ಮೊಬೈಲ್ ಇದ್ದವರಿಗೆ ಶುಭಸುದ್ದಿ: ಟ್ವಿಟರ್‌ನ ಈ ಫೀಚರ್‌ನಿಂದ ಸುಲಭವಾಗಿ ಆದಾಯ ಗಳಿಸಿ
ನೀವು ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾಗಿದ್ದರೆ ಈಗ ಟ್ವಿಟರ್‌ನಿಂದಲೂ ಸುಲಭವಾಗಿ ಹಣ ಗಳಿಕೆ ಮಾಡಲು ಸುಲಭ ಅವಕಾಶಗಳು ಲಭ್ಯವಾಗಿವೆ.
ಬೆಂಗಳೂರು (ಆ.16): ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟ್ವಿಟರ್‌ನಿಂದಲೂ ಇನ್ನುಮುಂದೆ ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಸುಲಭವಾಗಿ ಆದಾಯವನ್ನು ಗಳಿಸಬಹುದು. ಇಷ್ಟುದಿನ ಯೂಟ್ಯೂಬ್, ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ರೀಲ್ಸ್‌ಗಳಿಂದ ಆದಾಯ ಗಳಿಸುತ್ತಿದ್ದ ಸೋಷಿಯಲ್ ಮೀಡಿಯಾ ಸ್ಟಾರ್‌ಗಳಿಗೆ ಇದು ಶುಭ ಸುದ್ದಿಯಾಗಿದೆ. ಇದಕ್ಕೆ ಟ್ವಿಟರ್‌ನಲ್ಲಿ ನೀವು ಸಣ್ಣ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.
ಹೌದು, ನಮ್ಮ ದೇಶದಲ್ಲಿ ಸಾವಿರಾರು ಸೋಷಿಯಲ್ ಮೀಡಿಯಾ ಸ್ಟಾರ್‌ಗಳಿದ್ದಾರೆ. ಅವರು ಯಾವುದೇ ಉದ್ಯೋಗವನ್ನೂ ಮಾಡದೇ ರೀಲ್ಸ್, ನಾಟಕ, ಸ್ಟಂಟ್ಸ್ ಹಾಗೂ ವಿಭಿನ್ನ ಶೈಲಿಯ ಡೈಲಾಗ್ ಹೊಡೆದು ಮಿಂಚುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ (YouTube, Facebook and Instagram) ಸೇರಿ ಹಲವು ಜಾಲತಾಣಗಳಿಗೆ ಶೇರ್ ಮಾಡಿಕೊಳ್ಳುತ್ತಾರೆ. ಇದರಿಂದ, ಅವರನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿ ವೀಕ್ಷಣೆ ಹೆಚ್ಚಾದಷ್ಟು ಆದಾಯ ಬರಲು ಆರಂಭವಾಗುತ್ತದೆ. ಅದೇ ರೀತಿ ಈಗ ಟ್ವಿಟರ್‌ನಿಂದಲೂ ಹಣ ಗಳಿಸುವ ಅವಕಾಶ ಒದಗಿಬಂದಿದೆ.
ಜಗತ್ತಲ್ಲೇ ಅತೀ ಹೆಚ್ಚು ಸಂಬಳ ಪಡೆಯೋ ಭಾರತೀಯನಿಗೆ 1869 ಕೋಟಿ ವೇತನ!
ಸೋಷಿಯಲ್ ಮೀಡಿಯಾದಿಂದ ಈಗ ಯಾರು ಬೇಕಾದರೂ ಆದಾಯ ಮಾಡಿಕೊಳ್ಳಬಹುದು. ಯೂಟ್ಯೂಬ್, ಇನ್ಸ್ಟಾಗ್ರಾಮ್ ರೀಲ್ಸ್ ಇತ್ಯಾದಿ ವಿಡಿಯೊ ಪ್ಲಾಟ್ಫಾರ್ಮ್ಗಳಿಂದ ಸಾಕಷ್ಟು ಹಣ ಮಾಡುವವರಿದ್ದಾರೆ. ಫೇಸ್ಬುಕ್, ಇನ್ಸ್ಟಾಗ್ರಾಮ್ ಪೋಸ್ಟ್ಗಳಿಂದಲೂ ಲಾಭ ಮಾಡಬಹುದು. ಇತರ ಹಲವು ವಿಡಿಯೋ ಪ್ಲಾಟ್ಫಾರ್ಮ್ಗಳು ಮಾನಿಟೈಸ್ ಮಾಡುತ್ತವೆ. ಇದಕ್ಕೆ ಟ್ವಿಟ್ಟರ್ ಕೂಡ ಹೊರತಾಗಿಲ್ಲ. ಇತ್ತೀಚೆಗೆ ಟ್ವಿಟ್ಟರ್ ಕೂಡ ತನ್ನ ಬಳಕೆದಾರರೊಂದಿಗೆ ಆದಾಯ ಹಂಚಿಕೊಳ್ಳುತ್ತಿದೆ. ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಮಾಡಿದ ಟ್ವೀಟ್‌ಗಳ ತಲುಪವ ರೀತಿ ಹಾಗೂ ಜಾಹೀರಾತು ವೀಕ್ಷಣೆ ಮೇಲೆ ಆದಾಯ ಅವಲಂಬಿತವಾಗುತ್ತದೆ.
