ಬೈಕ್‌ನಲ್ಲಿ ಕೋಳಿ, ಕುರಿಯಲ್ಲ, ಬೃಹತ್ ಒಂಟೆಯನ್ನೇ ಸಾಗಾಟ ಮಾಡಿದ ಮಹಾನ್ ಪರಾ'ಕ್ರಿಮಿಗಳು'!

ಇಬ್ಬರು ವ್ಯಕ್ತಿಗಳು 8-9 ಅಡಿ ಎತ್ತರದ ಒಂಟೆಯನ್ನು ಬೈಕಿನಲ್ಲಿ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಂಟೆಯನ್ನು ಕಟ್ಟಿಹಾಕಿ ಬೈಕಿನಲ್ಲಿ ಸಾಗಿಸುತ್ತಿರುವುದನ್ನು ಕಾಣಬಹುದು. ಈ ಕೃತ್ಯದ ವಿರುದ್ಧ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shocking Video of Men Transporting Camel on Motorcycle Goes Viral sat

ಸಾಮಾನ್ಯವಾಗಿ ನಾವು ಬೈಕ್‌ಗಳನ್ನು ನಾವು ಓಡಾಡುವುದಕ್ಕೆ ಬಳಸುತ್ತೇವೆ. ಹೆಚ್ಚೆಂದರೆ ಬೈಕಿನಲ್ಲಿ ಹೋಗುವಾಗ ನಮ್ಮ ಜೊತೆಗೆ ಕೋಳಿ, ಕುರಿ, ಮೇಕೆಗಳನ್ನು ಹಿಡಿದುಕೊಂಡು ಹೋಗುತ್ತೇವೆ. ಇನ್ನೂ ಕೆಲವೊಬ್ಬರು ಧೈರ್ಯ ಮಾಡಿ ಸಣ್ಣ ಕರುಗಳನ್ನು ಕೂಡ ಬೈಕಿನಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆದರೆ, ಇಲ್ಲಿ ಇಬ್ಬರು ಕಿರಾತಕರು ಸುಮಾರು 8ರಿಂದ 9 ಅಡಿ ಎತ್ತರದ ಬೃಹತ್ ಗಾತ್ರದ ಒಂಟೆಯನ್ನೇ ಬೈಕಿನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಇದಘ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಪ್ರತಿ ವಿಡಿಯೋ ಕೂಡ ಹಿಂದಿನ ವಿಡಿಯೋಗಿಂತ ಒಂದು ಹೆಜ್ಜೆ ಮುಂದೆ ಇರುತ್ತದೆ. ಇದೀಗ ಈ ಸಾಲಿಗೆ ಸೇರ್ಪಡೆಯಾಗಿರುವುದು ಒಂಟೆಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವ ಇಬ್ಬರು ಯುವಕರ ವಿಡಿಯೋ. ಜಿಸ್ಟ್ ನ್ಯೂಸ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜನದಟ್ಟಣೆಯ ರಸ್ತೆಯಲ್ಲಿ ಒಂಟೆಯೊಂದಿಗೆ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಆದರೆ, ಈ ವಿಡಿಯೋ ವಿರುದ್ಧ ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಮೂರ್ತಿ ವಿರೂಪಗೊಳಿಸಿದ ಏಸು ಆರಾಧಕ ಮಾನಸಿಕ ಅಸ್ವಸ್ಥನೇ? ಇಲ್ಲಿದೆ ಪೊಲೀಸ್ ಉತ್ತರ!

