ಚಿನ್ನ – ಬೆಳ್ಳಿ ಖರೀದಿ ಮಾಡಿದಾಗ ಪಿಂಕ್ ಪೇಪರ್ ಅದ್ರ ಜೊತೆ ಬರುತ್ತೆ. ಎಲ್ಲ ಜ್ಯುವೆಲರಿ ಮಾಲೀಕರು ಇದನ್ನು ನೀಡ್ತಾರೆ. ಗೋಲ್ಡ್ ಜ್ಯುವೆಲರಿ ಜೊತೆ ಪಿಂಕ್ ಪೇಪರ್ ಉಚಿತವಾಗಿ ಬರೋದು ಏಕೆ ಗೊತ್ತಾ?
ನೀವು ಆಭರಣ (jewelry) ಖರೀದಿ ಮಾಡಿದಾಗ, ಮಾಲೀಕ, ಆಭರಣವನ್ನು ಗುಲಾಬಿ ಬಣ್ಣದ ಪೇಪರ್ (pink colour paper) ನಲ್ಲಿ ಸುತ್ತಿ ನಂತ್ರ ಸುಂದರ ಬಾಕ್ಸ್ ನಲ್ಲಿಟ್ಟು ಕೊಡ್ತಾನೆ. ನಾವು ಆಭರಣದ ಬಗ್ಗೆ ಗಮನ ಹರಿಸ್ತೇವೆಯೇ ವಿನಃ ಸುತ್ತಿಟ್ಟ ಪಿಂಕ್ ಪೇಪರ್ ನೋಡೋದಿಲ್ಲ. ಆಭರಣ ಬಾಕ್ಸ್ ಒಳಗಿದ್ರೂ ಅದನ್ನು ಪಿಂಕ್ ಪೇಪರ್ ನಲ್ಲಿ ಸುತ್ತೋದು ಏಕೆ? ಇದ್ರ ಹಿಂದೆ ಏನು ಕಾರಣ ಇದೆ. ಈ ಬಗ್ಗೆ ಎಂದಾದ್ರೂ ಆಲೋಚನೆ ಮಾಡಿದ್ದೀರಾ?
ಪಿಂಕ್ ಪೇಪರ್ ಸಂಪ್ರದಾಯ :
ಬಂಗಾರ ಮತ್ತು ಬೆಳ್ಳಿ ಆಭರಣವನ್ನು ಪಿಂಕ್ ಪೇಪರ್ ನಲ್ಲಿ ಸುತ್ತೋದು ಇಂದು – ನಿನ್ನೆಯದಲ್ಲ. ಅನೇಕಾನೇಕ ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿದೆ. ಭಾರತದ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಎಲ್ಲ ಕಡೆ ನೀವು ಬಂಗಾರ ಹಾಗೂ ಬೆಳ್ಳಿ ಆಭರಣವನ್ನು ಪಿಂಕ್ ಪೇಪರ್ ನಲ್ಲಿ ಸುತ್ತಿ ಕೊಡೋದನ್ನು ಕಾಣ್ಬಹುದು. ಹಿಂದೆ ಗುಲಾಬಿ ಕಾಗದವನ್ನು ಇತರ ವಸ್ತುಗಳಿಂದ ಅಮೂಲ್ಯ ವಸ್ತುಗಳನ್ನು ಬೇರ್ಪಡಿಸಲು ಮತ್ತು ಅವುಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಲು ಬಳಸಲಾಗುತ್ತಿತ್ತು. ಒಂದು ವಸ್ತುವನ್ನು ಪಿಂಕ್ ಕಲರ್ ಪೇಪರ್ ನಲ್ಲಿ ಸುತ್ತಲಾಗಿದೆ ಅಂದ್ರೆ ಜನರು ಅದ್ರಲ್ಲಿ ವಿಶೇಷವಾದ, ಅಮೂಲ್ಯವಾದ ವಸ್ತು ಇದೆ ಅಂತ ಭಾವಿಸ್ತಿದ್ರು.
ಹೇರ್ ಫಾಲ್ ಆಗ್ತಿದ್ಯಾ? ಚಿಂತೆ ಬಿಡಿ.. ಬಾಬಾ ರಾಮ್‌ದೇವ್ ಟಿಪ್ಸ್ ಫಾಲೋ ಮಾಡಿ ಸಾಕು!