ಪ್ರೀಮಿಯಮ್ ಸಬ್‌ಸ್ಕ್ರೈಬರ್ ಆಗಿದ್ದರೆ ಆದಾಯ ಗಳಿಸಲು ಸಾಧ್ಯ: ಹೌದು, ಟ್ವಿಟರ್ ಬಳಸಿದ ಎಲ್ಲರಿಗೂ ಆದಾಯ ಸಿಗುವುದಿಲ್ಲ. ಮುಖ್ಯವಾಗಿ ಟ್ಟಿಟ್ಟರ್ನಲ್ಲಿ ಆದಾಯ ಗಳಿಸಬೇಕಾದರೆ ಪ್ರೀಮಿಯಮ್ ಸಬ್‌ಸ್ಕ್ರೈಬರ್ ಆಗಿರಬೇಕು. ನಿಮ್ಮ ಟ್ವೀಟ್ಗಳೆಲ್ಲವೂ ಸೇರಿ 3 ತಿಂಗಳಲ್ಲಿ 50 ಲಕ್ಷ ಇಂಪ್ರೆಷನ್ ಪಡೆದಿರಬೇಕು. ಈ ಮಾನದಂಡ ಮುಟ್ಟಿದರೆ ಟ್ಟಿಟ್ಟರ್ನಿಂದ ಸುಲಭವಾಗಿ ಆದಾಯ ಪಡೆಯಬಹುದು. ಇನ್ನು ಟ್ವಿಟ್ಟರ್ ಅಥವಾ ಎಕ್ಸ್ನಿಂದ ನೀವು ಗಳಿಸುವ ಆದಾಯವು ನಿಮ್ಮ ಪ್ರಮುಖ ಆದಾಯ ಮೂಲವಲ್ಲ. ಆದ್ದರಿಂದ ಇನ್ಕಮ್ ಫ್ರಂ ಅದರ್ ಸೋರ್ಸಸ್ ಅಡಿಯಲ್ಲಿ ತೆರಿಗೆ ಅನ್ವಯ ಆಗುತ್ತದೆ. ನೀವು ಇದಕ್ಕೂ ಕೂಡ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಇನ್ನು ಟ್ವಿಟ್ಟರ್ ನಿಮ್ಮ ಪ್ರಮುಖ ಆದಾಯ ಮೂಲವಾಗಿದ್ದರೆ ಆಗ 'ವ್ಯಾಪಾರ ಅಥವಾ ವೃತ್ತಿಯ ಲಾಭಗಳು' (Profit and Gains of Business or Profession) ಅಡಿಯಲ್ಲಿ ತೆರಿಗೆ ಅನ್ವಯ ಆಗುತ್ತದೆ. ನೀವು ವಿಶೇಷ ಪರಿಣತಿಯನ್ನು ಹೊಂದಿರುವ ಸಂಬಂಧಿತ ವಿಚಾರಗಳನ್ನು ಟ್ವೀಟ್ ಮಾಡಿ ಆದಾಯ ಪಡೆಯುತ್ತಿದ್ದರೆ ಅದು ವೃತ್ತಿಪರ ಆದಾಯ (Professional income) ಎಂದು ಪರಿಗಣಿತವಾಗುತ್ತದೆ. ಇಲ್ಲವಾದರೆ ವ್ಯಾಪಾರಿ ಸಂಬಂಧಿತ ಆದಾಯ ಎಂದು ಪರಿಗಣಿಸಲಾಗುತ್ತದೆ.
ಸ್ಮಶಾನದಲ್ಲಿ ಪಿಶಾಚಿ ಕುಣಿದಂತಾಗ್ತಿದೆ: ಕಾಂಗ್ರೆಸ್ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಕೋಡಿಶ್ರೀ
ಇನ್ನು ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ತಮ್ಮ ಈಗಾಗಲೇ ಹಲವು ಸಾಮಾಜಿಕ ಜಾಲತಾಣಗಳಿಂದ ಆದಾಯ ಗಳಿಸುತ್ತಿದ್ದು, ಇದಕ್ಕೆ ಆದಾಯದ ಬಗ್ಗೆ ಸರ್ಕಾರಕ್ಕೂ ಮಾಹಿತಿ ಸಲ್ಲಿಕೆ ಮಾಡಬೇಕಾಗುತ್ತದೆ. ಎಲ್ಲ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಂದ (Social media platform) ನೀವು ಗಳಿಸುವ ಆದಾಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸರ್ಕಾರಕ್ಕೆ ಐಟಿಆರ್ ಫೈಲ್ ಮಾಡುವಾಗ ಸಲ್ಲಿಕೆ ಮಾಡಬೇಕು. ಜೊತೆಗೆ, ಅದಕ್ಕೆ ಅನ್ವಯ ಅಗುವ ತೆರಿಗೆಯನ್ನು ಕಟ್ಟಬೇಕು. ಇಲ್ಲವಾದಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದ ನೀವು ನಷ್ಟ ಅನುಭವಿಸಬೇಕಾಗುತ್ತದೆ.