Asianet Suvarna News Asianet Suvarna News

ಬುಲೆಟ್ ಏರಿ ಸಾರಿಯುಟ್ಟ ನಾರಿಯರ ಜಬರ್‌ದಸ್ತ್ ಸವಾರಿ: ವೈರಲ್ ವಿಡಿಯೋ

ಕೆಲದಿನಗಳ ಹಿಂದಷ್ಟೇ ಮಹಿಳೆಯೊಬ್ಬರು ಸೀರೆಯುಟ್ಟು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈಗ ಇಬ್ಬರು ಸೀರೆಯುಟ್ಟ ನಾರಿಮಣಿಯರು ಜಬರ್‌ದಸ್ತ್ ಆಗಿ ರಾಯಲ್ ಎನ್‌ಫೀಲ್ಡ್  ಕ್ಲಾಸಿಕ್  ಬೈಕ್ ಏರಿ ಸವಾರಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

women raiding bullet wearing saree video goes viral in social Media akb
Author
First Published Nov 27, 2022, 9:39 PM IST

ಕೆಲದಿನಗಳ ಹಿಂದಷ್ಟೇ ಮಹಿಳೆಯೊಬ್ಬರು ಸೀರೆಯುಟ್ಟು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈಗ ಇಬ್ಬರು ಸೀರೆಯುಟ್ಟ ನಾರಿಮಣಿಯರು ಜಬರ್‌ದಸ್ತ್ ಆಗಿ ರಾಯಲ್ ಎನ್‌ಫೀಲ್ಡ್  ರಾಯಲ್ ಎನ್‌ಫೀಲ್ಡ್  ಕ್ಲಾಸಿಕ್ ಬೈಕ್ ಏರಿ ಸವಾರಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

ಭಾರತದ ದ್ವಿಚಕ್ರ ವಾಹನ ಸ್ಕೂಟಿ ತನ್ನ ಜಾಹೀರಾತಿನಲ್ಲಿ ತೋರಿಸುವಂತೆ (Why should boys have all the fun) ಹುಡುಗರೇ ಏಕೆ ಎಲ್ಲಾ ಮೋಜು ಮಾಡಬೇಕು ಎಂಬ ಫೇಮಸ್ ಡೈಲಾಗ್‌ನ್ನು ನೀವು ಕೇಳಿರಬಹುದು. ಅದರಂತೆ ಸ್ಕೂಟಿಯಲ್ಲಿ ಮಹಿಳೆಯರು ಜಾಲಿಯಾಗಿ ಸಾಗುತ್ತಿರುವ ದೃಶ್ಯವಿದೆ. ಭಾರತದಲ್ಲಿ ಇತ್ತೀಚೆಗೆ ಮಹಿಳೆಯರು ದ್ವಿಚಕ್ರವಾಹನದಲ್ಲಿ ಪುರುಷರನ್ನು ಹಿಂದಿಕ್ಕಿ ಸಾಗುವುದು ಸಾಮಾನ್ಯ ಎನಿಸಿದೆ. ಅಲ್ಲದೇ ಕೆಲ ಹಳೆ ಜಮಾನದ ಮಹಿಳೆಯರು ಕೂಡ ದ್ವಿಚಕ್ರ ವಾಹನವನ್ನು ಕಲಿತು ಸ್ವತಂತ್ರವಾಗಿ ಗಾಡಿ ಓಡಿಸಿಕೊಂಡು ಹೋಗುವುದನ್ನು ಭಾರತದ ರಸ್ತೆಗಳಲ್ಲಿ ಕಾಣಬಹುದು. ಅದೇ ರೀತಿ ಇಲ್ಲೊಂದು ಕಡೆ ಮಹಿಳೆಯರಿಬ್ಬರು ಬಿಂದಾಸ್ ಆಗಿ ರಾಯಲ್ ಎನ್‌ಫೀಲ್ಡ್  ಕ್ಲಾಸಿಕ್ (Royal Enfield) ಗಾಡಿ ಓಡಿಸಿಕೊಂಡು ನಿರ್ಜನ ರಸ್ತೆಯಲ್ಲಿ ಸಾಗುತ್ತಿರುವ ವಿಡಿಯೋವೊಂದು ವೈರಲ್ (Viral video) ಆಗಿದೆ. ಆದರೆ ಇಬ್ಬರು ಹೆಲ್ಮೆಟ್ ಮಾತ್ರ ಧರಿಸದೇ ಸಂಚಾರ ನಿಯಮ ಮೀರಿದ್ದಾರೆ.

 
 
 
 
 
 
 
 
 
 
 
 
 
 
 

A post shared by sonaomi gurjar (@sona_omi)

 

ಕೇಸರಿ ಪಿಂಕ್ ಬಣ್ಣದ ಪಂಜಾಬಿ ಶೈಲಿಯ (Punjabi Style) ಸಾರಿ ಧರಿಸಿದ ಈ ಮಹಿಳೆಯರು ಬಿಂದಾಸ್ ಆಗಿ ಗಾಡಿ ಓಡಿಸುತ್ತಿದ್ದರೆ, ಜೊತೆಯಲ್ಲಿ ಸಾಗುತ್ತಿರುವ ಬೇರೆ ವಾಹನದ ಸವಾರರು ವಿಡಿಯೋ ಮಾಡಿದ್ದಾರೆ. ಇಬ್ಬರು ಶಾಲುಗಳಿಂದ ತಮ್ಮ ತಲೆಯನ್ನು ಮುಚ್ಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು sona_omi ಎಂಬುವವರು ಪೋಸ್ಟ್ ಮಾಡಿದ್ದು, Gujjar Ki Hod ಹಾಡು ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ. ಈ ವಿಡಿಯೋವನ್ನು 9 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ. 