ಪಿಂಕ್ ಪೇಪರ್ ನಲ್ಲಿ ಬಂಗಾರ – ಬೆಳ್ಳಿ ಇಡಲು ಕಾರಣ :
ದುಬಾರಿ ಬೆಲೆ ಕೊಟ್ಟು ನೀವು ಆಭರಣ ಖರೀದಿ ಮಾಡಿರ್ತೀರಿ. ಬಾಕ್ಸ್ ತೆರೆದು ನೋಡಿದಾಗ ಆಭರಣ ಡಲ್ ಆಗಿ ಕಂಡ್ರೆ ನಿಮ್ಮ ಮನಸ್ಸಿಗೆ ನೋವಾಗುತ್ತೆ. ಇಷ್ಟೊಂದು ಹಣ ಕೊಟ್ಟಿದ್ದು ವೇಸ್ಟ್ ಆಯ್ತಾ, ಆಭರಣ ಡಲ್ ಕಾಣ್ತಿದೆಯಾ ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಮೂಡುತ್ತೆ. ಆದ್ರೆ ಈ ಪಿಂಕ್ ಪೇಪರ್ ಮ್ಯಾಜಿಕ್ ಮಾಡುತ್ತೆ. ಇದು ಬಂಗಾರ ಮತ್ತು ಬೆಳ್ಳಿ ಆಭರಣದ ಹೊಳಪನ್ನು ಹೆಚ್ಚು ಮಾಡುತ್ತೆ. ಬೆಳ್ಳಿ ಆಭರಣದ ಜೊತೆ ಪಿಂಕ್ ಕಲರ್ ಕಂಟ್ರಾಸ್ಟ್ ಹೆಚ್ಚಿಸುತ್ತೆ. ಇದ್ರಿಂದ ಆಭರಣ ಆಕರ್ಷಕವಾಗಿ ಕಾಣೋದಲ್ದೆ ಹೊಳಪು ಪಡೆಯುತ್ತೆ.
ಬೇರೆ ಬಣ್ಣದ ಪೇಪರ್ ಬಳಕೆ : ನೀವು ಗುಲಾಬಿ ಬಣ್ಣದ ಪೇಪರ್ ಬದಲು ಬೇರೆ ಬಣ್ಣದ ಪೇಪರ್ ನಲ್ಲಿ ಬಂಗಾರ ಅಥವಾ ಬೆಳ್ಳಿ ಆಭರಣ ಇಟ್ಟುನೋಡಿ. ಅದು ಗುಲಾಬಿ ಪೇಪರ್ ಮೇಲಿದ್ದಷ್ಟು ಆಕರ್ಷಕವಾಗಿ ಕಾಣೋದಿಲ್ಲ. ನೀವು ಬಿಳಿ ಪೇಪರ್ ಮೇಲೆ ಬೆಳ್ಳಿ ಆಭರಣ ಇಟ್ರಿ, ಬೆಳ್ಳಿ ತನ್ನ ಆಕರ್ಷಣೆಯನ್ನು ಸಂಪೂರ್ಣ ಕಳೆದುಕೊಳ್ಳುತ್ತೆ. ಆಭರಣಗಳು ಹೊಳೆಯುವ ಬದಲು ಮಂದವಾಗುತ್ವೆ. ಇದೇ ಕಾರಣಕ್ಕೆ ಗುಲಾಬಿ ಪೇಪರ್ ಗಳನ್ನು ಆಯ್ಕೆ ಮಾಡಲಾಗುತ್ತೆ.
ಬಾಲಿವುಡ್ ಸೆಲೆಬ್ರಿಟಿಗಳ ಕಲರ್ ಬ್ಯಾಗಿನ ಟ್ರೆಂಡ್... ಬಣ್ಣ ಮತ್ತು ಡಿಸೈನ್ ಮೀರಿದ ಫ್ಯಾಷನ್!
ಪೇಪರ್ ಬಳಕೆ ಏಕೆ? : ಇನ್ನು ಬಂಗಾರದ ಬಾಕ್ಸ್ ಒಳಗೆ ಪೇಪರ್ ಏಕೆ ಬಳಸಬೇಕು ಅಂದ್ರೆ,
• ಗಾಳಿ ಮತ್ತು ತೇವಾಂಶದಿಂದ ರಕ್ಷಿಸಲು, ಚಿನ್ನ, ಬೆಳ್ಳಿ ಆಭರಣಗಳನ್ನು ಕಾಗದದಲ್ಲಿ ಸುತ್ತಿಡಲಾಗುತ್ತದೆ. ಇದು ಆಭರಣ ಮಸುಕಾಗದಂತೆ ತಡೆಯುತ್ತದೆ. ಆಭರಣದ ಹೊಳಪನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
• ಅಮೂಲ್ಯ ವಸ್ತುಗಳನ್ನು ಗೀರುಗಳಿಂದ ರಕ್ಷಿಸಲು ಚಿನ್ನದ ತಯಾರಕರು ಗುಲಾಬಿ ಕಾಗದದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಸುತ್ತುತ್ತಾರೆ. ವಜ್ರ, ಬಂಗಾರದ ಆಭರಣಗಳ ಕೆತ್ತನೆ ಸೂಕ್ಷ್ಮವಾಗಿರುತ್ತದೆ. ಮುತ್ತುಗಳು ಹಾಳಾಗಬಹುದು. ಅವುಗಳನ್ನು ರಕ್ಷಿಸಲು ಪೇಪರ್ ಬಳಸಲಾಗುತ್ತದೆ.
• ಬಂಗಾರ ಹಾಗೂ ಬೆಳ್ಳಿಗೆ ಹೋಲುವ ನಕಲಿ ವಸ್ತುಗಳು ಸಾಕಷ್ಟಿವೆ. ಬಂಗಾರ ಅಥವಾ ಬೆಳ್ಳಿಯನ್ನು ಸುಲಭವಾಗಿ ಪತ್ತೆ ಮಾಡಲು ಮಹಿಳೆಯರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿರುವ ಸುಂದರ ಬಾಕ್ಸ್ ಗಳಿಗೂ ಗುಲಾಬಿ ಪೇಪರ್ ಬಳಸಲಾಗುತ್ತದೆ.
