇಲ್ಲಿವೆ ಟಿಪ್ಸ್

ಮಹಿಳೆಯೊಂದಿಗೆ ತಿರುಗಾಟ

ಕನಸಿನಲ್ಲಿ ನೀವು ನಿಮ್ಮ ಹುಡುಗಿಯೊಂದಿಗೆ ಟ್ರಾವೆಲ್ ಮಾಡುತ್ತಿರುವಂತೆ ಬಿದ್ದರೆ, ನಿಮ್ಮ ವಿವಾಹ ಜೀವನ ಬಹಳಷ್ಟು ಸಂತೋಷದಾಯಕವಾಗಿರುತ್ತದೆ ಎಂಬುದರ ಸೂಚನೆ. 

ಮಹಿಳೆ ಬೋರ್ಡ್ ಗೇಮ್ ಆಡುವುದು

ಈ ಕನಸು ನೀವು ಸಧ್ಯದಲ್ಲೇ ದೊಡ್ಡ ಲಾಭ ಪಡೆದು ಬಹಳ ಶ್ರೀಮಂತರಾಗಲಿದ್ದೀರಿ ಎಂಬುದನ್ನು ಹೇಳುತ್ತದೆ. 

ಗುಡ್‌ಬೈ

ಕನಸಿನಲ್ಲಿ ನೀವು ಹಾಗೂ ಮಹಿಳೆ ಟಾಟಾ ಮಾಡಿಕೊಳ್ಳುತ್ತಿದ್ದರೆ, ಸಧ್ಯದಲ್ಲೇ ನಿಮ್ಮ ಆರೋಗ್ಯದಲ್ಲಿ ಏರುಪೇರಾಗಲಿದೆ ಎಂಬುದನ್ನು ಸೂಚಿಸುತ್ತದೆ. 

ಬಿಳಿಬಟ್ಟೆಯ ಮಹಿಳೆ

ನಿಮ್ಮ ಕನಸಲ್ಲಿ ಬಂದ ಹೆಣ್ಣು ಬಿಳಿ ಬಟ್ಟೆ ಧರಿಸಿದ್ದರೆ, ನಿಮ್ಮ ಔದ್ಯೋಗಿಕ ಜೀವನ ಶೀಘ್ರ ಅದೃಷ್ಟವನ್ನು ಕಾಣಲಿದೆ ಎಂಬುದರ ಸೂಚನೆ. 

ಏಂಜೆಲ್ಸ್

ಏಂಜೆಲ್ ಅಥವಾ ದೇವತೆಯರು ಕನಸಿನಲ್ಲಿ ಕಂಡರೆ ನಿಮ್ಮ ಜೀವವನ್ನು ಚೆನ್ನಾಗಿ ಕಾಯಲಾಗುತ್ತಿದೆ, ನೀವು ಯಾವುದಕ್ಕಾಗಿಯೂ ಹೆದರಬೇಕಾಗಿಲ್ಲ ಎಂದರ್ಥ. ಅಷ್ಟೇ ಅಲ್ಲ, ನಿಮ್ಮ ಅದೃಷ್ಟ ಜೀವನಪೂರ್ತಿ ಕೈ ಹಿಡಿದಿರುತ್ತದೆ ಎಂದು ಈ ಕನಸು ಹೇಳುತ್ತದೆ. 

ಇವನ್ನೆಲ್ಲ ಕೇಳಿದ ಮೇಲೆ ಕನಸನ್ನು ನಿಯಂತ್ರಿಸಬೇಕೆನಿಸುತ್ತದೆಯಲ್ಲವೇ? ಕನಸನ್ನು ನಿಯಂತ್ರಿಸುವುದು ನಮ್ಮ ಕೈಲಿಲ್ಲವಾದರೂ ಸದಾ ಒಳ್ಳೆಯದನ್ನೇ ಯೋಚಿಸುವುದು, ರಾತ್ರಿ ಮಲಗುವ ಮುನ್ನ ಪ್ರಾರ್ಥನೆ, ಉತ್ತಮ ಪುಸ್ತಕಗಳ ಸಹವಾಸ, ವ್ಯಕ್ತಿತ್ವ ವಿಕಸನದತ್ತ ಗಮನ ಹರಿಸುವುದು, ಪ್ರಾಮಾಣಿಕವಾಗಿರುವುದು, ಕಷ್ಟ ಪಟ್ಟು ಕೆಲಸ ಮಾಡುವುದು ಮುಂತಾದ ಕ್ರಮಗಳಿಂದ ಸ್ವಲ್ಪ ಮಟ್ಟಿಗೆ ಕನಸನ್ನೂ, ಬಹುತೇಕ ಮಟ್ಟಿಗೆ ಭವಿಷ್ಯವನ್ನೂ ನಿಯಂತ್ರಿಸಬಹುದಲ್ಲವೇ?