Sudha Murthy: ಸುಧಾ ಮೂರ್ತಿ ಅಗ್ಗದ ಸೀರೆ ಖರೀದಿ ಮಾಡೋದೇಕೆ?
ಒಂದ್ಕಡೆ ಉಟ್ಟ ಸೀರೆನಾ ಇನ್ನೊಂದು ಕಡೆ ಉಟ್ಟರೆ ನಾಚಿಕೆ, ಕಡಿಮೆ ಬೆಲೆ ಸೀರೆ ಧರಿಸಿದ್ರೆ ಜನರು ಮಾತನಾಡಿಕೊಳ್ತಾರೆ ಎನ್ನುವವರೆಲ್ಲ ಸುಧಾಮೂರ್ತಿಯಿಂದ ಕಲಿಯೋದು ಸಾಕಷ್ಟಿದೆ. ಸೀರೆ ಬಗ್ಗೆ ಅವರಿಗಿರುವ ಅಭಿಪ್ರಾಯ ನಮ್ಮ ಕಪಾಟು, ಹಣ ಎರಡನ್ನೂ ಉಳಿಸುವ ಕೆಲಸ ಮಾಡುತ್ತೆ.
ಇಬ್ಬರು ಮಹಿಳೆಯರು ಒಟ್ಟಿಗೆ ಕುಳಿತ್ರೆ ಅಲ್ಲಿ ಸೀರೆ ವಿಷ್ಯ ಬರದೆ ಇರೋದಿಲ್ಲ. ಅದ್ಯಾವ ಸೀರೆ, ಇದ್ಯಾವ ಸೀರೆ, ಬೆಲೆ ಎಷ್ಟು ಎನ್ನುವ ಚರ್ಚೆಯಾಗುತ್ತದೆ. ಮನೆಯ ಕಪಾಟಿನಲ್ಲಿ 25 – 30 ಸೀರೆ ಇದ್ರೂ ಮತ್ತೆ ಸೀರೆ ಖರೀದಿಗೆ ಮಹಿಳೆಯರು ಮನಸ್ಸು ಮಾಡ್ತಾರೆ. ಹಬ್ಬ ಹರಿದಿನ ಅಂತಾ ಒಂದೊಂದು ಕಾರಣ ಹೇಳಿ ಸೀರೆ ಮನೆಗೆ ಬರ್ತಿರುತ್ತದೆ. ದುಬಾರಿ ಸೀರೆ (Saree) ಖರೀದಿ ಈಗಿನ ದಿನಗಳಲ್ಲಿ ಒಂದು ಫ್ಯಾಷನ್ (Fashion). 500 – 800 ಬೆಲೆಯ ಸೀರೆ ನೋಡಿದ್ರೆ ಕೆಲವರು ಮೂಗು ಮುರೀತಾರೆ. ತಮ್ಮ ರೇಂಜ್ ಸ್ಟಾರ್ಟ್ ಆಗೋದೆ 5 – 10 ಸಾವಿರದ ಮೇಲೆ ಎನ್ನುವವರಿದ್ದಾರೆ. ಹಾಗಂತ ಅವರೇನು ಕೈತುಂಬ ಸಂಪಾದನೆ ಮಾಡೋ ಶ್ರೀಮಂತರಲ್ಲ. ಮಧ್ಯಮ ವರ್ಗದಲ್ಲೇ ಈಗ ಈ ಕ್ರೇಜ್ ಶುರುವಾಗಿದೆ.
ಅಷ್ಟು ಹಣ ನೀಡಿ ಸೀರೆ ಖರೀದಿ ಮಾಡುವ ಮಹಿಳೆಯರು ಅದನ್ನು ಒಂದೋ ಎರಡೋ ಬಾರಿ ಉಡ್ತಾರೆ. ಉಳಿದಂತೆ ಅದು ಕಪಾಟಿನಲ್ಲಿ ಭದ್ರ ಸ್ಥಾನವನ್ನು ಪಡೆಯುತ್ತೆ. ಸೀರೆ ಮೇಲೆ ಅತಿಯಾದ ಮೋಹವಿರುವ, ಹಾಗೆ ದುಬಾರಿ ಬೆಲೆ ಸೀರೆ ಖರೀದಿ ಮಾಡುವ ಮಹಿಳೆಯರು, ಯಾವ ವಸ್ತುವಿಗೆ ಎಷ್ಟು ಮಹತ್ವ ನೀಡ್ಬೇಕು, ಎಷ್ಟು ಬೆಲೆ ನೀಡ್ಬೇಕು ಎಂಬುದನ್ನು ಇನ್ಫೋಸಿಸ್ ಸಂಸ್ಥಾಪಕಿ, ಲೇಖಕಿ, ಸಮಾಜ ಸೇವಕಿ, ಒಳ್ಳೆಯ ಮಾರ್ಗದರ್ಶಕಿಯಾಗಿರುವ ಸುಧಾ ಮೂರ್ತಿಯಿಂದ ಕಲಿಯಬೇಕು. ಸೀರೆ ಬಗ್ಗೆ ಸುಧಾ ಮೂರ್ತಿ (Sudha Murthy) ಸತ್ಯವಾದ ಮಾತನ್ನು ಸರಳವಾಗಿ ಹೇಳಿದ್ದಾರೆ.
ಫೇಸ್ಮಾಸ್ಕ್, ಸ್ಕ್ರಬ್, ಹೇರ್ ಆಯಿಲ್ ಮಾಡೋದು ಇಷ್ಟು ಸುಲಭನಾ? ನಟಿ ಅದಿತಿ ಪ್ರಭುದೇವ ಟಿಪ್ಸ್!