ಈ ವಿಡಿಯೋದಲ್ಲಿ ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಒಂಟೆಯನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಆದರೆ, ಈ ವಿಡಿಯೋವನ್ನು ಎಲ್ಲಿ, ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು  ಸ್ವತಃ ವಿಡಿಯೋ ಹಂಚಿಕೊಂಡಿರುವ ವ್ಯಕ್ತಿಯೇ ಬರೆದುಕೊಂಡಿದ್ದಾರೆ. ಇನ್ನು ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಬೈಕ್ ಓಡಿಸುತ್ತಿದ್ದರೆ, ಹಿಂದೆ ಕುಳಿತಿರುವ ವ್ಯಕ್ತಿ ತನ್ನ ಮಡಿಲಿನಲ್ಲಿ ಒಂಟೆಯನ್ನು ಹಿಡಿದಿಟ್ಟುಕೊಂಡಿರುವುದನ್ನು ಕಾಣಬಹುದು. ಇಷ್ಟು ದೊಡ್ಡ ಪ್ರಾಣಿಯನ್ನು ಇಷ್ಟು ಸುಲಭವಾಗಿ ಬೈಕಿನಲ್ಲಿ ಹೇಗೆ ಸಾಗಣೆ ಮಾಡಲು ಸಾಧ್ಯ ಎಂಬುದು ವೀಕ್ಷಕರ ಪ್ರಶ್ನೆಯಾಗಿದೆ.

 
 
 
 
 
 
 
 
 
 
 
 
 
 
 

A post shared by Jist (@jist.news)

ಇನ್ನು ಬೃಹತ್ ಗಾತ್ರದ ಒಂಟೆಯ ನಾಲ್ಕು ಕಾಲುಗಳನ್ನು ಕಟ್ಟಲಾಗಿದೆ. ಮುಂಗಾಲುಗಳು ಮತ್ತು ಕುತ್ತಿಗೆಯನ್ನು ಒಟ್ಟಿಗೆ ಕಟ್ಟಲಾಗಿತ್ತು. ಬೈಕಿನ ಹಿಂದೆ ಕುಳಿತಿದ್ದ ವ್ಯಕ್ತಿ ಒಂಟೆಯ ಬಾಲವನ್ನು ಮೇಲಕ್ಕೆತ್ತಿ ಹಿಡಿದಿದ್ದನು. ಬೈಕಿನ ಹಿಂದಿನ ವಾಹನದಿಂದ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಒಂಟೆ ಬೈಕಿನಲ್ಲಿ ಹೋಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಕೆಲವರು ಬರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಇದನ್ನು ನೋಡಿದ ನೆಟ್ಟಿಗರ ಪೈಕಿ ಒಬ್ಬರು  'ನನಗೆ ಇದನ್ನು ನೊಡಿ ತುಂಬ ಬೇಸರವಾಗಿದೆ. ಈ ವಿಡಿಯೋದ ಆಡಿಯೋ ಆಯ್ಕೆ ಮತ್ತು ಅದನ್ನು ತಮಾಷೆಯಾಗಿ ತೆಗೆದುಕೊಳ್ಳುವ ಪ್ರಯತ್ನವನ್ನು ನಾನು ದ್ವೇಷಿಸುತ್ತೇನೆ. ತುಂಬ ತಪ್ಪು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪ್ಋಆಣಿ ಹಿಂಸೆ ಮಾಡಿದ ಇವರನ್ನು ಬಂಧಿಸಬೇಕು ಎಂದು ಬರೆದಿದ್ದಾರೆ. ಮತ್ತೊಬ್ಬರು ತಮಾಷೆಗಾಗಿ 'ಒಂಟೆ ಬೈಕ್ ಸವಾರಿಯನ್ನು ಆನಂದಿಸುತ್ತಿದೆಯೇ ಎಂದು ನನಗೆ ಖಚಿತವಿಲ್ಲ' ಎಂದು ಕಾಮೆಂಟ್ ಮಾಡಿದ್ದಾನೆ. ಇನ್ನೊಬ್ಬ 'ಇದು ತಮಾಷೆಯಲ್ಲ. ಪ್ರಾಣಿಗಳ ಮೇಲಿನ ಕ್ರೌರ್ಯ' ಎಂದು ಹೇಳಿದ್ದಾನೆ. ಇದಕ್ಕೆ ಹಲವು ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ₹2.5 ಕೋಟಿ ಪೀಕಿದ ಹೈಸ್ಕೂಲ್ ಬಾಯ್‌ಫ್ರೆಂಡ್‌ಗೆ ತನು, ಮನ, ಧನ ಮತ್ತು ದೇಹವನ್ನೂ ಅರ್ಪಿಸಿದ ಯುವತಿ!

Latest Videos
Follow Us:
Download App:
  • android
  • ios