ದೀಪಾವಳಿ ಸಂಭ್ರಮದಲ್ಲಿ ತಮನ್ನಾ; ಡೀಪ್ ನೆಕ್ ಬ್ಲೌಸ್ ಸೀರೆಯಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ

ಮದುವೆಗೆ ಸೀರೆಯುಟ್ಟು ಬಂದ ವರನ ಸ್ನೇಹಿತರು

ಫ್ಯಾಷನ್ ವಿಷಯಕ್ಕೆ ಬಂದಾಗ ಅಲ್ಲಿ ಯಾವುದೇ ಮಿತಿಗಳಿಲ್ಲ. ಯಾವ ರೀತಿ ಮಾಡಿದರೂ ಫ್ಯಾಷನ್, ಏನು ಮಾಡಿದರೂ ಫ್ಯಾಷನ್‌. ಮಹಿಳೆಯರು ವರ್ಷಗಳ ಹಿಂದೆಯೇ ಪುರುಷರ ಉಡುಪುಗಳನ್ನು ಅಳವಡಿಸಿಕೊಂಡಿದ್ದಾರೆ. ಈಗ ಪುರುಷರು ಸಹ ನಿಧಾನವಾಗಿ 'ಮಹಿಳೆಯರಿಗೆ ಮಾತ್ರ' ಎಂಬ ಟ್ಯಾಗ್‌ನೊಂದಿಗೆ ಬರುವ ಉಡುಪುಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ವರ್ಷಗಳಿಂದ ಚಾಲ್ತಿಯಲ್ಲಿರುವ ಸ್ಟೀರಿಯೊಟೈಪ್‌ಗಳನ್ನು ಬದಲಾಯಿಸುವ ಪ್ರಯತ್ನ ಮಾಡಲಾಗ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಚಿಕಾಗೋದಲ್ಲಿ ನಡೆದ ತಮ್ಮ ಭಾರತೀಯ ಸ್ನೇಹಿತನ ಮದುವೆಗೆ ಇಬ್ಬರು ಪುರುಷರು ಸೀರೆಗಳನ್ನು ಧರಿಸಿ ಆಗಮಿಸಿದ್ದರು.

ಪುರುಷರ ಉಡುಪುಗಳನ್ನು ಮಹಿಳೆಯರು ಹಾಕಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಆದರೆ ಮಹಿಳೆಯರ ಉಡುಗೆಯನ್ನು ಸಾಮಾನ್ಯವಾಗಿ ಪುರುಷರು ಹಾಕಿಕೊಳ್ಳುವುದಿಲ್ಲ. ಅದರಲ್ಲೂ ಸೀರೆ, ಲೆಹಂಗಾದಂತಹ ಉಡುಗೆಗಳನ್ನು ಪುರುಷರು ಧರಿಸುವುದಿಲ್ಲಆದರೆ ಅಮೆರಿಕದ ಚಿಕಾಗೊದಲ್ಲಿ ನಡೆದ ಭಾರತೀಯ ಜೋಡಿಗಳ ಮದುವೆಯಲ್ಲಿ ವರನ ಇಬ್ಬರು ಸ್ನೇಹಿತರು ಸೀರೆಯುಟ್ಟುಕೊಂಡು ಬಂದು ಮಿಂಚಿದ್ದಾರೆ. ಈ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. 

ಚಿಕಾಗೋ ಮೂಲದ ವೆಡ್ಡಿಂಗ್ ವೀಡಿಯೋಗ್ರಾಫರ್‌ಗಳಾದ ಪ್ಯಾರಾಗಾನ್‌ಫಿಲ್ಮ್ಸ್, ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮಿಚಿಗನ್ ಏವ್‌ನಲ್ಲಿ ನಡೆದ ಮದುವೆ (Wedding) ಸಮಾರಂಭದಲ್ಲಿ ಮದುಮಗನ (Groom) ಇಬ್ಬರು ಆಪ್ತ ಸ್ನೇಹಿತರು ಸೀರೆಯುಟ್ಟು (Saree) ಬಂದಿದ್ದು ಎಲ್ಲರಲ್ಲಿ ಅಚ್ಚರಿಗೆ ಕಾರಣವಾಯಿತು. ಅಲ್ಲದೇ ಸೀರೆಯುಟ್ಟು ಬಂದ ತನ್ನ ಸ್ನೇಹಿತರ ನೋಡಿ ನಗು ತಡೆಯಲಾಗದೇ ಮಧುಮಗ ಬಿದ್ದು ಬಿದ್ದು ನಗುತ್ತಿರುವ ವಿಡಿಯೋ ವೈರಲ್ ಆಗಿತ್ತು. 

ಅನುಷ್ಕಾ ಶರ್ಮಾ ದೀಪಾವಳಿ ಸಂಭ್ರಮ; ಹಸಿರು ಸೀರೆಯಲ್ಲಿ ಕಂಗೊಳಿಸಿದ ವಿರಾಟ್ ಪತ್ನಿ

Follow Us:
Download App:
  • android
  • ios