ಸೀರೆ ಖರೀದಿ ಬಗ್ಗೆ ಸುಧಾ ಮೂರ್ತಿ ಹೇಳೋದೇನು? : ನೀವು 7 ಸಾವಿರ ರೂಪಾಯಿ ಕೊಟ್ಟು ಒಂದು ಸೀರೆ ಖರೀದಿ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ನೀವದನ್ನು 7 ಸಾವಿರ ಬಾರಿ ಉಡುತ್ತೀರಾ?. ಇಲ್ಲ. ಇದು ಅಲೋಮ ಅನುಪಾತದಲ್ಲಿರುತ್ತದೆ. ಅಂದ್ರೆ ನಾವು ದುಬಾರಿ ಬೆಲೆಕೊಟ್ಟು ಖರೀದಿ ಮಾಡಿದ ವಸ್ತು ಅಥವಾ ಬಟ್ಟೆಯನ್ನು ಕಡಿಮೆ ಬಾರಿ ಬಳಸ್ತೇವೆ. ಅದನ್ನೇ ನಾನು 2 ಸಾವಿರ ರೂಪಾಯಿ ನೀಡಿ ಖರೀದಿ ಮಾಡಿದ ಈ ಸೀರೆಯನ್ನು ನಾನು 20 ಸಲ ಇಲ್ಲ 30 ಸಲ ಇಲ್ಲವೇ 50 ಬಾರಿ ಧರಿಸ್ತೇನೆ. ಕಡಿಮೆ ಬೆಲೆಯ ವಸ್ತುವನ್ನು ಅಥವಾ ಬಟ್ಟೆಯನ್ನು ನಾವು ಹೆಚ್ಚು ಬಾರಿ ಬಳಸ್ತೇವೆ. ಇದು ಸತ್ಯ ಎನ್ನುತ್ತಾರೆ ಸುಧಾ ಮೂರ್ತಿ.
ಸೀರೆ ಬಗ್ಗೆ ಎಲ್ಲರಿಗೂ ಆಸೆ ಇರುತ್ತದೆ. ಆದ್ರೆ ಸತ್ಯವನ್ನು ತಿಳಿದಿರಬೇಕು. ನಾನು ಇಷ್ಟೊಂದು ಸೀರೆ ಖರೀದಿ ಮಾಡಿ ಏನು ಮಾಡ್ಲಿ? ಯಾರು ಇದನ್ನು ಉಟ್ಟುಕೊಳ್ತಾರೆ, ನಾನು ಯಾವ ಕಾರಣಕ್ಕೆ ಇಷ್ಟೊಂದು ಸೀರೆ ಖರೀದಿ ಮಾಡ್ತಿದ್ದೇನೆ ಎಂಬುದನ್ನು ಅರಿತುಕೊಂಡೆ. ನನ್ನ ಆಯ್ಕೆ, ಬಣ್ಣ ನನ್ನ ಮಗಳಿಗೆ ಇಷ್ಟವಾಗೋದಿಲ್ಲ. ಹಾಗಾಗಿ ಆಕೆ ನನ್ನ ಸೀರೆಯನ್ನು ಧರಿಸೋದಿಲ್ಲ. ನಾನ್ಯಾಕೆ ಆಕೆಗಾಗಿ ಖರೀದಿ ಮಾಡಿ ಇಡ್ಬೇಕು ಎಂಬುದರ ಬಗ್ಗೆ ನಾನು ಚಿಂತಿಸಿದೆ. ನನಗೆ ಇಷ್ಟೊಂದು ಸೀರೆಯ ಅಗತ್ಯವಿಲ್ಲ ಎಂಬುದನ್ನು ಅರಿತೆ. ನಾವು ಖುಷಿಯಾಗಿರಲು ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಹೊಂದುವ ಅಗತ್ಯವಿಲ್ಲ ಎಂಬುದನ್ನು ನಾನು ತಿಳಿದಿದ್ದೇನೆ ಎನ್ನುತ್ತಾರೆ ಸುಧಾ ಮೂರ್ತಿ.
ಮೊಬೈಲ್ ಇದ್ದವರಿಗೆ ಶುಭಸುದ್ದಿ: ಟ್ವಿಟರ್‌ನ ಈ ಫೀಚರ್‌ನಿಂದ ಸುಲಭವಾಗಿ ಆದಾಯ ಗಳಿಸಿ
ಸುಧಾಮೂರ್ತಿ ಈ ಸೀರೆ ಉದಾಹರಣೆ ಬರೀ ಸೀರೆಗೆ ಸೀಮಿತವಾಗಿಲ್ಲ. ಸರಿಯಾಗಿ ಅರ್ಥ ಮಾಡಿಕೊಂಡಲ್ಲಿ ಮಧ್ಯಮ ವರ್ಗದವರ ಅನಗತ್ಯ ಖರ್ಚನ್ನು ಇದ್ರಿಂದ ಉಳಿಸಬಹುದು. ಅನೇಕರು ಸುಧಾ ಮೂರ್ತಿ ಮಾತನ್ನು ಒಪ್ಪಿಕೊಂಡಿದ್ದಾರೆ. ಕೋಟ್ಯಾಧಿಪತಿಯ ಪತ್ನಿಯಾದ್ರೂ ಸುಧಾಮೂರ್ತಿ 7000 ರೂಪಾಯಿ ಮತ್ತು 2000 ರೂಪಾಯಿಗಳ ಉದಾಹರಣೆಯನ್ನು ತೆಗೆದುಕೊಳ್ಳುತ್ತಾರೆ. ತುಂಬಾ ಸರಳತೆ ಅವರಲ್ಲಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.